ETV Bharat / entertainment

ರಾಜಮೌಳಿ-ಮಹೇಶ್​ ಬಾಬು ಕಾಂಬೋದ ಸಿನಿಮಾಗೆ ಈ ಸ್ಟಾರ್​ ನಟ ವಿಲನ್​! - etv bharat kannada

ಮಹೇಶ್​ ಬಾಬು ಮತ್ತು ರಾಜಮೌಳಿ ಕಾಂಬೋದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಸಿನಿಮಾದಲ್ಲಿ ರವಿತೇಜ ಖಳನಾಯಕನ ಪಾತ್ರ ಮಾಡಲಿದ್ದಾರೆ ಎಂದು ವರದಿಯಾಗಿದೆ.

Mass Maharaja Raviteja as villain in Mahesh babu and rajamouli movie
ರಾಜಮೌಳಿ - ಮಹೇಶ್​ ಬಾಬು ಕಾಂಬೋದ ಸಿನಿಮಾಗೆ ಈ ಸ್ಟಾರ್​ ನಟ ವಿಲನ್​ ಅಂತೆ!
author img

By ETV Bharat Karnataka Team

Published : Oct 27, 2023, 7:54 PM IST

'ಆರ್​ಆರ್​ಆರ್' ಎಂಬ ಅದ್ಭುತ ಸಿನಿಮಾ ಇಡೀ ವಿಶ್ವದೆಲ್ಲೆಡೆ ಸದ್ದು ಮಾಡಿದೆ. ಈ ಚಿತ್ರದ ಬಳಿಕ ನಿರ್ದೇಶಕ ಎಸ್​ಎಸ್​ ರಾಜಮೌಳಿ ಅವರ ಖ್ಯಾತಿ ದುಪ್ಪಟ್ಟಾಗಿದೆ. ಸ್ಟಾರ್ ಡೈರೆಕ್ಷರ್​​ನ ಮುಂದಿನ ಸಿನಿಮಾಗಳ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿದೆ. ಸೌತ್​ ಸ್ಟಾರ್ ಹೀರೋ ಮಹೇಶ್​ ಬಾಬು ಜೊತೆ ಕೈ ಜೋಡಿಸಿರೋದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಇವರಿಬ್ಬರ ಕಾಂಬೋದಲ್ಲಿ ಅದ್ಧೂರಿ ಪ್ಯಾನ್​ ವರ್ಲ್ಡ್​ ಸಿನಿಮಾ ನಿರ್ಮಾಣಗೊಳ್ಳಲಿದೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ಒಂದಿಷ್ಟು ಸುದ್ದಿಗಳು, ಅಂತೆ ಕಂತೆಗಳು ಸೋಷಿಯಲ್​ ಮೀಡಿಯಾದಲ್ಲಿ ಟ್ರೆಂಡ್​ ಆಗಿವೆ.

ರಾಜಮೌಳಿ ಅವರ ತಂದೆ, ಖ್ಯಾತ ಬರಹಗಾರ ವಿಜಯೇಂದ್ರ ಪ್ರಸಾದ್​ ಅವರು ಈ ಸಿನಿಮಾಗೆ ಕಥೆ ಒದಗಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಕುರಿತು ಆಸಕ್ತಿದಾಯಕ ವಿಚಾರವೊಂದನ್ನು ಬಹಿರಂಗಪಡಿಸಿದ್ದು, ಸಿನಿಪ್ರಿಯರು ಮತ್ತು ಮಹೇಶ್​ ಬಾಬು ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ. ಈ ಚಿತ್ರಕ್ಕೆ ವಿಲನ್​ ಆಗಿ ಟಾಲಿವುಡ್​ ಸ್ಟಾರ್​ ನಟ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಮಾಸ್​ ಮಹಾರಾಜ ಎಂದೇ ಖ್ಯಾತರಾಗಿರುವ ರವಿತೇಜ ಈ ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡಲಿದ್ದಾರೆ ಎನ್ನಲಾಗಿದೆ.

