ಕೇಂದ್ರ ಸರ್ಕಾರದ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಘೋಷಣೆ ಮಾಡಲಾಗಿದೆ. 2021ರ ಸಿನಿಮಾಗಳ ಪೈಕಿ ನಾನ್ ಫೀಚರ್ ಫಿಲ್ಮ್ ವಿಭಾಗದಲ್ಲಿ ಕನ್ನಡದ ನಟ ಅನಿರುದ್ಧ ಜಟ್ಕರ್ ನಿರ್ದೇಶನದ ಬಾಳೇ ಬಂಗಾರಕ್ಕೆ ರಾಷ್ಟ್ರೀಯ ಪ್ರಶಸ್ತಿ ದೊರೆತಿದ್ದು, ಸಂತಸ ಉಂಟು ಮಾಡಿದೆ.
ಹೌದು, ಸಾಹಸ ಸಿಂಹ ವಿಷ್ನುವರ್ಧನ್ ಅಳಿಯ ಅನಿರುದ್ಧ್ ನಿರ್ದೇಶನದಲ್ಲಿ, ಭಾರತಿ ವಿಷ್ಣುವರ್ಧನ್ ಕುರಿತಾದ ಸಾಕ್ಷ್ಯ ಚಿತ್ರ 'ಬಾಳೇ ಬಂಗಾರ' ನಾನ್ ಫೀಚರ್ ಫಿಲ್ಮ್ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ. ಪಂಚ ಭಾಷಾ ಸಿನಿಮಾಗಳಲ್ಲಿ ನಟಿಸಿದ್ದ ಭಾರತಿ ವಿಷ್ಣುವರ್ಧನ್ ಅವರ ಸಿನಿಮಾ ಪಯಣವನ್ನು ಈ ಸಾಕ್ಷ್ಯ ಚಿತ್ರದ ಮೂಲಕ ತೆರೆದಿಡಲಾಗಿತ್ತು. ಈ ಸಾಕ್ಷ್ಯಚಿತ್ರದಲ್ಲಿ ಭಾರತಿ ಅವರ ಸಿನಿಮಾ ಜರ್ನಿಯನ್ನು 2 ಗಂಟೆ 31 ನಿಮಿಷಗಳಲ್ಲಿ ವಿವರಿಸಲಾಗಿತ್ತು. ಇದೀಗ ರಾಷ್ಟ್ರೀಯ ಪ್ರಶಸ್ತಿ ಲಭಿಸುರುವುದಕ್ಕೆ ನಿರ್ದೇಶಕ ಅನಿರುದ್ಧ್ ಕೃತಜ್ಞತೆ ಹೇಳಿದ್ದಾರೆ.
ಇದನ್ನೂ ಓದಿ : ನಿಮ್ಮಿಂದ ಕೆಲ ಕಲಾವಿದರು ಕಣ್ಣೀರಿಟ್ಟಿದ್ದಾರೆ : ನಟ ಅನಿರುದ್ಧ್ ಪ್ರತ್ಯಾರೋಪ
ಬಹುಭಾಷಾ ನಟಿಯಾಗಿ ಮಿಂಚಿದ ಭಾರತಿ : ಡಾ. ಭಾರತಿ ವಿಷ್ಣುವರ್ಧನ್ ಕುರಿತಾದ ಈ ಸಾಕ್ಷ್ಯಚಿತ್ರದ ಅವಧಿ 141 ನಿಮಿಷಗಳು. 'ಬದುಕಿರುವ ಭಾರತದ ಮೇರು ನಟಿಯ ಕುರಿತಾದ ಅತ್ಯಂತ ದೀರ್ಘ ಕಾಲಾವಧಿಯ ಸಾಕ್ಷ್ಯಚಿತ್ರ' ಎಂಬ ದಾಖಲೆಯನ್ನು ಸಹ ಈ ಡಾಕ್ಯುಮೆಂಟರಿ ಬರೆದಿದೆ. 150 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಭಾರತಿ ವಿಷ್ಣುವರ್ಧನ್, ಭಾರತೀಯ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.
ಇದನ್ನೂ ಓದಿ : ಮಕ್ಕಳೊಂದಿಗೆ 'ಹೆಜ್ಜೆ' ಹಾಕಿದ ನಟ ಅನಿರುದ್ಧ್...'ಟಿಕ್ಟಾಕ್' ವೀಕ್ಷಕರಿಗೆ ಹೆಚ್ಚಿದ ಕುತೂಹಲ!
ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ಕೂಡ ಬಣ್ಣಹಚ್ಚಿದ್ದಾರೆ. ಅವರ ಸಾಧನೆ ಗುರುತಿಸಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಇಷ್ಟೆಲ್ಲ ಜನಪ್ರಿಯತೆ ಗಳಿಸಿದ ಅವರ ಬದುಕಿನಲ್ಲಿ ಹಲವು ಏಳು ಬೀಳುಗಳಿವೆ. ಆ ಎಲ್ಲ ವಿವರಗಳನ್ನು ಬಾಳೇ ಬಂಗಾರ ಸಾಕ್ಷ್ಯ ಚಿತ್ರ ಒಳಗೊಂಡಿದೆ.
ಇದನ್ನೂ ಓದಿ : ನಟ ಅನಿರುದ್ಧ್ ಜತ್ಕರ್ಗೆ ಮತ್ತೆ ಶಾಕ್ : ಎಸ್ ನಾರಾಯಣ್ ಮುಂದಿನ ನಡೆ ಏನು ?
ಇದರ ಜೊತೆಗೆ ಭಾರತಿ ವಿಷ್ಣುವರ್ಧನ್ ಅವರ ಬದುಕು, ಸಾಧನೆ, ವ್ಯಕ್ತಿತ್ವದ ಬಗ್ಗೆ ಚಿತ್ರರಂಗದ ಅನೇಕರು ಮಾತನಾಡಿದ್ದಾರೆ. ಅನಂತ್ ನಾಗ್, ಶಿವರಾಮ್, ಎಚ್ಆರ್ ಭಾರ್ಗವ್, ಮೋಹನ್ ಲಾಲ್, ಶಿವರಾಜ್ಕುಮಾರ್, ಹೇಮಾ ಚೌಧರಿ ಸೇರಿದಂತೆ ಚಿತ್ರರಂಗದ ಅನೇಕ ಹಿರಿಯರ ಸಂದರ್ಶನವನ್ನು ಈ ಸಾಕ್ಷ್ಯಚಿತ್ರ ಒಳಗೊಂಡಿತ್ತು. ಈ ಎಲ್ಲ ಕಾರಣಗಳಿಗಾಗಿ ಬಾಳೇ ಬಂಗಾರ ಡಾಕ್ಯುಮೆಂಟರಿಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿರೋದು. ಈ ಸಂತಸವನ್ನು ಮಾತಿನಲ್ಲಿ ಹೇಳಲು ಪದಗಳಿಲ್ಲ ಅಂತಾ ನಟ ಹಾಗೂ ನಿರ್ದೇಶಕ ಅನಿರುದ್ಧ್ ಹೇಳಿದ್ದಾರೆ.
ಇದನ್ನೂ ಓದಿ : ವಿಷ್ಣುವರ್ಧನ್, ಭಾರತಿ 6 ತಿಂಗಳು ಬರೀ ಗಂಜಿ ಕುಡಿದು ಜೀವನ ಸಾಗಿಸಿದ್ದರು : ಅಳಿಯ ಅನಿರುದ್ಧ್