ETV Bharat / entertainment

ನಿತಿನ್ ದೇಸಾಯಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಮಹಾರಾಷ್ಟ್ರ ಸಿಎಂ,  ಡಿಸಿಎಂ - ಈಟಿವಿ ಭಾರತ ಕನ್ನಡ

ನಿತಿನ್​ ದೇಸಾಯಿ ಪಾರ್ಥಿವ ಶರೀರಕ್ಕೆ ಮಹಾರಾಷ್ಟ್ರ ಸಿಎಂ ಏಕನಾಥ್​ ಶಿಂಧೆ ಮತ್ತು ಡಿಸಿಎಂ ಅಜಿತ್​ ಪವಾರ್​ ಅಂತಿಮ ನಮನ ಸಲ್ಲಿಸಿದರು.

art director nitin desai
ನಿತಿನ್​ ಚಂದ್ರಕಾಂತ್​ ದೇಸಾಯಿ
author img

By

Published : Aug 4, 2023, 10:45 AM IST

ಹಲವು ಸೂಪರ್​ ಹಿಟ್​ ಸಿನಿಮಾಗಳ ಕಲಾ ನಿರ್ದೇಶಕ ನಿತಿನ್​ ಚಂದ್ರಕಾಂತ್​ ದೇಸಾಯಿ ಬುಧವಾರ ನಿಧನರಾಗಿದ್ದಾರೆ. ಮುಂಬೈನ ಜೆಜೆ ಆಸ್ಪತ್ರೆಯಲ್ಲಿ ನಿತಿನ್​ ಚಂದ್ರಕಾಂತ್​ ದೇಸಾಯಿ ಪಾರ್ಥಿವ ಶರೀರಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ಅಜಿತ್​ ಪವಾರ್​ ಅಂತಿಮ ನಮನ ಸಲ್ಲಿಸಿದರು.

ಸಿಎಂ ಶಿಂಧೆ ಹಾಗೂ ಡಿಸಿಎಂ ಅಜಿತ್​ ಪವಾರ್​ ಜೊತೆಯಾಗಿ ಕಾಣಿಸಿಕೊಂಡಿರುವ ವಿಡಿಯೋಗಳು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಮುಖ್ಯಮಂತ್ರಿ ಏಕನಾಥ್​ ಶಿಂಧೆ, ಸಚಿವ ಸುಧೀರ್​ ಮುಂಗಂತಿವಾರ್​, ಎನ್​ಸಿಪಿ ಅಧ್ಯಕ್ಷ ಶರದ್​ ಪವಾರ್ ಮತ್ತು ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಸೇರಿದಂತೆ ಚಿತ್ರರಂಗದ ಗಣ್ಯರು ನಿತಿನ್​ ಚಂದ್ರಕಾಂತ್​ ದೇಸಾಯಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಕಲಾ ನಿರ್ದೇಶಕ ನಿತಿನ್​ ಚಂದ್ರಕಾಂತ್​ ದೇಸಾಯಿ​ ಅವರ ಸಾವು ಆಘಾತಕಾರಿ ಮತ್ತು ದುರದೃಷ್ಟಕರ ಎಂದು ಶಿಂಧೆ ಟ್ವೀಟ್​ ಮಾಡಿದ್ದಾರೆ. "ವೈಯಕ್ತಿಕವಾಗಿ ನನಗೆ ಮತ್ತು ಇಡೀ ಚಿತ್ರರಂಗಕ್ಕೆ ಅತ್ಯಂತ ನೋವಿನ ದಿನ" ಎಂದಿದ್ದಾರೆ. ಶರದ್​ ಪವಾರ್​ ಅವರು, ನಿತಿನ್​ ಚಂದ್ರಕಾಂತ್​ ದೇಸಾಯಿ ಅವರ ನಿಧನದಿಂದ ರಾಜ್ಯವು ಹೊಸತನದ ಒಲವು ಮತ್ತು ಶ್ರಮಿಸುವ ಇಚ್ಛೆಯುಳ್ಳ ಒಬ್ಬ ಶ್ರೇಷ್ಠ ಮರಾಠಿ ಉದ್ಯಮಿಯನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಆಶಾ, ಗೆದ್ದ ಮಗ ಚಿತ್ರದಲ್ಲಿ ಅಂಬರೀಶ್​​ ಜೊತೆ ಅಭಿನಯಿಸಿದ್ದ ಕಲಾವಿದೆ ಗುಡೂರ ಮಮತಾ ಇನ್ನಿಲ್ಲ..

