ETV Bharat / entertainment

ಹೊಸ ಪ್ರತಿಭೆಗಳ 'ಪರಂವಃ' ಚಿತ್ರಕ್ಕೆ ಲವ್ಲಿ ಸ್ಟಾರ್ ಪ್ರೇಮ್ ಸಾಥ್ - ನಿರ್ದೇಶಕ ಸಂತೋಷ್​ ಕೈದಾಳ

ಹೊಸ ಪ್ರತಿಭೆಗಳ 'ಪರಂವಃ' ಚಿತ್ರದ 'ನೂರಾರೂ ರಂಗಿರೊ' ಎಂಬ ಹಾಡನ್ನು ಲವ್ಲಿ ಸ್ಟಾರ್​ ಪ್ರೇಮ್​ ಬಿಡುಗಡೆಗೊಳಿಸಿದ್ದಾರೆ.

Lovely star Prem
ಹೊಸ ಪ್ರತಿಭೆಗಳ 'ಪರಂವಃ' ಚಿತ್ರಕ್ಕೆ ಲವ್ಲಿ ಸ್ಟಾರ್ ಪ್ರೇಮ್ ಸಾಥ್
author img

By

Published : Jun 19, 2023, 6:46 PM IST

ಕನ್ನಡ ಚಿತ್ರರಂಗದಲ್ಲಿ ವೀರಗಾಸೆ ಹಾಗೂ ದೇಸಿಕಲೆಯ ಬಗೆಗಿನ ಕಥೆಯನ್ನು ಒಳಗೊಂಡ ಸಿನಿಮಾಗಳು ಬಂದಿವೆ. ಇದೀಗ ಮತ್ತೆ ವೀರಗಾಸೆಯನ್ನು ಪ್ರಮುಖವಾಗಿಟ್ಟುಕೊಂಡು ಸಿನಿಮಾವೊಂದು ಸಿದ್ಧವಾಗಿದೆ. ತಂದೆ ಮತ್ತು ಮಗನ ನಡುವಿನ ಬಾಂಧವ್ಯವನ್ನು ಹೇಳುವ ಚಿತ್ರ ಇದಾಗಿದೆ. ಹೊಸ ಪ್ರತಿಭೆಗಳ 'ಪರಂವಃ' ಚಿತ್ರ ಈಗಾಗಲೇ ಹಾಡು ಮತ್ತು ಟ್ರೇಲರ್​ ಮೂಲಕ ಸಿನಿ ಪ್ರೇಮಿಗಳ ಮನ ಗೆದ್ದಿದ್ದು, ಬಿಡುಗಡೆಗೆ ಸಜ್ಜಾಗಿದೆ.

ಇದರ ಬೆನ್ನಲ್ಲೆ ಇತ್ತೀಚೆಗೆ ಪರಂವಃ ಚಿತ್ರಕ್ಕಾಗಿ ನಾಗೇಶ್​ ಕುಂದಾಪುರ ಬರೆದಿರುವ 'ನೂರಾರೂ ರಂಗಿರೊ' ಎಂಬ ಹಾಡನ್ನು ಲವ್ಲಿ ಸ್ಟಾರ್​ ಪ್ರೇಮ್​ ಬಿಡುಗಡೆಗೊಳಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ಜಡೇಶ್​ ಕುಮಾರ್​ ಸಹ ಉಪಸ್ಥಿತರಿದ್ದರು. ಈ ಹಾಡನ್ನು ಬಿಡುಗಡೆಗೊಳಿಸಿದ ಬಳಿಕ ನಟ ಪ್ರೇಮ್​ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

Lovely star Prem
ಯುವ ನಟ ಪ್ರೇಮ್ ಸಿಡ್ಗಲ್ ಮತ್ತು ನಟಿ ಮೈತ್ರಿ ಜೆ.ಕಶ್ಯಪ್

"ಈ ಸಿನಿಮಾ ತಂಡದ ಬಗ್ಗೆ ತಿಳಿದು ನಿಜಕ್ಕೂ ಖುಷಿಯಾಯಿತು. ಸುಮಾರು 200 ಜನ ಬಂಡವಾಳ ಹಾಕಿ ನಿರ್ಮಾಣ ಮಾಡಿರುವ ಸಿನಿಮಾವಿದು. ಇದು ನಿಜಕ್ಕೂ ಖುಷಿಯ ವಿಚಾರ. ಅಲ್ಲದೇ ನಿಜಕ್ಕೂ ಸಿನಿಮಾ ಬಗ್ಗೆ ಆಸಕ್ತಿ ಇರುವ ಪ್ರೇಕ್ಷಕರೇ ನಿರ್ಮಾಣ ಮಾಡಿದ್ದಾರೆ ಅನಿಸ್ತಿದೆ. ಈಗ ಹೊಸ ತಂಡದ ಹೊಸ ಪ್ರಯತ್ನವನ್ನು ಜನ ಮೆಚ್ಚಿಕೊಳ್ಳುತ್ತಿದ್ದಾರೆ. ಆ ಸಾಲಿಗೆ ಪರಂವಃ ಚಿತ್ರ ಕೂಡ ಸೇರಲಿ. ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿ" ಎಂದು ಹಾರೈಸಿದರು.

