ETV Bharat / entertainment

OMG 2 trailer: ಅಕ್ಷಯ್​ ಕುಮಾರ್​ ನಟನೆಯ 'ಓಎಂಜಿ 2' ಟ್ರೇಲರ್​ ರಿಲೀಸ್​; ನೀವೂ ನೋಡಿ.. - OMG 2 ಟೀಸರ್ ಜುಲೈ 11ರಂದು ಬಿಡುಗಡೆ

OMG 2 trailer: ಅಕ್ಷಯ್​ ಕುಮಾರ್ ನಟನೆಯ 'OMG 2' ಸಿನಿಮಾದ ಟ್ರೇಲರ್​ ಬಿಡುಗಡೆಯಾಗಿದೆ.

OMG 2 trailer
ಓಎಂಜಿ 2
author img

By

Published : Aug 3, 2023, 1:54 PM IST

ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್ ನಟನೆಯ ಬಹುನಿರೀಕ್ಷಿತ ಚಿತ್ರ 'OMG 2'. ಅಕ್ಷಯ್ ಕುಮಾರ್ ಮತ್ತು ಪಂಕಜ್ ತ್ರಿಪಾಠಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾದ ಟ್ರೇಲರ್​ ಇದೀಗ ಬಿಡುಗಡೆಯಾಗಿದೆ. ಈಗಾಗಲೇ ಟೀಸರ್ ಮತ್ತು ಹಾಡುಗಳ ಮೂಲಕ ಗಮನ ಸೆಳೆದಿರುವ 'ಓಎಂಜಿ 2' ಇದೀಗ ಟ್ರೇಲರ್​ ಮೂಲಕ ನಿಮ್ಮ ಮುಂದೆ ಬಂದಿದೆ. ಸೋಷಿಯಲ್​ ಮೀಡಿಯಾದಲ್ಲಿ ಟ್ರೇಲರ್​ ಭಾರೀ ಸದ್ದು ಮಾಡುತ್ತಿದೆ. ಸಿನಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

  • " class="align-text-top noRightClick twitterSection" data="">

ಆಗಸ್ಟ್​ 2 ರಂದು ಟ್ರೇಲರ್​ ಅನ್ನು ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ಈ ಮೊದಲು ನಿರ್ಧರಿಸಿತ್ತು. ಆದರೆ, ಹಲವು ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿರುವ ಕಲಾ ನಿರ್ದೇಶಕ ನಿತಿನ್​ ದೇಸಾಯಿ ಅವರು ನಿನ್ನೆಯಷ್ಟೇ ನಿಧನರಾದರು. ಬಾಲಿವುಡ್​ ಸಿನಿಮಾ ಇಂಡಸ್ಟ್ರಿಯ ಅತಿ ದೊಡ್ಡ ಆಸ್ತಿನೇ ಆಗಿದ್ದ ನಿತಿನ್​ ದೇಸಾಯಿ ಮರಣ ಅಕ್ಷಯ್​ ಕುಮಾರ್​ ಅವರಿಗೆ ನೋವು ತಂದಿತ್ತು. ಈ ಕಾರಣಕ್ಕಾಗಿ ನಿನ್ನೆ (ಬುಧವಾರ) ಬಿಡುಗಡೆಯಾಗಬೇಕಿದ್ದ ಟ್ರೇಲರ್​ ಅನ್ನು ಇಂದು ರಿಲೀಸ್​ ಮಾಡಲಾಗಿದೆ.

