ETV Bharat / entertainment

Spy movie: ಬೋಸ್ ಸಾವಿನ ರಹಸ್ಯದ 'ಸ್ಪೈ' ಸಿನಿಮಾ ಪ್ರಚಾರ: ಬೆಂಗಳೂರಿನಲ್ಲಿ ನಿಖಿಲ್​ ಸಿದ್ದಾರ್ಥ್, ಐಶ್ವರ್ಯ ಮೆನನ್ - ಈಟಿವಿ ಭಾರತ ಕನ್ನಡ

ಟಾಲಿವುಡ್​ ನಟ ನಿಖಿಲ್​ ಸಿದ್ದಾರ್ಥ್ ಮತ್ತು ನಟಿ ಐಶ್ವರ್ಯ ಮೆನನ್ 'ಸ್ಪೈ' ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದಾರೆ.

Spy
ನಿಖಿಲ್​ ಸಿದ್ದಾರ್ಥ್ ಮತ್ತು ಐಶ್ವರ್ಯ ಮೆನನ್
author img

By

Published : Jun 26, 2023, 2:55 PM IST

ಟಾಲಿವುಡ್​ ಚಿತ್ರರಂಗದ ಪ್ರತಿಭಾವಂತ ನಟ ನಿಖಿಲ್​ ಸಿದ್ದಾರ್ಥ್​ ನಟನೆಯ ಬಹುನಿರೀಕ್ಷಿತ ಸಿನಿಮಾ 'ಸ್ಪೈ' ಇದೇ 29ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಮುಂಬೈನಲ್ಲಿ ಪ್ರಮೋಷನ್​ ಮುಗಿಸಿರುವ 'ಸ್ಪೈ' ತಂಡ ಇದೀಗ ಬೆಂಗಳೂರಿಗೆ ಬಂದಿಳಿದಿದೆ. ನಾಯಕ ನಿಖಿಲ್​ ಸಿದ್ದಾರ್ಥ್​, ನಾಯಕಿ ಐಶ್ವರ್ಯ ಮೆನನ್​ ಸಿಲಿಕಾನ್​ ಸಿಟಿಯಲ್ಲಿ ಪ್ರಚಾರ ನಡೆಸಲಿದ್ದಾರೆ.

ಸುಭಾಷ್ ಚಂದ್ರ ಬೋಸ್ ಸಾವಿನ ರಹಸ್ಯ ಕಥಾಹಂದರ ಹೊಂದಿರುವ 'ಸ್ಪೈ' ಸಿನಿಮಾವನ್ನು ಖ್ಯಾತ ನಿರ್ದೇಶಕ ಹಾಗೂ ಸಂಕಲನಕಾರರೂ ಆಗಿರುವ ಗ್ಯಾರಿ ಬಿ.ಹೆಚ್. ನಿರ್ದೇಶನ ಮಾಡಿದ್ದಾರೆ. ಹಲವು ಹಿಟ್ ಸಿನಿಮಾಗಳ ನಿರ್ಮಾಪಕ ಕೆ. ರಾಜಶೇಖರ್ ರೆಡ್ಡಿ ಅವರು ಇಡೀ ಎಂಟರ್‌ಟೈನ್‌ಮೆಂಟ್‌ನಡಿ ಚರಣ್ ರಾಜ್ ಉಪ್ಪಲಪತಿ ಜೊತೆಗೂಡಿ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. 2022ರಲ್ಲಿ ತೆರೆಕಂಡ 'ಕಾರ್ತಿಕೇಯ 2' ಬಳಿಕ ಟಾಲಿವುಡ್​ ನಟ ನಿಖಿಲ್ ಸಿದ್ದಾರ್ಥ್ ನಟಿಸುತ್ತಿರುವ ಆ್ಯಕ್ಷನ್ ಪ್ಯಾಕ್ಡ್ ಕಥಾಹಂದರವುಳ್ಳ ಚಿತ್ರವಿದು.

spy
'ಸ್ಪೈ' ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದ ನಿಖಿಲ್​ ಸಿದ್ದಾರ್ಥ್ ಮತ್ತು ಐಶ್ವರ್ಯ ಮೆನನ್

ಈಗಾಗಲೇ ಸಿನಿಮಾದ ಟ್ರೇಲರ್​​ ಬಿಡುಗಡೆಯಾಗಿದೆ. ಭಾರತದ ಟಾಪ್ ಸೀಕ್ರೆಟ್, ವಿಮಾನ ಅಪಘಾತದಲ್ಲಿ ನೇತಾಜಿ ಸುಭಾಷ್ ಚಂದ್ರಬೋಸ್ ಸಾವನ್ನಪ್ಪಿದ್ದಾರೆ ಎನ್ನಲಾದ ವಿಚಾರಗಳನ್ನು ಬೆನ್ನತ್ತುವ ಗೂಢಾಚಾರಿ ಪಾತ್ರದಲ್ಲಿ ನಿಖಿಲ್ ಸಿದ್ದಾರ್ಥ್ ಅಭಿನಯಿಸಿದ್ದಾರೆ. ಐಶ್ವರ್ಯ ಮೆನನ್ ನಾಯಕಿಯಾಗಿ, ಸನ್ಯಾ ಠಾಕೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಾಹುಬಲಿ ಬಲ್ಲಾಳದೇವ ಪಾತ್ರಧಾರಿ ರಾಣಾ ದಗ್ಗುಬಾಟಿ ಕೂಡ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Guntur Kaaram: ಪೂಜಾ ಹೆಗ್ಡೆ ಸ್ಥಾನಕ್ಕೆ ಶ್ರೀಲೀಲಾ - 'ಗುಂಟೂರು ಕಾರಂ'ಗೆ ಮೀನಾಕ್ಷಿ ಛೌಧರಿ ಹೊಸ ಎಂಟ್ರಿ