ಇದನ್ನೂ ಓದಿ: 'ಕೊರಗಜ್ಜ' ಸಿನಿಮಾಗೆ ಹಾಲಿವುಡ್​ ತಂತ್ರಜ್ಞರಿಂದ ಗ್ರಾಫಿಕ್ಸ್​ ಟಚ್​; 3 ಬಾರಿ ಕ್ಲೈಮ್ಯಾಕ್ಸ್​ ರೀ ಶೂಟ್​

ಬಳಿಕ ಮಾತನಾಡಿದ ನಿರ್ದೇಶಕ ಸಂತೋಷ್​ ಕೈದಾಳ, "ಶಿವನ ಢಮರುಗದಿಂದ ಹೊಮ್ಮುವ ನಾದಕ್ಕೆ ಪರಂವಃ ಎನ್ನುತ್ತಾರೆ. ನಮ್ಮ ಸಿನಿಮಾದ ಕಥೆಗೆ ಈ ಪದ ಸೂಕ್ತವೆಂಬ ಕಾರಣಕ್ಕೆ ಇದೇ ಹೆಸರು ಇಟ್ಟಿದ್ದೇವೆ. ಸಿನಿಮಾದಲ್ಲಿ ವೀರಗಾಸೆ ಕಲೆಯ ಬಗ್ಗೆ ಮತ್ತು ತಂದೆ, ಮಗನ ಸಂಬಂಧದ ಬಗ್ಗೆ ಪ್ರಧಾನವಾಗಿ ಹೇಳಲಾಗಿದೆ. ಅಷ್ಟೇ ಅಲ್ಲದೇ, ಪ್ರೀತಿ, ಸ್ನೇಹ, ಸೆಂಟಿಮೆಂಟ್​, ಥ್ರಿಲ್ಲರ್​, ಆಕ್ಷನ್​ ಹೀಗೆ ಎಲ್ಲಾ ತರಹದ ವಿಷಯಗಳು ಪರಂವಃ ಚಿತ್ರದಲ್ಲಿದೆ" ಎಂದರು.

Lovely star Prem
ಹೊಸ ಪ್ರತಿಭೆಗಳ 'ಪರಂವಃ' ಚಿತ್ರಕ್ಕೆ ಲವ್ಲಿ ಸ್ಟಾರ್ ಪ್ರೇಮ್ ಸಾಥ್

ಮುಂದುವರೆದು, "ಪೀಪಲ್ಸ್​ ವರ್ಲ್ಡ್​ ಫಿಲಂಸ್​ ಲಾಂಛನದಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ನಟ ಲವ್ಲಿ ಸ್ಟಾರ್​ ಪ್ರೇಮ್​, ನಿರ್ದೇಶಕ ಗುರು ದೇಶಪಾಂಡೆ ಸೇರಿದಂತೆ ಸ್ಯಾಂಡಲ್​ವುಡ್​ನ ಗಣ್ಯರು ಮತ್ತು ದಕ್ಷಿಣ ಭಾರತದ ಅನೇಕ ಸೆಲೆಬ್ರಿಟಿಗಳು ನಮ್ಮ ಚಿತ್ರಕ್ಕೆ ನೀಡುತ್ತಿರುವ ಪ್ರೋತ್ಸಾಹಕ್ಕೆ ಮನತುಂಬಿ ಬಂದಿದೆ. ಸದ್ಯದಲ್ಲೇ ನಮ್ಮ ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ" ಎಂದು ತಿಳಿಸಿದ್ದಾರೆ.

ಚಿತ್ರದಲ್ಲಿ ಯುವ ನಟ ಪ್ರೇಮ್ ಸಿಡ್ಗಲ್ ನಾಯಕನಾಗಿ ಮತ್ತು ಮೈತ್ರಿ ಜೆ. ಕಶ್ಯಪ್ ನಾಯಕಿಯಾಗಿ ಅಭಿನಯಿಸಿದ್ದಾರೆ‌. ಗಣೇಶ್ ಹೆಗ್ಗೋಡು, ನಾಜರ್, ಶ್ರುತಿ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಂತೋಷ್ ಕೈದಾಳ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ‌.

ಇದನ್ನೂ ಓದಿ: ’90 ಬಿಡಿ ಮನೀಗ್ ನಡಿ’.. ನಟ ವೈಜನಾಥ್​ ಬಿರಾದರ್​ರ 500ನೇ ಚಿತ್ರದ ಟ್ರೈಲರ್ ರಿಲೀಸ್.. ಸಿನಿಮಾ ಬಿಡುಗಡೆ ದಿನಾಂಕವೂ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.