ETV Bharat / entertainment

OMG 2 ಸಾಂಗ್​ ರಿಲೀಸ್​​: ಅಕ್ಷಯ್​ ಕುಮಾರ್​ ನಟನೆಯ ಮತ್ತೊಂದು ಸಿನಿಮಾ ಯಾವುದು ಗೊತ್ತಾ? - ಪಂಕಜ್ ತ್ರಿಪಾಠಿ

ಅಕ್ಷಯ್​ ಕುಮಾರ್​ ಅಭಿನಯದ ಓಎಂಜಿ 2 ಸಿನಿಮಾದ ಊಂಚಿ ಊಂಚಿ ವಾದಿ ಹಾಡು ಬಿಡುಗಡೆಯಾಗಿದೆ.

OMG 2 song Oonchi Oonchi Waadi
ಓಎಂಜಿ 2 ಸಾಂಗ್​ ರಿಲೀಸ್
author img

By

Published : Jul 18, 2023, 2:17 PM IST

ಬಾಲಿವುಡ್​ ಕಿಲಾಡಿ ಜನಪ್ರಿಯತೆಯ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ OMG 2. ಅಕ್ಷಯ್ ಕುಮಾರ್ ಮತ್ತು ಪಂಕಜ್ ತ್ರಿಪಾಠಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸಿನಿಮಾವಿದು. ಚಿತ್ರತಂಡ ಇಂದು ಸಿನಿಮಾದ ಮೊದಲ ಹಾಡು ಊಂಚಿ ಊಂಚಿ ವಾದಿ (Oonchi Oonchi Waadi) ಅನಾವರಣಗೊಳಿಸಿದೆ. ಈ ಹಾಡಿನಲ್ಲಿ ಪಂಕಜ್ ತ್ರಿಪಾಠಿ ಅವರ ಪಾತ್ರವನ್ನು ಭಗವಾನ್ ಶಿವನ ಕಟ್ಟಾ ಭಕ್ತನಾಗಿ ತೋರಿಸಲಾಗಿದೆ. ಶಿವನ ಪಾತ್ರದಲ್ಲಿ ಅಕ್ಷಯ್​ ಕುಮಾರ್​ ನಟಿಸಿದ್ದಾರೆ.

  • " class="align-text-top noRightClick twitterSection" data="">

"ಊಂಚಿ ಊಂಚಿ ವಾದಿ"ಯನ್ನು ಅಕ್ಷಯ್ ಕುಮಾರ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್​ಗೆ "ಭೋಲೆ ಶಂಕರ್​, ಊಂಚಿ ಊಂಚಿ ವಾದಿ ಹಾಡು ರಿಲೀಸ್​'' ಎಂದು ಬರೆದಿದ್ದಾರೆ. ಹಂಸರಾಜ್ ರಘುವಂಶಿ ದನಿ ನೀಡಿದ್ದು, ಸಾಹಿತ್ಯ ರಚನೆ ಕೆಲಸವನ್ನು ಕಬೀರ್ ಶುಕ್ಲಾ ಮತ್ತು ಡಿಜೆ ಸ್ಟ್ರಿಂಗ್ಸ್ ಮಾಡಿದ್ದಾರೆ. ಹಂಸರಾಜ್, ಡಿಜೆಸ್ಟ್ರಿಂಗ್ಸ್ ಮತ್ತು ರಾಹಿ ಜಂಟಿಯಾಗಿ ಸಂಯೋಜಿಸಿದ್ದಾರೆ.

ಊಂಚಿ ಊಂಚಿ ವಾದಿ ಹಾಡು ಪಂಕಜ್‌ ಅವರ ಪಾತ್ರವಾದ ಕಾಂತಿ ಶರಣ್ ಮುದ್ಗಲ್ ಬಗ್ಗೆ ಹೇಳುತ್ತದೆ. ಶಿವನ ಕುರಿತ ಅಚಲ ಭಕ್ತಿಯನ್ನು ಹಾಡು ಪ್ರದರ್ಶಿಸುತ್ತದೆ. ಅಕ್ಷಯ್ ಕುಮಾರ್ ಭಗವಾನ್ ಶಿವನಾಗಿ ಕಾಂತಿ ಕುಟುಂಬದ ಸಹಾಯಕ್ಕೆ ಬರುತ್ತಾರೆ. ಇದೇ ಈ ಚಿತ್ರದ ಹೂರಣ.

