ETV Bharat / entertainment

ಮೇ 12 ರಂದು ಮತ್ತೆ ತೆರೆ ಕಾಣಲಿದೆ 'ಎಂ.ಎಸ್.ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ' - ಯಾಂಕಾ ಝಾ ಪಾತ್ರದಲ್ಲಿ ದಿಶಾ ಪಟಾನಿ

ನೀರಜ್ ಪಾಂಡೆ ನಿರ್ದೇಶನದ ಎಂ.ಎಸ್.ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ ಬಯೋಪಿಕ್ ಚಿತ್ರ ಮತ್ತೆ ತೆರೆಗೆ ಬರಲು ಸಿದ್ಧಗೊಂಡಿದೆ. ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಧೋನಿ ಪಾತ್ರ ನಿರ್ವಹಿಸಿದರೆ, ಧೋನಿ ಗೆಳತಿ ಪ್ರಿಯಾಂಕಾ ಝಾ ಪಾತ್ರದಲ್ಲಿ ದಿಶಾ ಪಟಾನಿ ಮಿಂಚಿದ್ದರು.

MS Dhoni The Untold Story
ಎಂ ಎಸ್ ಧೋನಿ ದಿ ಅನ್‌ಟೋಲ್ಡ್ ಸ್ಟೋರಿ
author img

By

Published : May 5, 2023, 11:21 AM IST

ಮುಂಬೈ: 2016 ರಲ್ಲಿ ಎಂ.ಎಸ್.ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ ಬಯೋಪಿಕ್ ಸಿನಿಮಾ ಮುಂದಿನ ವಾರ ಥಿಯೇಟರ್‌ಗಳಲ್ಲಿ ಮತ್ತೆ ಬಿಡುಗಡೆಗೆ ರೆಡಿಯಾಗಿದೆ. ಬಯೋಪಿಕ್‌ನಲ್ಲಿ ನಟಿಸಿ ಬಾಲಿವುಡ್‌ ಪ್ರವೇಶಿಸಿದ್ದ ದಿಶಾ ಪಟಾನಿ ನಿರ್ಮಾಪಕರಿಗೆ ಧನ್ಯವಾದ ತಿಳಿಸಿದ್ದಾರೆ.

ದಿಶಾ ಪಟಾನಿ ಈ ಹಿಂದೆ ಸಲ್ಮಾನ್ ಖಾನ್ ಅಭಿನಯದ ಭಾರತ್ ಚಿತ್ರದಲ್ಲಿ ಅಭಿನಯಿಸಿದ್ದರು. ಆದರೆ ಈ ಚಿತ್ರದಲ್ಲಿ ಕತ್ರಿನಾ ಇದ್ದ ಕಾರಣ ದಿಶಾ ಅಷ್ಟೇನೂ ಅಭಿನಯದಲ್ಲಿ ಮಿಂಚಲಿಲ್ಲ. ಆದರೆ ಕ್ರಿಕೆಟರ್ ಧೋನಿ ಲೈಫ್ ಸ್ಟೋರಿಯ M.S.Dhoni: The Untold Story ಚಿತ್ರದ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ದಿಶಾ ಪಟಾನಿಗೆ ಒಂದು ಹಂತಕ್ಕೆ ಒಳ್ಳೆಯ ಹೆಸರನ್ನೇ ತಂದುಕೊಟ್ಟಿತ್ತು.

ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ನಿರ್ವಹಿಸಿದ ಪಾತ್ರದ ಎಂ.ಎಸ್.ಧೋನಿಯ ಗೆಳತಿ ಪ್ರಿಯಾಂಕಾ ಝಾ ಪಾತ್ರದಲ್ಲಿ ದಿಶಾ ಮಿಂಚಿ ಪ್ರೇಕ್ಷಕರ ಹೃದಯ ಗೆದ್ದಿದ್ದರು. 2016 ರ ಎಂ.ಎಸ್.ಧೋನಿ ದಿ ಅನ್‌ಟೋಲ್ಡ್ ಸ್ಟೋರಿ ಮತ್ತೆ ಮೇ 12 ರಂದು ಮರು ಬಿಡುಗಡೆಗೆ ಸಿದ್ಧವಾಗುತ್ತಿದ್ದಂತೆ, ನಟಿ ದಿಶಾ ಗುರುವಾರ ಧನ್ಯವಾದ ವ್ಯಕ್ತಪಡಿಸಿದ್ದಾರೆ. ಬಯೋಪಿಕ್ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ದಿಶಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟರ್ ಹಂಚಿಕೊಂಡಿದ್ದಾರೆ. "ಇದಕ್ಕಾಗಿ ತುಂಬಾ ಕೃತಜ್ಞರಾಗಿರುತ್ತೇನೆ" ಎಂದು ತಿಳಿಸಿದ್ದಾರೆ.

