ETV Bharat / entertainment

ಅರ್ಜುನ್ ಕಪೂರ್​-​ ಮಲೈಕಾ ಪ್ಯಾರಿಸ್​ ಪ್ರಣಯ: ಮುಂಬೈನಲ್ಲಿ ಲ್ಯಾಂಡ್​ ಆದ ಜೋಡಿ - ಪ್ಯಾರಿಸ್​ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಅರ್ಜುನ್​ ಕಪೂರ್​

ನಟಿ ನಿರ್ಮಾಪಕಿಯಾಗಿ ಮಲೈಕಾ ಅರೋರಾ ಗುರುತಿಸಿಕೊಂಡಿದ್ದು, ಈ ತಾರಾ ಜೋಡಿ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದಾರೆ. ಅರ್ಜುನ್​ ಕಪೂರ್​ ಹಾಗೂ ಮಲೈಕಾ ಅರೋರಾ ಮಧ್ಯೆ 12 ವರ್ಷಗಳ ವಯಸ್ಸಿನ ಅಂತರವಿದ್ದು, ಮಲೈಕಾ ಅವರಿಗೆ 49 ವರ್ಷ ವಯಸ್ಸಾಗಿದೆ.

Malaika Arora and Arjun Kapoor
ಅರ್ಜುನ್​ ಕಪೂರ್​ ಹಾಗೂ ಮಲೈಕಾ ಅರೋರಾ
author img

By

Published : Jun 30, 2022, 11:11 AM IST

Updated : Jun 30, 2022, 12:46 PM IST

ಮುಂಬೈ: ಹಿಂದಿ ಚಿತ್ರರಂಗದಲ್ಲಿ ನಟನಾಗಿ ತಮ್ಮದೇ ಛಾಪು ಮೂಡಿಸಿಕೊಂಡಿರುವ ಅರ್ಜುನ್​ ಕಪೂರ್​ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲು ಒಂದು ವಾರದ ಹಿಂದೆ ತಮ್ಮ ಗೆಳತಿ ಮಲೈಕಾ ಅರೋರಾ ಜೊತೆ ಪ್ಯಾರಿಸ್​ಗೆ ಪ್ರಯಾಣ ಬೆಳಸಿದ್ದು, ಇದೀಗ ತಮ್ಮ ಆನಂದಮಯ ಕ್ಷಣಗಳನ್ನು ಪ್ರಣಯದ ನಾಡಲ್ಲಿ ಕಳೆದಿರುವ ಜೋಡಿ, ನಿನ್ನೆ ತಾಯ್ನಾಡಿಗೆ ವಾಪಸ್​ ಆಗಿದ್ದು, ಮುಂಬೈ ಏರ್​ಪೋರ್ಟ್​ನಲ್ಲಿ ಮಾಧ್ಯಮಗಳ ಕಣ್ಣಿಗೆ ಬಿದ್ದಿದ್ದಾರೆ.

ಅರ್ಜುನ್​ ಕಪೂರ್​ ನಾಲ್ಕು ದಿನಗಳ ಹಿಂದೆ ತಮ್ಮ 37ನೇ ಹುಟ್ಟುಹಬ್ಬವನ್ನು ಗೆಳತಿಯೊಂದಿಗೆ ಪ್ಯಾರಿಸ್​ನಲ್ಲಿ ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬ ಆಚರಣೆ ಮಾತ್ರವಲ್ಲದೇ ಇಬ್ಬರೂ ಸೇರಿ ಉತ್ತಮ ಕ್ಷಣಗಳನ್ನು ಕಳೆಯಲು ಪ್ಯಾರಿಸ್​ ವಿಮಾನ ಏರಿದ್ದರು. ತಮ್ಮ ಮುಂಬರುವ ಸಿನಿಮಾಗಳ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದ ಅರ್ಜುನ್​ ಯಾವುದೇ ಬ್ರೇಕ್​ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ.

ಅರ್ಜುನ್ ಕಪೂರ್​-​ ಮಲೈಕಾ ಪ್ಯಾರಿಸ್​ ಪ್ರಣಯ

ಇದೀಗ ಏಕ್​ ವಿಲನ್​ ಸರಣಿ ಸಿನಿಮಾದ ಪ್ರೊಮೋಷನ್​​ ಕೆಲಸ ಪ್ರಾರಂಭವಾಗುವ ಮುನ್ನ ಸಣ್ಣದೊಂದು ಬ್ರೇಕ್​ ತೆಗೆದುಕೊಂಡು ಗೆಳತಿಯೊಂದಿಗೆ ವಿಶೇಷವಾಗಿ ತಮ್ಮ ಬರ್ತ್​ಡೇ ಆಚರಿಸಿಕೊಳ್ಳಲು ಹಾಗೂ ಸುಂದರ ಕ್ಷಣಗಳನ್ನು ಕಳೆಯಲು ಒಂದು ವಾರಕ್ಕೆ ಪ್ಯಾರಿಸ್​ ತೆರಳಿದ್ದರು.

