ETV Bharat / entertainment

'ನಾಗಿನ್​' ಖ್ಯಾತಿಯ ಮೌನಿ ರಾಯ್​, ಮಾಲಿವುಡ್​ ಸ್ಟಾರ್​ ದುಲ್ಕರ್​ ಸಲ್ಮಾನ್​ ಅಭಿಮಾನಿ - etv bharat kannada

Mouni Roy fan of Dulquer Salmaan: ನಟಿ ಮೌನಿ ರಾಯ್​, ದುಲ್ಕರ್​ ಸಲ್ಮಾನ್ ಜೊತೆಗಿನ ಫೋಟೋವನ್ನು ಇನ್​ಸ್ಟಾ ಸ್ಟೋರಿ ಹಾಕಿಕೊಂಡಿದ್ದು, ಅವರ ಅಭಿಮಾನಿ ಎಂದಿದ್ದಾರೆ.

Mouni Roy shares and DELETES 'fangirl' post dedicated to Dulquer Salmaan
ಮೌನಿ ರಾಯ್​ ಇನ್​ಸ್ಟಾ ಸ್ಟೋರಿ
author img

By ETV Bharat Karnataka Team

Published : Nov 4, 2023, 5:16 PM IST

ಹಿಂದಿ ಕಿರುತೆರೆ ನಟಿ ಮೌನಿ ರಾಯ್​ ತಮ್ಮ ಅದ್ಭುತ ಲುಕ್​ನಿಂದಲೇ ಸದಾ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ನಟನೆ, ಫ್ಯಾಷನ್​ನಿಂದಲೇ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. 'ನಾಗಿನ್​' ಧಾರಾವಾಹಿಯಿಂದ ಖ್ಯಾತಿ ಗಳಿಸಿರುವ ತಾರೆ ಮಲಯಾಳಂ ನಟ ದುಲ್ಕರ್​ ಸಲ್ಮಾನ್​ ಅವರ ದೊಡ್ಡ ಅಭಿಮಾನಿ. ಇನ್​ಸ್ಟಾಗ್ರಾಮ್​ನಲ್ಲಿ ನಟನೊಂದಿಗಿರುವ ಫೋಟೋ ಹಂಚಿಕೊಂಡಿರುವ ಮೌನಿ, ಫ್ಯಾನ್​ ಗರ್ಲ್ ಎಂದು ಬರೆದುಕೊಂಡಿದ್ದಾರೆ.

ಚಿಕ್ಕ ಪರದೆಯಿಂದ ಬೆಳ್ಳಿ ಪರದೆಯಲ್ಲಿ ಕಾಣಿಸಿಕೊಂಡ ತಾರೆ, ಬ್ರಹ್ಮಾಸ್ತ್ರದಲ್ಲಿ ಜುನೂನ್​ ಪಾತ್ರದ ಮೂಲಕ ಖ್ಯಾತಿ ಗಳಿಸಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಆಕ್ಟೀವ್​ ಆಗಿರುವ ನಟಿ ದುಲ್ಮರ್​ ಸಲ್ಮಾನ್​ ಬಗ್ಗೆ ತಮ್ಮ ಮೆಚ್ಚುಗೆ ಹಂಚಿಕೊಳ್ಳಲು ಇನ್​ಸ್ಟಾಗ್ರಾಮ್​ ಸ್ಟೋರಿಯನ್ನು ವೇದಿಕೆಯನ್ನಾಗಿ ಬಳಸಿಕೊಂಡರು. ಆದರೆ, ಡಿಕ್ಯೂ ಜೊತೆಗಿನ ಫೋಟೋವನ್ನು ಕೂಡಲೇ ತೆಗೆದುಹಾಕಿದರು. ಇದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

"ಲವ್​ ಲವ್​ ಲವ್​ ಹಿಸ್​ ವರ್ಕ್​! ದುಲ್ಕರ್​ ಸಲ್ಮಾನ್​ ಪ್ರೀತಿ, ಬೆಳಕು ಮತ್ತು ಪ್ರಕಾಶಮಾನಗಳು. #ಫ್ಯಾನ್​ ಗರ್ಲ್" ಎಂದು ಬರೆದು ದುಲ್ಕರ್​ ಸಲ್ಮಾನ್​ ಜೊತೆಗಿನ ಸೆಲ್ಫಿಯನ್ನು ಇನ್​ಸ್ಟಾ ಸ್ಟೋರಿ ಹಾಕಿಕೊಂಡಿದ್ದರು. ಕೂಡಲೇ ಅದನ್ನು ಡಿಲೀಟ್ ಮಾಡಿದ್ದಾರೆ. ಮೌನಿ ರಾಯ್​ ಸಿನಿಮಾ, ನಟರ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ವಿಚಾರದಲ್ಲಿ ಎಂದಿಗೂ ಪ್ರಾಮಾಣಿಕರಾಗಿರುತ್ತಾರೆ. ಆದರೆ, ದುಲ್ಕರ್​ ಸಲ್ಮಾನ್​ ಬಗೆಗಿನ ಪೋಸ್ಟ್​ ಅನ್ನು ಯಾಕೆ ಡಿಲೀಟ್​ ಮಾಡಿದ್ದಾರೆ ಅನ್ನೋದು ಅವರ ಅಭಿಮಾನಿಗಳಿಗೆ ಗೊಂದಲ ಮೂಡಿಸಿದೆ.

