ETV Bharat / entertainment

'ಲವ್ ಯು ಶಾನು'.. ಪತಿ ಫಹಾದ್​ ಫಾಸಿಲ್​ ಜನ್ಮದಿನಕ್ಕೆ ಪ್ರೀತಿಯಿಂದ ಶುಭಾಶಯ ಕೋರಿದ ನಜ್ರಿಯಾ ನಜೀಮ್ - ಈಟಿವಿ ಭಾರತ ಕನ್ನಡ

Fahadh Faasil Birthday: ಪತಿ ಫಹಾದ್​ ಫಾಸಿಲ್​ ಹುಟ್ಟುಹಬ್ಬಕ್ಕೆ ನಜ್ರಿಯಾ ನಜೀಮ್ ಪ್ರೀತಿಯಿಂದ ಶುಭಾಶಯ ಕೋರಿದ್ದಾರೆ.

Nazriya Nazim
ಫಹಾದ್​ ಫಾಸಿಲ್​ ಜನ್ಮದಿನಕ್ಕೆ ಪ್ರೀತಿಯಿಂದ ಶುಭಹಾರೈಸಿದ ನಜ್ರಿಯಾ ನಜೀಮ್
author img

By

Published : Aug 8, 2023, 6:02 PM IST

ದಕ್ಷಿಣ ಚಿತ್ರರಂಗದ ಸುಂದರ ಜೋಡಿ ಫಹಾದ್​ ಫಾಸಿಲ್​ ಮತ್ತು ನಜ್ರಿಯಾ ನಜೀಮ್​. ಇವರಿಬ್ಬರು ಆದರ್ಶ ದಂಪತಿ ಎಂದರೆ ತಪ್ಪಾಗಲಾರದು. ಫಹಾದ್​ ಅವರು ಸೋಷಿಯಲ್​ ಮೀಡಿಯಾದಲ್ಲಿ ಹೆಚ್ಚು ಆಕ್ಟೀವ್​ ಇರೋದಿಲ್ಲ. ಆದರೆ, ನಜ್ರಿಯಾ ನಜೀಮ್ ಪತಿಯೊಂದಿಗಿನ ಫೋಟೋವನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇಂದು ಫಹಾದ್​ ಫಾಸಿಲ್​ ಹುಟ್ಟುಹಬ್ಬದ ಸಲುವಾಗಿ ಹೊಸ ಚಿತ್ರವನ್ನು ಹಂಚಿಕೊಂಡು, ಅವರಿಗೆ ಶುಭಾಶಯ ಕೋರಿದ್ದಾರೆ. 42ನೇ ವಸಂತಕ್ಕೆ ಕಾಲಿಟ್ಟಿರುವ ನಟನಿಗೆ ಎಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಫಹಾದ್​ ಫಾಸಿಲ್​ ಜೊತೆಗೆ ನಿಂತಿರುವ ಫೋಟೋವನ್ನು ಇನ್​ಸ್ಟಾದಲ್ಲಿ ಹಂಚಿಕೊಂಡಿರುವ ನಜ್ರಿಯಾ ನಜೀಮ್, "ಹುಟ್ಟುಹಬ್ಬದ ಶುಭಾಶಯಗಳು. ಲವ್​ ಯು ಶಾನು. ನೀವು ವಜ್ರದಂತೆ ಹೊಳೆಯಿರಿ. ನಿಮ್ಮಂತೆ ಯಾರೂ ಇಲ್ಲ. ಅತ್ಯುತ್ತಮ ಸ್ನೇಹಿತ.. ವಿ ಲವ್​ ಯು" ಎಂದು ಪ್ರೀತಿಯಿಂದ ಶುಭ ಹಾರೈಸಿದ್ದಾರೆ. ಅವರಿಬ್ಬರ ಸುಂದರ ಫೋಟೋವನ್ನು ಮಲಯಾಳಂ ಸೂಪರ್​ಸ್ಟಾರ್​ ನಟ ಮಮ್ಮುಟಿ ಕ್ಲಿಕ್ಕಿಸಿದ್ದಾರೆ. ಅವರಿಗೂ ಕೂಡ ನಜ್ರಿಯಾ ನಜೀಮ್ ಧನ್ಯವಾದ ಹೇಳುವುದರೊಂದರಿಗೆ 'ನೀವು ನಮ್ಮ ನೆಚ್ಚಿನ ವ್ಯಕ್ತಿ' ಎಂದಿದ್ದಾರೆ.

