ETV Bharat / entertainment

ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡದ 'ನಾನು ಕುಸುಮ' ಪ್ರದರ್ಶನ - International Film Festival

'ನಾನು ಕುಸುಮ' ಸಿನಿಮಾವನ್ನು ಪಣಜಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗಿದೆ.

Nanu Kusuma movie
ನಾನು ಕುಸುಮ ಸಿನಿಮಾ
author img

By

Published : Nov 23, 2022, 5:04 PM IST

ಪಣಜಿ(ಗೋವಾ): ಕಠಿಣ ಕಾನೂನುಗಳ ಹೊರತಾಗಿಯೂ ಮಹಿಳೆಯರು ಹೇಗೆ ತಾರತಮ್ಯಕ್ಕೆ ಒಳಗಾಗುತ್ತಾರೆ ಎಂಬುದನ್ನು ತೋರಿಸಿರುವ ಕನ್ನಡ ಚಲನಚಿತ್ರ 'ನಾನು ಕುಸುಮ' ಅನ್ನು ಇಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗಿದೆ.

ಈ ಚಲನಚಿತ್ರವು ಕನ್ನಡದ ಲೇಖಕ ಡಾ ಬೆಸಗರಹಳ್ಳಿ ರಾಮಣ್ಣ ಅವರು ಬರೆದ ಸಣ್ಣ ಕಥೆಯನ್ನು ಆಧರಿಸಿದೆ. ಅವರು ನಿಜ ಜೀವನದ ಘಟನೆಗಳನ್ನು ತೆಗೆದುಕೊಂಡು ಪುಸ್ತಕವನ್ನು ಬರೆದಿದ್ದಾರೆ. ಮಹಿಳಾ ಸಬಲೀಕರಣ ಮತ್ತು ಮಹಿಳಾ ಸುರಕ್ಷತೆ ಈ ಚಿತ್ರದ ತಿರುಳಾಗಿದೆ. ಸಮಾಜಕ್ಕೆ ಸಂದೇಶವನ್ನು ರವಾನಿಸುವ ವಿಷಯಗಳ ಮೇಲೆ ಚಲನಚಿತ್ರಗಳನ್ನು ಮಾಡುವುದು ನನ್ನ ಆಸೆ ಎಂದು ನಿರ್ದೇಶಕ ಕೃಷ್ಣೇಗೌಡ ಹೇಳಿದರು.

'ನಾನು ಕುಸುಮ' ಕುಸುಮಳ ಕಥೆ. ತಮ್ಮ ಮಗಳ ಬಗ್ಗೆ ಹೆಚ್ಚಿನ ಮಹತ್ವಾಕಾಂಕ್ಷೆಗಳನ್ನು ಹೊಂದಿರುವ ಪ್ರೀತಿಯ ಮತ್ತು ಕಾಳಜಿಯುಳ್ಳ ವ್ಯಕ್ತಿಯ ಮಗಳು ಕುಸುಮಳ ಕಥೆಯಾಗಿದೆ. ಆದರೆ ಅಪಘಾತದಲ್ಲಿ ತಂದೆ ನಿಧನರಾಗುತ್ತಾರೆ. ಗೊಂದಲಮಯ ಜೀವನಕ್ಕೆ ಕುಸುಮ ಒಳಗಾಗುತ್ತಾಳೆ. ವೈದ್ಯೆಯಾಗಬೇಕೆಂಬ ಕನಸು ಕಂಡಿದ್ದ ಕುಸುಮ ಆರ್ಥಿಕ ಮುಗ್ಗಟ್ಟಿನಿಂದ ವೈದ್ಯಕೀಯ ಶಿಕ್ಷಣವನ್ನು ತ್ಯಜಿಸುತ್ತಾಳೆ. ಅವಳು ತನ್ನ ತಂದೆಯ ಸರ್ಕಾರಿ ಕೆಲಸವನ್ನು ಪರಿಹಾರದ ಆಧಾರದ ಮೇಲೆ ಪಡೆಯುತ್ತಾಳೆ. ಆದರೆ ಕುಸುಮ ಲೈಂಗಿಕ ದೌರ್ಜನ್ಯಕ್ಕೆ ಒಳಗಾದಾಗ ಜೀವನ ಬೇರೆಯದ್ದೇ ತಿರುವು ಪಡೆಯುತ್ತದೆ.

ಇದನ್ನೂ ಓದಿ: ಸಿನಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾದ 'ಧರಣಿ ಮಂಡಲ ಮಧ್ಯದೊಳಗೆ': ಬಿಡುಗಡೆಗೆ ಡೇಟ್​​ ಫಿಕ್ಸ್

ಕುಸುಮಳನ್ನು ಚಿತ್ರಿಸುವುದು ಬಹಳ ಕಷ್ಟಕರ, ಹೆದರಿಕೆಯ ಕೆಲಸ. ಇದು ನಿರಂತರವಾಗಿ ಮೂಲೆಗಳಿಗೆ ತಳ್ಳಲ್ಪಡುವ ಮತ್ತು ಯಾವುದೇ ತಪ್ಪು ಮಾಡದೆ ಸಮಸ್ಯೆಗಳಿಂದ ಸುತ್ತುವರೆದಿರುವ ಮಹಿಳೆಯರ ಕಥೆ ಎಂದು ನಟಿ ಗ್ರೀಷ್ಮಾ ಶ್ರೀಧರ್ ಹೇಳಿದರು. ಭಾರತೀಯ ಪನೋರಮಾ ಫೀಚರ್ ಫಿಲ್ಮ್ಸ್ ವಿಭಾಗದ (Panorama Feature Films) ಅಡಿಯಲ್ಲಿ ಈ ಚಲನಚಿತ್ರವನ್ನು ಪ್ರದರ್ಶಿಸಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.