'ಬಿಗ್ ಬ್ಯಾಂಗ್ ಥಿಯರಿ' (Big Bang Theory) ಯಲ್ಲಿ ನಟಿ ಮಾಧುರಿ ದೀಕ್ಷಿತ್ ಅವರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ರಾಜಕೀಯ ವಿಶ್ಲೇಷಕ ಮಿಥುನ್ ವಿಜಯ್ ಕುಮಾರ್ ಸ್ಟ್ರೀಮಿಂಗ್ ದೈತ್ಯ ನೆಟ್‌ಫ್ಲಿಕ್ಸ್‌ಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ಲೀಗಲ್ ನೋಟಿಸ್‌ನಲ್ಲಿ, ರಾಜಕೀಯ ವಿಶ್ಲೇಷಕ ಮಿಥುನ್ ವಿಜಯ್ ಕುಮಾರ್ ಅವರು, ಕುನಾಲ್ ನಯ್ಯರ್ ನಿರ್ವಹಿಸಿದ ರಾಜ್ ಕೂತ್ರಪಲ್ಲಿ ಪಾತ್ರದ ಎಪಿಸೋಡ್ ತೆಗೆದು ಹಾಕುವಂತೆ ಸ್ಟ್ರೀಮರ್‌ಗೆ ತಿಳಿಸಿದ್ದಾರೆ. ಈ ಎಪಿಸೋಡ್ನಲ್ಲಿನ ಎರಡು ಪಾತ್ರಗಳು (ಕುನಾಲ್ ನಯ್ಯರ್ ಮತ್ತು ಶೆಲ್ಡನ್ ಕೂಪರ್ ಪಾತ್ರದಲ್ಲಿ ಜಿಮ್ ಪಾರ್ಸನ್ಸ್) ಭಾರತೀಯ ಅದ್ಭುತ ನಟಿಯರಾದ ಐಶ್ವರ್ಯಾ ರೈ ಹಾಗೂ ಮಾಧುರಿ ದೀಕ್ಷಿತ್ ಅವರ ಬಗ್ಗೆ ಮಾತನಾಡಿವೆ. ಮಾಧುರಿ ದೀಕ್ಷಿತ್ ಬಗ್ಗೆ ಕೆಟ್ಟ ಪದಗಳ ಬಳಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಹಿನ್ನೆಲೆ ಲೀಗಲ್ ನೋಟಿಸ್ ಕಳುಹಿಸಲಾಗಿದೆ. ಲೀಗಲ್ ನೋಟಿಸ್‌ನಲ್ಲಿ, ಈ ಪಾತ್ರಗಳು ಮಾಡಿದ ಟೀಕೆಗಳು ಆಕ್ಷೇಪಾರ್ಹ ಮಾತ್ರವಲ್ಲದೇ ಮಾನಹಾನಿಕರ ಕೂಡ ಆಗಿವೆ ಎಂದು ಮಿಥುನ್ ವಿಜಯ್ ಕುಮಾರ್ ತಿಳಿಸಿದ್ದಾರೆ.
ಸಂಚಿಕೆಯನ್ನು ತೆಗೆದುಹಾಕಿ ಅಥವಾ ಮಹಿಳೆಯರ ವಿರುದ್ಧ ತಾರತಮ್ಯವನ್ನು ಉತ್ತೇಜಿಸಿರುವ ಆರೋಪದಡಿ ಕಾನೂನು ಕ್ರಮ ಎದುರಿಸಿ ಎಂದು ಸ್ಟ್ರೀಮರ್‌ಗೆ ಕೇಳಿಕೊಂಡಿದ್ದಾರೆ. ಅವರು, ಮುಂಬೈನಲ್ಲಿರುವ ನೆಟ್‌ಫ್ಲಿಕ್ಸ್ ಕಚೇರಿಗೆ ಈ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.
