ETV Bharat / entertainment

ಟಾಲಿವುಡ್ ಹೀರೋ ಮಹೇಶ್‌ ಬಾಬು ಮನೆಯಲ್ಲಿ ಕಳ್ಳತನ ಯತ್ನ: ಪ್ರಕರಣ ದಾಖಲು - actor mahesh babu

ಮಂಗಳವಾರ ರಾತ್ರಿ ನಟ ಮಹೇಶ್ ಬಾಬು ಮನೆಯಲ್ಲಿ ವ್ಯಕ್ತಿಯೊಬ್ಬ ಕಳ್ಳತನಕ್ಕೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ.

man tried to theft in actor mahesh babu house
ಮಹೇಶ್‌ ಬಾಬು ಮನೆಯಲ್ಲಿ ಕಳ್ಳತನ ಯತ್ನ
author img

By

Published : Sep 29, 2022, 8:05 PM IST

ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಟಾಲಿವುಡ್ ಹೀರೋ ಮಹೇಶ್‌ ಬಾಬು ಮನೆಯಲ್ಲಿ ಯಾರೋ ಕಳ್ಳತನಕ್ಕೆ ಯತ್ನಿಸಿರುವುದಾಗಿ ಆರೋಪ ಕೇಳಿಬಂದಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.

  • a thief named Krishna came to #Hyderabad from #Odisha. On Tuesday night, In the process of his attempt, he tried to jump a 30-feet wall but fell inside the house of #maheshbabu

    Police registered a case and moved the thief to Osmania hospital for medical treatment. pic.twitter.com/u2J3nwOT8j

    — WawaOriginals (@wawaoriginals) September 29, 2022 " class="align-text-top noRightClick twitterSection" data=" ">

ವ್ಯಕ್ತಿಯೊಬ್ಬ ಮಂಗಳವಾರ ರಾತ್ರಿ ಮಹೇಶ್ ಬಾಬು ಮನೆಯ 30 ಅಡಿ ಗೋಡೆ ಜಿಗಿಯಲು ಯತ್ನಿಸಿದ್ದಾನೆ. ಗೋಡೆ ಜಿಗಿಯಲು ಯತ್ನಿಸಿದ ವೇಳೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಆ ವ್ಯಕ್ತಿಯನ್ನು ಕೃಷ್ಣ ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆ ಒಡಿಶಾದಿಂದ ಹೈದರಾಬಾದ್​ಗೆ ಬಂದಿದ್ದ ಎನ್ನುವ ಮಾಹಿತಿ ಇದೆ.

ಮನೆಯ 30 ಅಡಿ ಎತ್ತರದ ಗೋಡೆ ಜಿಗಿಯಲು ಯತ್ನಿಸಿ ಬಿದ್ದಿದ್ದಾನೆ. ಶಬ್ಧ ಕೇಳಿದ ಸೆಕ್ಯುರಿಟಿ ಹೋಗಿ ನೋಡಿದಾಗ ಗಾಯಾಳು ಪತ್ತೆಯಾಗಿದ್ದಾನೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಚಿಕಿತ್ಸೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ. ಇನ್ನು ಘಟನೆ ವೇಳೆ ಮಹೇಶ್ ಬಾಬು ಸೇರಿದಂತೆ ಕುಟುಂಬಸ್ಥರು ಮನೆಯಲ್ಲಿಯೇ ಇದ್ದರು.

man tried to theft in actor mahesh babu house
ಗಾಯಗೊಂಡಿರುವ ಆರೋಪಿ ಕೃಷ್ಣ

ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇನ್ನೂ ಮಹೇಶ್ ಬಾಬು ಅವರ ತಾಯಿ, ಸೂಪರ್ ಸ್ಟಾರ್ ಕೃಷ್ಣ ಅವರ ಪತ್ನಿ ಇಂದಿರಾ ದೇವಿ ವಿಧಿವಶರಾಗಿರುವುದು ಎಲ್ಲರಿಗೂ ಗೊತ್ತೇ ಇದೆ.

ಇದನ್ನೂ ಓದಿ: ಸೂಪರ್​ಸ್ಟಾರ್ ಮಹೇಶ್​ ಬಾಬುಗೆ ಮಾತೃ ವಿಯೋಗ.. ಸಹೋದರನ ಬಳಿಕ ತಾಯಿ ಕಳೆದುಕೊಂಡ ಪ್ರಿನ್ಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.