ETV Bharat / entertainment

ಉದಯನಿಧಿ ಸ್ಟಾಲಿನ್​ ನಿರ್ಮಾಣ ಸಂಸ್ಥೆಯ ಪಾಲಾಯ್ತು 'ಲಾಲ್​ ಸಲಾಂ' ಚಿತ್ರದ ವಿತರಣೆ ಹಕ್ಕು - ಈಟಿವಿ ಭಾರತ ಕನ್ನಡ

'ಲಾಲ್​ ಸಲಾಂ' ಸಿನಿಮಾವು 2024ರ ಪೊಂಗಲ್​ ಸಮಯದಲ್ಲಿ ಬಿಡುಗಡೆಯಾಗಲಿದೆ. ತಮಿಳುನಾಡಿನಲ್ಲಿ ಈ ಚಿತ್ರದ ವಿತರಣೆ ಹಕ್ಕನ್ನು ಸಚಿವ ಉದಯನಿಧಿ ಸ್ಟಾಲಿನ್​ ಅವರ ರೆಡ್​ ಗೈಂಟ್​ ಮೂವೀಸ್​ ಸಂಸ್ಥೆ ಪಡೆದುಕೊಂಡಿದೆ ಎಂದು ಚಿತ್ರತಂಡ ತಿಳಿಸಿದೆ.

Lal Salaam: Aishwarya Rajinikanth partners with Udhayanidhi's Red Giant Movies for Tamil Nadu theatrical release
ಉದಯನಿಧಿ ಸ್ಟಾಲಿನ್​ ನಿರ್ಮಾಣ ಸಂಸ್ಥೆಯ ಪಾಲಾಯ್ತು 'ಲಾಲ್​ ಸಲಾಂ' ಚಿತ್ರದ ವಿತರಣೆ ಹಕ್ಕು
author img

By ETV Bharat Karnataka Team

Published : Oct 12, 2023, 10:16 PM IST

ಕಾಲಿವುಡ್​ ಹಿರಿಯ ನಟ ರಜನಿಕಾಂತ್​​ 'ಜೈಲರ್​' ಸಿನಿಮಾದ ಅಭೂತಪೂರ್ವ ಯಶಸ್ಸಿನ ಸಂತಸದಲ್ಲಿದ್ದಾರೆ. ಅವರ ಅಭಿಮಾನಿಗಳು ತಲೈವಾ ಮುಂದಿನ ಚಿತ್ರ 'ಲಾಲ್​ ಸಲಾಂ' ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈ ಸಿನಿಮಾವನ್ನು ರಜನಿ ಪುತ್ರಿ ಐಶ್ವರ್ಯಾ ರಜನಿಕಾಂತ್​ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಚಿತ್ರತಂಡದಿಂದ 'ಲಾಲ್​ ಸಲಾಂ' ಬಗ್ಗೆ ಎರಡು ಅಪ್​ಡೇಟ್​ಗಳು ಹೊರಬಿದ್ದಿವೆ.

ಈ ಸಿನಿಮಾವು 2024ರ ಪೊಂಗಲ್​ ಸಮಯದಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್​ ಖಚಿತಪಡಿಸಿದೆ. ಅಲ್ಲದೇ ತಮಿಳುನಾಡಿನಲ್ಲಿ ಈ ಚಿತ್ರದ ವಿತರಣೆ ಹಕ್ಕನ್ನು ನಟ, ನಿರ್ಮಾಪಕ ಹಾಗೂ ಸಚಿವ ಉದಯನಿಧಿ ಸ್ಟಾಲಿನ್​ ಅವರ ರೆಡ್​ ಗೈಂಟ್​ ಮೂವೀಸ್​ ಸಂಸ್ಥೆ ಪಡೆದುಕೊಂಡಿದೆ ಎಂದು ತಿಳಿಸಿದೆ. "ಲಾಲ್​ ಸಲಾಂ ಚಿತ್ರವು ತಮಿಳುನಾಡಿನಲ್ಲಿ ರೆಡ್​ ಗೈಂಟ್​ ಮೂವೀಸ್​ ಸಂಸ್ಥೆಯ ಮೂಲಕ ಥಿಯೇಟರ್​ಗಳಲ್ಲಿ ಗ್ರ್ಯಾಂಡ್​ ರಿಲೀಸ್​ ಆಗಲಿದೆ ಎಂದು ಘೋಷಿಸಲು ಸಂತೋಷವಾಗಿದೆ" ಎಂದು ಬರೆದುಕೊಂಡಿದೆ.

