ETV Bharat / entertainment

ರೊಮ್ಯಾಂಟಿಕ್ ಮೂಡ್​ನಲ್ಲಿ ಸಮಂತಾ - ವಿಜಯ್​ ದೇವರಕೊಂಡ - ಸಮಂತಾ ವಿಜಯ್ ಸಿನಿಮಾ

ಸಮಂತಾ ರುತ್ ಪ್ರಭು ಮತ್ತು ವಿಜಯ್ ದೇವರಕೊಂಡ ಅಭಿನಯದ ಖುಷಿ ಸಿನಿಮಾದ ಹಾಡು ಇದೇ ಮೇ. 9ರಂದು ಅನಾವರಣಗೊಳ್ಳಲಿದೆ. ಇಂದು ಹಾಡಿನ ಪೋಸ್ಟರ್ ರಿಲೀಸ್​ ಆಗಿದೆ.

Samantha Vijay Kushi movie
ಸಮಂತಾ ವಿಜಯ್​ ದೇವರಕೊಂಡ ಖುಷಿ ಸಿನಿಮಾ
author img

By

Published : May 5, 2023, 6:16 PM IST

ದಕ್ಷಿಣದ ಟಾಪ್​ ನಟಿ ಸಮಂತಾ ರುತ್ ಪ್ರಭು ಮತ್ತು ಅರ್ಜುನ್​ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಅಭಿನಯದ ಬಹುನಿರೀಕ್ಷಿತ ಚಿತ್ರ "ಖುಷಿ". ಚಿತ್ರತಂಡ ಇಂದು ಸಿನಿಮಾದ ಮೊದಲ ಹಾಡಿನ ಪೋಸ್ಟರ್ ಅನ್ನು ಅನಾವರಣಗೊಳಿಸಿದೆ. ರೊಮ್ಯಾಂಟಿಕ್ ಟ್ರ್ಯಾಕ್​ನಂತೆ ತೋರುತ್ತಿರುವ ಈ ಹಾಡು ಶೀಘ್ರದಲ್ಲೇ ತೆರೆ ಕಾಣಲಿದೆ.

ಕಾಶ್ಮೀರದಲ್ಲಿ ಹಿಮದ ನಡುವೆ ಸಮಂತಾ ಮತ್ತು ವಿಜಯ್​ ದೇವರಕೊಂಡ ಪ್ರೀತಿಯಲ್ಲಿ ಸೋತಿರುವುದನ್ನು ಪೋಸ್ಟರ್​ನಲ್ಲಿ ಕಾಣಬಹುದು. ಈ ಹಾಡು ಪ್ರೇಮಕಥೆ ಒಳಗೊಂಡಿರಲಿದೆ. ಖುಷಿ ಸಿನಿಮಾ ಸಮಂತಾ ಮತ್ತು ವಿಜಯ್ ಕೆಲಸ ಮಾಡುತ್ತಿರುವ ಎರಡನೇ ಚಿತ್ರ. ಇದಕ್ಕೂ ಮೊದಲು ಮಹಾನಟಿ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಅಲ್ಲದೇ ನಿರ್ದೇಶಕ ಶಿವ ನಿರ್ವಾಣ ಅವರೊಂದಿಗೆ ಸಮಂತಾ ಕೆಲಸ ಮಾಡುತ್ತಿರುವ ಎರಡನೇ ಪ್ರೊಜೆಕ್ಟ್​​ ಇದು. ಈ ಹಿಂದೆ "ಮಜಿಲಿ" ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.

ಚಿತ್ರದ ನಿರ್ಮಾಪಕರು ಟ್ವಿಟರ್‌ನಲ್ಲಿ ಇಂದು ಪೋಸ್ಟರ್ ಹಂಚಿಕೊಂಡಿದ್ದಾರೆ. ಮೇ 9ರಂದು ವಿಜಯ್ ದೇವರಕೊಂಡ ಅವರ ಹುಟ್ಟುಹಬ್ಬ ಇರುವ ಹಿನ್ನೆಲೆ ಅಂದು ಮೊದಲ ಹಾಡನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಸಮಂತಾ ಮತ್ತು ವಿಜಯ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟರ್ ಹಂಚಿಕೊಂಡಿದ್ದಾರೆ. ಸಮಂತಾ ಶೇರ್ ಮಾಡಿರುವ ಪೋಸ್ಟರ್​ಗೆ "ಖುಷಿ" ಎಂಬ ಶೀರ್ಷಿಕೆ ಕೊಟ್ಟಿದ್ದಾರೆ.

