ETV Bharat / entertainment

'ಮೆಲ್ಲುಸಿರೆ ಸವಿಗಾನ'ಕ್ಕೆ ಹೆಜ್ಜೆ ಹಾಕಲು ಅಪ್ಪಾಜಿ, ಲೀಲಾವತಿ ಅಮ್ಮ ಕಾರಣ: ರೀಷ್ಮಾ ನಾಣಯ್ಯ

ನವೆಂಬರ್ 25ಕ್ಕೆ ತೆರೆ ಕಾಣಲು ಸಜ್ಜಾಗಿರುವ ಸ್ಪೂಕಿ ಕಾಲೇಜ್ ಸಿನಿಮಾದ 'ಮೆಲ್ಲುಸಿರೆ ಸವಿಗಾನ' ಹಾಡು ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆದಿದ್ದು, ಸಾಂಗ್​ ಉತ್ತಮ ರೆಸ್ಪಾನ್ಸ್​​ ಗಳಿಸಿಕೊಂಡಿದೆ.

mellusire savigana song release program
ಮೆಲ್ಲುಸಿರೆ ಸವಿಗಾನ ಹಾಡು ಬಿಡುಗಡೆ ಕಾರ್ಯಕ್ರಮ
author img

By

Published : Nov 16, 2022, 1:01 PM IST

ಮೆಲ್ಲುಸಿರೆ ಸವಿಗಾನ ಹಾಡಿಗೆ ಹೆಜ್ಜೆ ಹಾಕಿದ್ದೇನೆ. ಈ ಹಾಡಿನಲ್ಲಿ ಕಾಣಿಸಿಕೊಳ್ಳಲು ಕಾರಣ ರಾಜ್​ಕುಮಾರ್ ಅಪ್ಪಾಜಿ ಹಾಗು ಲೀಲಾವತಿ ಅಮ್ಮ. ಅವರ ಅದ್ಭುತ ಹಾಡಿಗೆ ನೃತ್ಯ ಮಾಡಿರೋ ಖುಷಿ ನನಗಿದೆ ಎಂದು ನಟಿ ರೀಷ್ಮಾ ನಾಣಯ್ಯ ತಿಳಿಸಿದರು.

ಡಾ. ರಾಜ್​ಕುಮಾರ್ ಹಾಗೂ ಲೀಲಾವತಿ ಅಭಿನಯಿಸಿದ್ದ ವೀರಕೇಸರಿ ಚಿತ್ರದ ಮೆಲ್ಲುಸಿರೆ ಸವಿಗಾನ ಹಾಡನ್ನು ಸ್ಪೂಕಿ ಕಾಲೇಜ್ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಏಕ್ ಲವ್ ಯಾ ಖ್ಯಾತಿಯ ರೀಷ್ಮಾ ನಾಣಯ್ಯ ಈ ಸುಮಧುರ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇತ್ತೀಚೆಗೆ ಈ ಹಾಡಿನ ಬಿಡುಗಡೆ ಸಮಾರಂಭ ಅ ನೆರವೇರಿತು. ಹಿರಿಯ ನಿರ್ದೇಶಕ ಭಗವಾನ್, ಸಾಹಿತಿ ದೊಡ್ಡರಂಗೇಗೌಡ ಈ ಹಾಡನ್ನು ಬಿಡುಗಡೆ ಮಾಡಿದರು. ವೇದಿಕೆಯಲ್ಲಿ ನಟಿ ರೀಷ್ಮಾ ನಾಣಯ್ಯ ಹಾಡಿನಲ್ಲಿ ಹೆಜ್ಜೆ ಹಾಕಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.

ಆ ಕಾಲದಲ್ಲಿ ಸಿನಿಮಾ ಮಾಡುವುದು ಅಷ್ಟು ಸುಲಭ ಇರಲಿಲ್ಲ. ಈಗ ಹಾಗಲ್ಲ, ತಂತ್ರಜ್ಞಾನ ಮುಂದುವರಿದಿದೆ. ಮೆಲ್ಲುಸಿರೆ ಸವಿಗಾನ ಹಾಡಿಗೆ ಯಾವುದೇ ಲೋಪವಾಗದಂತೆ ಅಚ್ಚುಕಟ್ಟಾಗಿ ಈ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ರೀಷ್ಮಾ ನಾಣಯ್ಯ ನೃತ್ಯ, ಭೂಷಣ್ ನೃತ್ಯ ನಿರ್ದೇಶನ‌ ಎಲ್ಲವೂ ಚೆನ್ನಾಗಿದೆ. ನಿರ್ದೇಶಕ ಭರತ್ ನನ್ನ ಶಿಷ್ಯ. ಉತ್ತಮ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಒಳ್ಳೆಯ ನಾಯಕಿ ಸಿಕ್ಕಿದ್ದಾರೆ ಎಂದರು ಹಿರಿಯ ನಿರ್ದೇಶಕ ಭಗವಾನ್.

