ETV Bharat / entertainment

ಹೊಸತನದಲ್ಲಿ ಹಳೇ ಹಾಡು.. 'ಮೆಲ್ಲುಸಿರೆ ಸವಿಗಾನ'ಕ್ಕೆ ಸೊಂಟ ಬಳುಕಿಸಿದ ರೀಷ್ಮಾ ನಾಣಯ್ಯ - ಸ್ಪೂಕಿ ಕಾಲೇಜು ಸಿನಿಮಾದಲ್ಲಿ ರೀಷ್ಮಾ ನಾಣಯ್ಯ

ನವೆಂಬರ್ 25ರಂದು ಬಿಡುಗಡೆಗೆ ಸಜ್ಜಾಗಿರುವ 'ಸ್ಪೂಕಿ ಕಾಲೇಜು' ಸಿನಿಮಾದ 'ಮೆಲ್ಲುಸಿರೆ ಸವಿಗಾನ' ಹಾಡು ಬಿಡುಗಡೆ ಆಗಿದೆ.

Mellusire savigana of Spooky college
ಮೆಲ್ಲುಸಿರೆ ಸವಿಗಾನ ಬಿಡುಗಡೆ
author img

By

Published : Nov 15, 2022, 12:19 PM IST

Updated : Nov 15, 2022, 3:06 PM IST

ಸ್ಯಾಂಡಲ್​​ನಲ್ಲಿ ಸ್ಟಾರ್ ನಟರ ಸಿನಿಮಾ ಹಾಡುಗಳು ಮರು ಬಳಕೆ ಆಗೋದು ಹೊಸತೇನಲ್ಲ. ಹೊಸತನದಲ್ಲಿ ಹಳೇ ಹಾಡುಗಳು ಸಿನಿಪ್ರಿಯರ ಮನ ಗೆಲ್ಲುತ್ತಿವೆ. ಇದೀಗ ವರನಟ ಡಾ. ರಾಜ್​​ಕುಮಾರ್ ಹಾಗು ಲೀಲಾವತಿ ಅವರ ಅಭಿನಯದ ವೀರಕೇಸರಿ ಚಿತ್ರದ ಪ್ರಖ್ಯಾತ ಹಾಡು ಮೆಲ್ಲುಸಿರೆ ಸವಿಗಾನ ಹಾಡು ಮರು ಬಳಕೆ ಆಗಿದೆ.

ಹೌದು, ರಾಜ್​​ಕುಮಾರ್​ ಕಾಲದ ಸೂಪರ್ ಹಿಟ್ ಗೀತೆಗೆ ಮನಸೋಲದವರಿಲ್ಲ. ಈ ಹಾಡನ್ನು ಇದೀಗ ಪ್ರೀಮಿಯರ್ ಪದ್ಮಿನಿ ಸಿನಿಮಾ ಖ್ಯಾತಿಯ ವಿವೇಕ್ ಸಿಂಹ ಹಾಗು ದಿಯಾ ಚಿತ್ರದ ದಿಯಾ ಖುಷಿ ಅಭಿನಯಿಸಿರೋ 'ಸ್ಪೂಕಿ ಕಾಲೇಜು' ಸಿನಿಮಾದಲ್ಲಿ ಮತ್ತೆ ಬಳಸಲಾಗಿದೆ.

  • " class="align-text-top noRightClick twitterSection" data="">

ದಾಂಡೇಲಿ ದಟ್ಟ ಕಾಡಿನಲ್ಲಿ 250ಕ್ಕೂ ಅಧಿಕ ತಂತ್ರಜ್ಞರ ಸಹಾಯದಿಂದ‌ ಅದ್ಭುತ ಸೆಟ್​ನಲ್ಲಿ ಈ ಮೆಲ್ಲುಸಿರೆ ಸವಿಗಾನ ಹಾಡನ್ನು ಚಿತ್ರೀಕರಣ ಮಾಡಲಾಗಿದೆ. ಕ್ಯಾಮರಾ ಮ್ಯಾನ್‌ ಮನೋಹರ್ ಜೋಷಿ ಈ ಸ್ಪೆಷಲ್ ಸಾಂಗ್​ ಸೀನ್​ಗಳನ್ನು ಸೆರೆ ಹಿಡಿದಿದ್ದಾರೆ. ನೃತ್ಯ ನಿರ್ದೇಶಕ ಭೂಷಣ್ ಈ ಹಾಡನ್ನು ಕೋರಿಯೋಗ್ರಾಫಿ ಮಾಡಿದ್ದಾರೆ. ಏಕ್ ಲವ್ ಯಾ ಸಿನಿಮಾ ಸುಂದರಿ ರೀಷ್ಮಾ ನಾಣಯ್ಯ ಈ ಹಾಡಿನಲ್ಲಿ ನಾಲ್ಕೈದು ಕಾಸ್ಟೂಮ್​ನಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸುವಂತೆ ಸೊಂಟ ಬಳಕಿಸಿದ್ದಾರೆ. ನಾಲ್ಕೈದು ದಿನ ಈ ಹಾಡಿಗೆ ಅಭ್ಯಾಸ ಮಾಡಿದ ಬಳಿಕ ರೀಷ್ಮಾ ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