ಈ ಪ್ರೇಮಕಥೆಯ ಹಾಡನ್ನು ಹೇಶಮ್ ಅಬ್ದುಲ್ ಸಂಯೋಜಿಸಿದ್ದಾರೆ. ತೆಲುಗಿನಲ್ಲಿ 'ನಾ ರೋಜಾ ನುವ್ವೆ', ಹಿಂದಿಯಲ್ಲಿ 'ತು ಮೇರಿ ರೋಜಾ', ತಮಿಳಿನಲ್ಲಿ 'ಎನ್ ರೋಜಾ ನೀಯೆ', ಕನ್ನಡದಲ್ಲಿ 'ನನ್ನ ರೋಜಾ ನೀನೆ' ಮತ್ತು ಮಲಯಾಳಂನಲ್ಲಿ 'ಎನ್​ ರೋಜಾ ನೀನೆ' ಎಂದು ಹಾಡು ಬಿಡುಗಡೆ ಆಗಲಿದೆ. ಬಹು ನಿರೀಕ್ಷಿತ ಸಿನಿಮಾದ ಈ ಲವ್ ಸಾಂಗ್ ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಸಮಂತಾ ಮತ್ತು ವಿಜಯ್ ಹೊರತಾಗಿ, ಚಿತ್ರದಲ್ಲಿ ಜಯರಾಮ್, ಸಚಿನ್ ಖೇಡಕರ್, ಮುರಳಿ ಶರ್ಮಾ, ಲಕ್ಷ್ಮಿ, ಅಲಿ, ರೋಹಿಣಿ, ವೆನ್ನೆಲ ಕಿಶೋರ್, ರಾಹುಲ್ ರಾಮಕೃಷ್ಣ, ಶ್ರೀಕಾಂತ್ ಅಯ್ಯಂಗಾರ್ ಮತ್ತು ಶರಣ್ಯ ಸೇರಿದಂತೆ ದೊಡ್ಡ ತಾರಾಗಣವಿದೆ. ಸೆಪ್ಟೆಂಬರ್ 1ರಂದು ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಸಲ್ಮಾನ್ ​ -ಶಾರುಖ್​ನ ಆ ಒಂದು ಸೀನ್​ಗೆ 35 ಕೋಟಿಯ ಸೆಟ್​ ನಿರ್ಮಾಣ.. ಹಾಗಾದ್ರೆ ನಟರ ಸಂಭಾವನೆ?

"ಖುಷಿ" ಚಿತ್ರದ ಮೊದಲ ಹಾಡಿನ ಪೋಸ್ಟರ್ ಸಮಂತಾ ಮತ್ತು ವಿಜಯ್ ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಕುತೂಹಲ ಹುಟ್ಟುಹಾಕಿದೆ. ಪೋಸ್ಟರ್‌ನಲ್ಲಿ ಇಬ್ಬರ ಕೆಮಿಸ್ಟ್ರಿ ಸ್ಪಷ್ಟವಾಗಿ ಕಾಣಸಿಗುತ್ತದೆ. ಈ ರೊಮ್ಯಾಂಟಿಕ್​ ಸಾಂಗ್ ಅನ್ನು ಕಾಶ್ಮೀರದಲ್ಲಿ ಸೆರೆ ಹಿಡಿಯಲಾಗಿದೆ.​​

ಇದನ್ನೂ ಓದಿ: ಸಲ್ಮಾನ್​ ಸಿನಿಮಾದಲ್ಲಿ ಡ್ಯಾನ್ಸರ್​ ರಾಘವ್​ ಜುಯಲ್​​ ಪಡೆದ ಸಂಭಾವನೆ ಕೇಳಿದ್ರೆ ಹುಬ್ಬೇರಿಸೋದು ಗ್ಯಾರಂಟಿ!

'ಶಾಕುಂತಲಂ' ಸಮಂತಾ ರುತ್ ಪ್ರಭು ಕೊನೆಯದಾಗಿ ಕಾಣಿಸಿಕೊಂಡ ಚಿತ್ರ. ಆದ್ರೆ 'ಶಾಕುಂತಲಂ' ನಿರೀಕ್ಷೆ ತಲುಪಲಿಲ್ಲ. ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡಲಿಲ್ಲ. ಈ ಹಿನ್ನೆಲೆ ಸ್ಯಾಮ್​ ಮುಂದಿನ ಖುಷಿ ಮತ್ತು ಸಿಟಾಡೆಲ್​ ವೆಬ್​ ಸೀರಿಸ್​ ಮೇಲೆ ಹೆಚ್ಚಿನ ಗಮನ ಹರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.