ಆರ್‌ಆರ್‌ಆರ್ ಸಿನಿಮಾದ ಸೂಪರ್ಹಿಟ್ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದುಕೊಂಡಿದೆ. ಅವಾರ್ಡ್ ಪಡೆದುಕೊಂಡ ಆರ್‌ಆರ್‌ಆರ್ ತಂಡ ಸಂತಸದಲ್ಲಿ ಮುಳುಗಿದೆ. ಜೊತೆಗೆ ತಮ್ಮ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಚಿತ್ರತಂಡ ಧನ್ಯವಾದ ತಿಳಿಸಿದೆ. ಸೂಪರ್ಸ್ಟಾರ್ಗಳಾದ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ಚರಣ್ ಕೂಡ ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ. ಜೊತೆಗೆ ಹಾಡನ್ನು ಹಿಟ್ ಮಾಡಿದ ಅಭಿಮಾನಿಗಳಿಗೆ ಕೃತಜ್ಞತೆ ಅರ್ಪಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಜೂನಿಯರ್ ಎನ್‌ಟಿಆರ್, "ಈ ಸುಸಂದರ್ಭದಲ್ಲಿ ನನಗಾಗುತ್ತಿರುವ ಖುಷಿಯನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ. ಈ ಪ್ರಶಸ್ತಿಯು ಕೇವಲ ಆರ್ಆರ್ಆರ್ಗೆ ಮಾತ್ರವಲ್ಲ, ಇಡೀ ಭಾರತ ದೇಶಕ್ಕೆ ಸಂದ ಗೌರವ. ಅಲ್ಲದೇ ಇದು ಕೇವಲ ಆರಂಭವಷ್ಟೇ. ಜೊತೆಗೆ ಭಾರತ ಚಿತ್ರರಂಗವು ಎಷ್ಟು ದೂರ ಹೋಗಬಹುದು ಎಂಬುದನ್ನು ಇದು ತೋರಿಸುತ್ತಿದೆ. ಕೀರವಾಣಿ ಮತ್ತು ಚಂದ್ರಬೋಸ್ ಅವರಿಗೆ ಅಭಿನಂದನೆಗಳು" ಎಂದು ಹೇಳಿದರು.
-
And we did it… #Oscars95 #NaatuNaatu #RRRMovie
— Jr NTR (@tarak9999) March 13, 2023 " class="align-text-top noRightClick twitterSection" data="
Congratulations @mmkeeravaani Sir ji, Jakkanna @ssrajamouli , @boselyricist garu, the entire team and the nation 🇮🇳 pic.twitter.com/LCGRUN4iSs
">And we did it… #Oscars95 #NaatuNaatu #RRRMovie
— Jr NTR (@tarak9999) March 13, 2023
Congratulations @mmkeeravaani Sir ji, Jakkanna @ssrajamouli , @boselyricist garu, the entire team and the nation 🇮🇳 pic.twitter.com/LCGRUN4iSsAnd we did it… #Oscars95 #NaatuNaatu #RRRMovie
— Jr NTR (@tarak9999) March 13, 2023
Congratulations @mmkeeravaani Sir ji, Jakkanna @ssrajamouli , @boselyricist garu, the entire team and the nation 🇮🇳 pic.twitter.com/LCGRUN4iSs
ಮುಂದುವರೆದು, "ರಾಜಮೌಳಿ ಎಂಬ ಮೇರು ಕಥೆಗಾರ ಇಲ್ಲದಿದ್ದರೆ ಸಹಜವಾಗಿ ಇದ್ಯಾವುದೂ ಸಾಧ್ಯವಾಗುತ್ತಿರಲಿಲ್ಲ. ಜೊತೆಗೆ ತಮ್ಮ ಪ್ರೀತಿಯನ್ನೇ ಧಾರೆಯೆರದ ಪ್ರೇಕ್ಷಕರಿಲ್ಲದೇ ಈ ಯಶಸ್ಸು ಖಂಡಿತ ಸಿಗುತ್ತಿರಲಿಲ್ಲ. ಇಂದು ಭಾರತಕ್ಕೆ ಮತ್ತೊಂದು ಆಸ್ಕರ್ ತಂದುಕೊಟ್ಟಿರುವ 'ದಿ ಎಲಿಫೆಂಟ್ ವಿಸ್ಪರರ್ಸ್' ತಂಡವನ್ನು ನಾನು ಅಭಿನಂದಿಸಲು ಬಯಸುತ್ತೇನೆ" ಎಂದು ಹೇಳಿದರು. ಜೊತೆಗೆ ಆಸ್ಕರ್ ಪ್ರಶಸ್ತಿಯನ್ನು ಕೈಯಲ್ಲಿ ಹಿಡಿದಿರುವ ಫೋಟೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡು, "ಕೊನೆಗೂ ನಾವು ಆಸ್ಕರ್ ಪ್ರಶಸ್ತಿಯನ್ನು ಪಡೆದುಕೊಂಡೆವು. ಎಂಎಂ ಕೀರವಾಣಿ, ರಾಜಮೌಳಿ, ಚಂದ್ರಬೋಸ್, ಆರ್‌ಆರ್‌ಆರ್ ತಂಡ ಮತ್ತು ಇಡೀ ಭಾರತ ದೇಶಕ್ಕೆ ಅಭಿನಂದನೆಗಳು" ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: 'ಆರ್‌ಆರ್‌ಆರ್', 'ದ ಎಲಿಫೆಂಟ್ ವಿಸ್ಪರರ್ಸ್' ಆಸ್ಕರ್ ಸಾಧನೆ: ಪ್ರಧಾನಿ ಮೋದಿ ಅಭಿನಂದನೆ
-
We have won!!
