2022ಕ್ಕೆ ವಿದಾಯ ಹೇಳಲು, 2023 ಅನ್ನು ಬರಮಾಡಿಕೊಳ್ಳಲು ಸಕಲ ಸಿದ್ಧತೆ ನಡೆಯುತ್ತಿದೆ. ಪ್ರತಿ ವರ್ಷವೂ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಸಹಜವಾಗಿ ಜನರಿಗೆ ಕುತೂಹಲ ಇರುತ್ತದೆ. ಅದೇ ರೀತಿ ಗೂಗಲ್ ಸರ್ಚ್ ಇಂಜಿನ್‍ನಲ್ಲಿ ಈ ವರ್ಷ ಯಾವ ಸಿನಿಮಾಗಳ ಬಗ್ಗೆ ಅತಿ ಹೆಚ್ಚು ಹುಡುಕಲಾಗಿದೆ ಎಂಬ ಮಾಹಿತಿಯನ್ನು ನಾವು ನಿಮಗೆ ಕೊಡಲಿದ್ದೇವೆ.
2022ರ ಗೂಗಲ್‌ನಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ಚಲನಚಿತ್ರಗಳ ಪಟ್ಟಿಯಲ್ಲಿ ಬ್ರಹ್ಮಾಸ್ತ್ರ ಅಗ್ರಸ್ಥಾನದಲ್ಲಿದೆ. ಬಾಲಿವುಡ್ನ ಪವರ್ಫುಲ್ ಕಪಲ್ ಆಲಿಯಾ ಭಟ್ ಮತ್ತು ರಣ್ಬೀರ್ ಕಪೂರ್ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಬಾಯ್ಕಾಟ್ ಬಿಸಿ ನಡುವೆಯೂ ಸೂಪರ್ ಹಿಟ್ ಆಗಿ ಸುಮಾರು 400 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು.
ಇನ್ನು ನಮ್ಮ ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ - 2 ಸ್ಯಾಂಡಲ್ವುಡ್ನ ಸೂಪರ್ಹಿಟ್ ಸಿನಿಮಾ. ಈ ಸಿನಿಮಾದಿಂದಲೇ ರಾಕಿಂಗ್ ಸ್ಟಾರ್ ಖ್ಯಾತಿ ಮತ್ತಷ್ಟು ಹೆಚ್ಚಿದೆ. ಈ ಸಿನಿಮಾ ಸರಿಸುಮಾರು 1,200 ಕೋಟಿ ಕಲೆಕ್ಷನ್ ಮಾಡಿ ಭಾರತೀಯ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿತು. ಈ ಸಿನಿಮಾ ಎರಡನೇ ಸ್ಥಾನದಲ್ಲಿದೆ.
ಇನ್ನೂ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್ವುಡ್ನತ್ತ ನೋಡುವಂತೆ ಮಾಡಿದ ಸೂಪರ್ ಹಿಟ್ ಸಿನಿಮಾ ಕಾಂತಾರ. 15 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಬಿಡುಗಡೆ ಆಗಿ ಸುಮಾರು 70 ದಿನಗಳಾದರೂ ಚಿತ್ರಮಂದಿರಗಳಲ್ಲಿ ಈಗಲೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಅಲ್ಲದೇ ಒಟಿಟಿಗೂ ಎಂಟ್ರಿಯಾಗಿದೆ. ಈ ಸಿನಿಮಾ ಗೂಗಲ್‌ನಲ್ಲಿ ಅತಿಹೆಚ್ಚು ಹುಡುಕಿದ ಚಿತ್ರಗಳ ಪಟ್ಟಿಯಲ್ಲಿ ಐದನೇ ಸ್ಥಾನ ಗಿಟ್ಟಿಸಿಕೊಂಡಿದೆ.
ಉಳಿದಂತೆ ಕಾಶ್ಮೀರ್ ಫೈಲ್ಸ್ ಮೂರನೇ ಸ್ಥಾನ, ನಾಲ್ಕನೇ ಸ್ಥಾನದಲ್ಲಿ ಸೌತ್ ಸೂಪರ್ ಹಿಟ್ ಸಿನಿಮಾ ಆರ್ಆರ್ಆರ್ RRR, ಆರನೇ ಸ್ಥಾನದಲ್ಲಿ ಪುಷ್ಪ: ದಿ ರೈಸ್, ಏಳನೇ ಸ್ಥಾನದಲ್ಲಿ ವಿಕ್ರಮ್, ಎಂಟನೇ ಸ್ಥಾನದಲ್ಲಿ ಲಾಲ್ ಸಿಂಗ್ ಚಡ್ಡಾ, ಒಂಭತ್ತನೇ ಸ್ಥಾನದಲ್ಲಿ ದೃಶ್ಯಂ - 2, ಹತ್ತನೇ ಸ್ಥಾನದಲ್ಲಿ ಥಾರ್: ಲವ್ ಅಂಡ್ ಥಂಡರ್ ಸಿನಿಮಾವಿದೆ.
ಗೂಗಲ್‌ನಲ್ಲಿ ಅತಿಹೆಚ್ಚು ಹುಡುಕಿದ ಸಿನಿಮಾಗಳ ಪಟ್ಟಿ:
- ಬ್ರಹ್ಮಾಸ್ತ್ರ: ಭಾಗ 1 - ಶಿವ
- ಕೆಜಿಎಫ್ - 2
- ಕಾಶ್ಮೀರ್ ಫೈಲ್ಸ್
- ಆರ್ಆರ್ಆರ್
- ಕಾಂತಾರ
- ಪುಷ್ಪ: ದಿ ರೈಸ್
- ವಿಕ್ರಮ್
- ಲಾಲ್ ಸಿಂಗ್ ಚಡ್ಡಾ
- ದೃಶ್ಯಂ - 2
- ಥಾರ್: ಲವ್ ಅಂಡ್ ಥಂಡರ್.
ಇದನ್ನೂ ಓದಿ: ಈ ವರ್ಷದ ಜನಪ್ರಿಯ ಸಿನಿಮಾ ತಾರೆಯರು ಯಾರು ಗೊತ್ತೇ?: ಅಗ್ರ ಸ್ಥಾನದಲ್ಲಿ ನಮ್ಮ ನಟರು!