ಹೈದರಾಬಾದ್: ಬಾಲಿವುಡ್ ನಟಿ ರವೀನಾ ಟಂಡನ್ಗೆ ಇಂದು ಹುಟ್ಟುಹಬ್ಬ. 48ನೇ ವಸಂತಕ್ಕೆ ಕಾಲಿಟ್ಟ ನಟಿಗೆ ಪುತ್ರಿ ರಾಶಾ ಥಡಾನಿ ವಿಶೇಷವಾಗಿ ವಿಶ್ ಮಾಡಿದ್ದಾರೆ. ದೀಪಾವಳಿ ಹಬ್ಬದ ಜೊತೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ತಾರೆಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ.
ರಾಶಾ ಕೂಡ ತನ್ನ ತಾಯಿಯ ಮೇಲಿನ ಪ್ರೀತಿಯನ್ನು ವಿಭಿನ್ನವಾಗಿ ತೋರಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ತಾಯಿಯ ಹಳೆಯ ಫೋಟೋ ಹಂಚಿಕೊಡಿರುವ ಪುತ್ರಿ, ಹುಟ್ಟುಹಬ್ಬದ ಶುಭಾಶಯಗಳು ಮಾ. ಲವ್ ಯು ಫಾರೆವರ್" ಎಂದು ಬರೆದಿದ್ದಾರೆ. ಇನ್ಸ್ಟಾದಲ್ಲಿ 250K ಫಾಲೋವರ್ಸ್ ಹೊಂದಿರುವ ರಾಶಾ, ತಾಯಿಯ ಫೋಟೋ ಹಂಚಿಕೊಳ್ಳುತ್ತಿದ್ದಂತೆ ಸಾಕಷ್ಟು ಲೈಕ್ಸ್ ಬಂದಿವೆ.
ರವೀನಾ ಟಂಡನ್ 2004ರಲ್ಲಿ ಅನಿಲ್ ಥಡಾನಿ ಅವರನ್ನು ವಿವಾಹವಾಗಿದ್ದು ರಾಶಾ (ಜನನ 2005) ಮತ್ತು ರಣಬೀರ್ (ಜನನ 2008) ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. 1995 ರಲ್ಲಿ ಮದುವೆಗೂ ಮುನ್ನ (21 ವರ್ಷದವಳಿದ್ದಾಗ) ಪೂಜಾ ಮತ್ತು ಛಾಯಾ ಎಂಬ ಇಬ್ಬರು ಹುಡುಗಿಯರನ್ನು ದತ್ತು ಪಡೆದಿದ್ದರು. ಸದ್ಯ ಇಬ್ಬರಿಗೂ ಮದುವೆಯಾಗಿದ್ದು, ಮಕ್ಕಳನ್ನು ಹೊಂದಿದ್ದಾರೆ.
ಬಾಲಿವುಡ್ನ ಪತ್ತರ್ ಕೆ ಫೂಲ್ (1991) ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ರವೀನಾ ಟಂಡನ್ ಕನ್ನಡ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಮನೋಜ್ಞ ನಟನೆಗೆ ಫಿಲ್ಮ್ಫೇರ್ ಸೇರಿದಂತೆ ಹಲವು ಪ್ರಶಸ್ತಿಗಳು ಬಂದಿವೆ. ಅರಣ್ಯಕ್ ಎಂಬ ವೆಬ್ ಸರಣಿಯೊಂದಿಗೆ ಅವರು OTTಗೂ ಪಾದಾರ್ಪಣೆ ಮಾಡಿದರು.
- " class="align-text-top noRightClick twitterSection" data="
">
ರವೀನಾ ಸದ್ಯ ಘುಡ್ಚಾಡಿ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಂಜಯ್ ದತ್, ಪಾರ್ಥ್ ಸಮತಾನ್ ಮತ್ತು ಕುಶಾಲಿ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಬಿನೋಯ್ ಗಾಂಧಿ ಅವರು ನಿರ್ದೇಶಿಸುತ್ತಿದ್ದಾರೆ. ಟಿ-ಸಿರೀಸ್ ಮತ್ತು ಕೀಪ್ ಡ್ರೀಮಿಂಗ್ ಪಿಕ್ಚರ್ಸ್ ನಿರ್ಮಾಣದ ಹೊಣೆ ಹೊತ್ತುಕೊಂಡಿವೆ.
ಇತ್ತೀಚೆಗೆ ತೆರೆಕಂಡ ರಾಕಿಂಗ್ ಸ್ಟಾರ್ ಯಶ್ ನಟನೆಯ ಪ್ಯಾನ್ ಇಂಡಿಯಾ ಚಿತ್ರ ಕೆಜಿಎಫ್- 2 ರಲ್ಲಿ ಕಾಣಿಸಿಕೊಳ್ಳುವ ಮೂಲಕ ಸ್ಯಾಂಡಲ್ವುಡ್ನಲ್ಲಿ ಕ್ರೇಜ್ ಕೂಡ ಹೆಚ್ಚಿಸಿದರು. ಇದಕ್ಕೂ ಮುನ್ನ ಅವರು ನಟ-ನಿರ್ದೇಶಕ ಉಪೇಂದ್ರ ಜೊತೆಗೆ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ಹೆಡ್ ಬುಷ್ ಸಿನಿಮಾದ ಸುತ್ತ ವಿವಾದ: ವೀರಗಾಸೆ ಕಲಾವಿದರಿಗೆ ಅವಮಾನ ಆರೋಪ