ETV Bharat / entertainment

'ಮಾರ್ಟಿನ್​​' ಧ್ರುವ ಸರ್ಜಾ ಸೆಕ್ಯೂರಿಟಿಗೆ ನಿಂತಿದ್ದ ಚೆಂದುಳ್ಳಿ ಚೆಲುವೆಯರು ಯಾರು ಗೊತ್ತೇ? - ಮಾರ್ಟಿನ್ ಟೀಸರ್​

'ಮಾರ್ಟಿನ್' ಧ್ರುವ ಸರ್ಜಾ ಅವರ ಬಾಡಿಗಾರ್ಡ್ ಆಗಿ ಬಂದಿದ್ದ ಬೆಡಗಿಯರ ಬಗ್ಗೆ ಇಲ್ಲಿದೆ ಮಾಹಿತಿ.

Martin security guards
'ಮಾರ್ಟಿನ್​​' ಸೆಕ್ಯೂರಿಟಿ ಗಾರ್ಡ್ಸ್
author img

By

Published : Feb 25, 2023, 1:41 PM IST

ಕೆಜಿಎಫ್​, ಕಾಂತಾರ ಚಿತ್ರದ ಬಳಿಕ ಭಾರತೀಯ ಚಿತ್ರದ ಕಣ್ಣು ಸ್ಯಾಂಡಲ್​ವುಡ್​​ ಮೇಲೆ ನೆಟ್ಟಿದೆ. ಒಂದೊಳ್ಳೆ ಕಂಟೆಂಟ್​​ ಜೊತೆಗೆ ಅದ್ಧೂರಿ ಮೇಕಿಂಗ್​​ನಲ್ಲಿ ಪ್ಯಾನ್​ ಇಂಡಿಯಾ ಸಿನಿಮಾಗಳು ನಿರ್ಮಾಣವಾಗುತ್ತಿದ್ದು, ಸದ್ಯ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾ ಸಖತ್​ ಸೌಂಡ್​ ಮಾಡ್ತಿದೆ.

ಮಾರ್ಟಿನ್ ಸೆಕ್ಯೂರಿಟಿ ಗಾರ್ಡ್ಸ್: ಇತ್ತೀಚೆಗೆ ಮಾರ್ಟಿನ್ ಟೀಸರ್ ಅದ್ಧೂರಿಯಾಗಿ ಬಿಡುಗಡೆ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಮಿಲಿಯನ್ ಜನರು ಟೀಸರ್​ ಅನ್ನು ವೀಕ್ಷಿಸಿದ್ದಾರೆ. ಟೀಸರ್ ನೋಡಿದವ್ರು ಅಬ್ಬಬ್ಬಾ ಇದು ಹಾಲಿವುಡ್ ಸಿನಿಮಾವೇ ಎಂದು ಒಂದು ಕ್ಷಣಕ್ಕೆ ಗೊಂದಲಕ್ಕೊಳಗಾಗಿದ್ದರು.‌‌ ಇನ್ನೂ ಟೀಸರ್ ಲಾಂಚ್ ಈವೆಂಟ್​ನಲ್ಲಿ ಸೆಕ್ಯೂರಿಟಿಗೆ ನಿಂತಿದ್ದ ಬೆಡಗಿಯರು ಸಹ ಟೀಸರ್​ನಷ್ಟೇ ಗಮನ ಸೆಳೆದಿದ್ದಾರೆ. ಹಾಗಾದ್ರೆ ಮಾರ್ಟಿನ್ ಧ್ರುವ ಸರ್ಜಾ ಅವರ ಬಾಡಿಗಾರ್ಡ್ ಆಗಿ ಬಂದಿದ್ದ ಆ ಬೆಡಿಗಿಯರು ಯಾರು? ಎಲ್ಲಿಂದ ಬಂದಿದ್ರು? ಅವರನ್ನ ಕರೆಸಿದ್ದು ಯಾರು? ಎಂಬುದರ ಬಗ್ಗೆ ಇಂಟ್ರೆಸ್ಟ್ರಿಂಗ್ ಸ್ಟೋರಿ ಇಲ್ಲಿದೆ ನೋಡಿ.