ಇದನ್ನೂ ಓದಿ: ಕನ್ನಡಿ ಮುಂದೆ ಮೈ ಬಳುಕಿಸಿದ ನಾಗಕನ್ಯೆ.. ಸೌಂದರ್ಯ ಕಂಡು 'ಮೌನಿ'ಯಾದ್ರು ಫ್ಯಾನ್ಸ್!

ಬಹುಬೇಡಿಕೆಯ ತಾರೆ.. 2006 ರಲ್ಲಿ 'ಕ್ಯೂಂಕಿ ಸಾಸ್​ ಬಿ ಕಬಿ ಬಹು ತಿ' ಎಂಬ ಟಿವಿ ಧಾರಾವಾಹಿ ಮೂಲಕ ನಟಿ ಮೌನಿ ರಾಯ್​ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು. 2011 ರಲ್ಲಿ ಪಂಜಾಬಿ ಸಿನಿಮಾ 'ಹೀರೋ ಹಿಟ್ಲರ್​​ ಇನ್​ ಲವ್'ನಲ್ಲಿ ಮೊದಲ ಬಾರಿಗೆ ನಟಿಸಿದರು. ಇತ್ತೀಚೆಗೆ 'ದೊತರಾ' ಎಂಬ ಮ್ಯೂಸಿಕ್​ ಆಲ್ಭಂನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಆ ಆಲ್ಭಂ ಸಾಂಗ್​ಗೆ ಜುಬಿನ್​ ನೌಟಿಯಾಲ್​ ಮತ್ತು ಪಯಲ್​ ದೇವಿ ಧ್ವನಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿರುವ ಈ ವಿಡಿಯೋ ಯುಟ್ಯೂಬ್​ನಲ್ಲಿ 24 ಮಿಲಿಯನ್ ಹೆಚ್ಚು​ ವಿವ್ಯೂ ಗಳನ್ನು ಪಡೆದುಕೊಂಡಿದೆ.

ಮೌನಿ ರಾಯ್ ಕೊನೆಯದಾಗಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಅಬ್ಬಸ್​ ಆಲಿಬಾಯಿ ಬುರ್ಮಾವಾಲಾ ಮಸ್ತನ್​ ಮತ್ತು ಆಲಿಬಾಯ್​ ಬುರ್ಮಾವಾಲಾ ಅವರ ಕ್ರೈಂ, ಸಸ್ಪೆನ್ಸ್​, ಥ್ರಿಲ್ಲರ್​ ಚಿತ್ರ 'ಪೆಂಟಾಹೌಸ್'​ ನಲ್ಲೂ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಬಾಬಿ ಡಿಯೋಲ್​ ಮತ್ತು ಅರ್ಜುನ್​ ರಾಂಪಾಲ್​ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಇದರ ಜೊತೆಗೆ ನಟಿ, ಸಂಜಯ್​ ದತ್​ ಅವರ 'ದಿ ವರ್ಜಿನ್​ ಟ್ರೀ ಇನ್​ ಆರ್​​ ಕಿಟ್ಟಿ'ಯಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ. 'ಕೆಜಿಎಫ್'​ ಚಿತ್ರದ ಹಿಂದಿ ವರ್ಷನ್​ನಲ್ಲಿ ನಟಿ ಪ್ರಮುಖ ಹಾಡಿಗೆ ಹೆಜ್ಜೆ ಹಾಕಿದ್ದರು.

ಇದನ್ನೂ ಓದಿ: ಮಾರ್ಡನ್​ or ಟ್ರೆಡಿಶನಲ್​​.. ಎರಡಕ್ಕೂ ಸೈ ಈ ನಾಗಿನ್​ ನಟಿ; ಮನಸೆಳೆಯುವ ಮೌನಿ ಮೋಹಕ ನೋಟ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.