ETV Bharat / entertainment

'ಟೆಹ್ರಾನ್' ಸಿನಿಮಾದಲ್ಲಿ ಜಾನ್ ಅಬ್ರಹಾಂ ಜೊತೆ ಕಾಣಿಸಿಕೊಳ್ಳಲಿದ್ದಾರೆ ಮಾನುಷಿ ಚಿಲ್ಲರ್ - ನಿರ್ಮಾಪಕ ಅರುಣ್ ಗೋಪಾಲನ್ ಅವರ ಮುಂದಿನ ಆಕ್ಷನ್ ಥ್ರಿಲ್ಲರ್ ಟೆಹ್ರಾನ್ ಸಿನಿಮಾ

ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಅವರು ನಿರ್ಮಾಪಕ ಅರುಣ್ ಗೋಪಾಲನ್ ಅವರ ಮುಂದಿನ ಆ್ಯಕ್ಷನ್ ಥ್ರಿಲ್ಲರ್ 'ಟೆಹ್ರಾನ್' ಸಿನಿಮಾದಲ್ಲಿ ನಟಿಸಲಿದ್ದಾರೆ. ನಟ ಜಾನ್ ಅಬ್ರಹಾಂ ಸಹ ಈ ಚಿತ್ರದಲ್ಲಿ ಇರಲಿದ್ದಾರೆ.

ಜಾನ್ ಅಬ್ರಹಾಂ ಜೊತೆ ಕಾಣಿಸಿಕೊಳ್ಳಲಿರುವ ಮಾನುಷಿ ಚಿಲ್ಲರ್

author img

By

Published : Jul 19, 2022, 5:05 PM IST

ಮುಂಬೈ: ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಅವರು ಸಿನಿಮಾ ನಿರ್ಮಾಪಕ ಅರುಣ್ ಗೋಪಾಲನ್ ಅವರ ಮುಂದಿನ ಆ್ಯಕ್ಷನ್ ಥ್ರಿಲ್ಲರ್ ಚಿತ್ರ 'ಟೆಹ್ರಾನ್'ಗೆ ಇತ್ತೀಚೆಗೆ ಸೇರ್ಪಡೆಯಾಗಿದ್ದಾರೆ. ನಟ ಜಾನ್ ಅಬ್ರಹಾಂ ಸಹ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್‌ಸ್ಟಾಗ್ರಾಮ್​ನಲ್ಲಿ ಮಾನುಷಿ ಮತ್ತು ಜಾನ್ ಇಬ್ಬರೂ ಈ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

2017 ರ ವಿಶ್ವ ಸುಂದರಿ ನಮ್ಮ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ನಾನು ತುಂಬಾ ಎಕ್ಸೈಟೆಡ್ ಆಗಿದ್ದೇನೆ. ಅವರು ತುಂಬಾ ಪ್ರತಿಭಾವಂತೆ ಎನ್ನುವ ಮೂಲಕ 'ಧೂಮ್' ನಟ ಮಾನುಷಿಯನ್ನು ಸ್ವಾಗತಿಸಿದರು. ನಾನು 'ಟೆಹ್ರಾನ್' ಚಿತ್ರತಂಡ ಸೇರಲು ತುಂಬಾ ಉತ್ಸುಕನಾಗಿದ್ದೇನೆ. ಈ ಪ್ರಯಾಣವು ನಿಜವಾಗಿಯೂ ವಿಶೇಷವಾಗಿರಲಿದೆ ಎಂದು ಮಾನುಷಿ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಅಂದು ಅಪ್ಪನ 'ಐ ಆ್ಯಮ್ ಯುವರ್ ಡ್ಯಾಡ್' ಡೈಲಾಗ್ ವೈರಲ್.. ಈಗ ಮಗನ 'ಡ್ಯಾಡ್​ ಇಸ್ ಬ್ಯಾಡ್ ಬಾಯ್' ಫೇಮಸ್

ಅರುಣ್ ಗೋಪಾಲನ್ ನಿರ್ದೇಶನದ 'ಟೆಹ್ರಾನ್' ನೈಜ ಘಟನೆಗಳಿಂದ ಪ್ರೇರಿತವಾಗಿದೆ. ಆ್ಯಕ್ಷನ್ ಥ್ರಿಲ್ಲರ್‌ನ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ ಎಂದು ನಟ ಬಹಿರಂಗಪಡಿಸಿದ್ದಾರೆ. ಈ ನಡುವೆ ಜಾನ್ ಅನೇಕ ಯೋಜನೆಗಳನ್ನು ಹೊಂದಿದ್ದಾನೆ. ಅವರು ಮುಂದಿನ 'ಏಕ್ ವಿಲನ್ ರಿಟರ್ನ್ಸ್' ಚಿತ್ರದಲ್ಲಿ ಅರ್ಜುನ್ ಕಪೂರ್, ತಾರಾ ಸುತಾರಿಯಾ ಮತ್ತು ದಿಶಾ ಪಟಾನಿ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಇದು ಜುಲೈ 22, 2022 ರಂದು ಬಿಡುಗಡೆಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.