ETV Bharat / entertainment

ಮಹೇಶ್​​ ಬಾಬು ಫ್ಯಾಮಿಲಿ ಟೈಮ್​: ಹೆಂಡತಿ, ಮಕ್ಕಳೊಂದಿಗೆ ಪ್ರವಾಸ ಹೊರಟ ಸೂಪರ್​ ಸ್ಟಾರ್ - ಮಹೇಶ್​​ ಬಾಬು ವಿಡಿಯೋ

ತೆಲುಗು ನಟ ಮಹೇಶ್​​ ಬಾಬು ಫ್ಯಾಮಿಲಿ ಪ್ರವಾಸ ಕೈಗೊಂಡಿದೆ.

Mahesh Babu vacation
ಮಹೇಶ್​​ ಬಾಬು ಫ್ಯಾಮಿಲಿ ಪ್ರವಾಸ
author img

By

Published : Jul 22, 2023, 7:22 PM IST

ತೆಲುಗು ಸೂಪರ್‌ ಸ್ಟಾರ್ ಮಹೇಶ್ ಬಾಬು ಅವರು ಕೇವಲ ಸಿನಿಮಾಗಳಿಗೆ ಮಾತ್ರವಲ್ಲದೇ ಕುಟುಂಬಕ್ಕೆ ತಮ್ಮ ನಿರ್ದಿಷ್ಟ ಸಮಯ ಮೀಸಲಿಡುತ್ತಾರೆ. ಪ್ರವಾಸಕ್ಕೆ ಹೆಚ್ಚು ಆದ್ಯತೆ ಕೊಡುವ ನಟ ಕುಟುಂಬಸ್ಥರೊಂದಿಗೆ ಉತ್ತಮ ಸಮಯ ಕಳೆಯಲು ಇಷ್ಟಪಡುತ್ತಾರೆ.

ಮಹೇಶ್​​ ಬಾಬು ಫ್ಯಾಮಿಲಿ ಪ್ರವಾಸ: ಸೌತ್​ ಸಿನಿಮಾ ನಟ ಆಗಾಗ್ಗೆ ಪ್ರವಾಸ ಕೈಗೊಳ್ಳುತ್ತಿರುತ್ತಾರೆ. ಕಳೆದ ಮೇ.ನಲ್ಲಿ ಸ್ಪೇನ್‌ ಪ್ರವಾಸ ಎಂಜಾಯ್​ ಮಾಡಿದ್ದರು. ಇದೀಗ ಮತ್ತೊಮ್ಮೆ ಸೂಪರ್‌ಸ್ಟಾರ್ ತಮ್ಮ ಕುಟುಂಬದೊಂದಿಗೆ ಪ್ರವಾಸಕ್ಕೆ ಹೊರಟಿದ್ದಾರೆ. ಇಂದು ಬೆಳಗ್ಗೆ ಮಹೇಶ್ ಬಾಬು, ಪತ್ನಿ ನಮ್ರತಾ ಶಿರೋಡ್ಕರ್ ಮತ್ತು ಮಕ್ಕಳಾದ ಗೌತಮ್, ಸಿತಾರಾ ಜೊತೆ ಹೈದರಾಬಾದ್​ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.

ಸಿತಾರಾ ಜನ್ಮದಿನ: ಇತ್ತೀಚೆಗೆ ಪುತ್ರಿ ಸಿತಾರಾ 11 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮುದ್ದು ಮಗಳು ಸಿತಾರಾ ಅವರ ಹುಟ್ಟುಹಬ್ಬವನ್ನು ಆಚರಿಸುವ ಸಲುವಾಗಿ ಈ ಪ್ರವಾಸ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಜುಲೈ 20 ರಂದು ಸಿತಾರಾ ಅವರ ಹುಟ್ಟುಹಬ್ಬವನ್ನು ಮಹೇಶ್ ಬಾಬು ಫೌಂಡೇಶನ್‌ನ ಸದಸ್ಯರೊಂದಿಗೆ ಮನೆಯಲ್ಲಿಯೇ ಆಚರಿಸಲಾಯಿತು.