ಮಾರ್ಟಿನ್ ಟೀಸರ್​: 'ಪೊಗರು' ಧ್ರುವ ಸರ್ಜಾ ಅವರನ್ನು ಆ್ಯಕ್ಷನ್ ಪ್ರಿನ್ಸ್ ಅಂತಾ ಏಕೆ ಕರೆಯುತ್ತಾರೆ ಅನ್ನೋದಕ್ಕೆ ಮಾರ್ಟಿನ್ ಟೀಸರ್ ಉತ್ತರ ಕೊಟ್ಟಿದೆ. ಕನ್ನಡ ಚಿತ್ರರಂಗದಲ್ಲಿ ಹಿಂದೆಂದೂ ಕಾಣಿಸದ ದೈತ್ಯಾಕಾರದಲ್ಲಿ ಧ್ರುವ ಸರ್ಜಾ ಮಾರ್ಟಿನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ್ಯಕ್ಷನ್​ ಪ್ರಿನ್ಸ್​ನ ಆ್ಯಕ್ಷನ್​ ಅವತಾರವನ್ನು ಅಭಿಮಾನಿಗಳು ಮೆಚ್ಚಿ ಕೊಂಡಾಡಿದ್ದಾರೆ.

ಮಾರ್ಟಿನ್​ಗೆ ಸೆಕ್ಯೂರಿಟಿಯಾಗಿ ಕಾಣಿಸಿಕೊಳ್ಳುವ ಮೂಲಕ ಧ್ರುವ ಸರ್ಜಾರ ಅಭಿಮಾನಿಗಳ ಗಮನ ಸೆಳದಿದ್ದಾರೆ ಚೆಂದುಳ್ಳಿ ಚೆಲುವೆಯರು. ಫೆಬ್ರವರಿ 23ರ ಸಂಜೆ ಐದು ಗಂಟೆ ಐವೈತ್ತೈದು ನಿಮಿಷಕ್ಕೆ ಮಾರ್ಟಿನ್ ಟೀಸರ್ ಅಭಿಮಾನಿಗಳ ಅರಮನೆ ಸೇರಿದೆ. ಅಲ್ಲದೇ ಟೀಸರ್ ಲಾಂಚ್​ಗಾಗಿ ಅದ್ಧೂರಿ ಈವೆಂಟ್ ಮಾಡಿದ್ದ ಚಿತ್ರತಂಡ ಪ್ಯಾನ್ ಇಂಡಿಯಾ ಪ್ರೆಸ್ ಮೀಟ್ ಮಾಡಿದೆ‌‌. ಈ ಈವೆಂಟ್​ನಲ್ಲಿ ಮಾರ್ಟಿನ್​​ನಷ್ಟೇ ಗಮನ ಸೆಳೆದಿದ್ದು ವೇದಿಕೆಯಲ್ಲಿ ನಿಂತಿದ್ದ ಬೆಡಗಿಯರು. ಕೆಂಪ್ಪು ಬಣ್ಣದ ಬಟ್ಡೆ ಧರಿಸಿ ಕೈಯಲ್ಲಿ ಗನ್ ಹಿಡಿದು ಮಾರ್ಟಿನ್​​ ಮಾತನ್ನು ಚಾಚು ತಪ್ಪದೇ ಪಾಲಿಸುತ್ತಿದ್ದ ವಿದೇಶಿ ಸುಂದರಿಯರು, ಒಂದರ್ಥದಲ್ಲಿ ಸೆಕ್ಯೂರಿಟಿಗಳು. ಅವರು ಮಾರ್ಟಿನ್ ಮಾತನ್ನು ಬಿಟ್ಟು ಬೇರೆ ಯಾರ ಮಾತನ್ನು ಕೇಳುತ್ತಿರಲಿಲ್ಲ. ಇದು ಕಾರ್ಯಕ್ರಮದ ಹೈಲೆಟ್ ಆಗಿತ್ತು.