ನೆಟ್‌ಫ್ಲಿಕ್ಸ್‌ನಂತಹ ಕಂಪನಿಗಳು ಅವರು ಸೇವೆ ಸಲ್ಲಿಸುವ ಸಮುದಾಯಗಳ ಸಾಂಸ್ಕೃತಿಕ ಮೌಲ್ಯಗಳು ಮತ್ತು ಭಾವನೆಗಳ ಬಗ್ಗೆ ಸಂವೇದನಾಶೀಲರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾದ ಬಿಗ್ ಬ್ಯಾಂಗ್ ಥಿಯರಿ ಶೋನಲ್ಲಿ ಅವಹೇಳನಕಾರಿ ಪದ ಬಳಸಿರುವುದರಿಂದ ನಾನು ಬಹಳ ತೊಂದರೆಗೀಡಾಗಿದ್ದೇನೆ. ಅಲ್ಲದೇ, ಈ ಅವಹೇಳನಾಕಾರಿ ಪದವನ್ನು ಸಾಕಷ್ಟು ಮೆಚ್ಚುಗೆ ಪಡೆದ, ಅಪಾರ ಸಂಖ್ಯೆ ಅಭಿಮಾನಿಗಳನ್ನು ಸಂಪಾದಿಸಿರುವ ನಟಿ ಮಾಧುರಿ ದೀಕ್ಷಿತ್ ಅವರನ್ನು ಉಲ್ಲೇಖಿಸಿ ಬಳಸಲಾಗಿದೆ. ಇದು ಹೆಚ್ಚಿನ ನೋವುಂಟು ಮಾಡಿದೆ ಎಂದು ಕುಮಾರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ರಾಮ್ ಚರಣ್ ಗ್ರ್ಯಾಂಡ್ ಬರ್ತ್ ಡೇಯಲ್ಲಿ ಗಣ್ಯರ ಸಮಾಗಮ: ಉಪಾಸನಾ ಬೇಬಿ ಬಂಪ್ ಫೋಟೋ ವೈರಲ್
ಬಿಗ್ ಬ್ಯಾಂಗ್ ಥಿಯರಿ 2007ರಲ್ಲಿ ಪ್ರಥಮ ಪ್ರದರ್ಶನ ಕಂಡಿತ್ತು. 12 ಸೀಸನ್ಗಳೊಂದಿಗೆ 2019ರಲ್ಲಿ ಮುಕ್ತಾಯಗೊಂಡಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯ ಇದ್ದು, ಆ ಒಂದು ಎಪಿಸೋಡ್ ತೆಗೆದುಹಾಕುವಂತೆ ರಾಜಕೀಯ ವಿಶ್ಲೇಷಕ ಮಿಥುನ್ ವಿಜಯ್ ಕುಮಾರ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ ದೇಶ ತೊರೆಯಲು ಕರಣ್ ಕಾರಣ: ಕಂಗನಾ ರಣಾವತ್ ಟ್ವೀಟ್
ಮಾಧುರಿ ದೀಕ್ಷಿತ್ ನೃತ್ಯಗಾರ್ತಿ ಮತ್ತು ಪ್ರತಿಭಾನ್ವಿತ ನಟಿಯಾಗಿ ಗಮನ ಸೆಳೆದಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಟಾಪ್ ಹೀರೋಯಿನ್ ಆಗಿ ಸ್ಟಾರ್ ಡಮ್ ಗಳಿಸಿದ್ದಾರೆ. ನಟಿಗೆ ಬಹು ಬೇಡಿಕೆ ಇದ್ದ ಸಮಯದಲ್ಲೇ 1998ರಲ್ಲಿ ಡಾ. ಶ್ರೀರಾಮ್ ನೆನೆ ಅವರನ್ನು ವಿವಾಹ ಆಗಿ ಅಮೆರಿಕದಲ್ಲಿ ಕೆಲ ಕಾಲ ನೆಲೆಸಿದ್ದರು. ಬಳಿಕ ಭಾರತಕ್ಕೆ ಬಂದು ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಟಿವಿ ಶೋಗಳಿಗೆ ತೀರ್ಪುಗಾರರಾಗಿರುವುದರ ಜೊತೆಗೆ ಹಲವು ಜಾಹೀರಾತುಗಳಲ್ಲೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ.