ETV Bharat / entertainment

ಆಪರೇಷನ್ ಡಿ ಡಬ್ಬಿಂಗ್: ಹೊಸಬರ ಚಿತ್ರಕ್ಕೆ ಪತಿ ಸುದರ್ಶನ್ ಜೊತೆ ದನಿಯಾದ ಸಂಗೀತಾ ಭಟ್ - Sangeet Bhatt

ಆಪರೇಷನ್ ಡಿ ಸಿನಿಮಾದ ಡಬ್ಬಿಂಗ್ ಕೆಲಸ ಚುರುಕುಗೊಂಡಿದೆ.

Operation D movie dubbing work
ಆಪರೇಷನ್ ಡಿ ಡಬ್ಬಿಂಗ್
author img

By ETV Bharat Karnataka Team

Published : Dec 13, 2023, 2:44 PM IST

'ಆಪರೇಶನ್ ಡಿ' - ರುದ್ರೇಶ್ ಬೂದನೂರು, ಸುಹಾಸ್ ಆತ್ರೇಯ, ವಿನೋದ್ ದೇವ್ ಎಂಬ ಯುವ ಪ್ರತಿಭೆಗಳು ಅಭಿನಯಿಸುತ್ತಿರುವ ಸಿನಿಮಾ. ಬಹುತೇಕ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗುತ್ತಿರುವ ಆಪರೇಶನ್ ಡಿ ಚಿತ್ರದ ಟೀಸರ್​ಗೆ ನಟಿ ಸಂಗೀತ ಭಟ್ ಹಾಗೂ ಅವರ ಪತಿ ಸುದರ್ಶನ್ ರಂಗಪ್ರಸಾದ್ ಅವರ ಸಾಥ್ ಸಿಕ್ಕಿದೆ. ಹೌದು, ಹೊಸಬರ ಚಿತ್ರಕ್ಕೆ ಸಂಗೀತ, ಸುದರ್ಶನ್ ಡಬ್ಬಿಂಗ್ ಮಾಡಿಕೊಡುವ ಮೂಲಕ ಗಮನ ಸೆಳೆದಿದ್ದಾರೆ. ಮೈಥಾಲಜಿ ಕಾನ್ಸೆಪ್ಟ್​​ ಇಟ್ಟುಕೊಂಡು ಟೀಸರ್​ ಸಿದ್ಧವಾಗುತ್ತಿದೆ.

Operation D movie dubbing work
ಆಪರೇಷನ್ ಡಿ ಡಬ್ಬಿಂಗ್ ಚುರುಕು...

ಬಾಣಸವಾಡಿಯ ಅರ್ಜ್ ಕಲಾ ಸ್ಟುಡಿಯೋದಲ್ಲಿ ಟೀಸರ್​ನ ಡಬ್ಬಿಂಗ್ ಕೆಲಸ ನಡೆಯುತ್ತಿದ್ದು, ಸಂಗೀತಾ ಭಟ್ ಹಾಗೂ ಸುದರ್ಶನ್ ರಂಗಪ್ರಸಾದ್ ಈಗಾಗಲೇ ಧ್ವನಿ ನೀಡಿದ್ದಾರೆ. ಚಿತ್ರರಂಗದ ಖ್ಯಾತನಾಮರೊಬ್ಬರು ಸದ್ಯದಲ್ಲೇ ಟೀಸರ್​​ಗೆ ಧ್ವನಿ ನೀಡಲಿದ್ದಾರೆ. ಆ ಧ್ವನಿ ಯಾರದು ಎಂಬುದನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆ.

