ETV Bharat / entertainment

ಜಾನ್​ ವಿಕ್​, ದ ವೈರ್​ ಖ್ಯಾತಿಯ ಆ್ಯಕ್ಷನ್ ​ಹೀರೋ ಲ್ಯಾನ್ಸ್​ ರೆಡ್ಡಿಕ್​ ನಿಧನ - ಲ್ಯಾನ್ಸ್ ರೆಡ್ಡಿಕ್

ಜಾನ್​ ವಿಕ್​ ಮತ್ತು ದಿ ವೈರ್​ ಸಿನಿಮಾ ಖ್ಯಾತಿಯ ಲ್ಯಾನ್ಸ್ ರೆಡ್ಡಿಕ್​ ನಿಧನರಾಗಿದ್ದು, ಹಾಲಿವುಡ್​ ಸಿನಿಮಾ ರಂಗ ಸಂತಾಪ ಸೂಚಿಸಿದೆ.

ಆ್ಯಕ್ಷನ್ ​ಹೀರೋ ಲ್ಯಾನ್ಸ್​ ರೆಡ್ಡಿಕ್​ ನಿಧನ
ಆ್ಯಕ್ಷನ್ ​ಹೀರೋ ಲ್ಯಾನ್ಸ್​ ರೆಡ್ಡಿಕ್​ ನಿಧನ
author img

By

Published : Mar 18, 2023, 10:58 AM IST

ನ್ಯೂಯಾರ್ಕ್: ದಿ ವೈರ್, ಫ್ರಿಂಜ್ ಮತ್ತು ಜಾನ್ ವಿಕ್ ಖ್ಯಾತಿಯ ಹಾಲಿವುಡ್​ ನಟ ಲ್ಯಾನ್ಸ್ ರೆಡ್ಡಿಕ್ ಶುಕ್ರವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ಸುಮಾರು 60 ವರ್ಷ ವಯಸ್ಸಾಗಿತ್ತು. ರೆಡ್ಡಿಕ್ ಶುಕ್ರವಾರ ಬೆಳಗ್ಗೆ ಹಠಾತ್ತಾಗಿ ಮಲಗಿದ್ದಲ್ಲೇ ನಿಧನರಾಗಿದ್ದಾರೆ. ಇದು ಸಹಜ ಸಾವಾಗಿದೆ ಎಂದು ಅವರ ಸಹಾಯಕಿ ಮಿಯಾ ಹ್ಯಾನ್ಸೆನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರೆಡ್ಡಿಕ್ ಪತ್ನಿ ಸ್ಟೆಫನಿ ರೆಡ್ಡಿಕ್, ಮಕ್ಕಳಾದ ಯವೊನ್ನೆ ನಿಕೋಲ್ ರೆಡ್ಡಿಕ್ ಮತ್ತು ಕ್ರಿಸ್ಟೋಫರ್ ರೆಡ್ಡಿಕ್ ಅವರನ್ನು ಅಗಲಿದ್ದಾರೆ.

  • A man of great strength and grace. As talented a musician as he was an actor. The epitome of class. An sudden unexpected sharp painful grief for our artistic family. An unimaginable suffering for his personal family and loved ones. Godspeed my friend. You made your mark here. RIP pic.twitter.com/Xy0pl5c4NR

    — Wendell Pierce (@WendellPierce) March 17, 2023 " class="align-text-top noRightClick twitterSection" data=" ">

ಲ್ಯಾನ್ಸ್ ರೆಡ್ಡಿಕ್​ ನಿಧನ ಸುದ್ದಿ ಹೊರಬೀಳುತ್ತಿದ್ದಂತೆ ಸಿನಿಮಾ ರಂಗ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಆಘಾತ ವ್ಯಕ್ತಪಡಿಸಿದ ಅಭಿಮಾನಿಗಳು ಮತ್ತು ಗಣ್ಯರು, ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಚಲನಚಿತ್ರ ನಿರ್ಮಾಪಕ ಜೇಮ್ಸ್ ಗನ್ ಟ್ವೀಟ್​ ಮಾಡಿ, ರೆಡ್ಡಿಕ್ "ವಿಸ್ಮಯಕಾರಿಯಾದ ಒಳ್ಳೆಯ ವ್ಯಕ್ತಿ ಮತ್ತು ಪ್ರತಿಭಾವಂತ ನಟ" ಎಂದು ಬಣ್ಣಿಸಿದರೆ, ದಿ ವೈರ್‌ ಸಿನಿಮಾದಲ್ಲಿ ಸಹನಟನಾಗಿದ್ದ ವೆಂಡೆಲ್ ಪಿಯರ್ಸ್ "ಆತನೊಬ್ಬ ಮಹಾನ್ ಶಕ್ತಿ ಮತ್ತು ಗ್ರೇಸ್​ವುಳ್ಳ ವ್ಯಕ್ತಿ. ನಟರು ಮಾತ್ರವಲ್ಲದೇ ಉತ್ತಮ ಸಂಗೀತಗಾರ ಕೂಡ ಆಗಿದ್ದರು" ಎಂದು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

ರೆಡ್ಡಿಕ್ ಸಿನಿಮಾ ಬದುಕು: ರೆಡ್ಡಿಕ್ ತನ್ನ ವೃತ್ತಿಜೀವನದಲ್ಲಿ ಆ್ಯಕ್ಷನ್​ ಸಿನಿಮಾಗಳಿಗೆ ಖ್ಯಾತರಾಗಿದ್ದರು. ಸೂಟ್ ಅಥವಾ ಗರಿಗರಿ ಸಮವಸ್ತ್ರ ಧರಿಸಿ, ಎತ್ತರದ ಟ್ಯಾಸಿಟರ್ನ್ ಗೆಟಪ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. HBO ಸರಣಿಯ ಸೂಪರ್​ ಹಿಟ್​ ಸಿನಿಮಾ ದಿ ವೈರ್‌ನಲ್ಲಿ ಲೆಫ್ಟಿನೆಂಟ್ ಸೆಡ್ರಿಕ್ ಡೇನಿಯಲ್ಸ್ ಪಾತ್ರದಿಂದ ಅವರು ಹೆಚ್ಚು ಹೆಸರುವಾಸಿಯಾಗಿದ್ದರು.

