ETV Bharat / entertainment

ವಿವಾಹಿತ ನಟಿಗೆ ಟ್ವಿಟರ್​ನಲ್ಲಿ ಪ್ರಪೋಸ್ ಮಾಡಿದ 60ರ ವ್ಯಕ್ತಿ: ಉತ್ತರ ಹೀಗಿತ್ತು ನೋಡಿ! - ಉತ್ತರ ಹೀಗಿತ್ತು ನೋಡಿ

ಬಾಲಿವುಡ್ ನಟಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಮದುವೆ ಪ್ರಸ್ತಾಪ ಇಟ್ಟಿದ್ದಾರೆ.

actress Celina Jaitly family
ನಟಿ ಸೆಲೀನಾ ಜೇಟ್ಲಿ ಕುಟುಂಬ
author img

By

Published : Apr 7, 2023, 1:28 PM IST

ಬಾಲಿವುಡ್ ನಟಿ ಸೆಲೀನಾ ಜೇಟ್ಲಿ ( Celina Jaitly) ಅವರಿಗೆ ಟ್ವಿಟರ್‌ನಲ್ಲಿ ವ್ಯಕ್ತಿಯೊಬ್ಬರು ಮದುವೆ ಪ್ರಸ್ತಾಪ ಇಟ್ಟಿದ್ದಾರೆ. ಅಪರಿಚಿತರ ಈ ಟ್ವೀಟ್​ಗೆ ಪ್ರತಿಕ್ರಿಯಿಸಿದ ನಟಿ, ಈಗಾಗಲೇ ಹೋಟೆಲ್ ಉದ್ಯಮಿ ಪೀಟರ್ ಹಾಗ್ ಅವರನ್ನು ಮದುವೆಯಾಗಿದ್ದೇನೆ ಮತ್ತು ನಮಗೆ ಮೂವರು ಗಂಡು ಮಕ್ಕಳಿದ್ದಾರೆ ಎಂದು ತಿಳಿಸಿದ್ದಾರೆ.

ಸಾಮಾನ್ಯವಾಗಿ ನಟ ನಟಿಯರಿಗೆ ಈ ರೀತಿಯ ಸನ್ನಿವೇಶಗಳು ಎದುರಾಗುತ್ತದೆ. ಅಭಿಮಾನಿಗಳು ತಮ್ಮ ಪ್ರೀತಿಯನ್ನು ವಿಭಿನ್ನವಾಗಿ ವ್ಯಕ್ತಪಡಿಸುತ್ತಾರೆ. ಕೆಲವರು ಅಭಿಮಾನದ ಪ್ರೀತಿಗೆ ಸಂಬಂಧದ ಹೆಸರು ಕೊಡಲು ಯತ್ನಿಸುತ್ತಾರೆ. ಅದೇ ರೀತಿ ಬಾಲಿವುಡ್​ನಲ್ಲಿ ಗುರುತಿಸಿಕೊಂಡಿರುವ ನಟಿ ಸೆಲೀನಾ ಜೇಟ್ಲಿ ಈ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಟ್ವಿಟರ್​ ಬಳಕೆದಾರರೊಬ್ಬರು ''ನನ್ನನ್ನು ಮದುವೆ ಆಗಿ, ಘರ್​ ಜಮಾಯಿ (ಮನೆ ಅಳಿಯ) ಮಾಡಿಕೊಳ್ಳಿ'' ಎಂದು ಕೇಳಿಕೊಂಡಿದ್ದಾರೆ. ಈ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ನಟಿ, ತಾನು ವಿವಾಹಿತೆ, ಓರ್ವ ತಾಯಿ ಎಂದು ಹೇಳಿಕೊಂಡಿದ್ದಾರೆ.

ಆ ವ್ಯಕ್ತಿಯ ಟ್ವೀಟ್ ಹೀಗಿತ್ತು: ಗುರುವಾರದಂದು ಟ್ವಿಟರ್ ಬಳಕೆದಾರರೋರ್ವರು ಸೆಲೀನಾ ಅವರಿಗೆ ಈ ರೀತಿಯಾಗಿ ಸಂದೇಶವನ್ನು ಕಳುಹಿಸಿದ್ದಾರೆ. 'ಸೆಲೀನಾ ಜೇಟ್ಲಿ, ಆಲ್ ದಿ ಬೆಸ್ಟ್. ನನ್ನ ಆರೋಗ್ಯ ಚೆನ್ನಾಗಿಲ್ಲ. ನನ್ನ ಆರೋಗ್ಯ ಹದಗೆಡುತ್ತಿದೆ. ನನ್ನನ್ನು ನೋಡಿಕೊಳ್ಳಲು ಯಾರೂ ಇಲ್ಲ. ತುರ್ತಾಗಿ ನಾನು ಘರ್ ಜಮಾಯಿ ಆಗಲು ಸಿದ್ಧನಾಗಿದ್ದೇನೆ. ದಯವಿಟ್ಟು ನನ್ನನ್ನು ನಿಮ್ಮೊಂದಿಗೆ ಕರೆದುಕೊಂಡು ಹೋಗಿ. ನನ್ನ ಜೀವನ ಮತ್ತು ಆರೋಗ್ಯವನ್ನು ಉಳಿಸಲು ಸಾಧ್ಯವಾದಷ್ಟು ಬೇಗ ನನ್ನನ್ನು ಮದುವೆಯಾಗಿ. ಪ್ರತಿಕ್ರಿಯಿಸಿ, ವಂದನೆಗಳು. ಕೋಲ್ಕತ್ತಾದಿಂದ ವಿಜಯ್ ಮಗನ್‌ಲಾಲ್ ವೋರಾ' ಎಂದು ಟ್ವೀಟ್​ ಮಾಡಿದ್ದಾರೆ.