ನೀರಜ್ ಪಾಂಡೆ ನಿರ್ದೇಶನದ ಚಿತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರು ಜೀವನ ಚರಿತ್ರೆ ಆಧಾರಿತ ಮಹೇಂದ್ರ ಸಿಂಗ್ ಧೋನಿ ಪಾತ್ರದಲ್ಲಿ ಅದ್ಭುತ ಅಭಿನಯ ಪ್ರದರ್ಶಿಸಿ, ಪ್ರೇಕ್ಷಕರ ಹೃದಯ ಗೆದ್ದಿದ್ದರು. ಚಿತ್ರ ರಾಂಚಿ ಮೂಲದ ಕ್ರಿಕೆಟಿಗನ ಬದುಕಿನ ಪಯಣ, ಯಶಸ್ಸು, ಕ್ರಿಕೆಟ್ ವೃತ್ತಿ ಜೀವನ ಹಾಗು ವೈಯಕ್ತಿಕ ಜೀವನದ ಮಜಲುಗಳನ್ನು ಪರದೆಯಲ್ಲಿ ಮನೋಜ್ಞವಾಗಿ ಕಟ್ಟಿಕೊಟ್ಟಿತ್ತು.

ಸುಶಾಂತ್ ಸಿಂಗ್ ಪಾತ್ರಕ್ಕೆ ಪ್ರೇಕ್ಷಕರು ಮಂತ್ರಮುಗ್ಧರಾಗಿದ್ದರು. ಕೆಲವರು ನಾವು ಸುಶಾಂತ್ ಅಥವಾ ಧೋನಿಯನ್ನೇ ಪರದೆಯ ಮೇಲೆ ನೋಡಿದ್ದೇವೆಯೇ ಎಂಬ ಗೊಂದಲಕ್ಕೊಳಗಾಗಿದ್ದೂ ಇದೆ. ಸುಶಾಂತ್ ಎಂತಹ ಪ್ರತಿಭಾನ್ವಿತ ನಟ ಎಂಬುದನ್ನು ಈ ಚಿತ್ರ ಸ್ಪಷ್ಟವಾಗಿ ಸಾಬೀತುಪಡಿಸಿತ್ತು. ಧೋನಿಯ ನಡೆ-ನುಡಿಯಿಂದ ಹಿಡಿದು ಮಾತನಾಡುವ ರೀತಿ.. ಹೀಗೆ ಎಲ್ಲವನ್ನೂ ಸುಶಾಂತ್ ಗಮನಿಸಿ, ಅಚ್ಚುಕಟ್ಟಾಗಿ ಅಭಿನಯಿಸಿ ತೋರಿಸಿದ್ದರು.

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕನ ಬಯೋಪಿಕ್ ಬಾಲಿವುಡ್‌ನಲ್ಲಿ (2016 ರಲ್ಲಿ) ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರವಾಗಿಯೂ ಹೊರಹೊಮ್ಮಿತ್ತು. ದಿಶಾ ಮತ್ತು ಸುಶಾಂತ್ ಅವರಲ್ಲದೇ, ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ಅನುಪಮ್ ಖೇರ್ ಮತ್ತು ಭೂಮಿಕಾ ಚಾವ್ಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

ಇವುಗಳ ಮಧ್ಯೆ ದಿಶಾ ಮುಂದಿನ 'ಪ್ರಾಜೆಕ್ಟ್ ಕೆ' ಚಿತ್ರದಲ್ಲಿ ಬ್ಯುಸಿಯಾಗಿದ್ದು, ಪ್ರಸ್ತುತ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ 'ಯೋಧಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳಿನ ಖ್ಯಾತ ನಟ ಸೂರ್ಯರೊಂದಿಗೆ ಕಂಗುವ ಎಂಬ ಚಿತ್ರದಲ್ಲಿ ದಿಶಾ ನಾಯಕಿಯಾಗಿ ನಟಿಸುತ್ತಿದ್ದಾರೆ.

ಇದನ್ನೂಓದಿ: ಚುನಾವಣಾ ನೀತಿ ಸಂಹಿತೆ.. ರಾಜ್ಯಸಭಾ ಸದಸ್ಯ ಜಗ್ಗೇಶ್ ಸಿನಿಮಾ ಪೋಸ್ಟರ್​ಗೆ ಪೇಪರ್ ಅಂಟಿಸಿದ ಅಧಿಕಾರಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.