ETV Bharat / entertainment

ಅರ್ಜೇಂಟಿನಾ ಗೆಲುವಿಗೆ ಚಲನಚಿತ್ರ ತಾರೆಯರ ಸಂಭ್ರಮ.. ಮೆಸ್ಸಿಗೆ ಮೆಚ್ಚುಗೆಯ ಮಹಾಪೂರ - ಈಟಿವಿ ಭಾರತ ಕರ್ನಾಟಕ

ಅರ್ಜೇಂಟಿನಾ ವಿಜಯವನ್ನು ಭಾರತ ಚಿತ್ರರಂಗದ ತಾರೆಯರು ಸಾಮಾಜಿಕ ಮಾಧ್ಯಮದಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ತಂಡವನ್ನು ಶ್ಲಾಘಿಸಿದ್ದಾರೆ.

Movie stars celebrate Argentina win
ಅರ್ಜೇಂಟಿನಾ ಗೆಲುವಿಗೆ ಚಲನಚಿತ್ರ ತಾರೆಯರ ಸಂಭ್ರಮ
author img

By

Published : Dec 19, 2022, 5:22 PM IST

ನವದೆಹಲಿ: ಫಿಫಾ ವಿಶ್ವಕಪ್ 2022 ರ ಫೈನಲ್‌ನಲ್ಲಿ ಅರ್ಜೇಂಟಿನಾ ಫ್ರಾನ್ಸ್ ವಿರುದ್ಧ ಅದ್ಭುತ ಗೆಲುವು ಸಾಧಿಸುತ್ತಿದ್ದಂತೆ ಚಲನಚಿತ್ರ ಸೆಲೆಬ್ರಿಟಿಗಳು ಖುಷಿಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಲಿಯೋನೆಲ್ ಮೆಸ್ಸಿ ಮತ್ತು ತಂಡದ ವಿಜಯವನ್ನು ಟಿನ್ಸೆಲ್ ಪಟ್ಟಣದಲ್ಲಿ ಹಲವಾರು ತಾರೆಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಸಂಭ್ರಮಿಸಿದ್ದಾರೆ.

  • We are living in the time of one of the best World Cup Finals ever. I remember watching WC with my mom on a small tv….now the same excitement with my kids!! And thank u #Messi for making us all believe in talent, hard work & dreams!!

    — Shah Rukh Khan (@iamsrk) December 18, 2022 " class="align-text-top noRightClick twitterSection" data=" ">

ಈ ಕುರಿತು ಟ್ವಿಟರ್‌ನಲ್ಲಿ ಶಾರುಖ್ ಖಾನ್ ತಮ್ಮ ಬಾಲ್ಯದ ಫುಟ್ಬಾಲ್ ವಿಶ್ವಕಪ್‌ನ ಅಚ್ಚುಮೆಚ್ಚಿನ ನೆನಪುಗಳನ್ನು ಸ್ಮರಿಸಿದ್ದಾರೆ ಮತ್ತು ಮೆಸ್ಸಿ ಅವರ ಪ್ರತಿಭೆ ಹಾಗೂ ಕಠಿಣ ಪರಿಶ್ರಮಕ್ಕಾಗಿ ಅವರನ್ನು ಪ್ರಶಂಸಿದರು. ಅವರ ಬೇಶರಂ ರಂಗ್​​ ಹಾಡಿನ ವಿವಾದದಿಂದ ವಿಚಲಿತರಾಗದ ಎಸ್‌ಆರ್‌ಕೆ, ಫಿಫಾ ವಿಶ್ವಕಪ್ ಪ್ರಸಾರದ ಸ್ಪೋರ್ಟ್ಸ್ 18 ರ ಸ್ಟುಡಿಯೋದಲ್ಲಿ ಇಂಗ್ಲಿಷ್ ಫುಟ್‌ಬಾಲ್ ದಂತಕಥೆ ವೇಯ್ನ್ ರೂನಿ ಅವರೊಂದಿಗೆ ನೃತ್ಯ ಮಾಡಿ ಸಂಭ್ರಮಿಸಿದರು.