ನಿಖಿಲ್ ಸಿದ್ದಾರ್ಥ್ ವಿಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಪೈ ಪೋಸ್ಟರ್, ಟೀಸರ್​, ಟ್ರೇಲರ್​ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಬಹುನಿರೀಕ್ಷಿತ ಸಿನಿಮಾ ಕನ್ನಡ, ತೆಲುಗು ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ‌ ಮೂಡಿ ಬರುತ್ತಿದೆ. ರಾಜಶೇಖರ್ ರೆಡ್ಡಿ ಅವರೇ ಕಥೆ ಕೂಡ ಬರೆದಿದ್ದಾರೆ. ಗ್ಯಾರಿ ಬಿ. ಹೆಚ್. ನಿರ್ದೇಶನದ ಜೊತೆಗೆ ಸಂಕಲನದ ಹೊಣೆ ಹೊತ್ತಿದ್ದಾರೆ. ಆ್ಯಕ್ಷನ್ ಪ್ಯಾಕ್ಡ್ ಸ್ಪೈ ಥ್ರಿಲ್ಲರ್ ಸಿನಿಮಾದಲ್ಲಿ‌ ನಿಖಿಲ್‌ ಅಲ್ಲದೇ ಅಭಿನವ್ ಗೋಮತಮ್, ಮಕರಂದ್ ದೇಶಪಾಂಡೆ, ನಿತಿನ್ ಮೆಹ್ತಾ, ರವಿವರ್ಮ, ಕೃಷ್ಣ ತೇಜ, ಪ್ರಿಶಾ ಸಿಂಗ್, ಸೋನಿಯಾ ನರೇಶ್ ಸೇರಿದಂತೆ ಹಲವರಿದ್ದಾರೆ.

spy
ಅಭಿಮಾನಿಗಳೊಂದಿಗೆ ನಿಖಿಲ್​ ಸಿದ್ದಾರ್ಥ್ ಸೆಲ್ಫಿ

ಹೈ ಬಜೆಟ್‌ನಲ್ಲಿ ತಯಾರಾಗುತ್ತಿರುವ ಸ್ಪೈಗೆ ಹಾಲಿವುಡ್ ತಂತ್ರಜ್ಞರ ಮೆರುಗು ಸಿಕ್ಕಿದೆ. ಜೂನಿಯನ್ ಅಮರು ಸೂರಿಸೆಟ್ಟಿ ಛಾಯಾಗ್ರಹಣ, ಶ್ರೀಚರಣ್ ಪಕಳ ಸಂಗೀತ, ಅರ್ಜುನ್ ಸೂರಿಸೆಟ್ಟಿ ಕಲಾ ನಿರ್ದೇಶನವಿದೆ. ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕನಾಗಿ ಗುರುತಿಸಿಕೊಂಡ ನೇತಾಜಿ ಸುಭಾಷ್‌ ಚಂದ್ರಬೋಸ್‌ 1945ರ ಆಗಸ್ಟ್‌ 18ರಂದು ತೈವಾನ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಜಪಾನ್‌ ಸರ್ಕಾರ ಬಿಡುಗಡೆ ಮಾಡಿರುವ ವರದಿ ತಿಳಿಸಿತ್ತು. ಆದರೆ, ಸಾವಿನ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಇಲ್ಲ. 'ಸ್ಪೈ' ಸಿನಿಮಾ ಅವರ ನಿಧನದ ಕುರಿತಾಗಿದ್ದು, ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವಿದೆ.

spy
ನಿಖಿಲ್​ ಸಿದ್ದಾರ್ಥ್ ಮತ್ತು ಐಶ್ವರ್ಯ ಮೆನನ್

ಇದನ್ನೂ ಓದಿ: Bengaluru Boys: 'ನನ್ನ ಯೌವ್ವನ‌ ಟಪಾಸ್' ಅಂತಿದ್ದಾರೆ ನಟ ಚಿಕ್ಕಣ್ಣ..ಸಾಂಗ್​ನಿಂದಲೇ ಸೌಂಡ್​ ಮಾಡುತ್ತಿದೆ 'ಬೆಂಗಳೂರು ಬಾಯ್ಸ್'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.