ಆಗಸ್ಟ್​ 11 ರಂದು ಬಿಡುಗಡೆ: ಪಂಕಜ್ ತ್ರಿಪಾಠಿ ಅವರ ಪಾತ್ರವನ್ನು ಭಗವಾನ್ ಶಿವನ ಕಟ್ಟಾ ಭಕ್ತನಾಗಿ ತೋರಿಸಲಾಗಿದೆ. ಶಿವನ ಪಾತ್ರದಲ್ಲಿ ಅಕ್ಷಯ್​ ಕುಮಾರ್​ ನಟಿಸಿದ್ದಾರೆ. ಓಎಂಜಿ ಸಿನಿಮಾದಲ್ಲಿ ಯಾಮಿ ಗೌತಮ್ ನಟಿಸಿದ್ದಾರೆ. ಅವರು ವಕೀಲರ ಪಾತ್ರ ಮಾಡುತ್ತಿದ್ದಾರೆ. ಓಎಂಜಿ 2 ಪರೇಶ್ ರಾವಲ್ ಮತ್ತು ಅಕ್ಷಯ್ ನಟಿಸಿದ್ದ ಓ ಮೈ ಗಾಡ್ ಚಿತ್ರದ ಮುಂದುವರಿದ ಭಾಗ ಇದಾಗಿದೆ. ಅಮಿತ್ ರೈ ನಿರ್ದೇಶನದ ಸಿನಿಮಾ ಆಗಸ್ಟ್ 11 ರಂದು ಥಿಯೇಟರ್‌ಗಳಲ್ಲಿ ತೆರೆಕಾಣಲು ಸಜ್ಜಾಗುತ್ತಿದೆ. ಇದೇ ಸಮಯದಲ್ಲಿ ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಅಭಿನಯದ ಗದರ್ 2 ಬಿಡುಗಡೆ ಆಗಲಿದ್ದು, ಬಾಕ್ಸ್ ಆಫೀಸ್​ನಲ್ಲಿ ಸ್ಪರ್ಧೆ ಏರ್ಪಡಲಿದೆ.

ಇದನ್ನೂ ಓದಿ: OMG 2 ಸಾಂಗ್​ ರಿಲೀಸ್​​: ಅಕ್ಷಯ್​ ಕುಮಾರ್​ ನಟನೆಯ ಮತ್ತೊಂದು ಸಿನಿಮಾ ಯಾವುದು ಗೊತ್ತಾ?

OMG 2 ಟೀಸರ್ ಜುಲೈ 11ರಂದು ಬಿಡುಗಡೆಯಾಯಿತು. ರೈಲ್ವೇ ನೀರಿನಿಂದ ಶಿವನಿಗೆ ರುದ್ರಾಭಿಷೇಕ ಮಾಡುವ ದೃಶ್ಯ ವಿವಾದಕ್ಕೆ ಕಾರಣವಾಗಿತ್ತು. ಹೀಗಾಗಿ, ಸೆನ್ಸಾರ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CFBC) ಚಿತ್ರದ ಬಿಡುಗಡೆಗೆ ಪ್ರಮಾಣಪತ್ರ ನೀಡಲು ನಿರಾಕರಿಸಿ, ಪರಿಶೀಲನಾ ಸಮಿತಿಗೆ ರವಾನಿಸಿತ್ತು. ಇದೀಗ ಎರಡು ವಾರಗಳ ಕಾಯುವಿಕೆಯ ನಂತರ ಸೆನ್ಸಾರ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ 'OMG 2' ಸಿನಿಮಾಗೆ ಕೆಲವು ಬದಲಾವಣೆಗಳನ್ನು ಮಾಡುವಂತೆ ತಿಳಿಸಿ 'A' ಪ್ರಮಾಣಪತ್ರವನ್ನು ನೀಡಿದೆ.

'ಹೌಸ್‌ಫುಲ್ 5' ಅಕ್ಷಯ್ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಸಿನಿಮಾ. ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣದ ಹೌಸ್‌ಫುಲ್ 5 ತರುಣ್ ಮನ್ಸುಖಾನಿ ನಿರ್ದೆಶನದಲ್ಲಿ ಮೂಡಿ ಬರಲಿದೆ. 2024ರ ದೀಪಾವಳಿ ವೇಳೆ ಬಿಡುಗಡೆ ಆಗಲಿದೆ. ಭರ್ಜರಿ ಕಾಮಿಡಿ ಸಿನಿಮಾ ಹೌಸ್‌ಫುಲ್ 5 ಮೇಲೆ ಅಭಿಮಾನಿಗಳು ಸಾಕಷ್ಟು ಕುತೂಹಲ ಹೊಂದಿದ್ದಾರೆ.

ಇದನ್ನೂ ಓದಿ: OMG 2: ಹರ್ ಹರ್ ಮಹಾದೇವ್ ಹಾಡು ಬಿಡುಗಡೆ- ಶಿವನ ವೇಷದಲ್ಲಿ ಅಕ್ಷಯ್​ ಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.