ETV Bharat / entertainment

'ಎಂಎಂಬಿ ಲೆಗಸಿ'ಗೆ ಒಂದು ವರ್ಷದ ಸಂಭ್ರಮ; ಡಿ.16ರಂದು ಮೈ ಮೂವೀ ಬಜಾರ್​ ಪ್ರಶಸ್ತಿ ಪ್ರದಾನ

One year for MMB Legacy: ನಿರ್ದೇಶಕ ನವರಸನ್ ನೇತೃತ್ವದ 'ಎಂಎಂಬಿ ಲೆಗಸಿ'ಗೆ ಒಂದು ವರುಷದ ಸಂಭ್ರಮ.

One year celebration for MMB Legacy
'ಎಂಎಂಬಿ ಲೆಗಸಿ'ಗೆ ಒಂದು ವರ್ಷದ ಸಂಭ್ರಮ; ಡಿ.16ರಂದು ಮೈ ಮೂವೀ ಬಜಾರ್​ ಪ್ರಶಸ್ತಿ ಪ್ರದಾನ
author img

By ETV Bharat Karnataka Team

Published : Nov 9, 2023, 6:07 PM IST

ಕನ್ನಡ ಚಿತ್ರರಂಗದ ನಿರ್ಮಾಪಕರಿಗೆ ಹಾಗೂ ಹೊಸ ಚಿತ್ರತಂಡದವರಿಗೆ ಸಹಾಯವಾಗಲಿ ಎಂದು ನಿರ್ದೇಶಕ ಹಾಗೂ ಎಂಎಂಬಿ ಲೆಗಸಿಯ ಮುಖ್ಯಸ್ಥ ನವರಸನ್ 'MMB legacy' ಹೆಸರಿನಲ್ಲಿ ಈವೆಂಟ್​ ಹಾಗೂ ಮಾಧ್ಯಮಗೋಷ್ಟಿಗಳನ್ನು ನಡೆಸಲು ಸುಸಜ್ಜಿತವಾದ ಸಭಾಂಗಣವನ್ನು ಆರಂಭಿಸಿ ಒಂದು ವರ್ಷವೇ ಆಗಿದೆ. ಈ ಸಂಭ್ರಮವನ್ನು ಆಚರಿಸಲು ನವರಸನ್​ ಇತ್ತೀಚೆಗೆ ಅದ್ಧೂರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಸಮಾರಂಭಕ್ಕೆ ಸಿನಿ ತಾರೆಯರಾದ ವಿನೋದ್ ಪ್ರಭಾಕರ್, ಅಭಿಷೇಕ್ ಅಂಬರೀಶ್, ಚಂದನ್ ಶೆಟ್ಟಿ, ಸಂಜನಾ ಆನಂದ್, ಅಪೂರ್ವ ಸಾಕ್ಷಿಯಾಗಿ, ಮೈ ಮೂವೀ ಬಜಾರ್​ನ ಪ್ರಶಸ್ತಿಯನ್ನು ಅನಾವರಣ ಮಾಡಿದರು.

One year celebration for MMB Legacy
ಮೈ ಮೂವೀ ಬಜಾರ್​ನ ಪ್ರಶಸ್ತಿ ಅನಾವರಣ

ಈ ವೇಳೆ ಮಾತನಾಡಿದ ನವರಸನ್​, "ಎಂಎಂಬಿ ಲೆಗಸಿ ಕಳೆದ ವರ್ಷ ನವೆಂಬರ್​ನಲ್ಲಿ ಆರಂಭವಾಗಿತ್ತು. ಈ ಒಂದು ವರ್ಷದಲ್ಲಿ ಮಾಧ್ಯಮಗೋಷ್ಟಿಗಳು ಹಾಗೂ ಹಲವಾರು ಈವೆಂಟ್​ಗಳು ಸೇರಿದಂತೆ 216 ಕಾರ್ಯಕ್ರಮಗಳು ನಡೆದಿವೆ. ಕನ್ನಡ ಚಿತ್ರರಂಗದ ನಿರ್ಮಾಪಕರಿಗೆ ಅನುಕೂಲವಾಗುವಾಗಲೆಂದು ಯೋಚಿಸಿ ಈ ಸಭಾಂಗಣವನ್ನು ನಿರ್ಮಾಣ ಮಾಡಲಾಗಿದೆ. ಸಭಾಂಗಣ ನಿರ್ಮಿಸಲು ಜಾಗ ನೀಡಿದ ಆನಂದ್ ಅವರಿಗೆ ಸಹಕಾರ ನೀಡುತ್ತಿರುವ ಚಿತ್ರೋದ್ಯಮದ ಗಣ್ಯರಿಗೆ ನನ್ನ ಕೃತಜ್ಞತೆಗಳು" ಎಂದರು‌.

