ETV Bharat / entertainment

ಮೇ ಅಟಲ್​ ಹೂ: ವಾಜಪೇಯಿ ಜೀವನಾಧಾರಿತ ಸಿನಿಮಾ ಶೂಟಿಂಗ್​ ಆರಂಭಿಸಿದ ಪಂಕಜ್ ತ್ರಿಪಾಠಿ - ಅಟಲ್ ಬಿಹಾರಿ ವಾಜಪೇಯಿ

ದಿ. ಅಟಲ್ ಬಿಹಾರಿ ವಾಜಪೇಯಿ ಜೀವನಾಧಾರಿತ ಚಿತ್ರದ ಶೂಟಿಂಗ್​ ಇಂದು ಆರಂಭಗೊಂಡಿದೆ.

main atal hoon
ಮೇ ಅಟಲ್​ ಹೂ
author img

By

Published : May 7, 2023, 6:08 PM IST

ಹೆಸರಾಂತ ನಟ ಪಂಕಜ್ ತ್ರಿಪಾಠಿ ಅವರು ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ 'ಮೇ ಅಟಲ್ ಹೂ' ಶೂಟಿಂಗ್ ಆರಂಭಿಸಿದ್ದಾರೆ. ಇಂದು, ಮೇ ಅಟಲ್ ಹೂ ಚಿತ್ರೀಕರಣದ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. ಈ ಚಿತ್ರದ ಕಥೆ ಭಾರತದ ನಾಯಕ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ಮತ್ತು ರಾಜಕೀಯ ವೃತ್ತಿಜೀವನದ ಸುತ್ತ ಸುತ್ತುತ್ತದೆ.

ಮುಂಬೈನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಿಸಲಾಗಿದೆ. ಮುಂಬೈ ಮತ್ತು ಲಕ್ನೋದಂತಹ ವಿವಿಧ ಭಾಗಗಳಲ್ಲಿ 45ಕ್ಕೂ ಹೆಚ್ಚು ದಿನಗಳ ಕಾಲ ಶೂಟಿಂಗ್​ ನಡೆಸುವ ಯೋಜನೆಯಿದೆ. ನಮ್ಮ ಮಹಾನ್ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಅವರ ಪಾತ್ರವನ್ನು ನಿರ್ವಹಿಸುವ ಅವಕಾಶವನ್ನು ಪಡೆಯುವುದು ಒಂದು ಗೌರವಕರ ವಿಷಯ. ನಾವು ಚಿತ್ರದ ಬಗ್ಗೆ ಸ್ಟಡಿ ಮಾಡಲು ಸಮಯ ತೆಗೆದುಕೊಂಡೆವು. ಆಡುಭಾಷೆ, ಅವರ ಜೀವನಶೈಲಿ ಮತ್ತು ಅವರ ಬಗ್ಗೆ ಭಾರತದ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ನಡೆಯಿತು. ಇಂದು ಮೇ ಅಟಲ್ ಹೂ ಶೂಟಿಂಗ್​ ಆರಂಭಿಸಿದ್ದೇವೆ ಎಂದು ನಟ ಪಂಕಜ್ ತ್ರಿಪಾಠಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ನಿರ್ದೇಶಕ ರವಿ ಜಾಧವ್, "ಅಟಲ್ ಜಿ ಬಗ್ಗೆ ತಿಳಿದುಕೊಳ್ಳುವ ಮತ್ತು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಪಂಕಜ್ ಅವರು ಉತ್ತಮವಾಗಿ ತೊಡಗಿಸಿಕೊಂಡಿರುವುದನ್ನು ನಾನು ನೋಡಿದ್ದೇನೆ. ಅಂತಹ ಪ್ರವೀಣ ವ್ಯಕ್ತಿತ್ವವನ್ನು ಪ್ರತಿನಿಧಿಸಲು ಪಂಕಜ್ ಅವರಿಗಿಂತ ಉತ್ತಮ ಯಾರೂ ಇರಲಿಲ್ಲ ಎಂಬ ಬಗ್ಗೆ ನನಗೆ ಖಾತ್ರಿಯಿದೆ. ಅಟಲ್ ಜಿ ಅವರು ತಮ್ಮ ಜೀವನ ಮತ್ತು ನಮ್ಮ ದೇಶಕ್ಕಾಗಿ ಮಾಡಿದ ಮ್ಯಾಜಿಕ್ ಅನ್ನು ನಮ್ಮ ಚಲನಚಿತ್ರದಲ್ಲಿ ತರುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ನಿರ್ಮಾಪಕ ವಿನೋದ್ ಭಾನುಶಾಲಿ, "ಮೇ ಅಟಲ್ ಹೂನ್ ಒಂದು ವಿಶೇಷ ಚಿತ್ರ. ಚಿತ್ರಕ್ಕೆ ಸಂಬಂಧಿಸಿದ ಪ್ರತಿಯೊಬ್ಬರೂ ನಮ್ಮ ಪ್ರೇಕ್ಷಕರಿಗೆ ಉತ್ತಮ ಅನುಭವ ನೀಡಲು ಬಹಳ ಪ್ರಯತ್ನ ಹಾಕುತ್ತಿದ್ದಾರೆ. ಕಥೆ ಬಗ್ಗೆ ನಾವು ಸಾಕಷ್ಟು ಸಂಶೋಧನೆ ನಡೆಸಿದ್ದೇವೆ. ನಮ್ಮ ಚಿತ್ರದ ಚಿತ್ರೀಕರಣ ಆರಂಭಕ್ಕೂ ಮುನ್ನ ಸಾಕಷ್ಟು ಕೆಲಸ ನಡೆದಿದೆ'' ಎಂದು ತಿಳಿಸಿದರು.

