'ಆರ್ಎಕ್ಸ್ 100' ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ನಿರ್ದೇಶಕ ಅಜಯ್ ಭೂಪತಿ. ಇದೀಗ ಅವರು 'ಮಂಗಳವಾರಂ' ಎಂಬ ಪ್ಯಾನ್ ಇಂಡಿಯಾ ಸಿನಿಮಾ ನಿರ್ದೇಶಿಸಿದ್ದು, ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಇದೇ ನವೆಂಬರ್ 17 ರಂದು ತೆರೆ ಕಾಣಲಿದೆ. ಇಂದು ಚಿತ್ರತಂಡ ಸಿನಿಮಾದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ಇಷ್ಟು ದಿನ ಟೀಸರ್, ಪೋಸ್ಟರ್ ಹಾಗೂ ಹಾಡುಗಳಿಂದಲೇ ಕುತೂಹಲ ಹುಟ್ಟಿಸಿದ್ದ ಚಿತ್ರದ ಟ್ರೇಲರ್ ಅನ್ನು ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅನಾವರಣಗೊಳಿಸಿದ್ದಾರೆ.
-
A bold story told like never-before in Indian cinema 💥#MangalavaaramTrailer out now 🔥https://t.co/kF5LcNsN9L
— Ajay Bhupathi (@DirAjayBhupathi) October 21, 2023 " class="align-text-top noRightClick twitterSection" data="
An @AJANEESHB Musical 🎶#Mangalavaaram @starlingpayal @Nanditasweta @MudhraMediaWrks @ACreativeWorks_ #SwathiGunupati #SureshVarmaM @saregamasouth @PulagamOfficial… pic.twitter.com/IYET0iuWaM
">A bold story told like never-before in Indian cinema 💥#MangalavaaramTrailer out now 🔥https://t.co/kF5LcNsN9L
— Ajay Bhupathi (@DirAjayBhupathi) October 21, 2023
An @AJANEESHB Musical 🎶#Mangalavaaram @starlingpayal @Nanditasweta @MudhraMediaWrks @ACreativeWorks_ #SwathiGunupati #SureshVarmaM @saregamasouth @PulagamOfficial… pic.twitter.com/IYET0iuWaMA bold story told like never-before in Indian cinema 💥#MangalavaaramTrailer out now 🔥https://t.co/kF5LcNsN9L
— Ajay Bhupathi (@DirAjayBhupathi) October 21, 2023
An @AJANEESHB Musical 🎶#Mangalavaaram @starlingpayal @Nanditasweta @MudhraMediaWrks @ACreativeWorks_ #SwathiGunupati #SureshVarmaM @saregamasouth @PulagamOfficial… pic.twitter.com/IYET0iuWaM
ಟ್ರೇಲರ್ ಹೇಗಿದೆ?: 'ಮಂಗಳವಾರಂ' ಸಿನಿಮಾದ ಟ್ರೇಲರ್ ಸಖತ್ ಹಾರರ್ ಆಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಬಹಳ ರೋಚಕವಾಗಿ ಟ್ರೇಲರ್ನಲ್ಲಿ ತೋರಿಸಿದ್ದಾರೆ. ಇಡೀ ಸಿನಿಮಾವನ್ನು ಕಟ್ ಮಾಡಿ ಟ್ರೇಲರ್ನಲ್ಲಿ ಕಥೆ ಹೇಳಿರುವ ರೀತಿ ಪ್ರೇಕ್ಷಕರನ್ನು ಇಂಪ್ರೆಸ್ ಮಾಡುತ್ತಿದೆ. ಸಂಪೂರ್ಣವಾಗಿ ಥ್ರಿಲ್ಲಿಂಗ್ ಅಂಶಗಳಿಂದ ಕೂಡಿರುವ ಟ್ರೇಲರ್ ಅನ್ನೇ ನಿರ್ದೇಶಕರು ಕೈಬಿಟ್ಟಿದ್ದಾರೆ. ಚಿತ್ರದ ಕಥೆಯನ್ನು ಬಹಿರಂಗಪಡಿಸದೇ ಕೆಲವು ದೃಶ್ಯಗಳನ್ನು ಹೈಲೈಟ್ ಮಾಡಿರುವುದು ವಿಶೇಷ ಮತ್ತು ಆಕರ್ಷಕ.