ನಿತಿನ್​ ಚಂದ್ರಕಾಂತ್​ ದೇಸಾಯಿ​ ಆತ್ಮಹತ್ಯೆ: ಕಲಾ ನಿರ್ದೇಶಕ ನಿತಿನ್​ ಚಂದ್ರಕಾಂತ್​ ದೇಸಾಯಿ ಮೃತದೇಹ ಬುಧವಾರ ಮುಂಜಾನೆ ಅವರ ಎನ್​ಡಿ ಸ್ಟುಡಿಯೋದಲ್ಲಿ ಪತ್ತೆಯಾಗಿತ್ತು. ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿತ್ತು. ಆತ್ಮಹತ್ಯೆ ಹಿಂದಿನ ನಿಖರ ಕಾರಣ ತಿಳಿಯಲು ತನಿಖೆ ಚುರುಕುಗೊಂಡಿದೆ. ಈ ಸುದ್ದಿ ಚಿತ್ರರಂಗದವರೂ ಸೇರಿದಂತೆ ಪ್ರೇಕ್ಷಕರಿಗೆ ಆಘಾತವನ್ನುಂಟು ಮಾಡಿತ್ತು.

ಸೂಪರ್​ ಹಿಟ್​ ಸಿನಿಮಾಗಳ ಕಲಾ ನಿರ್ದೇಶಕ: ಬಾಲಿವುಡ್‌ನ ಅತ್ಯುತ್ತಮ ಕಲಾ ನಿರ್ದೇಶಕರಲ್ಲಿ ಓರ್ವರಾದ ದೇಸಾಯಿ ಅವರು ದೇವ್​​ದಾಸ್, ಲಗಾನ್, ಜೋಧಾ ಅಕ್ಬರ್, ಹರಿಶ್ಚಂದ್ರಾಚಿ ಫ್ಯಾಕ್ಟರಿ, ಹಮ್ ದಿಲ್ ದೇ ಚುಕೆ ಸನಮ್ ಮತ್ತು ಇತರೆ ಸೂಪರ್ ಹಿಟ್​ ಚಿತ್ರಗಳಿಗೆ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಬಾಲಿವುಡ್​ ಸಿನಿಮಾ ಇಂಡಸ್ಟ್ರಿಯ ಅತಿ ದೊಡ್ಡ ಆಸ್ತಿನೇ ಆಗಿದ್ದ ನಿತಿನ್​ ದೇಸಾಯಿ ಮರಣ ನಟ ಅಕ್ಷಯ್​ ಕುಮಾರ್​ ಅವರಿಗೆ ನೋವು ತಂದಿತ್ತು. ಹೀಗಾಗಿ ಅವರು ತಮ್ಮ OMG 2 ಸಿನಿಮಾದ ಟ್ರೇಲರ್​ ಅನ್ನು ಬುಧವಾರದ ಬದಲು ಗುರುವಾರ (ಆಗಸ್ಟ್​ 3) ಬಿಡುಗಡೆಗೊಳಿಸಿದ್ದರು.

ಇದನ್ನೂ ಓದಿ: Singer Surinder Shinda: ಜನಪ್ರಿಯ ಪಂಜಾಬಿ ಗಾಯಕ ಸುರಿಂದರ್ ಶಿಂದಾ ಇನ್ನಿಲ್ಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.