ಸಿತಾರಾ ಅವರ 11 ನೇ ವರ್ಷದ ಹುಟ್ಟುಹಬ್ಬ ವಿಶೇಷವಾಗಿತ್ತು. ಏಕೆಂದರೆ ಆಭರಣ ಜಾಹೀರಾತೊಂದರ ಸಲುವಾಗಿ ಟೈಮ್ಸ್ ಸ್ಕ್ವೇರ್‌ನಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಅದರಿಂದ ಪಡೆದ ಸಂಭಾವನೆಯನ್ನು ಸಮಾಜ ಸೇವೆಗೆ ಬಳಸಿದ್ದರು. ಈ ವಿಚಾರವಾಗಿ ಸಿತಾರಾ ಸುದ್ದಿಯಲ್ಲಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಸಿತಾರಾ, ಜಾಹೀರಾತಿನ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಮಹೇಶ್ ಬಾಬು ಮತ್ತು ನಮ್ರತಾ ಅವರ ಮುದ್ದು ಮಗಳು ಇಷ್ಟು ಚಿಕ್ಕ ವಯಸ್ಸಿನಲ್ಲೇ ಈ ಸಾಧನೆ ಮಾಡುವ ಮೂಲಕ ಇತರರಿಗೆ ಸ್ಫೂರ್ತಿ ಆಗಿದ್ದಾರೆ. ಈ ಸಾಧನೆ ಮಾಡಿದ ಮೊದಲ ತೆಲುಗು ಸ್ಟಾರ್ ಕಿಡ್​ ಎಂದು ಸಹ ಹೇಳಲಾಗಿದೆ.

ಸಿತಾರಾ ಹಿಂದುಳಿದ ವಿದ್ಯಾರ್ಥಿನಿಯರಿಗೆ ಉಚಿತ ಸೈಕಲ್​ ಕೂಡ ವಿತರಿಸಿದ್ದಾರೆ. ಬಳಿಕ ಅವರೊಂದಿಗೆ ಬರ್ತ್​ಡೇ ಸೆಲೆಬ್ರೇಟ್​ ಮಾಡಿಕೊಂಡಿದ್ದಾರೆ. ಸಿತಾರಾ ಅವರ ಬರ್ತ್​ಡೇ ಸೆಲೆಬ್ರೇಶನ್​ ಫೊಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿವೆ.

ಇದನ್ನೂ ಓದಿ: ಸಿನಿಮಾಗಳಿಂದ ಬ್ರೇಕ್​.. ವಿರಾಮದ ದಿನಗಳಲ್ಲಿ ಸಮಂತಾ ರುತ್ ಪ್ರಭು ದಿನಚರಿ ಹೇಗಿರಲಿದೆ?

ಇನ್ನೂ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಸಿನಿ ಕೆಲಸ ಗಮನಿಸುವುದಾದರೆ, 'ಗುಂಟೂರು ಕಾರಂ' ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ತ್ರಿವಿಕ್ರಮ್ ಶ್ರೀನಿವಾಸ್ ಆ್ಯಕ್ಷನ್​ ಕಟ್​ ಹೇಳುತ್ತಿರುವ ಈ ಸಿನಿಮಾದಲ್ಲಿ ಮಹೇಶ್ ಬಾಬು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ವರದಿಗಳ ಪ್ರಕಾರ, ಸ್ಕ್ರಿಪ್ಟ್​ ಸೇರಿದಂತೆ ಚಿತ್ರತಂಡದಲ್ಲಿ ಕೆಲ ಬದಲಾವಣೆ ಆಗುತ್ತಿದ್ದು, ಚಿತ್ರೀಕರಣ ವಿಳಂಬವಾಗುತ್ತಿದೆ. ಪೂಜಾ ಹೆಗ್ಡೆ ಚಿತ್ರದಿಂದ ನಿರ್ಗಮಿಸಿದ್ದಾರೆ. ಮೀನಾಕ್ಷಿ ಚೌಧರಿ ಚಿತ್ರತಂಡ ಸೇರಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮೀನಾಕ್ಷಿ ಚೌಧರಿ ಇದನ್ನು ದೃಢಪಡಿಸಿದ್ದಾರೆ.

ಇದನ್ನೂ ಓದಿ: Video: ಅಮರನಾಥ್ ಯಾತ್ರೆ ವಿಡಿಯೋ ಹಂಚಿಕೊಂಡ ನಟಿ ಸಾರಾ ಅಲಿ ಖಾನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.