ಇದನ್ನೂ ಓದಿ: 'ನನ್ನ ಹೆಂಡತಿಯ ನಿರೀಕ್ಷೆ vs ವಾಸ್ತವ' : ಪತ್ನಿ ಬಗ್ಗೆ ಯಶ್​ ಹೇಳಿದ್ದೇನು?

ಚಿತ್ರಕ್ಕೆ ರಿಷಿ ವೀರಮಾನಿ ಮತ್ತು ರವಿ ಜಾಧವ್ ಕಥೆ ಬರೆದಿದ್ದು, ಸಲೀಂ - ಸುಲೈಮಾನ್ ಅವರ ಸಂಗೀತ ಮತ್ತು ಮನೋಜ್ ಮುಂತಾಶಿರ್ ಸಾಹಿತ್ಯವಿದೆ. ಸಿನಿಮಾವನ್ನು ಭಾನುಶಾಲಿ ಸ್ಟುಡಿಯೋಸ್ ಲಿಮಿಟೆಡ್ ಮತ್ತು ಲೆಜೆಂಡ್ ಸ್ಟುಡಿಯೋಸ್ ಪ್ರಸ್ತುತಪಡಿಸಲಿದೆ. ವಿನೋದ್ ಭಾನುಶಾಲಿ, ಸಂದೀಪ್ ಸಿಂಗ್, ಸ್ಯಾಮ್ ಖಾನ್ ಮತ್ತು ಕಮಲೇಶ್ ಭಾನುಶಾಲಿ ನಿರ್ಮಿಸುತ್ತಿದ್ದಾರೆ. ಭವೇಶ್ ಭಾನುಶಾಲಿ, ಇಶಾನ್ ದತ್ತಾ, ಜೀಶನ್ ಅಹ್ಮದ್ ಮತ್ತು ಶಿವ್ ಶರ್ಮಾ ಸಹ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಡಿಸೆಂಬರ್‌ನಲ್ಲಿ ಚಿತ್ರ ಥಿಯೇಟರ್​ಗಳಲ್ಲಿ ತೆರೆಕಾಣಲಿದೆ.

ಇದನ್ನೂ ಓದಿ: ಸೀರೆ ಸವಿನೆನಪಲ್ಲಿ ಪ್ರಗತಿ ಶೆಟ್ಟಿ.. ಫ್ಯಾಮಿಲಿ ಫೋಟೋ ಹಂಚಿಕೊಂಡ 'ಕಾಂತಾರ' ಸ್ಟಾರ್ ದಂಪತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.