'ಲಾಲ್ ಸಲಾಂ' ಚಿತ್ರವು ಕ್ರಿಕೆಟ್ ಮತ್ತು ಆ್ಯಕ್ಷನ್ ಕಥೆಯಾಧಾರಿತವಾಗಿದ್ದು, ಐಶ್ವರ್ಯಾ ರಜನಿಕಾಂತ್​ ಅವರು ಬರೆದು ನಿರ್ದೇಶಿಸಿದ್ದಾರೆ. ಈ ಚಿತ್ರವು ಐಶ್ವರ್ಯಾ ಅವರ ನಾಲ್ಕನೇ ನಿರ್ದೇಶನವಾಗಿದೆ. ಚಿತ್ರದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದರೆ, ರಜನಿಕಾಂತ್ ಅವರು ಮೊಯ್ದೀನ್ ಭಾಯ್ ಎಂಬ ಪವರ್‌ಫುಲ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಟಾಲಿವುಡ್ ತಾರೆ ಜೀವತಾ ರಾಜಶೇಖರ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.

ಇದನ್ನೂ ಓದಿ: Lal Salaam ಶೂಟಿಂಗ್​ ಮಧ್ಯೆ ಅಣ್ಣಾಮಲೈಯಾರ್ ದೇವಸ್ಥಾನಕ್ಕೆ ರಜನಿಕಾಂತ್​ ಭೇಟಿ: ಪೂಜೆ ಸಲ್ಲಿಕೆ

ಮೇ ತಿಂಗಳಲ್ಲಿ ಲಾಲ್​ ಸಲಾಂ ಶೂಟಿಂಗ್​ ಸೆಟ್​ನಲ್ಲಿ ಕಪಿಲ್ ದೇವ್ ಮತ್ತು ರಜನಿಕಾಂತ್​ ಜೊತೆಯಾಗಿ ಕಾಣಿಸಿಕೊಂಡಿದ್ದರು. ದಿಗ್ಗಜರ ಸಮಾಗಮಕ್ಕೆ ಸಾಕ್ಷಿಯಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಚಿತ್ರದಲ್ಲಿ ಕಪಿಲ್​ ದೇವ್​ ಆ್ಯಕ್ಟ್​ ಮಾಡಿದ್ದಾರೆ. "ಚೊಚ್ಚಲ ವಿಶ್ವಕಪ್ ಗೆದ್ದು ಇಡೀ ಭಾರತವೇ ಹೆಮ್ಮೆ ಪಡುವಂತೆ ಮಾಡಿದ ದಿಗ್ಗಜ, ಗೌರವಾನ್ವಿತ ಮತ್ತು ಅದ್ಭುತ ವ್ಯಕ್ತಿತ್ವವುಳ್ಳ ಕಪಿಲ್‌ ದೇವ್‌ಜಿ ಅವರೊಂದಿಗೆ ಕೆಲಸ ಮಾಡುವುದು ನನಗೆ ಒದಗಿ ಬಂದ ಗೌರವ" ಎಂದು ರಜನಿಕಾಂತ್​ ಎಕ್ಸ್​ನಲ್ಲಿ ಬರೆದುಕೊಂಡಿದ್ದರು. ಕಪಿಲ್ ದೇವ್ ಈಗಾಗಲೇ 'ಇಕ್ಬಾಲ್', '83' ಮತ್ತು 'ಡಬಲ್ ಎಕ್ಸ್‌ಎಲ್' ಚಿತ್ರಗಳಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪಿರಿಯಾಡಿಕಲ್ ಡ್ರಾಮಾವಾಗಿ ತಯಾರಾಗುತ್ತಿರುವ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ನೀಡುತ್ತಿದ್ದಾರೆ. 'ಲಾಲ್​ ಸಲಾಂ' ಚಿತ್ರವು ಮುಂದಿನ ವರ್ಷ ಜನವರಿ ತಿಂಗಳ ಆರಂಭದಲ್ಲಿ ಪೊಂಗಲ್​ ಹಬ್ಬದ ಸಮಯದಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ ಜನವರಿ 12ರಂದು ಬಿಡುಗಡೆಯಾಗಲಿರುವ ಮಹೇಶ್ ಬಾಬು ಅವರ ಗುಂಟೂರು ಖಾರಂ ಮತ್ತು ಜನವರಿ 13ರಂದು ತೆರೆ ಕಾಣಲಿರುವ ರವಿತೇಜ ನಟನೆಯ ಈಗಲ್​ ಚಿತ್ರಕ್ಕೆ ಪೈಪೋಟಿ ನೀಡಲಿದೆ. 'ಲಾಲ್​ ಸಲಾಂ' ಚಿತ್ರವನ್ನು ಖ್ಯಾತ ಲೈಕಾ ಪ್ರೊಡಕ್ಷನ್ಸ್​ ಸಂಸ್ಥೆ ನಿರ್ಮಾಣ ಮಾಡುತ್ತಿದೆ.

ಇದನ್ನೂ ಓದಿ: 'Thalaivar 170' ಶೂಟಿಂಗ್​ಗಾಗಿ ಕೊಚ್ಚಿಗೆ ತೆರಳಿದ ರಜನಿ​; ಚಿತ್ರತಂಡಕ್ಕೆ ಅಮಿತಾಭ್​ ಬಚ್ಚನ್​, ಫಹಾದ್​ ಫಾಸಿಲ್​ ಎಂಟ್ರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.