ETV Bharat / entertainment

'ಜಿಗರ್​ತಂಡ ಡಬಲ್​ ಎಕ್ಸ್​' ಟೀಸರ್​ ಅನಾವರಣಗೊಳಿಸಿದ ಭಾರತೀಯ ಚಿತ್ರರಂಗದ ಸೂಪರ್​ಸ್ಟಾರ್ಸ್​ - ಈಟಿವಿ ಭಾರತ ಕನ್ನಡ

'ಜಿಗರ್​ತಂಡ ಡಬಲ್​ ಎಕ್ಸ್​' ಚಿತ್ರದ ಟೀಸರ್​ ಅನ್ನು ಭಾರತೀಯ ಚಿತ್ರರಂಗದ ಸೂಪರ್​ಸ್ಟಾರ್​ ನಟರಾದ ಮಹೇಶ್​ ಬಾಬು, ದುಲ್ಕರ್​ ಸಲ್ಮಾನ್​, ಧನುಷ್​ ಮತ್ತು ರಕ್ಷಿತ್​ ಶೆಟ್ಟಿ ಅನಾವರಣಗೊಳಿಸಿದ್ದಾರೆ.

Jigarthanda Double X teaser
'ಜಿಗರ್ತಾಂಡ ಡಬಲ್​ ಎಕ್ಸ್​'
author img

By ETV Bharat Karnataka Team

Published : Sep 11, 2023, 3:32 PM IST

ಬಹುನಿರೀಕ್ಷೆಯಿಂದ ಕಾಯುತ್ತಿರುವ 'ಜಿಗರ್​ತಂಡ ಡಬಲ್​ ಎಕ್ಸ್​' ಚಿತ್ರದ ಟೀಸರ್​ ಇಂದು ಅನಾವರಣಗೊಂಡಿದೆ. ಟಾಲಿವುಡ್​ ಸೂಪರ್​ಸ್ಟಾರ್​ ಮಹೇಶ್​ ಬಾಬು, ಮಾಲಿವುಡ್​ ನಟ ದುಲ್ಕರ್​ ಸಲ್ಮಾನ್​, ಕಾಲಿವುಡ್​ ಸೂಪರ್​ಸ್ಟಾರ್​ ಧನುಷ್​, ಸ್ಯಾಂಡಲ್​ವುಡ್​ ಸಿಂಪಲ್​ ಸ್ಟಾರ್​ ರಕ್ಷಿತ್ ಶೆಟ್ಟಿ ಸೇರಿ 'ಜಿಗರ್​ತಂಡ ಡಬಲ್​ ಎಕ್ಸ್​' ಸಿನಿಮಾದ ಸಣ್ಣ ತುಣುಕನ್ನು ಬಿಡುಗಡೆಗೊಳಿಸಿದ್ದಾರೆ. 2014ರ ಜಿಗರ್​ತಂಡ ಚಿತ್ರದ ಮುಂದುವರಿದ ಭಾಗವಾಗಿರುವ ಈ ಚಿತ್ರವು 2023ರ ದೀಪಾವಳಿ ಸಂದರ್ಭದಲ್ಲಿ ಚಿತ್ರಮಂದಿರಗಳಿಗೆ ಬರಲು ಸಿದ್ಧವಾಗಿದೆ.

  • " class="align-text-top noRightClick twitterSection" data="">

ಕಾರ್ತಿಕ್​ ಸುಬ್ಬರಾಜ್ ಪೋಸ್ಟ್​: 'ಜಿಗರ್​ತಂಡ ಡಬಲ್​ ಎಕ್ಸ್​' ಚಿತ್ರದ ಟೀಸರ್​ ಲಿಂಕ್​ ಅನ್ನು ಹಂಚಿಕೊಳ್ಳಲು ನಿರ್ದೇಶಕ ಕಾರ್ತಿಕ್​ ಸುಬ್ಬರಾಜ್​ ಸೋಷಿಯಲ್​ ಮೀಡಿಯಾವನ್ನು ವೇದಿಕೆಯನ್ನಾಗಿ ಬಳಸಿಕೊಂಡರು. "#ಜಿಗರ್​ತಂಡ ಡಬಲ್​ ಎಕ್ಸ್​ ಟೀಸರ್​. ಪಂದ್ಯಾ ವೆಸ್ಟರ್ನ್​ ಕಥೆ. ಈ ದೀಪಾವಳಿಗೆ ಥಿಯೇಟರ್​ಗಳಲ್ಲಿ. #APandyaaWestern #JigarthandaDoubleXTeaser #DoubleXDiwali." ಎಂದು ಕ್ಯಾಪ್ಶನ್​ ನೀಡಿದ್ದಾರೆ. ಈ ಬಾರಿಯ ದೀಪಾವಳಿಗೆ ಅನೇಕ ಸಿನಿಮಾಗಳು ತೆರೆ ಕಾಣಲು ಸಜ್ಜಾಗಿದ್ದು, ಆ ಸಾಲಿಗೆ 'ಜಿಗರ್​ತಂಡ ಡಬಲ್​ ಎಕ್ಸ್​' ಕೂಡ ಸೇರಿದೆ.