Malaika Arora and Arjun Kapoor
ಅರ್ಜುನ್​ ಕಪೂರ್​ ಹಾಗೂ ಮಲೈಕಾ ಅರೋರಾ

ಕಳೆದ ಶುಕ್ರವಾರ ಪ್ಯಾರಿಸ್​ಗೆ ಹಾರುವ ವೇಳೆ ಏರ್​ಪೋರ್ಟ್​ನಲ್ಲಿ ಫೋಟೋದಲ್ಲಿ ಸೆರೆಯಾಗಿದ್ದರು. ಜೋಡಿ ತಾವು ಒಂದು ವಾರ ಪ್ಯಾರಿಸ್​ನಲ್ಲಿ ಕಳೆದ ಕ್ಷಣಗಳ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಬರ್ತ್​ಡೇ ದಿನ ತಾವು ಗೆಳತಿಗೆ ಫ್ರೆಂಚ್​ ಫ್ರೈಸ್​ ತಿನ್ನಿಸುತ್ತಿರುವ ವೀಡಿಯೋ ಹಂಚಿಕೊಂಡಿದ್ದರು. ಅಭಿಮಾನಿಗಳು ಅರ್ಜುನ್​ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದರು.

Arjun Kapoor
ಅರ್ಜುನ್​ ಕಪೂರ್​

ನಟಿ ನಿರ್ಮಾಪಕಿಯಾಗಿ ಮಲೈಕಾ ಅರೋರಾ ಗುರುತಿಸಿಕೊಂಡಿದ್ದು, ಈ ತಾರಾ ಜೋಡಿ ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದಾರೆ. ಅರ್ಜುನ್​ ಕಪೂರ್​ ಹಾಗೂ ಮಲೈಕಾ ಅರೋರಾ ಮಧ್ಯೆ 12 ವರ್ಷಗಳ ವಯಸ್ಸಿನ ಅಂತರವಿದ್ದು, ಮಲೈಕಾ ಅವರಿಗೆ 49 ವರ್ಷ ವಯಸ್ಸಾಗಿದೆ.

Malaika Arora
ಮಲೈಕಾ ಅರೋರಾ

ಅರ್ಜುನ್​ ಕಪೂರ್​ ಅಭಿನಯದ ಏಕ್​ ವಿಲನ್​ ರಿಟರ್ನ್ಸ್​ ಜುಲೈ 29ರಂದು ಬಿಡುಗಡೆಗೆ ಸಿದ್ಧಗೊಂಡಿದ್ದು, ಇದರಲ್ಲಿ ಜಾನ್​ ಅಬ್ರಹಂ, ದಿಶಾ ಪಟಾನಿ, ತಾರಾ ಸುತಾರಿಯಾ ಕೂಡ ಬಣ್ಣ ಹಚ್ಚಿದ್ದಾರೆ. ಇದು 2014ರಲ್ಲಿ ಬಿಡುಗಡೆಯಾಗಿದ್ದ, ಸಿದ್ಧಾರ್ಥ್​ ಮೆಲ್ಹೋತ್ರಾ ಹಾಗೂ ಶ್ರದ್ಧಾ ಕಪೂರ್​ ಅಭಿನಯದ ಏಕ್​ ವಿಲನ್​ ಸಿನಿಮಾದ ಸರಣಿ ಚಿತ್ರವಾಗಿದೆ. ಇದಲ್ಲದೆ ಅರ್ಜುನ್​ ಕಪೂರ್​ ಆಸ್ಮಾನ್​ ಭಾರಧ್ವಾಜ್​ ಅವರ ಕುಟ್ಟಿ ಹಾಗೂ ಅಜಯ್​ ಬಹಲ್ಸ್​ ದ ಲೇಡಿ ಕಿಲ್ಲರ್​ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

ಇದನ್ನೂ ಓದಿ : 47ರಲ್ಲೂ ಟಿನೇಜ್​​ ಗ್ಲಾಮರ್​.. ನಟಿ ಶಿಲ್ಪಾ ಶೆಟ್ಟಿ ಬ್ಯೂಟಿಫುಲ್​ ಫೋಟೋ ನೋಡಿ

Last Updated : Jun 30, 2022, 12:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.