ಅಷ್ಟಕ್ಕೂ ಮಾರ್ಟಿನ್ ಬಳಗ ಅವರನ್ನು ಕರೆಸಿದ್ದು ಏಕೆ ಅನ್ನೋದು ಇದುವರೆಗೂ ಕೆಲವರಿಗೆ ಅರ್ಥ ಆಗಿಲ್ಲ. ಏಕಂದ್ರೆ ಚಿತ್ರತಂಡ ಕಾರ್ಯಕ್ರಮದ ಸೀಕ್ರೆಟ್ ಅನ್ನು ಎಲ್ಲೂ ಬಿಟ್ಟು ಕೊಟ್ಟಿಲ್ಲ. ಆದರೀಗ ಈ ಸೀಕ್ರೆಟ್​​ ಸಿನಿಮಾ‌ಟೆಂಟ್ ಬಳಗಕ್ಕೆ ಸಿಕ್ಕಿದೆ‌. ಟೀಸರ್ ಈವೆಂಟ್​ನಲ್ಲಿ ಗಮನ ಸೆಳೆದ ಆ ಸುಂದರಿಯರು ಮೂಲತಃ ರಷ್ಯಾದವರು. ಮುಂಬೈನಲ್ಲಿ ನೆಲೆಸಿದ್ದ ರಷ್ಯಾದ ಬೆಡಗಿಯರನ್ನು ಮಾರ್ಟಿನ್ ಸೆಕ್ಯೂರಿಟಿಗಾಗಿಯೇ ಕರೆಸಲಾಗಿತ್ತು. ಅಷ್ಟಕ್ಕೂ ಅವರನ್ನೇ ಕರೆಸಿದ್ದು ಏಕೆ? ಅನ್ನೋದಕ್ಕೆ ಉತ್ತರ ಮಾರ್ಟಿನ್. ಹೌದು, ಮಾರ್ಟಿನ್ ಚಿತ್ರದಲ್ಲೂ ಇದೇ ರೀತಿಯ ಸನ್ನಿವೇಶ ಇದ್ದು, ಅದೇ ಕಾನ್ಸೆಪ್ಟ್​​ನಲ್ಲಿ ಮಾರ್ಟಿನ್ ಟೀಸರ್ ಲಾಂಚ್ ಮಾಡಲಾಗಿದೆ. ‌ಆದರೆ ಚಿತ್ರದಲ್ಲಿ ಈ ಬೆಡಗಿಯರು ಅರ್ಜುನ್ ಮಾತು ಕೇಳ್ತಾರೋ? ಇಲ್ಲ ಮಾರ್ಟಿನ್ ಮಾತು ಪಾಲಿಸ್ತಾರೋ? ಅನ್ನೋ ಗುಟ್ಟು ಬಿಟ್ಟು ಕೊಟ್ಟಿಲ್ಲ ಚಿತ್ರತಂಡ.

ಇದನ್ನೂ ಓದಿ: ಮಾರ್ಟಿನ್ ಟೀಸರ್ ರಿಲೀಸ್: ಧ್ರುವ ಸರ್ಜಾಗೆ ಕಥೆ ಒಪ್ಪಿಸೋದು ತುಂಬಾ ಕಷ್ಟ- ಅರ್ಜುನ್ ಸರ್ಜಾ

ರಷ್ಯಾದ 20 ಬೆಡಗಿರನ್ನು ಕರೆಸಿ ಇದೇ ಕಾನ್ಸೆಪ್ಟ್​​​ನಲ್ಲಿ ಟೀಸರ್ ಲಾಂಚ್ ಮಾಡಲು ಧ್ರುವ ಸರ್ಜಾ ಮೂರು ತಿಂಗಳಿನಿಂದ ಪ್ಲ್ಯಾನ್​ ಮಾಡಿದ್ರು ಅನ್ನೋದು ವಿಶೇಷ. ಅಲ್ಲದೇ ಇವರು ಬಂದು ಹೋಗಲು ಬರೋಬ್ಬರಿ 20 ರಿಂದ‌ 25 ಲಕ್ಷ ರೂಪಾಯಿ ಖರ್ಚು ಆಗಿದೆ ಅನ್ನೋ ಮಾಹಿತಿಯಿದೆ. ಈ ಟೀಸರ್ ಈವೆಂಟ್​ಗಾಗಿ 25 ಲಕ್ಷ ಖರ್ಚು ಮಾಡಲಾಗಿದೆಯಂತೆ. ಮಾರ್ಟಿನ್ ಚಿತ್ರದಲ್ಲಿಯೂ ಈ ರಷ್ಯನ್ ಸುಂದರಿಯರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: 'ಸುದೀಪ್​​, ಯಶ್​​ ಸರ್​​ ಜೊತೆ ನನ್ನ ಸ್ಪರ್ಧೆಯಿಲ್ಲ': ಮಾರ್ಟಿನ್​​ ಹೀರೋ ಧ್ರುವ ಸರ್ಜಾ

ಕಳೆದ ಎರಡು‌‌ ದಿನಗಳಿಂದ ಮಾರ್ಟಿನ್ ಟೀಸರ್ ವಿಶ್ವಾದ್ಯಂತ ಅಬ್ಬರಿಸಿದ್ದು, ಟೀಸರ್ ನೋಡಿದವರೆಲ್ಲ ಯಾವ ಹಾಲಿವುಡ್ ಚಿತ್ರಕ್ಕೂ ಕಡಿಮೆ‌ ಇಲ್ಲಾ ಅಂತಾ ಹೇಳುತ್ತಿದ್ದಾರೆ. ಇದು ಮಾರ್ಟಿನ್‌ ಚಿತ್ರತಂಡಕ್ಕೆ ವರವಾಗಿದ್ದು ನಿರ್ಮಾಪಕ ಉದಯ್ ಕೆ ಮೆಹ್ತಾ ಅವರ ಬ್ಯುಸಿನೆಸ್ ವಿಚಾರದಲ್ಲಿ ದೊಡ್ಡ ಮಟ್ಟದ ಮುನ್ನಡಿ ಬರೆದಿದೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.