ETV Bharat / entertainment

ಯುವ ನಟ ವಿಜಯ್ ವೆಂಕಟೇಶ್ 'ಮಾರ್' ಸಿನಿಮಾಗೆ ಸಾಥ್ ಕೊಟ್ಟ ಪಡ್ಡೆಹುಲಿ: ನ್ಯೂ ಸಾಂಗ್​ ರಿಲೀಸ್​... - ಮಾರ್ ಸಿನಿಮಾಗೆ ಸಾಥ್ ಕೊಟ್ಟ ಪಡ್ಡೆಹುಲಿ

'ಮಾರ್' ಸಿನಿಮಾ ತಂಡ ಹೀರೋ ಪರಿಚಯವನ್ನು ಹಾಡಿನ ಮೂಲಕ ಅಭಿಮಾನಿಗಳ ಮುಂದೆ ನಿಲ್ಲಿಸಿದೆ. ಸಾಮಾನ್ಯವಾಗಿ ಚಿತ್ರ ತಂಡ ಮುಹೂರ್ತ ಫಿಕ್ಸ್​ ನಂತರದ ಚಿತ್ರೀಕರಣದ ಅಖಾಡಕ್ಕೆ ಇಳಿಯುತ್ತಾರೆ. ಆದರೆ, ‘ಮಾರ್’ ತಂಡವು ಜಬರ್ದಸ್ತ್ ಹಾಡಿನ‌ ಮೂಲಕವೇ ಚಿತ್ರ ಪ್ರೇಮಿಗಳ ಮುಂದೆ ಬಂದಿದೆ.

Maar new song
ಯುವ ನಟ ವಿಜಯ್ ವೆಂಕಟೇಶ್ 'ಮಾರ್' ಸಿನಿಮಾಗೆ ಸಾಥ್ ಕೊಟ್ಟ ಪಡ್ಡೆಹುಲಿ: ನ್ಯೂ ಸಾಂಗ್​ ರಿಲೀಸ್​...
author img

By ETV Bharat Karnataka Team

Published : Sep 30, 2023, 2:39 PM IST

ಕನ್ನಡ ಸಿನಿಮಾ ರಂಗದಲ್ಲಿ ಇತ್ತೀಚಿಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿವೆ. ಜೊತೆಗೆ ಹೊಸ ಹೊಸ ಸ್ಟಾರ್​ಗಳು ಎಂಟ್ರಿ ಕೊಡುತ್ತಿದ್ದಾರೆ. ಸದ್ಯ "ಮಾರ್" ಎನ್ನುವ ಮಾಸ್ ಟೈಟಲ್ ಇಟ್ಟುಕೊಂಡು ವಿಜಯ್ ವೆಂಕಟೇಶ್ ಹೀರೋ ಆಗಿ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ ನಾಯಕ ನಟನಾಗಿ ಮಿಂಚಬೇಕು ಎನ್ನುವ ಆಸೆ ಇಟ್ಟುಕೊಂಡಿರುವ ವಿಜಯ್ ವೆಂಕಟೇಶ್ ತಮ್ಮ ಮೊದಲ ಸಿನಿಮಾದಲ್ಲಿಯೇ ವಿಭಿನ್ನ ಪ್ರಯತ್ನಕ್ಕೆ ಸಜ್ಜಾಗಿದ್ದಾರೆ.

Maar movie
'ಮಾರ್' ಸಿನಿಮಾದ ನ್ಯೂ ಸಾಂಗ್​ ರಿಲೀಸ್

ಸದ್ಯ ಸಿನಿಮಾ ತಂಡವು ಹೀರೋ ಪರಿಚಯವನ್ನು ಹಾಡಿನ ಮೂಲಕ ಅಭಿಮಾನಿಗಳ ಮುಂದೆ ತಂದು ನಿಲ್ಲಿಸಿದೆ. ಸಾಮಾನ್ಯವಾಗಿ ಸಿನಿಮಾ ತಂಡ ಮುಹೂರ್ತ ಮಾಡಿಕೊಂಡು ನಂತರ ಚಿತ್ರೀಕರಣದ ಅಖಾಡಕ್ಕೆ ಇಳಿಯುತ್ತದೆ. ಆದರೆ ‘ಮಾರ್’ ತಂಡ ಜಬರ್ದಸ್ತ್ ಹಾಡಿನ‌ ಮೂಲಕ ಚಿತ್ರ ಪ್ರೇಮಿಗಳ ಮುಂದೆ ಬಂದಿದೆ. ಹೀರೋ ತೆರೆ ಮೇಲೆ ಹೇಗೆ ಕಾಣಿಸುತ್ತಾರೆ ಹಾಗೂ ಹೀರೋ ಕಾನ್ಫಿಡೆನ್ಸ್ ಹೇಗಿದೆ ಎಂದು ಚೆಕ್ ಮಾಡಲು ಈ ರೀತಿ ಪ್ರಯತ್ನಕ್ಕೆ ಮುಂದಾಗಿದೆ ಚಿತ್ರ ತಂಡ. ಮಾರ್ ಸಿನಿಮಾವನ್ನು ಅನಿಲ್ ವೆಂಕಟರಾಜು ನಿರ್ದೇಶಿಸುತ್ತಿದ್ದಾರೆ.

ಮಾರ್ ಚಿತ್ರಕ್ಕೆ ಅದ್ಧೂರಿ ಚಾಲನೆ: ಸದ್ಯ ಚಿತ್ರದ ಹಾಡು ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ವಿಜಯ್ ವೆಂಕಟೇಶ್ ಮೊದಲ ಪ್ರಯತ್ನಕ್ಕೆ ಪಡ್ಡೆಹುಲಿ ಸಿನಿಮಾ ಖ್ಯಾತಿಯ ನಟ ಶ್ರೇಯಸ್ ಮಂಜು ಸಾಥ್ ನೀಡಿದ್ದಾರೆ. ಮೊದಲ ಹಾಡು ರಿಲೀಸ್ ಮಾಡಿ ಸಿನಿಮಾ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದರು ಶ್ರೇಯಸ್. ಇನ್ನು ಈ ಹಾಡನ್ನು ನಿರ್ದೇಶಕ ಅನಿಲ್ ವೆಂಕಟರಾಜು ಅವರೇ ಬರೆದಿದ್ದು ಕೃಷ್ಣ ಸುಮೈರಾ ಸಂಗೀತಾ ನೀಡಿದ್ದಾರೆ. ಸುಹಾಸ್ ಅವರ ಕ್ಯಾಮೆರಾ ವರ್ಕ್ ಪ್ರವೀಣ್ ನೃತ್ಯ ಸಂಯೋಜನೆ ಹಾಡಿಗಿದೆ.

Maar movie
'ಮಾರ್' ಚಿತ್ರದ ನ್ಯೂ ಸಾಂಗ್​ ರಿಲೀಸ್

ನಟ ವಿಜಯ್ ವೆಂಕಟೇಶ್ ಹೀರೋ ಆಗಿ ಎಂಟ್ರಿ ಕೊಡುವ ಜೊತೆಗೆ 'ಹಾರಿಕಾ' ಪ್ರೊಡಕ್ಷನ್ ಹೌಸ್ ಕೂಡ ಲಾಂಚ್ ಮಾಡಿದ್ದಾರೆ. ನಟನೆ ಜೊತೆಗೆ ನಿರ್ಮಾಪಕನಾಗಿಯೂ ವಿಜಯ್ ಮೊದಲ ಹೆಜ್ಜೆ ಇಡುತ್ತಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆ ಮೂಲಕ ಅನೇಕ ಯುವ ಪ್ರತಿಭೆಗಳಿಗೆ ಅವಕಾಶ ಕೊಡುವ ಪ್ಲಾನ್ ಇಟ್ಟುಕೊಂಡಿದ್ದಾರೆ ವಿಜಯ್. ಮಾರ್ ಸಿನಿಮಾ ಕೂಡ ತಮ್ಮದೆ ಹಾರಿಕಾ ಸಂಸ್ಥೆ ಮೂಲಕ ನಿರ್ಮಾಣವಾಗುತ್ತಿದೆ. ಇನ್ನು ಮಾರ್ ಸಿನಿಮಾ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಬಿಡುಗಡೆ ಆಗುತ್ತಿದ್ದು ಸದ್ಯ ಹಾಡು ಕೂಡ ಎರಡು ಭಾಷೆಯಲ್ಲಿ ಬಿಡುಗಡೆ ಆಗಿದೆ.

Maar movie
'ಮಾರ್' ಸಿನಿಮಾದ ನ್ಯೂ ಸಾಂಗ್​ ರಿಲೀಸ್​...

ಬಿಡುಗಡೆ ಆಗಿರುವ ಮಾರ್ ಚಿತ್ರದ ಹಾಡನ್ನು ನೋಡಿರುವ ಪ್ರೇಕ್ಷಕರು ಕ್ವಾಲಿಟಿ ಮೇಕಿಂಗ್ ಹಾಗೂ ಕಂಟೆಂಟ್ ನೋಡಿ ಮೆಚ್ಚಿಕೊಂಡಿದ್ದಾರೆ. ಸಿನಿಮಾ ಕೂಡ ಇದೇ ಕ್ವಾಲಿಟಿಯಲ್ಲಿ ನಿರ್ಮಾಣವಾದರೇ ಸಿನಿಮಾ ಬೇರೆ ಲೆವೆಲ್​ಗೆ ರೀಚ್ ಆಗುತ್ತೆ ಅನ್ನೋ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

Maar movie
'ಮಾರ್' ಸಿನಿಮಾ ತಂಡ

ಇದನ್ನೂ ಓದಿ: ಕನ್ನಡದ ಕೀರ್ತಿ 'ಕಾಂತಾರ'ಕ್ಕೆ ಒಂದು ವರ್ಷ: ಬರಲಿದೆ ವರಾಹ ರೂಪಂ ವಿಡಿಯೋ ಸಾಂಗ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.