ಮುಂಬೈ: ನವವಿವಾಹಿತ ದಂಪತಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರು ಮಂಗಳವಾರ ಪ್ರೇಮಿಗಳ ದಿನದಂದು ಜೈಸಲ್ಮೇರ್‌ನ ತಮ್ಮ ಮದುವೆ ಪೂರ್ವದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಂನಲ್ಲಿ ನವ ದಂಪತಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಅವರು ಹಂಚಿಕೊಂಡಿರುವ ವಿವಾಹ ಪೂರ್ವದ ಸುಂದರ ಚಿತ್ರಗಳು ವಾಲೆಂಟನ್ಸ್ ಡೇಗೆ ಕಳೆ ತುಂಬಿವೆ.
ಫೆಬ್ರವರಿ 7 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವದಂಪತಿ ಭಾನುವಾರದಂದು ಭವ್ಯವಾದ ಆರತಕ್ಷತೆ ಆಯೋಜಿಸಿದ್ದರು. ಪ್ರಸಿದ್ಧ ದಂಪತಿಗಳು ಹಳದಿ ಬಟ್ಟೆಗಳಲ್ಲಿ ಅವಳಿ ತರಹ ಮಿಂಚುತ್ತಿದ್ದಾರೆ. ಇದು ಅವರ ಹಲ್ದಿಯಂತೆ ಕಾಣುತ್ತದೆ. ಕಿಯಾರಾ ಅಡ್ವಾಣಿ ಅವರು ಚಿತ್ರಗಳನ್ನು ಪೋಸ್ಟ್ ಮಾಡಿ, ಪ್ಯಾರ್ ಕಾ ರಂಗ್ ಚಡಾ ಹೈ ಎಂದು ಬರೆದುಕೊಂಡಿದ್ದಾರೆ.
ಪ್ರೇಮಿಗಳ ದಿನದಂದು, ಸಿದ್ಧಾರ್ಥ ಮತ್ತು ಕಿಯಾರಾ ತಮ್ಮ ಮದುವೆಯ ಪೂರ್ವದ ಚಿತ್ರಗಳನ್ನು ಪೋಸ್ಟ್ ಮಾಡಿದ ನಂತರ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಮಾನಿಗಳನ್ನು ವಿಸ್ಮಯಗೊಂಡಿದ್ದಾರೆ. ಜಗ್ ಜಗ್ ಜಿಯೋ ನಟಿ ಕಿಯಾರಾ ಬಿಳಿ ಲೆಹೆಂಗಾ ಧರಿಸಿ ಮತ್ತು ಆಭರಣ ಸಹಿತ ಉಡುಪು ಧರಿಸಿರುವುದು ಚಿತ್ರ ಆಕರ್ಷಣೀಯವಾಗಿದೆ. ಕಿಯಾರಾ ತನ್ನ ಕೂದಲಿಗೆ ಜಡೆ ಕಟ್ಟಿದ್ದು, ಅವಳ ಮೇಕ್ಅಪ್ ನೋಟ ಸುಂದರವಾಗಿ ಕಾಣುತ್ತಿದೆ. ಮತ್ತೊಂದೆಡೆ ಸಿದ್ಧಾರ್ಥ್ ಹಳದಿ ಕುರ್ತಾ ಮತ್ತು ಕಲರ್‌ಫುಲ್ ಸ್ಟೋಲ್‌ನಲ್ಲಿ ಕಾಣಿಸಿಕೊಂಡಿರುವ ಚಿತ್ರ ತಮ್ಮ ಅಭಿಮಾನಿಗಳನ್ನು ಬೆರಗುಗೊಳಿಸಿದೆ.
