ETV Bharat / entertainment

ಲವ್ ಲಿ ಸಿನಿಮಾ ಡಬ್ಬಿಂಗ್ ಕೆಲಸದಲ್ಲಿ ವಸಿಷ್ಠ ಸಿಂಹ- ವಿಡಿಯೋ - Love Li

ಲವ್ ಲಿ ಸಿನಿಮಾದ ಡಬ್ಬಿಂಗ್ ಕೆಲಸ ಭರದಿಂದ ಸಾಗಿದೆ. ಕಂಚಿನ ಕಂಠದ ನಾಯಕ ವಸಿಷ್ಠ ಸಿಂಹ ಕಂಠದಾನ ಮಾಡುತ್ತಿದ್ದಾರೆ.

Love Li movie dubbing work
ವಸಿಷ್ಠ ಸಿಂಹ
author img

By

Published : Mar 7, 2023, 1:16 PM IST

ಲವ್ ಲಿ ಡಬ್ಬಿಂಗ್ ಕೆಲಸದಲ್ಲಿ ವಸಿಷ್ಠ ಸಿಂಹ

ವಿಭಿನ್ನ ಪಾತ್ರಗಳು, ಉತ್ತಮ ಅಭಿನಯ ಮತ್ತು ಅತ್ಯುತ್ತಮ ಕಂಠಸಿರಿ ಮೂಲಕ ಕನ್ನಡ ಚಿತ್ರರಂಗ ಅಲ್ಲದೇ ತೆಲುಗು ಚಿತ್ರರಂಗದಲ್ಲಿಯೂ ಮಿಂಚುತ್ತಿರುವ ನಟ ವಸಿಷ್ಠ ಸಿಂಹ. ತಮ್ಮ ಅಮೋಘ ಅಭಿನಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಬೇಡಿಕೆ ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ನಟಿ ಹರಿಪ್ರಿಯಾ ಅವರೊಂದಿಗೆ ದಾಂಪತ್ಯ ಜೀವನ ಆರಂಭಿಸಿರುವ ಸಿಂಹ ಬ್ಯಾಕ್ ಟು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.‌ ಸದ್ಯ ಬಹುನಿರೀಕ್ಷಿತ ಲವ್ ಲಿ ಸಿನಿಮಾದ ಗುಂಗಿನಲ್ಲಿದ್ದಾರೆ.

ವಸಿಷ್ಠ ಸಿಂಹ ನಟನೆಯ ಬಹುನಿರೀಕ್ಷಿತ ಚಿತ್ರ 'ಲವ್ ಲಿ'. ಆರಂಭದಿಂದಲೂ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ಈ ಚಿತ್ರಕ್ಕೆ ಚೇತನ್ ಕೇಶವ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಮರ್ಶಿಯಲ್ ರೊಮ್ಯಾಂಟಿಕ್ ಲವ್ ಸ್ಟೋರಿ ಸಬ್ಜೆಕ್ಟ್ ಒಳಗೊಂಡ ಚಿತ್ರ ಅದ್ಧೂರಿಯಾಗಿ ನಿರ್ಮಾಣ ಆಗುತ್ತಿದೆ. ಲವ್​ ಲಿ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಇದೀಗ ಡಬ್ಬಿಂಗ್​ನಲ್ಲಿ ನಿರತವಾಗಿದೆ.

ಲಂಡನ್​ನಲ್ಲಿ ಸೆರೆ ಹಿಡಿಯಬೇಕಿರುವ ಹಾಡೊಂದನ್ನು ಹೊರತುಪಡಿಸಿದರೆ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಟೀಂ ಕಳೆದ ಏಳು ದಿನಗಳಿಂದ ಡಬ್ಬಿಂಗ್ ಕೆಲಸದಲ್ಲಿದೆ. ವಸಿಷ್ಠ ಸಿಂಹ, ಸ್ಟೆಫಿ ಪಟೇಲ್, ದತ್ತಣ್ಣ, ರಂಗಾಯಣ ರಘು, ಅಚ್ಯುತ್ ಕುಮಾರ್, ವಂಶಿಕಾ, ಸೂರಜ್ ಚಿತ್ರದ ಡಬ್ಬಿಂಗ್ ಭಾಗವನ್ನು ಪೂರ್ಣಗೊಳಿಸಿದ್ದಾರೆ. ಐದು ದಿನಗಳ ಡಬ್ಬಿಂಗ್ ಕೆಲಸ ಬಾಕಿ ಇದೆ ಎಂದು ನಿರ್ದೇಶಕ ಚೇತನ್ ಕೇಶವ್ ಮಾಹಿತಿ ಹಂಚಿಕೊಂಡಿದ್ದಾರೆ.