ಮೆಲ್ಲುಸಿರೆ ಸವಿಗಾನ ಹಾಡು ಬಿಡುಗಡೆ ಕಾರ್ಯಕ್ರಮ

ಅಂದಿನ ಈ ಹಾಡನ್ನು ಈಗಿನ ರೀತಿಗೆ ಚಿತ್ರೀಕರಿಸುವುದು ಕಷ್ಟಸಾಧ್ಯ. ಅದರೆ ಅದನ್ನು ನಿರ್ದೇಶಕ ಭರತ್ ಸಾಧ್ಯವಾಗಿಸಿದ್ದಾರೆ ಎಂದು ಸಾಹಿತಿ ದೊಡ್ಡರಂಗೇಗೌಡ ತಿಳಿಸಿದರು.

ಇದನ್ನೂ ಓದಿ: ನ.25ಕ್ಕೆ ತೆರೆ ಕಾಣಲಿರುವ ಸ್ಪೂಕಿ ಕಾಲೇಜ್ ಪ್ರಚಾರ ಅಬ್ಬರ

ಈ ಹಾಡನ್ನು ದಾಂಡೇಲಿಯಲ್ಲಿ ಸುಮಾರು 250ಕ್ಕೂ ಅಧಿಕ ತಂತ್ರಜ್ಞರ ಪಾಲ್ಗೊಳ್ಳುವಿಕೆಯಲ್ಲಿ ಚಿತ್ರಿಸಿಕೊಳ್ಳಲಾಯಿತು. ಭೂಷಣ್ ನೃತ್ಯ ನಿರ್ದೇಶನದಲ್ಲಿ ರೀಷ್ಮಾ ನಾಣಯ್ಯ ಅತ್ಯುತ್ತಮವಾಗಿ ಹೆಜ್ಜೆ ಹಾಕಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಐಶ್ವರ್ಯ ರಂಗರಾಜನ್ ಗಾಯನ ಹಾಗೂ ಮನೋಹರ್ ಜೋಷಿ ಅವರ ಛಾಯಾಗ್ರಹಣ ಈ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ವಿಶ್ವಾಸ್ ಕಲಾ ನಿರ್ದೇಶನ ಕೂಡ ಕಣ್ಮನ ಸೆಳೆಯುತ್ತಿದೆ. ಹಾಡು ಹಾಗೂ ಚಿತ್ರ ಅದ್ಧೂರಿಯಾಗಿ ಮೂಡಿಬರಲು ನಿರ್ಮಾಪಕ ಹೆಚ್ ಕೆ ಪ್ರಕಾಶ್ ಅವರ ಸಹಕಾರ ಹಾಗೂ ನನ್ನ ಚಿತ್ರತಂಡದ ಶ್ರಮ ಕಾರಣ ಎಂದು ನಿರ್ದೇಶಕ ಭರತ್ ಜಿ ತಿಳಿಸಿದರು.

ಇದನ್ನೂ ಓದಿ: ಹೊಸತನದಲ್ಲಿ ಹಳೇ ಹಾಡು.. 'ಮೆಲ್ಲುಸಿರೆ ಸವಿಗಾನ'ಕ್ಕೆ ಸೊಂಟ ಬಳುಕಿಸಿದ ರೀಷ್ಮಾ ನಾಣಯ್ಯ

ಹಾರರ್ ಸ್ಪೂಕಿ ಕಾಲೇಜ್ ಸಿನಿಮಾದಲ್ಲಿ ವಿವೇಕ್ ಸಿಂಹ ಹಾಗು ಖುಷಿ ರವಿ‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ‌. ಹೀಗೆ ಹಲವು ಸ್ಪೆಷಾಲಿಟಿ ಇರುವ ಸ್ಪೂಕಿ ಕಾಲೇಜು ಚಿತ್ರ ನವೆಂಬರ್ 25ಕ್ಕೆ ಪ್ರೇಕ್ಷಕರಿಗೆ ದರ್ಶನ ಕೊಡಲಿದೆ. ಸಿನಿಮಾ ಬಿಡುಗಡೆಗೆ ಸಕಲ ತಯಾರಿ ನಡೆದಿದೆ. ಚಿತ್ರತಂಡದಿಂದ ಸ್ಪೂಕಿ ಕಾಲೇಜ್ ಪ್ರಚಾರ ಕಾರ್ಯ ಕೂಡ ಜೋರಾಗಿದ್ದು, ಸಿನಿಪ್ರಿಯರ ನಿರೀಕ್ಷೆ ದುಪ್ಪಟ್ಟಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.