- " class="align-text-top noRightClick twitterSection" data="
">
ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಶೇರ್ಷಾ ಸೆಟ್‌ನಲ್ಲಿ ಪ್ರೀತಿಸುತ್ತಿರುವ ಹಿಂದಿನ ವಾರದ ತಮ್ಮ ಮದುವೆ ಪೂರ್ವದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. "ಅಬ್ ಹುಮಾರಿ ಶಾಶ್ವತ ಬುಕಿಂಗ್ ಹೋ ಗಯಿ ಹೈ ದಂಪತಿ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ನಮ್ಮ ಮುಂದಿನ ಪಯಣದಲ್ಲಿ ನಿಮ್ಮ ಆಶೀರ್ವಾದ ಮತ್ತು ಪ್ರೀತಿಯನ್ನು ಬಯಸುತ್ತೇವೆ. ಈ ಹಿಂದೆ ಫೆಬ್ರವರಿ 6 ರಂದು ಮದುವೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ನಂತರ ಅದನ್ನು ಫೆಬ್ರವರಿ 7ಕ್ಕೆ ಬದಲಾಯಿಸಲಾಯಿತು ಎಂದು ಬರೆದುಕೊಂಡಿದ್ದಾರೆ.
ಸೂರ್ಯಗಢ್ ಅರಮನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ: ಬಾಲಿವುಡ್ ತಾರೆಗಳಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ರಾಜಸ್ಥಾನದ ಜೈಸಲ್ಮೇರ್‌ನ ಸೂರ್ಯಗಢ್ ಅರಮನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಕಾರ್ಯಕ್ರಮದಲ್ಲಿ ಬಾಲಿವುಡ್ ತಾರೆಗಳಾದ ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಮತ್ತು ಸೂಪರ್ಸ್ಟಾರ್ ಸಲ್ಮಾನ್ ಖಾನ್ ಸೇರಿ ಗಣ್ಯಾತಿಗಣ್ಯರು 150 ಜನರು ಭಾಗವಹಿಸಿದ್ದರು.
ಮುಂಬೈ ಮೂಲದ ಕಂಪನಿಯೊಂದು ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ಅವರ ವಿವಾಹ ಸಮಾರಂಭದ ಪ್ರಾಯೋಜಕತ್ವದ ಪಡೆದಿತ್ತು. ಮದುವೆಗೆ ಆಹ್ವಾನಿಸಲಾದ ಅತಿಥಿಗಳ ಭದ್ರತೆ ಮೇಲ್ವಿಚಾರಣೆ ಮಾಡಲು ಸಂಘಟಕರು ವಿಶೇಷ ಭದ್ರತಾ ವ್ಯವಸ್ಥೆಗಳನ್ನು ನಿರ್ವಹಿಸಿದ್ದರು.
ಕಿಯಾರಾ-ಸಿದ್ಧಾರ್ಥ್ ಮದುಗೆ ಸಮಾರಂಭಕ್ಕೆ ಬರುವ ಅತಿಥಿಗಳಿಗೆ ಸೂರ್ಯಗಢ್ ಪ್ಯಾಲೇಸ್ ಹೋಟೆಲ್‌ನಲ್ಲಿ ಅತಿಥಿಗಳಿಗಾಗಿ 84 ಐಷಾರಾಮಿ ಕೊಠಡಿಗಳ ವ್ಯವಸ್ಥೆ ಮಾಡಲಾಗಿತ್ತು.ಅತಿಥಿಗಳಿಗಾಗಿ ಮರ್ಸಿಡಿಸ್, ಜಾಗ್ವಾರ್ ಮತ್ತು BMW 70 ಐಷಾರಾಮಿ ವಾಹನಗಳನ್ನು ಬಳಸಲಾಗಿತ್ತು. ವಾಹನಗಳ ಗುತ್ತಿಗೆಯನ್ನು ಜೈಸಲ್ಮೇರ್‌ನ ಅತಿದೊಡ್ಡ ಟೂರ್ ಆಪರೇಟರ್ ಲಕ್ಕಿ ಟೂರ್ ಮತ್ತು ಟ್ರಾವೆಲ್ಸ್ ಪಡೆದಿತ್ತು.
ಇದನ್ನೂಓದಿ:ಪ್ರೇಮಿಗಳ ದಿನ: ಹಸಿರೇ ಉಸಿರು.. ಮರಗಳ ಮೇಲಿನ ಪ್ರೀತಿಗಾಗಿ ಏಕಾಂಗಿಯಾಗಿ ಉಳಿದ ಗಜೇಂದ್ರ ಯಾದವ್