ETV Bharat / entertainment

'ಡರ್ಟಿ ಲಿಟಲ್ ಸೀಕ್ರೆಟ್' ಬಿಚ್ಚಿಟ್ಟ ನೋರಾ ಫತೇಹಿ - ಡರ್ಟಿ ಲಿಟಲ್ ಸೀಕ್ರೆಟ್

ಇದೇ ಮೊದಲ ಬಾರಿಗೆ 'ಸ್ಟ್ರೀಟ್ ಡ್ಯಾನ್ಸರ್ 3ಡಿ' ನಟಿ ನೋರಾ, ಗಾಯಕ ಝಾಕ್ ನೈಟ್ ಅವರೊಂದಿಗೆ ಸೇರಿ ಕೆಲಸ ಮಾಡಿದ್ದು, ನೋರಾ ನಿರ್ದೇಶನದ 'ಡರ್ಟಿ ಲಿಟಲ್ ಸೀಕ್ರೆಟ್' ಇತ್ತೀಚೆಗೆ ನೋರಾ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.

Actress Nora Fatehi
ನಟಿ ಮತ್ತು ನರ್ತಕಿ ನೋರಾ ಫತೇಹಿ
author img

By

Published : Jun 17, 2022, 12:32 PM IST

ಮುಂಬೈ : ಇತ್ತೀಚೆಗೆ ತಮ್ಮ ವೀಡೀಯೋ ಸಾಂಗ್​ 'ಡರ್ಟಿ ಲಿಟಲ್ ಸೀಕ್ರೆಟ್' ಮೂಲಕ ಸಂಗೀತ ವಿಡಿಯೋ ನಿರ್ದೇಶಕರಾಗಿ ಪದಾರ್ಪಣೆ ಮಾಡಿದ ನಟಿ ಮತ್ತು ನರ್ತಕಿ ನೋರಾ ಫತೇಹಿ ಅವರು ಇನ್​ಸ್ಟಾಗ್ರಾಂನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಸೆಟ್​ ಹಿಂದಿನ ಕೆಲವು ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ನೋರಾ ತಮ್ಮ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದು, "ಹೊಸ #ಡರ್ಟಿಲಿಟ್ಲ್‌ಸೀಕ್ರೆಟ್. ನಾನು ಮೊದಲ ಬಾರಿಗೆ ಸಂಗೀತ ವಿಡಿಯೋವನ್ನು ನಿರ್ದೇಶಿಸುತ್ತಿದ್ದೇನೆ. ಇದು ಉತ್ತಮ ಅನುಭವವಾಗಿದೆ! ಬಯೋದಲ್ಲಿ ನನ್ನ ಯೂಟ್ಯೂಬ್ ಚಾನೆಲ್ ಲಿಂಕ್‌ನಲ್ಲಿ ಸಂಗೀತ ವಿಡಿಯೋವನ್ನು ವೀಕ್ಷಿಸಿ!" ಎಂದು ಬರೆದುಕೊಂಡಿದ್ದಾರೆ.

ನಟಿ ಮತ್ತು ನರ್ತಕಿ ನೋರಾ ಫತೇಹಿ

ಮೊದಲ ಪೋಸ್ಟ್‌ನಲ್ಲಿ, ನೋರಾ ಮೈಕ್ರೊಫೋನ್ ಹಿಡಿದು 'ನಿರ್ದೇಶಕ ನೋರಾ' ಎಂದು ಬರೆದಿರುವ ಕುರ್ಚಿ ಮೇಲೆ ಕುಳಿತಿರುವುದನ್ನು ಕಾಣಬಹುದು. ಮುಂದಿನ ಎರಡು ಛಾಯಾಚಿತ್ರಗಳಲ್ಲಿ, ನೋರಾ ಕ್ಯಾಮರಾವನ್ನು ನೋಡಿ, ಶಾಟ್‌ಗಳನ್ನು ಪರಿಶೀಲಿಸುತ್ತಿರುವುದನ್ನು ಕಾಣಬಹುದು.

ನೋರಾ ಪೋಸ್ಟ್​ ಹಂಚಿಕೊಂಡ ಕೆಲವೇ ನಿಮಿಷಗಳಲ್ಲಿ, ಕಾಮೆಂಟ್‌ಗಳ ಸುರಿಮಳೆಯೇ ಹರಿದಿದೆ. ಚೊಚ್ಚಲ ನಿರ್ದೇಶನಕ್ಕಾಗಿ ಅಭಿಮಾನಿಗಳು ನೋರಾ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ನೋರಾ ಅವರನ್ನು ನಿರ್ದೇಶಕರಾಗಿ ನೋಡಲು ಬಯಸುತ್ತೇವೆ ಎಂದು ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ.

ನೋರಾ ನಿರ್ದೇಶನದ 'ಡರ್ಟಿ ಲಿಟಲ್ ಸೀಕ್ರೆಟ್' ಇತ್ತೀಚೆಗೆ ನೋರಾ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಯೂಟ್ಯೂಬ್‌ನಲ್ಲಿ ಈ ವೀಡಿಯೊ ಸುಮಾರು 10 ಮಿಲಿಯನ್ ವೀಕ್ಷಣೆ ಗಳಿಸಿದೆ. ಇದೇ ಮೊದಲ ಬಾರಿಗೆ 'ಸ್ಟ್ರೀಟ್ ಡ್ಯಾನ್ಸರ್ 3ಡಿ' ನಟಿ ನೋರಾ, ಗಾಯಕ ಝಾಕ್ ನೈಟ್ ಅವರೊಂದಿಗೆ ಸೇರಿ ಕೆಲಸ ಮಾಡಿದ್ದಾರೆ. ನೋರಾ ಪ್ರಸ್ತುತ ಡ್ಯಾನ್ಸ್ ರಿಯಾಲಿಟಿ ಶೋ 'ಡ್ಯಾನ್ಸ್ ದೀವಾನೆ ಜೂನಿಯರ್'ನಲ್ಲಿ ತೀರ್ಪುಗಾರರಾಗಿದ್ದಾರೆ.

ಇದನ್ನೂ ಓದಿ : ಮಕ್ಕಳೊಂದಿಗೆ ಆ್ಯನಿಮೇಟೆಡ್​ ಸಿನಿಮಾ ವೀಕ್ಷಿಸಿದ ಸನ್ನಿ ಲಿಯೋನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.