ETV Bharat / entertainment

Friendship Day: ಸ್ನೇಹಿತರೊಂದಿಗೆ ಕುಣಿದು ಕುಪ್ಪಳಿಸಿದ ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್​ - ಓಎಂಜಿ 2

akshay kumar friendship day video: ಫ್ರೆಂಡ್​ಶಿಪ್​ ಡೇ ಹಿನ್ನೆಲೆ ನಟ ಅಕ್ಷಯ್​ ಕುಮಾರ್​​ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.

akshay kumar friendship day
ಅಕ್ಷಯ್​ ಕುಮಾರ್​ ಫ್ರೆಂಡ್​ಶಿಪ್​ ಡೇ
author img

By

Published : Aug 6, 2023, 2:30 PM IST

ರಕ್ತ ಸಂಬಂಧಕ್ಕೂ ಮೀರಿದ ಬಂಧ ಸ್ನೇಹ. ಇಂದು ಪ್ರಪಂಚದಾದ್ಯಂತ ಸ್ನೇಹಿತರ ದಿನವನ್ನಾಗಿ ಆಚರಿಸಲಾಗುತ್ತಿದೆ. ಹೆಚ್ಚಿನವರು ತಮ್ಮದೇ ಆದ ವಿಭಿನ್ನ ರೀತಿಯಲ್ಲಿ ಈ ದಿನವನ್ನು ಆಚರಿಸುತ್ತಿದ್ದಾರೆ. ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಸಹ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಈ ದಿನವನ್ನು ಸ್ಮರಣೀಯವಾಗಿಸಿದ್ದಾರೆ.

ಓಎಂಜಿ 2 ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಚಿತ್ರದ ನಾಯಕ ನಟ ಅಕ್ಷಯ್​ ಕುಮಾರ್​ ಫ್ರೆಂಡ್​ಶಿಪ್​ ಡೇ ಅನ್ನು ವಿಶೇಷವಾಗಿ ಆಚರಿಸಿದ್ದಾರೆ. ಸ್ನೇಹಿತರೊಂದಿಗಿನ ಮೋಜು ಮಸ್ತಿಯ ವಿಡಿಯೋವನ್ನು ನಟ ಇನ್​ಸ್ಟಾಗ್ರಾಮ್​ನಲ್ಲಿ ಶೇರ್ ಮಾಡಿದ್ದಾರೆ. ಜೀವನದಲ್ಲಿ ಉತ್ತಮ ಸ್ನೇಹಿತರನ್ನು ಹೊಂದುವುದರ ಪ್ರಾಮುಖ್ಯತೆಯನ್ನು ಹೇಳಲು ಓ ಮೈ ಗಾಡ್​ ನಟ ತಮ್ಮ ಸ್ನೇಹಿತರೊಂದಿಗೆ ನೃತ್ಯ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಪ್ರಪಂಚದಾದ್ಯಂತ ಆಗಸ್ಟ್ ಮೊದಲ ಭಾನುವಾರವನ್ನು ಫ್ರೆಂಡ್​ಶಿಪ್​ ಡೇ ಆಚರಿಸಲಾಗುವುದು. ಈ ಹಿನ್ನೆಲೆ ನಟ ಫನ್​ ವಿಡಿಯೋ ಶೇರ್ ಮಾಡಿದ್ದಾರೆ.

ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್ ನಟನೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ ಓಎಂಜಿ 2. ಸಿನಿಮಾ​ ಇದೇ ಆಗಸ್ಟ್ 11ರಂದು ತೆರೆ ಕಾಣಲಿದ್ದು, ಸಿನಿಮಾ ಪ್ರಚಾರ ಮಾಡುವಲ್ಲಿ ಬ್ಯುಸಿಯಾಗಿದ್ದಾರೆ. ಅದಾಗ್ಯೂ ತಮ್ಮ ಸ್ನೇಹಿತರ ಜೊತೆ ಸ್ನೇಹ ದಿನವನ್ನು ಆಚರಿಸಲು ಸಮಯ ತೆಗೆದುಕೊಂಡರು. ಹೌದು, ನಟ ಶೇರ್ ಮಾಡಿರುವ ವಿಡಿಯೋದಲ್ಲಿ , ಸ್ನೇಹಿತರೊಂದಿಗೆ ಡ್ಯಾನ್ಸ್​ ಮಾಡುತ್ತಿರುವುದನ್ನು ಮತ್ತು ಹಾಡು ಹಾಡುತ್ತಿರುವುದನ್ನು ನೀವು ಕಾಣಬಹುದು. 1977ರ ಹಮ್​ ಕಿಸಿಸೆ ಕಮ್​ ನಹಿ ಸಿನಿಮಾದ ಕ್ಯಾ ಹುವಾ ತೆರಾ ವಾದ ಹಾಡಿಗೆ ಹೆಜ್ಜೆ ಹಾಕಿ, ಕಂಠ ಕುಣಿಸಿದ್ದಾರೆ. ಕೈಯಲ್ಲಿ ಪೊರಕೆ ಹಿಡಿದು ಡ್ಯಾನ್ಸ್ ಮಾಡಿದ್ದು, ಸ್ನೇಹಿತರು ನಟನೊಂದಿಗೆ ಸೇರಿಕೊಂಡರು.

