ETV Bharat / entertainment

ಶಾರುಖ್​ ಖಾನ್​ಗೆ ತಾಯಿಯಾಗಿ ನಟಿಸಿದರೇ ದೀಪಿಕಾ ಪಡುಕೋಣೆ? ನೆಟ್ಟಿಗರು ಹೀಗಂದಿದ್ದೇಕೆ! - Deepika Padukone role

'ಜವಾನ್​' ಚಿತ್ರದ ಪ್ರಿವ್ಯೂ ಸದ್ದು ಮಾಡುತ್ತಿದೆ. ನಟಿ ದೀಪಿಕಾ ಪಡುಕೋಣೆ ಪಾತ್ರದ ಬಗ್ಗೆ ಚರ್ಚೆ ಶುರುವಾಗಿದೆ.

netizens says that Deepika Padukone played Shah Rukh Khan's mother role
ಶಾರುಖ್​ ಖಾನ್​ಗೆ ತಾಯಿಯಾಗಿ ನಟಿಸಿದ್ರೇ ದಿಪೀಕಾ ಪಡುಕೋಣೆ
author img

By

Published : Jul 11, 2023, 2:25 PM IST

ಬಾಲಿವುಡ್​ ನಟ​​​ ಶಾರುಖ್​ ಖಾನ್​ ಅಭಿನಯದ 'ಜವಾನ್​' ಚಿತ್ರದ ಪ್ರಿವ್ಯೂ ನಿನ್ನೆ(ಸೋಮವಾರ) ಬಿಡುಗಡೆ ಆಗಿದೆ. 2 ನಿಮಿಷಗಳ ವಿಡಿಯೋ ಕಂಡ ಅಭಿಮಾನಿಗಳು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಡೈಲಾಗ್ಸ್​, ಆ್ಯಕ್ಷನ್​ ಸೀನ್ಸ್ ಪ್ರೇಕ್ಷಕರ ಗಮನ ಸೆಳೆದಿದೆ.

ಆ್ಯಕ್ಷನ್​ ಸಿನಿಮಾ​ 'ಜವಾನ್​' ಪ್ರಿವ್ಯೂ ನೋಡುಗರಿಗೆ ರೋಮಾಂಚನ ಉಂಟುಮಾಡಿದೆ. ಪಠಾಣ್​ ಬಳಿಕ ಶಾರುಖ್​ ಅಭಿನಯಿಸುತ್ತಿರುವ ಎರಡನೇ ಆ್ಯಕ್ಷನ್​​ ಥ್ರಿಲ್ಲರ್ ಸಿನಿಮಾವಿದು. ಶಾರುಖ್​ ಕಂಪ್ಲೀಟ್​ ಆ್ಯಕ್ಷನ್​ ಲುಕ್ ಬೀರಿದ್ದರೆ, ದೀಪಿಕಾ ಪಡುಕೋಣೆ ಸೀರೆಯುಟ್ಟು ಹೋರಾಟದ ದೃಶ್ಯದಲ್ಲಿ ಅಭಿನಯಿಸಿದ್ದಾರೆ. ನಯನತಾರಾ ಸ್ಟೈಲಿಶ್​ ಎಂಟ್ರಿ ಕೊಟ್ಟಿದ್ದು, ಶಾರುಖ್ ಅವರನ್ನು ಬೆನ್ನಟ್ಟಿದ್ದಾರೆ. ವಿಜಯ್ ಸೇತುಪತಿ ಕೂಡ ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. 2 ನಿಮಿಷದ ಈ ವಿಡಿಯೋದಲ್ಲಿ ಬಹುತಾರಾಗಣ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದು, ಶಾರುಖ್​ ಅವರನ್ನು ಅನೇಕ ಅವತಾರಗಳಲ್ಲಿ ನೋಡಬಹುದು. ಆದರೆ ಈಗ ದಿಪೀಕಾ ಪಡುಕೋಣೆ ಪಾತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣವಿಷ್ಟೇ.

'ಜವಾನ್' ಪ್ರಿವ್ಯೂ ಮೂಲಕ ಬಾಲಿವುಡ್‌ ಬಾದ್‌ಶಾ ಅಭಿಮಾನಿ ಬಳಗದ ಜೊತೆಗೆ ಭಾರತೀಯ ಚಿತ್ರರಂಗವನ್ನೇ ಚಕಿತಗೊಳಿಸಿದೆ. ಕಿಂಗ್ ಖಾನ್ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ಈ ಹೊತ್ತಿನಲ್ಲೇ, ಜವಾನ್​ ಪ್ರಿವ್ಯೂ ಅವರ ಕುತೂಹಲವನ್ನು ಹೆಚ್ಚಿಸಿದೆ. ಶಾರುಖ್​​ ಹಲವು ನೋಟಗಳಲ್ಲಿ ಕಂಡುಬಂದರೆ, ದೀಪಿಕಾ ಪಡುಕೋಣೆ ಶಕ್ತಿಶಾಲಿ ಶೈಲಿ ದೃಶ್ಯದಲ್ಲಿ ಅಬ್ಬರಿಸಿದ್ದಾರೆ. ಕೆಂಪು ಸೀರೆಯುಟ್ಟು ಆ್ಯಕ್ಷನ್​ ಸೀನ್​ನಲ್ಲಿ ಆರ್ಭಟಿಸಿದ್ದು ಪ್ರತಿಭಾನ್ವಿತ ನಟಿಯ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದೀಪಿಕಾ ಪಡುಕೋಣೆ ಚಿತ್ರದಲ್ಲಿ ಶಾರುಖ್ ಖಾನ್ ಅವರ ತಾಯಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಬಳಕೆದಾರರು ಇದಕ್ಕೆ ತಮ್ಮದೇ ಆದ ಪುರಾವೆ ನೀಡುತ್ತಿದ್ದಾರೆ.