  • A glorious final...two worthy opponents, played their hearts out and gave the millions of football fans a nerve-wracking match. Congratulations #Argentina on a hard won victory. 36 years of toil and the cup is once again yours. #FIFAWorldCup pic.twitter.com/VsEVMU8tri

    — Mohanlal (@Mohanlal) December 18, 2022 " class="align-text-top noRightClick twitterSection" data=" ">

ಕ್ರಿಕೆಟ್ ಅಭಿಮಾನಿಗಳು ಹಾಗೂ ಕೇರಳದ ಇಬ್ಬರು ಸೂಪರ್ ಸ್ಟಾರ್​ಗಳಾದ ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ಸ್ಟೇಡಿಯಂನಲ್ಲಿ ಉಪಸ್ಥಿತರಿದ್ದು, ಪಂದ್ಯವನ್ನು ಆನಂದಿಸಿದರು. ಕೊನೆಯ ಕ್ಷಣದವರೆಗೂ ರೋಚಕವಾಗಿ ನಡೆದ ಪಂದ್ಯದಲ್ಲಿ ಗೆಲುವಿನ ನಂತರ ಇಬ್ಬರೂ ಅರ್ಜೇಂಟಿನಾವನ್ನು ಅಭಿನಂದಿಸಿದರು.

ಮಮ್ಮುಟ್ಟಿ ಪುತ್ರ ಹಾಗೂ ಪ್ಯಾನ್​ ಇಂಡಿಯಾ ಸ್ಟಾರ್ ದುಲ್ಕರ್ ಸಲ್ಮಾನ್ ಕೂಡ ಈ ಪಂದ್ಯವನ್ನು ಆನಂದಿಸಿದರು. ಅವರು ಮೆಸ್ಸಿ ಮತ್ತು ಎಂಬಪ್ಪೆ ಅವರ ಫೋಟೋವನ್ನು ಪೋಸ್ಟ್ ಮಾಡಿ ಇಂದು ರಾತ್ರಿ ಖುಷಿಯಾಗಿದೆ! ಅರ್ಜೇಂಟಿನಾ ವಿರುದ್ಧ ಫ್ರಾನ್ಸ್. ಮೆಸ್ಸಿ ವಿರುದ್ಧ ಎಂಬಪ್ಪೆ. ಅತ್ಯುತ್ತಮ ತಂಡ ಗೆದ್ದಿದೆ ಎಂದು ಟ್ವೀಟ್​ನಲ್ಲಿ ಬರೆದಿದ್ದಾರೆ.

ನಟಿ ಪ್ರೀತಿ ಜಿಂಟಾ ಕೂಡ ಮನೆಯಿಂದಲೇ ಪಂದ್ಯ ವೀಕ್ಷಿಸುತ್ತಿದ್ದರು. ಅವರು ಪಂದ್ಯದ ಕೊನೆಯಲ್ಲಿ ಟ್ವೀಟ್ ಮಾಡಿ "OMG! ಎಂತಹ ಆಟ! ಅದ್ಭುತ ಫೈನಲ್. ಮೆಸ್ಸಿ ನಿಮ್ಮಿಂದ ನಾನು ಇದನ್ನು ನಿರೀಕ್ಷಿಸಿದ್ದೆ. ಅರ್ಜೇಂಟಿನಾ ಚೆನ್ನಾಗಿ ಆಡಿದೆ. ಶುಭವಾಗಲಿ ಎಂದು ಬರೆದಿದ್ದಾರೆ.

ತಮಿಳು ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಯನತಾರಾ ಮೆಸ್ಸಿಯ ಮೇಲೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಎಂತಹ ಫೈನಲ್ ಡಿಯಾಗೋ ಮರಡೋನಾ ನಂತರ ಈಗ ಲಿಯೋನೆಲ್ ಮೆಸ್ಸಿ ಎಂದು ಅವರು ಟ್ವೀಟ್ ಮಾಡಿದ್ದಾರೆ. ಅವರ ಪತಿ, ನಿರ್ಮಾಪಕ ನಿರ್ದೇಶಕ ವಿಘ್ನೇಶ್ ಶಿವನ್ ಅವರು ಉತ್ಸಾಹಭರಿತರಾಗಿದ್ದು, ಟ್ವಿಟ್ಟರ್ ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಸರ್ಗಮ್ ಕೌಶಲ್​ಗೆ​ ಒಲಿದ ಮಿಸೆಸ್​ ವರ್ಲ್ಡ್ ಪಟ್ಟ: 21 ವರ್ಷದ ಬಳಿಕ ಭಾರತಕ್ಕೆ ಕಿರೀಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.