Mellusire savigana of Spooky college
'ಮೆಲ್ಲುಸಿರೆ ಸವಿಗಾನ'ಕ್ಕೆ ಸೊಂಟ ಬಳುಕಿಸಿದ ರೀಷ್ಮಾ ನಾಣಯ್ಯ

ಟೀಸರ್ ಮೂಲಕ ಈಗಾಗಲೇ ಜನಮನ ಗೆದ್ದಿರುವ ಸ್ಪೂಕಿ ಕಾಲೇಜ್ ಚಿತ್ರ ಹಾರರ್ ಹಾಗು ಥ್ರಿಲ್ಲಿಂಗ್ ಕಂಟೆಂಟ್​ಗೆ ಚಂದನವನದಲ್ಲಿ ಟಾಕ್ ಆಗುತ್ತಿರುವ ಚಿತ್ರ. ಹೊಸತನದ ಕಥೆ ಆಧರಿಸಿರೋ ಈ ಸಿನಿಮಾವನ್ನು ಕಥೆ, ಚಿತ್ರಕಥೆ ಹಾಗು ಸಂಭಾಷಣೆಯನ್ನು ಬರೆದು ನಿರ್ದೇಶಕ ಭರತ್ ಜಿ ನಿರ್ದೇಶನ ಮಾಡಿದ್ದಾರೆ. ಚಿತ್ರದ ಮತ್ತೊಂದು ವಿಶೇಷ ಅಂದ್ರೆ ಧಾರವಾಡದ ಶತಕಕ್ಕೂ ಮೀರಿದ ಇತಿಹಾಸವಿರುವ ಪುರಾತನ ಕಾಲೇಜಿನಲ್ಲಿ ಬಹುತೇಕ ಚಿತ್ರೀಕರಣ ಮಾಡಿರೋದು.

ಇದನ್ನೂ ಓದಿ: ನ.25ಕ್ಕೆ ತೆರೆ ಕಾಣಲಿರುವ ಸ್ಪೂಕಿ ಕಾಲೇಜ್ ಪ್ರಚಾರ ಅಬ್ಬರ

ಕ್ಲೈಮ್ಯಾಕ್ಸ್ ಭಾಗವನ್ನು ದಾಂಡೇಲಿ ಅಭಯಾರಣ್ಯದಲ್ಲಿ ಅಪಾರ ವೆಚ್ಚದಲ್ಲಿ ಚಿತ್ರೀಕರಣ ಮಾಡಲಾಗಿದೆ. ಇನ್ನು, ಈ ಚಿತ್ರದಲ್ಲಿ ವಿವೇಕ್ ಸಿಂಹ ಹಾಗು ಖುಷಿ ರವಿ ಅಲ್ಲದೇ ಅಜಯ್ ಪೃಥ್ವಿ, ಹನುಮಂತೇಗೌಡ, ಕೆ.ಎಸ್. ಶ್ರೀಧರ್, ವಿಜಯ್ ಚೆಂಡೂರ್, ಶರಣ್ಯ ಶೆಟ್ಟಿ, ರಘು ರಮಣಕೊಪ್ಪ ಹಾಗೂ ಕಾಮಿಡಿ ಕಿಲಾಡಿಗಳು ಶೋನ‌ ಜನಪ್ರಿಯ ಕಲಾವಿದರು ಅಭಿನಯಿಸಿದ್ದಾರೆ.

ಇದನ್ನೂ ಓದಿ: 'ಸ್ಪೂಕಿ ಕಾಲೇಜ್​​​'ನಲ್ಲಿ ಮೆಲ್ಲುಸಿರೆ ಸವಿಗಾನ ಅಂತಿದ್ದಾರೆ ರೀಷ್ಮಾ ನಾಣಯ್ಯ

ಹೊಸ ನಿರ್ದೇಶಕರು ಮತ್ತು ಯುವ ನಟರಿಗೆ ಅವಕಾಶ ಕೊಡುವ ನಿರ್ಮಾಣ ಸಂಸ್ಥೆ ಅಂತಾ ಕರೆಯಿಸಿಕೊಂಡಿರುವ ರಂಗಿತರಂಗ, ಅವನೇ ಶ್ರೀಮನ್ನಾರಾಯಣ ಚಿತ್ರಗಳ ನಿರ್ಮಾಪಕ ಹೆಚ್.ಕೆ. ಪ್ರಕಾಶ್ ಸ್ಪೂಕಿ ಕಾಲೇಜ್​ ಅನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಮನೋಹರ್ ಜೋಶಿ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಹಾಗೂ ಶ್ರೀಕಾಂತ್ ಕೆ ಜಿ ಎಫ್ ಅವರ ಸಂಕಲನವಿದೆ. ಸದ್ಯ ಮೆಲ್ಲುಸಿರೆ ಸವಿಗಾನ ಹಾಡಿನಿಂದ ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿರುವ ಸ್ಪೂಕಿ ಕಾಲೇಜು ಚಿತ್ರ ನವೆಂಬರ್ 25ರಂದು ಸಿನಿ ಪ್ರಿಯರಿಗೆ ದರ್ಶನ ಕೊಡಲಿದೆ.

Last Updated : Nov 15, 2022, 3:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.