ETV Bharat / entertainment

'ಅಪರೂಪ' ಚಿತ್ರದ ಟ್ರೇಲರ್​ ರಿಲೀಸ್​; ಮಹೇಶ್​ ಬಾಬುಗೆ ಡಾಲಿ ಧನಂಜಯ್​ ಸಾಥ್​ - ಈಟಿವಿ ಭಾರತ ಕನ್ನಡ

ಮಹೇಶ್​ ಬಾಬು ನಿರ್ದೇಶನದ 'ಅಪರೂಪ' ಚಿತ್ರದ ಟ್ರೇಲರ್​ ಅನ್ನು ನಟ ರಾಕ್ಷಸ ಡಾಲಿ ಧನಂಜಯ್​ ಬಿಡುಗಡೆಗೊಳಿಸಿದ್ದಾರೆ.

Aparupa movie
ಮಹೇಶ್​ ಬಾಬು ನಿರ್ದೇಶನದ 'ಅಪರೂಪ' ಚಿತ್ರಕ್ಕೆ ಡಾಲಿ ಧನಂಜಯ್​ ಸಾಥ್​
author img

By

Published : Jul 8, 2023, 5:32 PM IST

ಕನ್ನಡ ಚಿತ್ರರಂಗದಲ್ಲಿ‌ 'ಆಕಾಶ್', 'ಅರಸು'ನಂತಹ ಸೂಪರ್​ ಹಿಟ್​ ಸಿನಿಮಾಗಳನ್ನು ನಿರ್ದೇಶನ ಮಾಡಿ ಸಕ್ಸಸ್​ ಫುಲ್​ ಡೈರೆಕ್ಟರ್​ ಎನಿಸಿಕೊಂಡವರು ಮಹೇಶ್​ ಬಾಬು. ವಿಭಿನ್ನ ಹಾಗೂ ವಿಶಿಷ್ಟ ಪ್ರೇಮಕಥೆಗಳನ್ನು ಪ್ರೇಕ್ಷಕರಿಗೆ ಉಣಬಡಿಸುವಲ್ಲಿ ಇವರು ಎಂದಿಗೂ ಮುಂದು. ಇದೀಗ ಇವರ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾ ಮೂಡಿಬರುತ್ತಿದೆ. ಆಲ್​ ಮೋಸ್ಟ್​ ಶೂಟಿಂಗ್​ ಮುಗಿಸಿರುವ 'ಅಪರೂಪ' ಚಿತ್ರ ಇನ್ನೇನು ಬಿಡುಗಡೆಗೆ ಸಜ್ಜಾಗಿದೆ.

Aparupa movie
'ಅಪರೂಪ' ಚಿತ್ರತಂಡ

ಇದೀಗ ಸಿನಿಮಾದ ಟ್ರೇಲರ್​ ಅನ್ನು ನಟ ರಾಕ್ಷಸ ಡಾಲಿ ಧನಂಜಯ್​ ಬಿಡುಗಡೆಗೊಳಿಸಿ ತಂಡಕ್ಕೆ ಸಾಥ್ ನೀಡಿದ್ದಾರೆ.​ ಬಳಿಕ ಮಾತನಾಡಿದ ಅವರು, "ಕನ್ನಡ ಚಿತ್ರರಂಗಕ್ಕೆ ಮಹೇಶ್ ಬಾಬು ಅವರು ತುಂಬಾ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. 'ಅಪರೂಪ' ಕೂಡ ಅದೇ ಹಿಟ್​ ಸಾಲಿಗೆ ಸೇರಲಿ. ಸುಘೋಷ್ ಸ್ಕ್ರೀನ್ ಪ್ರೆಸೆನ್ಸ್ ತುಂಬಾ ಚೆನ್ನಾಗಿದೆ. ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ. ತುಂಬಾ ಪ್ರಿಪೇರ್ ಆಗಿ ಬಂದಿದ್ದಾರೆ. ಕನ್ನಡ ಇಂಡಸ್ಟ್ರಿಗೆ ಅವರಿಗೆ ಸ್ವಾಗತ. ಹೃತಿಕಾ ಅವರ ಸ್ಕ್ರೀನ್ ಪ್ರೆಸೆನ್ಸ್, ಡ್ಯಾನ್ಸ್ ಕೂಡ ಚೆನ್ನಾಗಿದೆ. ಸುಗ್ಗಿ ಸಿನಿಮಾ ದೊಡ್ಡ ಸುದ್ದಿಯಾಗಲಿ. ಸಿನಿಮಾ ಒಳ್ಳೆ ಸುಗ್ಗಿಯಾಗಲಿ" ಎಂದು ಶುಭಹಾರೈಸಿದರು.