ವಿಡಿಯೋ ಹಂಚಿಕೊಂಡ ನಟ, ''ವೇದಿಕೆ ಯಾವುದಾದರೇನು, ವಯಸ್ಸು ಎಷ್ಟಾದರೇನು? ನನ್ನ ಸ್ನೇಹಿತರು ನನ್ನೊಳಗಿರುವ ಮಗುವನ್ನು ಹೊರತರುತ್ತಾರೆ. ಭಗವಂತ ಎಲ್ಲರಿಗೂ ಸ್ನೇಹದ ಸಂತೋಷವನ್ನು ನೀಡಲಿ. ಹ್ಯಾಪಿ ಫ್ರೆಂಡ್​ಶಿಪ್​ ಡೇ, ಸ್ನೇಹಿತರೊಂದಿಗಿನ ಮೋಜನ್ನು ಯಾವುದರಿಂದಲೂ ಹಿಂದಿಕ್ಕಲು ಸಾಧ್ಯವಿಲ್ಲ'' ಎಂದು ಬರೆದಿದ್ದಾರೆ.

ಅಕ್ಷಯ್​ ಕುಮಾರ್​ ವಿಡಿಯೋ ಶೇರ್ ಮಾಡುತ್ತಿದ್ದಂತೆ, ಅಭಿಮಾನಿಗಳು ಪ್ರತಿಕ್ರಿಯಿಸಲು ಶುರು ಮಾಡಿದ್ದಾರೆ. ಮೆಚ್ಚಿನ ನಟನಿಗೆ ಅಭಮಾನಿಗಳು ಫ್ರೆಂಡ್​ಶಿಪ್​ ಡೇ ಶುಭಾಶಯ ಕೋರುತ್ತಿದ್ದಾರೆ. ವಿಡಿಯೋಗೆ ಪ್ರತಿಕ್ರಿಯಿಸಿದ ಅಭಿಮಾನಿಯೋರ್ವರು ಸ್ನೇಹಿತರ ದಿನದ ಶುಭಾಶಯಗಳು ಎಂದು ಬರೆದಿದ್ದಾರೆ. ಮತ್ತೊಬ್ಬರು ಕಾಮೆಂಟ್​ ಮಾಡಿ ನಾವೂ ಕೂಡ ಅಕ್ಷಯ್​ ಕುಮಾರ್​ ಅವರಂತಹ ಸ್ನೇಹಿತನಿಗೆ ಅರ್ಹರು ಎಂದು ಬರೆದಿದ್ದಾರೆ.

ಇದನ್ನೂ ಓದಿ: ಬಿಪಾಶಾರ ಕಂದಮ್ಮನಿಗೆ ಹೃದ್ರೋಗ.. ಈ ಪರಿಸ್ಥಿತಿ ಯಾವುದೇ ತಾಯಿಗೂ ಬರಬಾರದೆಂದ ನಟಿ

ನಟನ ಮುಂದಿನ ಸಿನಿಮಾ ಓಎಂಜಿ 2 ಬಿಡುಗಡೆಗೆ ಸಜ್ಜಾಗಿದೆ. ಇದು ಅಕ್ಷಯ್​ ಅವರ ಹಿಂದಿನ ಓ ಮೈ ಗಾಡ್​ ಸಿನಿಮಾದ ಸೀಕ್ವೆಲ್​​. ಇತ್ತೀಚೆಗಷ್ಟೇ ಟ್ರೇಲರ್​ ಅನಾವರಣಗೊಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿದೆ. ಆಗಸ್ಟ್ 11ರಂದು ಸಿನಿಮಾ ತೆರೆಕಾಣಲಿದೆ.

ಇದನ್ನೂ ಓದಿ: ಅಮೃತ್​ಪಾಲ್​ ಬರ್ತ್​​ಡೇ ಪಾರ್ಟಿಯಲ್ಲಿ ಬಿಟೌನ್​ ಸ್ಟಾರ್ಸ್.. ಶಾರುಖ್​, ಅನನ್ಯಾ ಆದಿತ್ಯಾ ವಿಡಿಯೋ ವೈರಲ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.