— Ram Charan (@AlwaysRamCharan) March 13, 2023 " class="align-text-top noRightClick twitterSection" data="
We have won as Indian Cinema!!
We won as a country!!
The Oscar Award is coming home!@ssrajamouli @mmkeeravaani @tarak9999 @boselyricist @DOPSenthilKumar @Rahulsipligunj @kaalabhairava7 #PremRakshith @ssk1122 pic.twitter.com/x8ZYtpOTDN
">We have won!!
— Ram Charan (@AlwaysRamCharan) March 13, 2023
We have won as Indian Cinema!!
We won as a country!!
The Oscar Award is coming home!@ssrajamouli @mmkeeravaani @tarak9999 @boselyricist @DOPSenthilKumar @Rahulsipligunj @kaalabhairava7 #PremRakshith @ssk1122 pic.twitter.com/x8ZYtpOTDNWe have won!!
— Ram Charan (@AlwaysRamCharan) March 13, 2023
We have won as Indian Cinema!!
We won as a country!!
The Oscar Award is coming home!@ssrajamouli @mmkeeravaani @tarak9999 @boselyricist @DOPSenthilKumar @Rahulsipligunj @kaalabhairava7 #PremRakshith @ssk1122 pic.twitter.com/x8ZYtpOTDN
ನಟ ರಾಮ್ಚರಣ್ ಕೃತಜ್ಞತೆ ಪ್ರತಿಯೊಂದಿಗೆ ಟ್ವೀಟ್ ಮಾಡಿ ತಮ್ಮ ಖುಷಿಯನ್ನು ಹಂಚಿಕೊಳ್ಳುವುದರ ಜೊತೆಗೆ ಯಶಸ್ಸಿಗೆ ಕಾರಣಕರ್ತರಾದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ. "ನಾವು ಗೆದ್ದಿದ್ದೇವೆ, ನಾವು ಭಾರತೀಯ ಚಿತ್ರರಂಗಕ್ಕಾಗಿ ಗೆದ್ದಿದ್ದೇವೆ, ನಾವು ಒಂದು ದೇಶವಾಗಿ ಗೆದ್ದಿದ್ದೇವೆ, ಆಸ್ಕರ್ ಪ್ರಶಸ್ತಿ ಮನೆಗೆ ಬರಲಿದೆ" ಎಂದು ಕ್ಯಾಪ್ಶನ್ ಬರೆದಿದ್ದಾರೆ. ಜೊತೆಗೆ ಎಂಎಂ ಕೀರವಾಣಿ ಮತ್ತು ಚಂದ್ರಬೋಸ್ ಆಸ್ಕರ್ ಪ್ರಶಸ್ತಿ ಸ್ವೀಕರಿಸುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಇದಲ್ಲದೇ ಕೃತಜ್ಞತಾ ಪ್ರತಿಯಲ್ಲಿ, "ನಾಟು ನಾಟು ಒಂದು ಭಾವನೆಯಾಗಿದೆ. ಈ ಭಾವನೆಯನ್ನು ಒಗ್ಗೂಡಿಸಿದ ಗೀತೆ ರಚನೆಕಾರ ಚಂದ್ರಬೋಸ್, ಗಾಯಕರಾದ ರಾಹುಲ್ ಸಿಪ್ಲಿಗಂಜ್ ಮತ್ತು ಕಾಲಭೈರವ, ನೃತ್ಯ ನಿರ್ದೇಶಕ ಪ್ರೇಮ್ ರಕ್ಷಿತ್ ನಿಮಗೆ ಧನ್ಯವಾದಗಳು. ಜೊತೆಗೆ ನನ್ನ ಸಹ ನಟ, ಸಹೋದರ ತಾರಕ್ಗೆ ಧನ್ಯವಾದಗಳು. ನಿಮ್ಮೊಂದಿಗೆ ಮತ್ತೊಮ್ಮೆ ಡ್ಯಾನ್ಸ್ ಮಾಡಿ ದಾಖಲೆ ಸೃಷ್ಟಿಸುವ ಭರವಸೆ ನನಗಿದೆ. ಅಲ್ಲದೇ ನಮ್ಮೊಂದಿಗೆ ಸಹನಟಿಯಾಗಿದ್ದ ಆಲಿಯಾ ಭಟ್ ಅವರಿಗೂ ಧನ್ಯವಾದಗಳು. ಈ ಪ್ರಶಸ್ತಿಯು ಭಾರತದ ಪ್ರತಿಯೊಬ್ಬ ನಟ, ತಂತ್ರಜ್ಞರು ಮತ್ತು ಸಿನಿ ಪ್ರೇಕ್ಷಕರಿಗೆ ಅರ್ಪಿಸುತ್ತೇನೆ. ಪ್ರೀತಿ ಮತ್ತು ಬೆಂಬಲಕ್ಕಾಗಿ ಪ್ರತಿಯೊಬ್ಬ ಅಭಿಮಾನಿಗೂ ಹೃತ್ಪೂರ್ವಕ ಧನ್ಯವಾದಗಳು. ಇದು ನಮ್ಮ ದೇಶದ ಗೆಲುವು" ಎಂದು ಬರೆದಿದ್ದಾರೆ.
ಇದನ್ನೂ ಓದಿ: "RRR ಪ್ರತಿ ಭಾರತೀಯನ ಹೆಮ್ಮೆ": ಆಸ್ಕರ್ ಪ್ರಶಸ್ತಿ ಸ್ವೀಕರಿಸಿ ಚಿತ್ರತಂಡ ಭಾವುಕ