One year celebration for MMB Legacy
'ಎಂಎಂಬಿ ಲೆಗಸಿ'ಗೆ ಒಂದು ವರ್ಷದ ಸಂಭ್ರಮ

ಮೈ ಮೂವೀ ಬಜಾರ್​ ಪ್ರಶಸ್ತಿ ಪ್ರದಾನ; "ಇದರ ಜೊತೆಗೆ ಇಂತಹ ಸುಂದರ ಸಭಾಂಗಣಗಳನ್ನು ಬೆಂಗಳೂರು ಅಷ್ಟೇ ಅಲ್ಲದೇ, ಮುಂಬೈ ಮುಂತಾದ ಕಡೆ ತೆರೆಯುವ ಆಲೋಚನೆ ಇದೆ. ದೇಶದ ಎಲ್ಲಾ ಚಿತ್ರರಂಗಗಳ ಬಗ್ಗೆ ಮಾಹಿತಿಯನ್ನು ನೀಡುವ ಆ್ಯಪ್​ ಒಂದನ್ನು ಬಿಡುಗಡೆ ಮಾಡುವ ಸಿದ್ಧತೆ ಕೂಡ ನಡೆಯುತ್ತಿದೆ" ಎಂದು ತಿಳಿಸಿದರು.

ಇದನ್ನೂ ಓದಿ: 'ಅಭಿಮಾನಿಗಳೇ ಶನಿವಾರ ಸಿಗೋಣ'; ರಾಧಿಕಾ ಕುಮಾರಸ್ವಾಮಿ ಬರ್ತ್​ಡೇ ಆಚರಣೆಗೆ ನಿಮಗಿದೆ ಆಹ್ವಾನ...

"ಡಿಸೆಂಬರ್ 16 ರಂದು ಬಿಡದಿ ಬಳಿಯ ಜಾಲಿವುಡ್​ನಲ್ಲಿ ಮೈ ಮೂವೀ ಬಜಾರ್​ನ ಮೊದಲ ವರ್ಷದ ಪ್ರಶಸ್ತಿ ಸಮಾರಂಭವನ್ನು ಅದ್ಧೂರಿಯಾಗಿ ನಡೆಸಲು ನಿರ್ಧರಿಸಲಾಗಿದೆ. ಈ ಬಾರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಳೆದ‌ ನಲವತ್ತು, ಐವತ್ತು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸುತ್ತ ಬರುತ್ತಿರುವ ಕಲಾವಿದರು ಹಾಗೂ ತಂತ್ರಜ್ಞರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈಗಿನ ಕಲಾವಿದರು ಹಿರಿಯ ನಟರನ್ನು ಗೌರವಿಸಲಾಗುವುದು" ಎಂದು ಮಾಹಿತಿ ನೀಡಿದರು.

ಈ ಮಧ್ಯೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ಮಾಜಿ ಅಧ್ಯಕ್ಷರಾದ ಕೆ.ವಿ ಚಂದ್ರಶೇಖರ್, ಭಾ.ಮ.ಹರೀಶ್, ನಿರ್ಮಾಪಕರಾದ ಸಂಜಯ್ ಗೌಡ, ರಮೇಶ್ ರೆಡ್ಡಿ, ದೇವೇಂದ್ರ, ಭಾ.ಮ.ಗಿರೀಶ್, ಜಗದೀಶ್, ಕೃಷ್ಣ ಸಾರ್ಥಕ್, ರಾಜೇಶ್, ಗಿರೀಶ್ ಕುಮಾರ್, ಗೋವಿಂದರಾಜು, ಚೇತನ್ ಗೌಡ, ರವಿರಾಜ್, ಶ್ರೀನಿವಾಸ್ (ಹೈದರಾಬಾದ್) ಹಾಗೂ ನಿರ್ದೇಶಕರಾದ ಹರಿ ಸಂತು, ಮಹೇಶ್ ಕುಮಾರ್ ಮುಂತಾದ ಗಣ್ಯರು ಸಮಾರಂಭಕ್ಕೆ ಆಗಮಿಸಿ ನವರಸನ್ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದರ ಜೊತೆಗೆ ಶುಭ ಹಾರೈಸಿದರು.

ಇದನ್ನೂ ಓದಿ: ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪುಷ್ಪ 2, ಸಲಾರ್​ ಶೂಟಿಂಗ್​​: ರಶ್ಮಿಕಾ ಸಿನಿಮಾ ಸಾಂಗ್​ನಲ್ಲಿ ಸಾವಿರ ಡ್ಯಾನ್ಸರ್ಸ್!!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.