Aparupa movie
ಮಹೇಶ್​ ಬಾಬು ನಿರ್ದೇಶನದ 'ಅಪರೂಪ' ಚಿತ್ರಕ್ಕೆ ಡಾಲಿ ಧನಂಜಯ್​ ಸಾಥ್​

ಬಳಿಕ ನಿರ್ದೇಶಕ ಮಹೇಶ್ ಬಾಬು ಮಾತನಾಡಿ, "ಈ ಕಾರ್ಯಕ್ರಮಕ್ಕೆ ಪ್ರೋತ್ಸಾಹ ಕೊಟ್ಟಿರುವ ಡಾಲಿ ಧನಂಜಯ್ ಅವರಿಗೆ ಧನ್ಯವಾದಗಳು. 'ಅಪರೂಪ' ಅನ್ನೋದು ಲವ್ ಸ್ಟೋರಿ. ನಾನು ಹೆಚ್ಚಾಗಿ ಲವ್ ಸ್ಟೋರಿ ಸಿನಿಮಾಗಳನ್ನೇ ಮಾಡಿದ್ದೇನೆ. ಈ ಚಿತ್ರದಲ್ಲಿ ವಿಲನ್​ಗಳಿಲ್ಲ. ಹೀರೋ-ಹೀರೋಯಿನ್​ಗಳೇ ವಿಲನ್​ಗಳು. ಉಳಿದಿದ್ದು ತೆರೆಮೇಲೆ ನೋಡಿ. ಹೊಸ ನಾಯಕ ನಾಯಕಿ ಮೇಲೆ ನಿಮ್ಮ ಆರ್ಶೀವಾದ ಇರಲಿ" ಎಂದರು.

ಇದನ್ನೂ ಓದಿ: 'ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ' ಟ್ರೇಲರ್​ ಅನಾವರಣಕ್ಕೆ ದಿನ ನಿಗದಿ

ನಾಯಕ ಸುಘೋಷ್ ಮಾತನಾಡಿ, "ಟ್ರೇಲರ್ ನಿಮಗೆ ಇಷ್ಟವಾಗಿದೆ ಎಂದುಕೊಳ್ಳುತ್ತೇನೆ. ಜುಲೈ 14ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಹೊಸಬರಿಗೆ ಈಗಿನ ಟೈಮ್​ನಲ್ಲಿ ಗೆಲ್ಲುವುದು ತುಂಬಾ ಕಷ್ಟವಿದೆ. ಜನ ಅಷ್ಟಾಗಿ ಥಿಯೇಟರ್​ಗೆ ಬಂದು ಸಿನಿಮಾ ನೋಡುತ್ತಿಲ್ಲ. ಆದರೆ, ಈ ಸಿನಿಮಾವನ್ನು ನೀವೆಲ್ಲರೂ ನೋಡಲೇಬೇಕು. ಈ ಚಿತ್ರದಿಂದ ನಾನು ತುಂಬಾ ಕಲಿತಿದ್ದೇನೆ" ಎಂದು ಹೇಳಿದರು.

ಚಿತ್ರತಂಡ ಹೀಗಿದೆ.. 'ಅಪರೂಪ' ಸಿನಿಮಾ ಮೂಲಕ ಸುಘೋಷ್ ಮತ್ತು ಹೃತಿಕಾ ಕನ್ನಡ ಸಿನಿಮಾ ಲೋಕಕ್ಕೆ ನಾಯಕ ಹಾಗೂ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ನಾಯಕ ನಾಯಕಿಯ ನಡುವೆ ಬರುವ ಅಹಂ ಏನೆಲ್ಲಾ ಸಮಸ್ಯೆ ಉಂಟು ಮಾಡುತ್ತದೆ ಎನ್ನುವುದನ್ನು ಚಿತ್ರದ ಮೂಲಕ ತೋರಿಸಿದ್ದಾರೆ ನಿರ್ದೇಶಕ ಮಹೇಶ್ ಬಾಬು.

ಚಿತ್ರದಲ್ಲಿ ಅಶೋಕ್, ಅರುಣಾ ಬಲರಾಜ್, ಅವಿನಾಶ್, ಕುರಿಪ್ರತಾಪ್, ದಿನೇಶ್ ಮಂಗಳೂರು, ವಿಜಯ್ ಚೆಂಡೂರು, ಕಡ್ಡಿಪುಡಿ ಚಂದ್ರು, ಮೋಹನ್ ಜುನೇಜಾ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ. ಪ್ರಜ್ವಲ್ ಪೈ ಸಂಗೀತ ಇದ್ದು, ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಒಂದು ಹಾಡಿಗೆ ಧ್ವನಿಯಾಗಿರುವುದು ವಿಶೇಷ. ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಕಾಶ್ಮೀರದಲ್ಲಿ ಶೂಟಿಂಗ್ ನಡೆಸಲಾಗಿದ್ದು, ಸೂರ್ಯಕಾಂತ್ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ. ಸುಗ್ಗಿ ಸಿನಿಮಾಸ್ ಬ್ಯಾನರ್ ನಡಿ ತಯಾರಾಗಿರುವ 'ಅಪರೂಪ' ಸಿನಿಮಾ ಜುಲೈ 14ಕ್ಕೆ ತೆರೆ ಕಾಣಲಿದೆ.

ಇದನ್ನೂ ಓದಿ: ಹೊಸ ಪ್ರತಿಭೆಗಳ 'ಪರಂವಃ' ಚಿತ್ರಕ್ಕೆ ಮಾಜಿ ಸಿಎಂ ಹೆಚ್​ಡಿಕೆ-ಅಶ್ವಿನಿ ಪುನೀತ್ ರಾಜ್​ಕುಮಾರ್​​ ಸಾಥ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.