ETV Bharat / entertainment

ಪವಿತ್ರಾ ಲೋಕೇಶ್ - ನರೇಶ್ 'ಮತ್ತೆ ಮದುವೆ'ಗೆ ಡೇಟ್​ ಫಿಕ್ಸ್​​ - pavitra lokesh

ನಟಿ ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ 'ಮತ್ತೆ ಮದುವೆ'ಗೆ ಸಜ್ಜಾಗಿದ್ದಾರೆ.

matte maduve
ಮತ್ತೆ ಮದುವೆ ಸಿನಿಮಾ
author img

By

Published : May 4, 2023, 4:19 PM IST

ತೆಲುಗು ನಟ ನರೇಶ್​ ಮತ್ತು ಬಹುಭಾಷಾ ನಟಿ ಪವಿತ್ರಾ ಲೋಕೇಶ್ ಕಳೆದ ಕೆಲ ಸಮಯದಿಂದ ಸಖತ್​ ಸುದ್ದಿಯಲ್ಲಿದ್ದಾರೆ. ವಿವಾದಗಳು, ಟ್ರೋಲ್​​, ಟೀಕೆ ಬಳಿಕ 'ಮತ್ತೆ ಮದುವೆ'ಗೆ ಸಜ್ಜಾಗಿದ್ದಾರೆ. ಚುಂಬನ, ಮದುವೆ, ಹನಿಮೂನ್​ ಹೀಗೆ ಹಲವು ಫೋಟೋ, ವಿಡಿಯೋಗಳ ಮೂಲಕ ಹಾಟ್​ ಟಾಪಿಕ್​ ಆಗಿದ್ದಾರೆ. ಈ ಜೋಡಿ ಮದುವೆಯಾದರು ಎಂದು ಇಡೀ ಸೌತ್ ಸಿನಿಮಾ ಇಂಡಸ್ಟ್ರಿ ನಂಬಿತ್ತು. ಮೂರನೇ ಪತ್ನಿಗೆ ವಿಚ್ಛೇದನ ನೀಡದೆಯೇ ಈ ಮದುವೆ ನಡೆದಿದೆ ಎಂದು ಆರೋಪಿಸಲಾಗಿತ್ತು.

ಈ ಸುದ್ದಿಗಳು ಹಾಟ್​ ಟಾಪಿಕ್​​ ಆದ್ರೂ ಬಹು ಸಮಯ ಈ ಜೋಡಿ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಒಂದಿಷ್ಟು ದಿನಗಳಾದ ಬಳಿಕ ಇದು ಕಂಪ್ಲೀಟ್​ ಸಿನಿಮಾ ಎಂಬುದು ಬಹಿರಂಗವಾಯಿತು. ಹೌದು, ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ತಮ್ಮ ನಿಜ ಕಥೆಯನ್ನೇ 'ಮತ್ತೆ ಮದುವೆ' ಎಂಬ ಶೀರ್ಷೆಯುಳ್ಳ ಸಿನಿಮಾ ಮೂಲಕ ತೆರೆಗೆ ತರಲು ಸಜ್ಜಾಗಿದ್ದಾರೆ. ಆದ್ರೂ ಅಧಿಕೃತ ಮಾಹಿತಿ ಈ ಜೋಡಿ ಬಾಯಿಂದ ಬಂದಿಲ್ಲ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್​, ವಿಡಿಯೋಗಳು, ಫೋಟೋಗಳು ಮಾತ್ರ ಇದು ನರೇಶ್​ ಪವಿತ್ರಾ ಕಥೆಯೆಂದೇ ಹೇಳಿದೆ.

ಇದೊಂದು ವಿಭಿನ್ನ ಪ್ರಚಾರ ಎಂದೇ ಹೇಳಬಹುದು. ಜನರ ಗಮನ ಸೆಳೆದಿರುವ 'ಮತ್ತೆ ಮದುವೆ' ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಹೌದು ಇದೇ ಮೇ 26ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಚಿತ್ರದ ಮತ್ತೊಂದು ಹಾಡು ನಾಳೆ ಬೆಳಗ್ಗೆ 11ಗಂಟೆಗೆ ರಿಲೀಸ್​ ಆಗಲಿದೆ.

ಕಳೆದ ವಾರವಷ್ಟೇ ಚಿತ್ರದ ಚಿತ್ರದ ಮೊದಲ ಹಾಡು ರಿಲೀಸ್​ ಆಗಿತ್ತು. ಉರುಳೋ ಕಾಲವೇ ದು ಶುರುವಾಗುವ ಹಾಡನ್ನು ಬಿಡುಗಡೆ ಮಾಡಿದ್ದ ಚಿತ್ರತಂಡ, ಇದೀಗ ಮತ್ತೊಂದು ಹಾಡನ್ನು ರಿಲೀಸ್​ ಮಾಡಲು ಸಜ್ಜಾಗಿದೆ. ಆ ಹಾಡು ನಾಳೆ ಬೆಳಗ್ಗೆ ಅನಾವರಣಗೊಳ್ಳಲಿದೆ.

ಇದನ್ನೂ ಓದಿ: 'ಸಿನಿಮಾ ಮೂಲಕ ಟಿಪ್ಪು ಭಿನ್ನ ಮುಖ ಪರಿಚಯಿಸಲು ಚಿತ್ರತಂಡ ಸನ್ನದ್ಧ': ಪವನ್ ಶರ್ಮಾ

'ಉರುಳೋ ಕಾಲವೇ' ಹಾಡಿಗೆ ವರದರಾಜು ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದರು. ಸಂತೋಷ್ ವೆಂಕಿ ಹಾಡಿದ್ದು, ವೀಕ್ಷಕರ ಗಮನ ಸೆಳೆದಿದೆ. ನಡುವಯಸ್ಸಿನಲ್ಲಿ ಪ್ರೀತಿಯಿಂದ ವಂಚಿತರಾಗುವ ಜೋಡಿ ಹೇಗೆ ಪ್ರೀತಿಯನ್ನು ಕಂಡುಕೊಳ್ಳುತ್ತಾರೆ, ಮುಂದೆ ಹೇಗೆ ತಮ್ಮ ಜೀವನ ಕಟ್ಟಿಕೊಳ್ಳುತ್ತಾರೆ ಎಂಬ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣ: ವಿದೇಶಕ್ಕೆ ತೆರಳಲು ಶೀಜಾನ್ ಖಾನ್​ಗೆ ಕೋರ್ಟ್ ಅನುಮತಿ

ಜಯಸುಧ, ಶರತ್ ಬಾಬು, ವನಿತ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಷನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ ಹಾಗೂ ಮಧು ಅವರೂ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ವಿಜಯ ಕೃಷ್ಣ ಮೂವೀಸ್ ಬ್ಯಾನರ್ ಅಡಿ ನರೇಶ್​ ಅವರೇ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಎಂ.ಎಸ್. ರಾಜು ಕಥೆ ಬರೆದು, ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್​ಟೈನ್​ಮೆಂಟ್ ಸಿನಿಮಾ ಆದಿದ್ದು, ಮೇ 26ಕ್ಕೆ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತೆರೆಕಾಣಲಿದೆ. ಚಿತ್ರ ಯಶಸ್ವಿಯಾಗುತ್ತೋ ಅಥವಾ ಮತ್ತಷ್ಟು ಟೀಕೆಗೆ ಒಳಗಾಗುತ್ತೋ ಎಂಬುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.