  • What I think is happening in #Jawan

    Deepika is the mom who was wrongly accused by Vijay's character and gives birth to SRK in jail and dies. SRK grows up in an all female jail and is cute and all until he finds the truth about his mom and then goes unhinged.

    — RJ Sister⁷ ᵇʸ ʲᵏ (@Jinsdiamondgirl) July 10, 2023 " class="align-text-top noRightClick twitterSection" data=" ">

ಸಾಮಾಜಿಕ ಜಾಲತಾಣಗಳಲ್ಲಿ ದೀಪಿಕಾ ಪಡುಕೋಣೆ ಅವರ ಹೊಡೆದಾಟದ ದೃಶ್ಯವನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳು ಈ ಚಿತ್ರದಲ್ಲಿ ಶಾರುಖ್ ಅವರ ತಾಯಿಯ ಪಾತ್ರವನ್ನು ದೀಪಿಕಾ ನಿರ್ವಹಿಸುತ್ತಾರೆ ಎಂದು ಊಹಿಸುತ್ತಿದ್ದಾರೆ. ದೀಪಿಕಾ ಅವರ ವಿಡಿಯೋ, ಹೆಸರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೆಂಡ್ ಆಗಿದೆ.

ಸಾಮಾಜಿಕ ಜಾಲತಾಣ ಬಳಕೆದಾರರು ತಮಗನಿಸಿದ ರೀತಿಯಲ್ಲಿ ಚಿತ್ರದ ಕಥೆಯನ್ನು ಊಹಿಸುತ್ತಿದ್ದಾರೆ. 'ದೀಪಿಕಾ ಶಾರುಖ್ ಖಾನ್‌ಗೆ ಜೈಲಿನಲ್ಲಿ ಜನ್ಮ ನೀಡಿದ್ದಾರೆ, ಶಾರುಖ್ ಅವರ ತಾಯಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆಯೇ?' ಎಂದು ನೆಟ್ಟಿಗರೋರ್ವರು ಪ್ರಶ್ನಿಸಿದ್ದಾರೆ. ಮತ್ತೋರ್ವ ಸಾಮಾಜಿಕ ಜಾಲತಾಣ ಬಳಕೆದಾರ ಪ್ರತಿಕ್ರಿಯಿಸಿ, 'ಜವಾನ್‌ನಲ್ಲಿ ಶಾರುಖ್‌ನ ತಾಯಿಯಾಗಿ ದೀಪಿಕಾ ಅತಿಥಿ ಪಾತ್ರ?' ಎಂದು ಬರೆದಿದ್ದಾರೆ. ಶಾರುಖ್​ ಖಾನ್​ರದ್ದು ಈ ಚಿತ್ರದಲ್ಲಿ ದ್ವಿಪಾತ್ರ ಎಂದು ನಂಬಲಾಗಿದೆ. ಹಾಗಾಗಿ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಶಾರುಖ್​ಗೆ ಜೋಡಿಯಾಗಿ ದೀಪಿಕಾ ನಟಿಸಿರಬಹುದು ಎಂಬುದು ಹಲವರ ಊಹೆ.

ಇದನ್ನೂ ಓದಿ: OMG 2 Teaser: ಅಕ್ಷಯ್​ ಕುಮಾರ್ ಅಭಿನಯದ ಓ ಮೈ ಗಾಡ್ 2 ಟೀಸರ್​ ಅನಾವರಣ

ದಕ್ಷಿಣ ಚಲನಚಿತ್ರಗಳ ಯುವ ನಿರ್ದೇಶಕ ಅಟ್ಲೀ ಈ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಸೂಪರ್‌ಸ್ಟಾರ್ ವಿಜಯ್ ಅವರ ಥೇರಿ ಸಿನಿಮಾ ಸೇರಿದಂತೆ ಕೆಲ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರ ಮುಂದಿನ ಆ್ಯಕ್ಷನ್​ ಥ್ರಿಲ್ಲರ್ ಸಿನಿಮಾ ಜವಾನ್​ ಸೆಪ್ಟೆಂಬರ್ 7 ರಂದು ತೆರೆಕಾಣಲಿದೆ. ಶಾರುಖ್ ಖಾನ್, ದೀಪಿಕಾ ಪಡುಕೋಣೆ, ನಯನತಾರಾ, ವಿಜಯ್ ಸೇತುಪತಿ, ಸಂಜಯ್ ದತ್ ಮತ್ತು ಪ್ರಿಯಾಮಣಿ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಧೋನಿ ನಿರ್ಮಾಣದ ಮೊದಲ ಸಿನಿಮಾ 'ಎಲ್​​ಜಿಎಂ' ಟ್ರೇಲರ್​ ರಿಲೀಸ್: ಕಾರ್ಯಕ್ರಮದ ಫೋಟೋಗಳನ್ನು ನೋಡಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.