ನಟಿಯ ಪ್ರತಿಕ್ರಿಯೆ ಏನು? ನಟಿ ಸೆಲೀನಾ ಜೇಟ್ಲಿ ಈ ಟ್ವೀಟ್​ ಅನ್ನು ಪರಿಗಣಿಸಿ, ಆ ಪ್ರಸ್ತಾಪವನ್ನು ತಮ್ಮದೇ ಆದ ರೀತಿಯಲ್ಲಿ ಸ್ವೀಕರಿಸಿದ್ದಾರೆ. ಒಂದು ರೀತಿಯ ವ್ಯಂಗ್ಯ ಉತ್ತರ ಕೊಟ್ಟಿದ್ದಾರೆ. ನಾನು ನನ್ನ ಪತಿ ಮತ್ತು ಮೂರು ಮಕ್ಕಳನ್ನು ಕೇಳಿ, ನಿಮ್ಮ ಟ್ವೀಟ್​ಗೆ ಹಿಂತಿರುಗುತ್ತೇನೆ ಎಂದು ತಿಳಿಸಿದ್ದಾರೆ.

ಅಭಿಮಾನಿಗಳು ಹೀಗಂದ್ರು... ನಟಿ ಸೆಲೀನಾ ಜೇಟ್ಲಿ ಅವರ ವ್ಯಂಗ್ಯಭರಿತ ಪ್ರತಿಕ್ರಿಯೆಯು ಅವರ ಅಭಿಮಾನಿಗಳಿಗೆ ಹಿಡಿಸಿದೆ. "ಕ್ಯಾ ಮಸ್ತ್ ಪ್ರತ್ಯುತ್ತರ್ ದಿಯಾ" (ಎಂಥಾ ಒಳ್ಳೆ ಪ್ರತ್ಯುತ್ತರ ಕೊಟ್ಟಿರಿ) ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೋರ್ವರು ಬರೆದಿದ್ದಾರೆ. ಮತ್ತೊಬ್ಬರು, "ಹೌದು, ಸರಿ, ನಾನು ದತ್ತುಪುತ್ರನ ಪಾತ್ರವನ್ನು ವಹಿಸುತ್ತೇನೆ'' ಎಂದು ಬರೆದಿದ್ದಾರೆ. 'ಆ ವ್ಯಕ್ತಿ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಲು ನನಗೆ ಕುತೂಹಲವಿದೆ' ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಂದು ಕಮೆಂಟ್‌ನಲ್ಲಿ, "ಅವರಿಗೆ ಸುಮಾರು 60 ವರ್ಷ, ಆದರೆ ಅವರ ಆತ್ಮವಿಶ್ವಾಸವನ್ನು ಇಷ್ಟಪಡುತ್ತೇನೆ, ನಿಮ್ಮ ಉತ್ತರವು (ನಟಿಯ ಟ್ವೀಟ್) ಎಲ್ಲಕ್ಕಿಂತ ಬೆಸ್ಟ್" ಎಂದು ಹೇಳಲಾಗಿದೆ.

ಇದನ್ನೂ ಓದಿ: ಮಗಳೊಂದಿಗೆ ಸಿದ್ದಿವಿನಾಯಕನ ದರ್ಶನ ಪಡೆದ ಪ್ರಿಯಾಂಕಾ ಚೋಪ್ರಾ

ನಟಿ ಸೆಲೀನಾ ಜೇಟ್ಲಿ ಮತ್ತು ಹೋಟೆಲ್ ಉದ್ಯಮಿ ಪೀಟರ್ ಹಾಗ್ 2011ರಲ್ಲಿ ವೈವಾಹಿಕ ಜೀವನ ಆರಂಭಿಸಿದ್ದಾರೆ.11 ವರ್ಷ ವಯಸ್ಸಿನ ವಿನ್ಸ್ಟನ್ ಮತ್ತು ವಿರಾಜ್​ ಎಂಬ ಅವಳಿ ಮಕ್ಕಳಿದ್ದಾರೆ. 5 ವರ್ಷ ವಯಸ್ಸಿನ ಆರ್ಥರ್ ಎಂಬ ಪುಟ್ಟ ಮಗನಿದ್ದಾನೆ.

ಇದನ್ನೂ ಓದಿ: ಆರ್​ಸಿಬಿ - ಕೆಕೆಆರ್​ ಪಂದ್ಯ: ವಿರಾಟ್​ಗೆ Jhoome Jo Pathaan ಸಾಂಗ್​ನ ಸ್ಟೆಪ್ಸ್​ ಕಲಿಸಿದ ಶಾರುಖ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.