ಕನ್ನಡದ ಹಲವವು ಸಿನಿಮಾಗಳಲ್ಲಿ ನಟನಾಗಿದ್ದ ತಿರುಮಲೇಶ್ ವಿ ಈ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ತಿರುಮಲೇಶ್ ವಿ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಚಿತ್ರದಲ್ಲಿ ರುದ್ರೇಶ್ ಬೂದನೂರು, ಸುಹಾಸ್ ಆತ್ರೇಯ, ವಿನೋದ್ ದೇವ್ ನಾಯಕರಾಗಿ ನಟಿಸಿದ್ದು, ನಾಯಕಿಯರಾಗಿ ಸ್ನೇಹ ಭಟ್, ಇಂಚರ ಬಿ ಚನ್ನಪ್ಳ ಇದ್ದಾರೆ. ವೆಂಕಟಾಚಲ, ಶಿವಮಂಜು, ಜೂ. ನರಸಿಂಹರಾಜು, ಮಹೇಶ್ ಎಸ್ ಕಲಿ, ರಂಗನಾಥ ಬಿ, ಶ್ರೀಧರ್ ಟಿ ಎಸ್, ಸುರೇಶ್ ಬಿ, ಸಂಚಯ ನಾಗರಾಜ್, ಕಿರಣ್ ಈಡಿಗ, ರವಿಶಂಕರ್, ಶಿವಾನಂದ, ಸೂರ್ಯವಂಶಿ (ಶಿವು ಅಪ್ಪಾಜಿ), ನಂಜಪ್ಪ ಎಸ್ ದೊಡ್ಡಮದುರೆ, ಆರ್ ಜೆ ಧೀರಜ್, ಪೃಥ್ವಿ ಬನವಾಸಿ, ಪ್ರಶಾಂತ್ ಸಂಗಾಪೂರ್, ರಂಜಿತ್ ರಂಜು, ಆಶಾ, ರೂಪ ಆರ್, ಧನಲಕ್ಷ್ಮೀ, ಅಕ್ಷಯ್, ಕಿರಣ್, ನಾಗರಾಜ್ ದಾವಣಗೆರೆ, ಸಂತೋಷ್,ನಾಗರಾಜ್ ಕೀಲಗೆರೆ, ಖಾದರ್ ಸೇರಿದಂತೆ ಮೊದಲಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ವೇದಿಕ ಹಾಗೂ ಸಂತೋಷ್ ಅವರು ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಕೆಂಪಗಿರಿ ಒಂದು ಹಾಡು ಹಾಗೂ ವೇದಿಕ ಉಳಿದ ಎಲ್ಲಾ ಹಾಡುಗಳನ್ನು ರಚಿಸಿದ್ದಾರೆ. ಅನಿರುದ್ ಶಾಸ್ತ್ರೀ, ವೇದಿಕ ಹಾಗೂ ಪೃಥ್ವಿ ಭಟ್ ಗಾಯನದಲ್ಲಿ ಈ ಚಿತ್ರದ ಹಾಡುಗಳು ಸುಮಧುರವಾಗಿ ಮೂಡಿಬಂದಿವೆ.

ಇದನ್ನೂ ಓದಿ: ಯಶ್ ರಾಧಿಕಾ​ ಪುತ್ರಿ ಐರಾ ಗ್ರ್ಯಾಂಡ್ ಬರ್ತ್​​​ಡೇ ಸೆಲೆಬ್ರೇಶನ್​ ವಿಡಿಯೋ ನೋಡಿ

ಅದ್ವಿತ ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಭಾರ್ಗವಿ ತಿರುಮಲೇಶ್ ಹಾಗೂ ರಂಗನಾಥ್ ಬಿ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಸುರೇಶ್ ಬಿ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು, ಹಾಗೇ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇನ್ನೂಕಾರ್ತಿಕ್ ಪ್ರಸಾದ್ ಛಾಯಾಗ್ರಹಣ, ವಿಕ್ರಮ್ ಶ್ರೀಧರ್ ಸಂಕಲನ ಹಾಗೂ ತರ್ಮಾಕೋಲ್ ಶ್ರೀನಿವಾಸ್ ಅವರ ಕಲಾ ನಿರ್ದೇಶನ, ಜಯ ಹರಿಪ್ರಸಾದ್ (ಜೆರ್ರಿ ಮಾಸ್ಟರ್‌) ನೃತ್ಯ ನಿರ್ದೇಶನ ಚಿತ್ರಕ್ಕಿದೆ. ಸದ್ಯದಲ್ಲೇ ಆಪರೇಶನ್ ಡಿ ಚಿತ್ರದ ಟೀಸರ್, ಟ್ರೇಲರ್ ಅನಾವರಣಗೊಳ್ಳಲಿದೆ.

ಇದನ್ನೂ ಓದಿ: ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ ಫ್ಯಾಮಿಲಿ ಫೋಟೋಗಳಿಗೆ ಅಭಿಮಾನಿಗಳಿಂದ ಮೆಚ್ಚುಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.