ETV Bharat / entertainment

''ಬೇಶರಂ ರಂಗ್'' ವಿವಾದ: ಪಠಾಣ್‌ ಬಿಡುಗಡೆ ಆಗೋದು ಅನುಮಾನ​ ಎಂದ ಸಚಿವ - ಬೇಶರಂ ರಂಗ್ ಕೇಸರಿ ವಿವಾದ

ಮಧ್ಯಪ್ರದೇಶದಲ್ಲಿ ಪಠಾಣ್‌ ಚಿತ್ರವನ್ನು ಬಿಡುಗಡೆ ಮಾಡಲು ಅನುಮತಿ ನೀಡುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಸಚಿವ ನರೋತ್ತಮ್ ಮಿಶ್ರಾ ಟ್ವೀಟ್ ಮಾಡಿದ್ದಾರೆ.

MP minister Narottam Mishra on Besharam Rang song
: ಪಠಾಣ್‌ ಬಿಡುಗಡೆ ಆಗೋದು ಅನುಮಾನ​ವೆಂದ ಸಚಿವ
author img

By

Published : Dec 14, 2022, 5:36 PM IST

Updated : Dec 14, 2022, 8:00 PM IST

ಸಚಿವ ನರೋತ್ತಮ್ ಮಿಶ್ರಾ

ಬಾಲಿವುಡ್​ ಚಿತ್ರರಂಗದ ಕಿಂಗ್​​ ಶಾರುಖ್​ ಖಾನ್​​​ ಮತ್ತು ಪದ್ಮಾವತಿಯ ಬಹುನಿರೀಕ್ಷಿತ ಪಠಾಣ್‌ ಸಿನಿಮಾದ ಮೊದಲ ಟ್ರ್ಯಾಕ್ ''ಬೇಶರಂ ರಂಗ್'' ಬಿಡುಗಡೆ ಆಗಿ ಸೋಷಿಯಲ್​ ಮೀಡಿಯಾದಲ್ಲಿ ಬಿಸಿ ಏರಿಸಿದೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್​ ಖಾನ್​​​ ಕೆಮಿಸ್ಟ್ರಿ ಮಾತ್ರ ಸಖತ್​ ವರ್ಕ್​​ ಔಟ್​ ಆಗಿದೆ. ಈ ಜೋಡಿ ಹಾಡಿನಲ್ಲಿ ಸಖತ್​ ಹಾಟ್​ ಆಗಿ ಕಾಣಿಸಿಕೊಂಡಿದ್ದಾರೆ.

ಈ ಹಾಟ್​ ಸಾಂಗ್​ ಅನ್ನು ಬಹುತೇಕ ಮಂದಿ ಇಷ್ಟಪಟ್ಟಿದ್ದಾರೆನ್ನುವುದರಲ್ಲಿ ಸಂದೇಹವಿಲ್ಲ. ಆದರೆ ವಿರೋಧಿಸುವವರ ಸಂಖ್ಯೆಯೂ ಕಡಿಮೆ ಇಲ್ಲ. ದೀಪಿಕಾರ ಹಾಟ್​​ ಅವತಾರ ಕಂಡ ಹಲವು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಯ್ಕಾಟ್​ ಪಠಾಣ್‌ ಟ್ರೆಂಡ್ ಕೂಡ​ ಜೋರಾಗಿದೆ.

  • फिल्म #Pathan के गाने में टुकड़े-टुकड़े गैंग की समर्थक अभिनेत्री दीपिका पादुकोण की
    वेशभूषा बेहद आपत्तिजनक है और गाना दूषित मानसिकता के साथ फिल्माया गया है।
    गाने के दृश्यों व वेशभूषा को ठीक किया जाए अन्यथा फिल्म को मध्यप्रदेश में अनुमति दी जाए या नहीं दी जाए,यह विचारणीय होगा। pic.twitter.com/Ekl20ClY75

    — Dr Narottam Mishra (@drnarottammisra) December 14, 2022 " class="align-text-top noRightClick twitterSection" data=" ">

ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಹಾಡಿನ ಬಗ್ಗೆ ತಮ್ಮ ಆಕ್ಷೇಪವನ್ನು ಟ್ವೀಟ್​ ಮೂಲಕ ಹೊರಹಾಕಿದ್ದಾರೆ. ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿರುವ ವಿಡಿಯೋವನ್ನು ಹಂಚಿಕೊಂಡ ಸಚಿವರು, ಮಧ್ಯಪ್ರದೇಶದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಅನುಮತಿ ನೀಡುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಹಾಡಿನಲ್ಲಿ ಉಡುಗೆಗಳ ಆಯ್ಕೆ, ಕೇಸರಿ ಬಣ್ಣದ ಬಟ್ಟೆ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಿಕಿನಿಯಲ್ಲಿ ಬೋಲ್ಡ್​ ಬ್ಯೂಟಿ.. ದೀಪಿಕಾ ಪಡುಕೋಣೆ ಕೆಲಸಕ್ಕೆ ಮೆಚ್ಚುಗೆ ಕೊಟ್ಟ ನೃತ್ಯ ಸಂಯೋಜಕಿ

ನರೋತ್ತಮ್ ಮಿಶ್ರಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, "ಹಾಡಿನ ಮೊದಲ ನೋಟದಲ್ಲಿ ವೇಷಭೂಷಣಗಳು ಆಕ್ಷೇಪಾರ್ಹವಾಗಿವೆ. 'ತುಕ್ಡೆ ತುಕ್ಡೆ ಗ್ಯಾಂಗ್' ಅನ್ನು ಬೆಂಬಲಿಸುವ ನಟಿ ದೀಪಿಕಾ ಪಡುಕೋಣೆ ಪಠಾಣ್ ಚಿತ್ರದ ಹಾಡಿನಲ್ಲಿದ್ದಾರೆ. ಅವರ ವೇಷಭೂಷಣಗಳು ಇಡೀ ಹಾಡಿನಲ್ಲಿ ಆಕ್ಷೇಪಾರ್ಹವಾಗಿದ್ದು, ಕೊಳಕು ಮನಸ್ಥಿತಿಯಲ್ಲಿ ಹಾಡನ್ನು ಚಿತ್ರೀಕರಿಸಲಾಗಿದೆ.

ಹಾಡುಗಳ ದೃಶ್ಯಗಳು ಮತ್ತು ವೇಷಭೂಷಣಗಳನ್ನು ಸರಿಪಡಿಸಬೇಕು. ಇಲ್ಲದಿದ್ದರೆ, ಮಧ್ಯಪ್ರದೇಶದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಅನುಮತಿಸಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ನಾವು ಚರ್ಚೆ ನಡೆಸಬೇಕಾಗುತ್ತದೆ'' ಎಂದು ಟ್ವೀಟ್ ಮಾಡಿದ್ದಾರೆ.

Last Updated : Dec 14, 2022, 8:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.