ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ಓ ಮೈ ಗಾಡ್ 2 ಫೈನಲಿ ಪ್ರೇಕ್ಷಕರಿಗೆ ದರ್ಶನ ಕೊಟ್ಟಿದೆ. ಅಕ್ಕಿ ಅಭಿನಯದ ಮತ್ತೊಂದು ಸಾಮಾಜಿಕ ಕಳಕಳಿ ಹೊಂದಿರುವ ಚಿತ್ರ ಇದಾಗಿದ್ದು, ಅಮಿತ್ ರೈ ಆ್ಯಕ್ಷನ್ ಕಟ್ ಹೇಳಿದ್ದಾರೆ. ಪಂಕಜ್ ತ್ರಿಪಾಠಿ, ಯಾಮಿ ಗೌತಮ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಲೈಂಗಿಕ ಶಿಕ್ಷಣದ ಕುರಿತ ಕಥೆಯನ್ನಾಧರಿಸಿದೆ.
- " class="align-text-top noRightClick twitterSection" data="">
ಬಾಲಿವುಡ್ ಬಹುನಿರೀಕ್ಷಿತ ಚಿತ್ರಗಳು ಒಂದೇ ದಿನ ತೆರೆಕಂಡಿದ್ದು, ಬಾಕ್ಸ್ ಆಫೀಸ್ನಲ್ಲಿ ಸೆಣಸಾಟ ನಡೆಸೋದು ಖಚಿತ. ಹೌದು, ಸನ್ನಿ ಡಿಯೋಲ್ ಮತ್ತು ಅಮಿಷಾ ಪಟೇಲ್ ನಟನೆಯ ಗದರ್ 2 ಕೂಡ ಇಂದೇ ತೆರೆಕಂಡಿದೆ. ಆಗಸ್ಟ್ 11ರಂದು ಬಹುನಿರೀಕ್ಷಿತ ಸಿನಿಮಾಗಳು ಚಿತ್ರಮಂದಿರದಲ್ಲಿ ಏಕಕಾಲದಲ್ಲಿ ಬಿಡುಗಡೆ ಆಗಿದ್ದು, ಬಾಕ್ಸ್ ಆಫೀಸ್ನಲ್ಲಿ ಮುಖಾಮುಖಿ ಆಗಲಿದೆ. ಪ್ರೇಕ್ಷಕರು ಯಾವ ಚಿತ್ರಕ್ಕೆ ಜೈ ಅಂತಾರೆ ಅನ್ನೋದನ್ನು ಕಾದು ನೋಡಬೇಕಿದೆ.
- " class="align-text-top noRightClick twitterSection" data="">
ಓ ಮೈ ಗಾಡ್ 2 ಸಿನಿಮಾ
- ಪ್ರದರ್ಶನ ಕಾಣುತ್ತಿರುವ ಪರದೆಗಳ ಸಂಖ್ಯೆ: 1,600
- ಬಜೆಟ್: ಅಂದಾಜು 150 ಕೋಟಿ ರೂಪಾಯಿ
- ಸರ್ಟಿಫಿಕೇಟ್: ಎ
- ಸಿನಿಮಾ ರನ್ ಟೈಮ್: 156 ನಿಮಿಷ
- ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಅಂದಾಜು: ಭಾರತದಲ್ಲಿ 9 ಕೋಟಿ ರೂ.
ಗದರ್ 2 ಸಿನಿಮಾ
- ಪ್ರದರ್ಶನ ಕಾಣುತ್ತಿರುವ ಪರದೆಗಳ ಸಂಖ್ಯೆ: 3,600
- ಬಜೆಟ್: ಅಂದಾಜು 100 ಕೋಟಿ ರೂಪಾಯಿ
- ಸರ್ಟಿಫಿಕೇಟ್: ಯು/ಎ
- ಸಿನಿಮಾ ರನ್ ಟೈಮ್: 170 ನಿಮಿಷ
- ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಅಂದಾಜು: ಭಾರತದಲ್ಲಿ 35 ಕೋಟಿ ರೂ.
ಇದನ್ನೂ ಓದಿ: ಬಹುನಿರೀಕ್ಷೆಯಿಂದ ತೆರೆ ಕಂಡ 'ಗದರ್ 2': ಸಿನಿ ಪ್ರೇಮಿಗಳಿಂದ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದ ಬ್ಲಾಕ್ಬಸ್ಟರ್ ಸೀಕ್ವೆಲ್
ಸಿನಿಮಾ ಸಕ್ಷಸ್ ವಿಚಾರದಲ್ಲಿ ಹಿನ್ನೆಡೆ ಕಂಡಿರುವ ಅಕ್ಷಯ್ ಕುಮಾರ್ ಅವರಿಗೆ 'ಓ ಮೈ ಗಾಡ್ 2' ಮೂಲಕ ಗೆಲುವಿನ ಅವಶ್ಯಕತೆ ಇದೆ. ಸದ್ಯ ಸಿನಿಮಾವನ್ನು ಸಿನಿಪ್ರಿಯರು ಮತ್ತು ವಿಮರ್ಶಕರು ಖುಷಿಯಿಂದ ಸ್ವೀಕರಿಸಿದ್ದಾರೆ. ಮೂವರೂ ಕಲಾವಿದರ ನಟನೆ, ಸಂಭಾಷಣೆಗೆ ಮೆಚ್ಚುಗೆ ಸೂಚಿಸಲಾಗುತ್ತಿದೆ. ಅಭಿಮಾನಿಗಳು ಸಿನಿಮಾ ಬಗ್ಗೆ ಗುಣಗಾನ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿದ 'ಜೈಲರ್': ಮೊದಲ ದಿನವೇ 50 ಕೋಟಿ ರೂ. ಬಾಚಿದ ರಜಿನಿ ಸಿನಿಮಾ
ಅಕ್ಷಯ್ ಶಿವನ ಪಾತ್ರದಲ್ಲಿ, ಪಂಕಜ್ ಶಿವಭಕ್ತ ಪಾತ್ರದಲ್ಲಿ, ಯಾಮಿ ವಕೀಲೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಪಾತ್ರಗಳು ಮತ್ತು ಕಥೆ ರವಾನಿಸಿದ ರೀತಿಗೆ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಥೆ ಕೂಡ ಸ್ವೀಕರಿಸಿದ್ದು, ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ ಎಂದು ವೀಕ್ಷಕರು ತಿಳಿಸಿದ್ದಾರೆ. 150 ಕೋಟಿ ರೂ. ಬಜೆಟ್ನ ಸಿನಿಮಾ ಭಾರತದಲ್ಲಿ 9 ಕೋಟಿ ರೂ. ಸಂಪಾದಿಸಲಿದೆ ಎಂದು ವರದಿಯಾಗಿದೆ. ಗದರ್ 2 ಸಿನಿಮಾಗೆ ಹೋಲಿಸಿದರೆ ಈ ಸಂಖ್ಯೆ ಕಡಿಮೆ ಆಗಿದೆ. ಈ ಎರಡೂ ಸಿನಿಮಾಗಳ ಬಾಕ್ಸ್ ಆಫೀಸ್ ಭವಿಷ್ಯ ನಾಳೆ ಮುಂಜಾನೆ ತಿಳಿಯಲಿದೆ.