ರಾಜಮೌಳಿ ಹಾಗೂ ರವಿತೇಜ ಉತ್ತಮ ಸ್ನೇಹಿತರು. ಈಗಾಗಲೇ ಇವರಿಬ್ಬರು ಜೊತೆಯಾಗಿ ಸಿನಿಮಾ ಮಾಡಿ ಬ್ಲಾಕ್​ಬಸ್ಟರ್​ ಹಿಟ್​ ಪಡೆದುಕೊಂಡಿದ್ದಾರೆ. ಇದೀಗ ರಾಜಮೌಳಿ, ಮಹೇಶ್​ ಬಾಬುಗೆ ಆಕ್ಷನ್​ ಕಟ್​ ಹೇಳುತ್ತಿರುವ ಸಿನಿಮಾದಲ್ಲಿ ಮಾಸ್​ ಮಹಾರಾಜ ವಿಲನ್​ ಆಗಿ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗಷ್ಟೇ 'ಟೈಗರ್​' ಪ್ರಮೋಷನ್​ನಲ್ಲಿ ಜಕ್ಕಣ್ಣ ಜೊತೆ ಸಿನಿಮಾ ಮಾಡಲು ಆಸಕ್ತಿ ಇದೆ ಎಂದು ರವಿತೇಜ ಹೇಳಿಕೊಂಡಿದ್ದಾರೆ. ಮತ್ತೊಂದೆಡೆ, ಮಾಸ್​ ಮಹಾರಾಜ ವಿಲನ್​ ಪಾತ್ರ ಮಾಡಲ್ಲ ಎನ್ನಲಾಗಿದೆ. ಒಟ್ಟಿನಲ್ಲಿ ಈ ವಿಚಾರ ಇಂಟರ್ನ್​ನೆಟ್​ನಲ್ಲಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ: Mahesh Babu: ಟಾಲಿವುಡ್​ ಪ್ರಿನ್ಸ್ ಮಹೇಶ್​ ಬಾಬು ಕುರಿತ ಇಂಟ್ರೆಸ್ಟಿಂಗ್​ ವಿಚಾರಗಳು

ಸಿನಿಮಾದಲ್ಲಿ ಹಾಲಿವುಡ್​ ಸ್ಟಾರ್ಸ್: ಮಹೇಶ್​ ಬಾಬು ಅವರ ಈ ಸಿನಿಮಾದಲ್ಲಿ ಹಾಲಿವುಡ್​ ಕಲಾವಿದರು ಸಹ ಇರಲಿದ್ದಾರೆ ಎಂದ ಮಾತುಗಳು ಇದಕ್ಕೂ ಮೊದಲು ಕೇಳಿ ಬಂದಿದ್ದವು. ಸಂದರ್ಶನವೊಂದರಲ್ಲಿ ಈ ವಿಚಾರವಾಗಿ ಮಾತನಾಡಿದ್ದ ಬರಹಗಾರ ವಿಜಯೇಂದ್ರ ಪ್ರಸಾದ್​, ''ಚಿತ್ರದಲ್ಲಿ ಹಾಲಿವುಡ್​ ಸ್ಟಾರ್ಸ್ ಬಣ್ಣ ಹಚ್ಚುವ ಅವಕಾಶವಿದೆ. ಆದರೆ, ನಾವು ಇನ್ನೂ ಅವರನ್ನು ಸಂಪರ್ಕಿಸಿಲ್ಲ. ಇದು ಆಫ್ರಿಕಾದಲ್ಲಿ ನಡೆಯುವ ಸಾಹಸಮಯ ಕಥೆ. ಇದಕ್ಕಿಂತ ನಾವು ಸದ್ಯ ಹೆಚ್ಚೇನು ಹೇಳಬಾರದು'' ಎಂದು ತಿಳಿಸಿದ್ದರು. ಈ ವರ್ಷದ ಅಂತ್ಯಕ್ಕೆ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಅದ್ಧೂರಿ ಬಜೆಟ್​ನಲ್ಲಿ ಸಿನಿಮಾ ನಿರ್ಮಾಣಗೊಳ್ಳಲಿದೆ.

ಈ ಹಿಂದೆ ನಿರ್ದೇಶಕ ರಾಜಮೌಳಿ ಅವರು ಸಹ ಕೆಲ ಸಂದರ್ಶನಗಳಲ್ಲಿ ಸಿನಿಮಾದ ಸುಳಿವು ಬಿಟ್ಟುಕೊಟ್ಟಿದ್ದಾರೆ. ಕಳೆದ ಕೆಲ ಸಮಯದಿಂದ ಈ ಕಥೆಯನ್ನು ಮುಂದೂಡುತ್ತಾ ಬರಲಾಗುತ್ತಿದೆ. ಆದರೆ ಶೀಘ್ರದಲ್ಲೇ ಜಾಗತಿಕ ಸಾಹಸಮಯ ಸಿನಿಮಾ ನಿರ್ಮಾಣ ಆಗಲಿದೆ. ಸದ್ಯ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದೆ ಎಂದು ತಿಳಿಸಿದ್ದರು. ಬಾಹುಬಲಿ, ಆರ್​ಆರ್​ಆರ್​ ನಂತಹ ಅದ್ಭುತ ಸಿನಿಮಾಗಳನ್ನು ನೋಡಿರುವ ಸಿನಿಪ್ರಿಯರು ರಾಜಮೌಳಿ - ಮಹೇಶ್​ ಬಾಬು ಕಾಂಬೋದ ಮುಂದಿನ ಸಿನಿಮಾ ಕುರಿತು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಸಿನಿಮಾಗಳ ಮುಹೂರ್ತ ಪೂಜೆಯಲ್ಲಿ ನಟ ಮಹೇಶ್​ ಬಾಬು ಭಾಗಿಯಾಗಲ್ಲ! ಯಾಕೆ ಗೊತ್ತೇ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.