ಈ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಬೇಕಿದ್ದ ಫಾಕ್ಸ್ ಸರಣಿಯ "ಫ್ರಿಂಜ್‌"ನಲ್ಲಿ ವಿಶೇಷ ಏಜೆಂಟ್ ಆಗಿ ರೆಡ್ಡಿಕ್​ ಪಾತ್ರ ನಿರ್ವಹಿಸಿದ್ದರು. ಲಯನ್ಸ್‌ಗೇಟ್‌ನ ಜಾನ್ ವಿಕ್ ಸಿನಿಮಾಗಳಲ್ಲಿ ಅದ್ಭುತ ಪಾತ್ರವನ್ನು ನಿರ್ವಹಿಸಿದ್ದರು. ಇದೂ ಕೂಡ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗುವ ಸರಣಿ ಸಿನಿಮಾಗಳಲ್ಲಿ ಒಂದಾಗಿತ್ತು.

ರೆಜಿನಾ ಕಿಂಗ್‌ನ "ಒನ್ ನೈಟ್ ಇನ್ ಮಿಯಾಮಿ" ಚಿತ್ರಕ್ಕಾಗಿ ರೆಡ್ಡಿಕ್​ 2021 ರಲ್ಲಿ SAG ಪ್ರಶಸ್ತಿಗೆ ನಾಮನಿರ್ದೇಶನ ಹೊಂದಿದ್ದರು. ಇಂಟೆಲಿಜೆನ್ಸ್ ಮತ್ತು ಅಮೆರಿಕನ್ ಹಾರರ್ ಸ್ಟೋರಿಯಲ್ಲಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಏಳು ವರ್ಷಗಳ ನಟನೆಗಾಗಿ ಅವರು ಜನಪ್ರಿಯ ಶೋ ಆದ ಬಾಷ್ ನಲ್ಲಿ ಭಾಗವಹಿಸಿದ್ದರು. ವೈಟ್ ಮೆನ್ ಕ್ಯಾಂಟ್ ಜಂಪ್​, ಶೆರ್ಲಿ ಚಿಶೋಲ್ಮ್ ಅವರ ಬಯೋಪಿಕ್​, ಜಾನ್ ವಿಕ್ ಸ್ಪಿನ್‌ ಆಫ್ ಬ್ಯಾಲೆರಿನಾ ಮತ್ತು ದಿ ಕೇನ್ ಮ್ಯುಟಿನಿ ಕೋರ್ಟ್ ಮಾರ್ಷಲ್‌ನಲ್ಲಿ ಅವರು ನಟಿಸಬೇಕಿತ್ತು.

ಕಪ್ಪು ವರ್ಣೀಯರಾಗಿದ್ದ ಲ್ಯಾನ್ಸ್​ ರೆಡ್ಡಿಕ್​ ಆರಂಭದಲ್ಲಿ ತಾವು ಸಿನಿಮಾ ರಂಗಕ್ಕೆ ಕಾಲಿಡಲು ಪಟ್ಟ ಕಷ್ಟವನ್ನು ಅವರು ಮಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿಕೊಂಡಂತೆ, "ನಾನು ಹೃದಯದಿಂದ ಕಲಾವಿದ. ಮಾಡುವ ಕೆಲಸದಲ್ಲಿ ತುಂಬಾ ಶ್ರದ್ಧೆ ವಹಿಸುತ್ತೇನೆ. ನಟನಾ ಶಾಲೆಗೆ ಹೋದಾಗ, ನಾನು ಇತರರಂತೆ ಕನಿಷ್ಠ ಪ್ರತಿಭಾವಂತನಾಗಿದ್ದೆ. ಕಪ್ಪು ವರ್ಣೀಯನಾಗಿದ್ದೆ. ಅಷ್ಟೊಂದು ಸುಂದರವಾಗಿರಲಿಲ್ಲ. ನಾನು ಸಿನಿಮಾ ರಂಗದಲ್ಲಿ ಮುಂದುವರಿಯಲು ಸಾಕಷ್ಟು ಶ್ರಮ ವಹಿಸಬೇಕು ಎಂದು ತಿಳಿದಿದ್ದೆ. ಆ ನಿಟ್ಟಿನಲ್ಲಿ ಶ್ರಮಿಸಿದ್ದೇನೆ ಎಂದು ಹೇಳಿದ್ದರು.

ಓದಿ: ಒಂದೇ ಮನೆಯಲ್ಲಿ ಇಬ್ಬರು ಐಎಎಸ್​​ ಅಧಿಕಾರಿಗಳು.. ಇವರ ಯಶಸ್ವಿನ ಹಿಂದಿದೆ ಅಮ್ಮನ ತ್ಯಾಗ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.