ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಅಸಂಖ್ಯಾತ ಅಭಿಮಾನಿ ಬಳಗ ಹೊಂದಿದ್ದ 'ಕಿಂಗ್ ಆಫ್ ಪಾಪ್' ಎಂದೇ ಪ್ರಸಿದ್ಧರಾಗಿದ್ದ ಗಾಯಕ ಮತ್ತು ಡ್ಯಾನ್ಸರ್ ಮೈಕಲ್ ಜಾಕ್ಸನ್ ಅವರ ಜನ್ಮ ದಿನ ಇಂದು. ಮೈಕೆಲ್ ಜಾಕ್ಸನ್ ಅವರನ್ನು ನಿಜವಾಗಿಯೂ ಕೊಂದಿದ್ಯಾರು ('TMZ Investigates: Who Really Killed Michael Jackson') ಎನ್ನುವ ಸಾಕ್ಷ್ಯಚಿತ್ರ ಮುಂದಿನ ತಿಂಗಳು ಹೊರ ಬರಲಿದೆ.
ಜೂನ್ 2009ರಲ್ಲಿ ನಿಧನರಾದ ಜಾಕ್ಸನ್, ಮಾದಕವಸ್ತುಗಳನ್ನು ಖರೀದಿಸಲು 19 ನಕಲಿ ಐಡಿಗಳನ್ನು ಬಳಸಿದ್ದರಂತೆ. ಹೃದಯ ಸ್ತಂಭನಕ್ಕೆ ಒಳಗಾಗಿದ್ದರೂ 150 ವರ್ಷ ಬದುಕಬೇಕು ಅಂದುಕೊಂಡಿದ್ದವರು 50ರಲ್ಲೇ ತಮ್ಮ ಲಾಸ್ ಏಂಜಲೀಸ್ ಮನೆಯಲ್ಲಿ ಮೃತಪಟ್ಟಿದ್ದರು. ಇವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಕಾನ್ರಾಡ್ ಮುರ್ರೆ ನಾಲ್ಕು ವರ್ಷಗಳ ಜೈಲು ಶಿಕ್ಷೆ, ಸಾರ್ವಜನಿಕರ ದ್ವೇಷಕ್ಕೆ ಗುರಿಯಾಗಿದ್ದರು. ಇದೀಗ ಮೈಕೆಲ್ ಜಾಕ್ಸನ್ ಅವರನ್ನು ನಿಜವಾಗಿಯೂ ಕೊಂದಿದ್ಯಾರು ಎಂಬುದನ್ನು ಸಾಕ್ಷ್ಯಚಿತ್ರ ಬಹಿರಂಗಪಡಿಸಲಿದೆ.
ಸಮಯ, ಸಂದರ್ಭ, ಅಗತ್ಯತೆ ಮೈಕೆಲ್ ಜಾಕ್ಸನ್ ಸಾವಿಗೆ ದಾರಿ ಮಾಡಿಕೊಟ್ಟಿತು. ಮೈಕೆಲ್ ಜಾಕ್ಸನ್ ಹಲವು ವೈದ್ಯರನ್ನು ಸಂಪರ್ಕಿಸಿದ್ದರು, ಅದೆಷ್ಟೋ ಚಿಕಿತ್ಸೆಕ್ಕೊಳಗಾಗಿದ್ದರು. ಬೇರೆ - ಬೇರೆ ವೈದ್ಯರೆಲ್ಲ ಸೂಚಿಸಿದ ಔಷಧ ತೆಗೆದುಕೊಂಡರು. ತಮಗೆ ಬೇಕಾದಂತೆ, ಬೇಕಾದ ಸ್ಥಳಗಳಲ್ಲಿ ಔಷಧ ಸೇವಿಸಿದ್ದಾರೆ. ಮೈಕೆಲ್ ಜಾಕ್ಸನ್ ಡ್ರಗ್ಸ್ ಸೇವನೆಗೆ ಒಳಗಾಗಿದ್ದರೂ ಕೂಡ ನನ್ನಿಂದ ಅದನ್ನು ಸರಿಮಾಡಲಾಗಲಿಲ್ಲ. ಮೈಕೆಲ್ ನನ್ನನ್ನೇ ಮ್ಯಾನಿಪುಲೇಟ್ ಮಾಡಿದ್ದರು. ಅವರ ಸಾವಿಗೆ ಅತಿಯಾದ ಡ್ರಗ್ಸ್ ಸೇವನೆಯೇ ಕಾರನ ಎಂದು ವೈದ್ಯ ಕಾನ್ರಾಡ್ ಮುರ್ರೆ ತಿಳಿಸಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಹೆಸರಿನ ವಿದ್ಯಾರ್ಥಿ ವೇತನ ಪುನಾರಂಭ
ಜಾಕ್ಸನ್ ಬಾಲ್ಯದಲ್ಲಿಯೇ ಪಾಪ್ ಗಾಯನ ಮತ್ತು ಅದ್ಭುತ ಡ್ಯಾನ್ಸ್ನಿಂದ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದ್ದರು. ಸಾಧನೆಯ ಜೊತೆಗೆ ಮಗುವಿನ ಮೇಲೆ ಅತ್ಯಾಚಾರ ಮಾಡಿದ ಗಂಭೀರ ಆರೋಪವೂ ಸೇರಿದಂತೆ ಅವರನ್ನು ಹಲವು ವಿವಾದಗಳು ಸುತ್ತಿಕೊಂಡಿತ್ತು. ಈ ವಿವಾದಗಳನ್ನು ಚಿತ್ರದಲ್ಲಿ ಹೇಗೆ ತೋರಿಸುತ್ತಾರೆ ಎಂಬ ಕುತೂಹಲವಿದೆ.