ಇದಕ್ಕೂ ಮುನ್ನ ನಿರ್ದೇಶಕರು ಭಾನುವಾರ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಚಿತ್ರದ ಪೋಸ್ಟರ್​ ಅನ್ನು ಹಂಚಿಕೊಂಡಿದ್ದರು. "ಜಿಗರ್ತಾಂಡ ಡಬಲ್​ ಎಕ್ಸ್​ನ ಟೀಸರ್​ ಅನ್ನು ಧನುಷ್​, ಮಹೇಶ್​ ಬಾಬು, ರಕ್ಷಿತ್​ ಶೆಟ್ಟಿ ಮತ್ತು ದುಲ್ಕರ್​ ಸಲ್ಮಾನ್​ ನಾಳೆ ಮಧ್ಯಾಹ್ನ 12.12ಕ್ಕೆ ಬಿಡುಗಡೆ ಮಾಡಲಿದ್ದಾರೆ" ಎಂದು ಬರೆದುಕೊಂಡಿದ್ದರು. ಮತ್ತೊಂದು ಪೋಸ್ಟ್​ನಲ್ಲಿ ಕಾರ್ತಿಕ್​, "ಟೀಸರ್​ಗಿಂತಲೂ ಹೆಚ್ಚು. ಸೆಪ್ಟಂಬರ್​ 11, 12.12ಕ್ಕೆ ಬಿಡುಗಡೆಯಾಗುತ್ತಿದೆ. #MorethanATeaser #DoubleXDiwali" ಎಂಬ ಅಡಿಬರಹ ನೀಡಿದ್ದರು.

ಇದನ್ನೂ ಓದಿ: ಕಣ್ಣಪ್ಪ ಸಿನಿಮಾದಲ್ಲಿ ಶಿವನ ಪಾತ್ರ ವಹಿಸಲಿರುವ ಪ್ರಭಾಸ್​.. ಆದಿಪುರುಷ್​ ನಟಿ ಕೃತಿ ಸಹೋದರಿ ಜೊತೆ ಸ್ಕ್ರೀನ್​ ಶೇರ್

ಚಿತ್ರತಂಡ ಹೀಗಿದೆ.. 'ಜಿಗರ್​ತಂಡ ಡಬಲ್​ ಎಕ್ಸ್​' ಸಿನಿಮಾವನ್ನು ಕಾರ್ತಿಕ್​ ಸುಬ್ಬರಾಜ್​ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಖ್ಯಾತ ನಿರ್ದೇಶಕ, ನಟ ಹಾಗೂ ಸ್ಟಾರ್​ ಕೊರಿಯೋಗ್ರಾಫರ್​ ರಾಘವ​ ಲಾರೆನ್ಸ್, ಎಸ್​ ಜೆ ಸೂರ್ಯ ಮತ್ತು​​ ನಿಮಿಷಾ ಸಜಯನ್​ ಮುಂತಾದವರು ನಟಿಸಿದ್ದಾರೆ. ಸಿನಿಮಾದ ನಿರ್ಮಾಣದ ಜವಾಬ್ದಾರಿಯನ್ನು ಕಾರ್ತಿಕೇಯನ್​ ಸಂತಾನಂ ಹೊತ್ತಿದ್ದಾರೆ. ಜೊತೆಗೆ ಅಲಂಕಾರ್​ ಪಾಂಡಿಯನ್​ ಸಹ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರವು ತಮಿಳು, ತೆಲುಗು ಮತ್ತು ಹಿಂದಿ ಸೇರಿದಂತೆ ಮೂರು ಭಾಷೆಗಳಲ್ಲಿ ನವೆಂಬರ್​ 2023 ರಲ್ಲಿ ಬಿಡುಗಡೆಯಾಗಲಿದೆ.

ಕರಣ್​ ಬೂಲಾನಿಯ ಬಹುನಿರೀಕ್ಷಿತ ಚಿತ್ರ ಥ್ಯಾಂಕ್ಯೂ ಫಾರ್​ ಕಮಿಂಗ್​ ಕೂಡ ದೀಪಾವಳಿ ಸಮಯದಲ್ಲೇ ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ಬಾಲಿವುಡ್​ ನಟಿ ಭೂಮಿ ಪಡ್ನೇಕರ್​ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಹಿಂದಿ ಮಾತ್ರವಲ್ಲದೇ ಇತರೆ ಭಾಷೆಯ ಕೆಲವೊಂದು ಸಿನಿಮಾಗಳು ಕೂಡ ಅದೇ ಸಮಯದಲ್ಲಿ ತೆರೆ ಕಾಣಲಿದೆ. ಹೀಗಾಗಿ ಬಾಕ್ಸ್​ ಆಫೀಸ್​ನಲ್ಲಿ ಸಿನಿ ಪ್ರೇಮಿಗಳಿಗೆ ಮನರಂಜನೆಯ ಮಹಾಪೂರವೇ ಸಿಗಲಿದೆ.

ಇದನ್ನೂ ಓದಿ: ವಿಶ್ವಾದ್ಯಂತ ಶಾರುಖ್​ ಖಾನ್‌ ಸಿನಿಮಾ ಅಬ್ಬರ​; 4 ದಿನದಲ್ಲಿ ₹500 ಕೋಟಿ ಬಾಚಿದ 'ಜವಾನ್​'!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.