ಲವ್ ಲಿ ಚೇತನ್ ಕೇಶವ್ ಅವರ ಮೊದಲ ಸಿನಿಮಾ. ಕಮರ್ಶಿಯಲ್ ರೊಮ್ಯಾಂಟಿಕ್ ಲವ್ ಸ್ಟೋರಿ ಜೊತೆಗೆ ರೌಡಿಸಂ ಕಥಾಹಂದರ ಒಳಗೊಂಡಿದ್ದು ವಸಿಷ್ಠ ಸಿಂಹ ಡಿಫ್ರೆಂಟ್ ಶೇಡ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಯಕಿಯಾಗಿ ಸ್ಟೆಫಿ ಪಟೇಲ್ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ತುಣುಕುಗಳು ಭರವಸೆ ಮೂಡಿಸಿವೆ. ಅದ್ಧೂರಿಯಾಗಿ ಚಿತ್ರ ನಿರ್ಮಾಣ ಮಾಡಲಾಗಿದೆ.

ಸುಬ್ಬಲಕ್ಷ್ಮಿ ಸಂಸಾರ ಸೀರಿಯಲ್ ಖ್ಯಾತಿಯ ಸಮೀಕ್ಷಾ, ಸಾಧುಕೋಕಿಲ, ದತ್ತಣ್ಣ, ಅಚ್ಯುತ್ ಕುಮಾರ್, ವಂಶಿಕಾ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಒಳಗೊಂಡ ದೊಡ್ಡ ತಾರಾಬಳಗ ಲವ್‌ಲಿಯಲ್ಲಿದೆ. ಎಂ.ಆರ್.ರವೀಂದ್ರ ಕುಮಾರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಸಿನಿಮಾಗೆ ಅಶ್ವಿನ್ ಕೆನಡಿ ಕ್ಯಾಮರಾ ವರ್ಕ್, ಹರೀಶ್ ಕೊಮ್ಮೆ ಸಂಕಲನ, ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿದೆ. ಡಬ್ಬಿಂಗ್ ಕೆಲಸ ಮುಗಿಯುತ್ತಿದ್ದಂತೆ ಹಾಡಿನ ಚಿತ್ರೀಕರಣಕ್ಕಾಗಿ ಚಿತ್ರತಂಡ ಲಂಡನ್‌ಗೆ ಹಾರಲಿದೆ.

ಇದನ್ನೂ ಓದಿ: ಹೋಳಿ ಬಣ್ಣದಲ್ಲಿ ಮಿಂದೆದ್ದ ಬಾಲಿವುಡ್​ ನವದಂಪತಿ ಸಿದ್​ ಕಿಯಾರಾ

ಕನ್ನಡ ಸಿನಿಮಾಗಳು ಭರವಸೆ ಮೂಡಿಸಿದ್ದು, ಸ್ಯಾಂಡಲ್​ವುಡ್​ ಚಿತ್ರಗಳ ಮೇಲೆ ಭಾರತೀಯ ಸಿನಿಮಾ ರಂಗದ ಗಮನ ಕೇಂದ್ರೀಕೃತವಾಗಿದೆ. ಬಹುಬೇಡಿಕೆ ನಟನ ಬಹುನಿರೀಕ್ಷಿತ ಲವ್ ಲಿ ಚಿತ್ರ ಗೆಲ್ಲುವ ವಿಶ್ವಾಸದಲ್ಲಿ ಚಿತ್ರತಂಡವಿದೆ.

ಇದನ್ನೂ ಓದಿ: ಹ್ಯಾಪಿ ಹುಟ್ದಬ್ಬ 'ಮಿಸಸ್​ ರಾಮಾಚಾರಿ'! ದೂರದೂರಿನಲ್ಲಿ ಸೆಲೆಬ್ರೇಷನ್​, ಫ್ಯಾನ್ಸ್​ಗೆ ನಿರಾಶೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.