ಚಿರಂಜೀವಿ ಶುಭಹಾರೈಕೆ: 'ಮಂಗಳವಾರಂ' ಟ್ರೇಲರ್ ಬಿಡುಗಡೆಗೊಳಿಸಿದ ಮೆಗಾಸ್ಟಾರ್ ಚಿರಂಜೀವಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಬರೆದುಕೊಂಡಿರುವ ಅವರು, "ಮಂಗಳವಾರಂ ಚಿತ್ರದ ನಿರ್ಮಾಪಕರಾದ ಸ್ವಾತಿ ರೆಡ್ಡಿ ಗುಣಪತಿ ಮತ್ತು ಸುರೇಶ್ ವರ್ಮಾ ನನ್ನ ಆತ್ಮೀಯ ಸ್ನೇಹಿತರು. ಅದರಲ್ಲೂ ಸ್ವಾತಿ ತುಂಬಾ ಡೈನಾಮಿಕ್ ಹುಡುಗಿ. ಇಂತಹ ಯಂಗ್ ಸ್ಟಾರ್ ನಿರ್ಮಾಪಕರೊಂದಿಗೆ ಅಜಯ್ ಭೂಪತಿಯಂತಹ ಪ್ರತಿಭಾವಂತ ನಿರ್ದೇಶಕರ ಜೊತೆ ಮೊದಲ ಪ್ಯಾನ್ ಇಂಡಿಯಾ ಪ್ರಯತ್ನವಾಗಿ ಈ ಸಿನಿಮಾ ಮಾಡುತ್ತಿರುವುದು ಖುಷಿ ತಂದಿದೆ. ಹಳ್ಳಿಗಾಡಿನ ಆ್ಯಕ್ಷನ್ ಥ್ರಿಲ್ಲರ್ ಆಗಿ ತಯಾರಾಗಿರುವ ಈ ಸಿನಿಮಾದ ಟ್ರೈಲರ್ ನನ್ನ ಕೈಯಲ್ಲಿ ಬಿಡುಗಡೆಯಾಗುತ್ತಿರುವುದು ಖುಷಿ ತಂದಿದೆ. ಚಿತ್ರವು ಯಶಸ್ವಿಯಾಗಲಿ ಮತ್ತು ಇಡೀ ತಂಡಕ್ಕೆ ಶುಭ ಹಾರೈಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="">
ಚಿತ್ರತಂಡ: 'ಮಂಗಳವಾರಂ' ರಸ್ಟ್ರಿಕ್ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಪಾಯಲ್ ರಜಪೂತ್, ಶ್ರೀತೇಜ್ ಮುಖ್ಯಭೂಮಿಕೆಯಲ್ಲಿದ್ದಾರೆ. ಇದರ ಜೊತೆಗೆ ಚೈತನ್ಯ ಕೃಷ್ಣ, ಅಜಯ್ ಘೋಷ್, ಲಕ್ಷ್ಮಣ್ ಸೇರಿದಂತೆ ಹಲವಾರು ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ದಶರಥಿ ಶಿವೇಂದ್ರ ಅವರ ಛಾಯಾಗ್ರಹಣ, ರಘು ಕುಲಕರ್ಣಿ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ. ಸಾಯಿಕುಮಾರ್ ಯಡವಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. 'ಕಾಂತಾರ' ಖ್ಯಾತಿಯ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಇಷ್ಟು ವರ್ಷಗಳ ಕಾಲ ನಿರ್ದೇಶಕನಾಗಿ ಗಮನ ಸೆಳೆದಿದ್ದ ಅಜಯ್ ಭೂಪತಿ ‘ಮಂಗಳವಾರಂ’ ಸಿನಿಮಾದಿಂದ ನಿರ್ಮಾಪಕರಾಗಿಯೂ ಬಡ್ತಿ ಪಡೆಯುತ್ತಿದಾರೆ. ಸ್ವಾತಿ ಗುಣಪತಿ ಹಾಗೂ ಸುರೇಶ್ ವರ್ಮಾ ಅವರ 'ಮುದ್ರಾ ಮೀಡಿಯಾ ವರ್ಕ್ಸ್' ಮತ್ತು ಅಜಯ್ ಭೂಪತಿ ಒಡೆತನದ 'ಎ ಕ್ರಿಯೇಟಿವ್ ವರ್ಕ್ಸ್' ಸಂಸ್ಥೆಗಳು ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ. ನವೆಂಬರ್ 17 ರಂದು ತೆಲುಗಿನ ಜೊತೆ ಕನ್ನಡ, ಹಿಂದಿ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ 'ಮಂಗಳವಾರಂ' ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಅಜಯ್ ಭೂಪತಿ ನಿರ್ದೇಶನದ 'ಮಂಗಳವಾರಂ' ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್