ಇತ್ತೀಚೆಗಷ್ಟೇ ಟೀಸರ್ ಅನಾವರಣಗೊಂಡಿತ್ತು. ರೈಲ್ವೇ ನೀರಿನಿಂದ ಶಿವನಿಗೆ ರುದ್ರಾಭಿಷೇಕ ಮಾಡುವ ದೃಶ್ಯ ವಿವಾದಕ್ಕೆ ಕಾರಣವಾಗಿತ್ತು. ಹೀಗಾಗಿ, ಸೆನ್ಸಾರ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CFBC) ಚಿತ್ರದ ಬಿಡುಗಡೆಗೆ ಪ್ರಮಾಣಪತ್ರ ನೀಡಲು ನಿರಾಕರಿಸಿ, ಪರಿಶೀಲನಾ ಸಮಿತಿಗೆ ರವಾನಿಸಿತ್ತು.

ಇದನ್ನೂ ಓದಿ: ಪ್ರಾಜೆಕ್ಟ್ ಕೆ - ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ ಫಸ್ಟ್ ಲುಕ್ ಅನಾವರಣ

ಓಎಂಜಿ ಸಿನಿಮಾದಲ್ಲಿ ಯಾಮಿ ಗೌತಮ್ ನಟಿಸಿದ್ದಾರೆ. ಅವರು ವಕೀಲರ ಪಾತ್ರ ಮಾಡುತ್ತಿದ್ದಾರೆ. ಓಎಂಜಿ 2 ಪರೇಶ್ ರಾವಲ್ ಮತ್ತು ಅಕ್ಷಯ್ ನಟಿಸಿದ್ದ ಓ ಮೈ ಗಾಡ್ ಚಿತ್ರದ ಮುಂದುವರಿದ ಭಾಗ. ಅಮಿತ್ ರೈ ನಿರ್ದೇಶನದ ಸಿನಿಮಾ ಆಗಸ್ಟ್ 11 ರಂದು ಥಿಯೇಟರ್‌ಗಳಲ್ಲಿ ತೆರೆಕಾಣಲು ಸಜ್ಜಾಗುತ್ತಿದೆ. ಇದೇ ಸಮಯದಲ್ಲಿ ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಅಭಿನಯದ ಗದರ್ 2 ಬಿಡುಗಡೆ ಆಗಲಿದ್ದು, ಬಾಕ್ಸ್ ಆಫೀಸ್​ನಲ್ಲಿ ಸ್ಪರ್ಧೆ ಏರ್ಪಡಲಿದೆ.

ಇದನ್ನೂ ಓದಿ: 'ಮದುವೆಯಾಗಲು ನಾನಿನ್ನೂ ಗರ್ಭಿಣಿಯಾಗಿಲ್ಲ': ನಟಿ ತಾಪ್ಸಿ ಪನ್ನು ಅಚ್ಚರಿಯ ಹೇಳಿಕೆ

'ಹೌಸ್‌ಫುಲ್ 5' ಅಕ್ಷಯ್ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಸಿನಿಮಾ. ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣದ ಹೌಸ್‌ಫುಲ್ 5 ತರುಣ್ ಮನ್ಸುಖಾನಿ ನಿರ್ದೆಶನದಲ್ಲಿ ಮೂಡಿ ಬರಲಿದೆ. 2024ರ ದೀಪಾವಳಿ ವೇಳೆ ಬಿಡುಗಡೆ ಆಗಲಿದೆ. ಭರ್ಜರಿ ಕಾಮಿಡಿ ಸಿನಿಮಾ ಹೌಸ್‌ಫುಲ್ 5 ಮೇಲೆ ಅಭಿಮಾನಿಗಳು ಸಾಕಷ್ಟು ಕುತೂಹಲ ಹೊಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.