ಫಹಾದ್​ ಫಾಸಿಲ್​ ಅವರು ಪ್ರತಿ ವರ್ಷದಂತೆ ಈ ಬಾರಿಯೂ ಹೆಂಡತಿ, ಕುಟುಂಬಸ್ಥರು ಮತ್ತು ಆತ್ಮೀಯ ಸ್ನೇಹಿತರೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಮಾಲಿವುಡ್​ ಸೂಪರ್​ಸ್ಟಾರ್​ ಮಮ್ಮುಟಿ ಮತ್ತು ಅವರ ಮಗ, ನಟ ದುಲ್ಕರ್​ ಸಲ್ಮಾನ್​ ಜೊತೆ ಫಹಾದ್​ ಫಾಸಿಲ್ ಮತ್ತು ನಜ್ರಿಯಾ ನಜೀಮ್ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. 2006 ರಲ್ಲಿ ಮಮ್ಮುಟಿ ಮಗಳಾಗಿ ಪಲುಂಕು ಚಿತ್ರದಲ್ಲಿ ನಜ್ರಿಯಾ ನಜೀಮ್ ನಟಿಸಿದ್ದರು. ಈ ಮೂಲಕ ಅವರು ಬಾಲ ನಟಿಯಾಗಿ ಬಣ್ಣದ ಲೋಕ ಪ್ರವೇಶಿಸಿದರು.

ಇನ್ನು ಫಹಾದ್​ ಫಾಸಿಲ್​ ಬಹುಭಾಷಾ ನಟನಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಅಮೋಘ ಅಭಿನಯದಿಂದಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇವರ ಹೆಚ್ಚಿನ ಎಲ್ಲಾ ಸಿನಿಮಾಗಳು ಬ್ಲಾಕ್​ಬಸ್ಟರ್​ ಹಿಟ್​ ಕಂಡಿವೆ. ಮಮ್ಮುಟ್ಟಿ ಅವರ ಅನೇಕ ಸಿನಿಮಾದಲ್ಲಿ ಫಹಾದ್​ ಪಾಸಿಲ್​ ಅವರು ನಟಿಸಿದ್ದಾರೆ. ಸದ್ಯ ನಟ, ಮಾರಿ ಸೆಲ್ವರಾಜ್​ ನಿರ್ದೇಶನದ ಮಾಮಣ್ಣನ್​ ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಟನ ಅತ್ಯುತ್ತಮ ನಟನೆಯು ಉತ್ತಮ ಮೆಚ್ಚುಗೆ ಗಳಿಸಿದೆ. ವಡಿವೇಲು, ಉದಯನಿಧಿ ಸ್ಟಾಲಿನ್​ ಮತ್ತು ಕೀರ್ತಿ ಸುರೇಶ್​ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಸದ್ಯ ಫಹಾದ್​ ಫಾಸಿಲ್​ 'ಪುಷ್ಪ 2: ದಿ ರೂಲ್'​ ಚಿತ್ರದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಈ ಸಿನಿಮಾದಲ್ಲಿ ಅವರ ಫಸ್ಟ್​ ಲುಕ್​ ಅನ್ನು ಚಿತ್ರತಂಡ ಇಂದು ಬಿಡುಗಡೆಗೊಳಿಸಿದೆ. ಖಾಕಿ ಜಾಕೆಟ್​ ಮತ್ತು ಕೂಲಿಂಗ್​ ಗ್ಲಾಸ್​ ಧರಿಸಿ ಸಿಗರೇಟ್​ ಸೇದುತ್ತಿರುವ ನೋಟದಲ್ಲಿ ಫಹಾದ್​ ಫಾಸಿಲ್​ ಕಾಣಿಸಿಕೊಂಡಿದ್ದಾರೆ. ತಲೆಯಲ್ಲಿ ಕೂದಲಿಲ್ಲದೇ ವಿಲನ್​ ಪಾತ್ರಕ್ಕೆ ಬೇಕಾದಂತೆ ಅವರನ್ನು ತೋರಿಸಲಾಗಿದೆ.

ಪುಷ್ಪ 2: ದಿ ರೂಲ್​ ಸಿನಿಮಾವನ್ನು ಸುಕುಮಾರನ್ ಬರೆದು​ ನಿರ್ದೇಶಿಸಿದ್ದಾರೆ. ಮೈತ್ರಿ ಮೂವೀ ಮೇಕರ್ಸ್​ ನಿರ್ಮಿಸಿದೆ. 2023ರ ಡಿಸೆಂಬರ್ ಕೊನೆಯಲ್ಲಿ ಸಿನಿಮಾ ತೆರೆಗೆ ಬರಲಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ, ಫಹಾದ್​ ಫಾಸಿಲ್​, ಸುನೀಲ್​, ಅಜಯ್​, ರಾವ್​ ರಮೇಶ್​, ಅನುಸೂಯಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್​ ಸಂಗೀತ ನಿರ್ದೇಶನ, ಮಿರೋಸ್ಪಾ ಕುಬಾ ಛಾಯಾಗ್ರಹಣ, ಕಾರ್ತಿಕಾ ಶ್ರೀನಿವಾಸ್​ ಮತ್ತು ರೂಬೆನ್​ ಸಂಕಲನವಿದೆ.

ಇದನ್ನೂ ಓದಿ: Pushpa 2: ನಟ ಫಹಾದ್​ ಫಾಸಿಲ್​ ಜನ್ಮದಿನ.. 'ಪುಷ್ಪ 2' ಖಳನಾಯಕನ ಫಸ್ಟ್​ ಲುಕ್​ ಔಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.