ಚಂಡೀಗಡ್ : ಪಂಜಾಬ್ನ ಗೃಹಿಣಿ ಕುಲ್ದೀಪ್ ಕೌರ್ ಮಾಸ್ಟರ್ ಶೆಫ್ ಕಾರ್ಯಕ್ರಮದ ಟಾಪ್ 5ನೇ ಸ್ಥಾನಕ್ಕೇರಿ, ಕಡೆಗೆ ಈ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ. ಪಂಜಾಬಿ ಕುಟುಂಬದ ಕುಲ್ದೀಪ್ ಕೌರ್ ಮಾಸ್ಟರ್ ಶೆಪ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಮೊದಲ ಪಂಜಾಬಿ ಮಹಿಳೆ ಎಂಬ ಖ್ಯಾತಿ ಪಡೆದಿದ್ದಾರೆ. ಗೃಹಿಣಿಯಾಗಿ ತಮ್ಮ ಪುಟ್ಟ ಅಡುಗೆ ಮನೆಯಲ್ಲಿ ಪಾಕ ತಯಾರಿಸುತ್ತಿದ್ದ ಕುಲ್ದೀಪ್ ಕೌರ್ ದೊಡ್ಡ ದೊಡ್ಡ ಶೆಫ್ಗಳಿಂದ ಪ್ರಶಂಸೆಯನ್ನು ಪಡೆದಿದ್ದಾರೆ. ಮನೆ ಅಡುಗೆ ಹೊರತಾಗಿ ಯಾವುದೇ ರೆಸ್ಟೋರೆಂಟ್, ಶೆಫ್ಗಳಿಂದ ತರಬೇತಿ ಪಡೆಯದೇ ಇದೀಗ ಜಗತ್ತಿನ ಪ್ರಮುಖ ಬಾಣಸಿಗರ ಕೈಯಲ್ಲಿ ಪ್ರಶಂಸೆ ಪಡೆಯುವ ಮೂಲಕ ಮಾಸ್ಟರ್ ಇಂಡಿಯಾ ಶೆಫ್ ಟಾಪ್ 5ನೇ ಕಂಟೆಸ್ಟೆಂಟ್ ಆಗಿದ್ದಾರೆ. ಅವರ ಈ ಕಾರ್ಯಕ್ಕೆ ಇದೀಗ ಕುಟುಂಬ ಮತ್ತು ಪಂಜಾಬಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕುಲ್ದೀಪ್ ಕೌರ್ ಈ ಕಾರ್ಯಕ್ರಮದ ಮೂಲಕ ಇದೀಗ ಪಂಜಾಬಿ ಮನೆ ಮನಗಳಲ್ಲಿ ಹೆಸರು ಪಡೆದಿದ್ದು, ರಾಜ್ಯದ ರಾಜಕೀಯ ನಾಯಕರು ಸೇರಿದಂತೆ ಅನೇಕ ಸಂಘಟನೆಗಳು ಅವರಿಗೆ ಮೆಚ್ಚುಗೆ ಜೊತೆಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಯುನೈಡೆಟ್ ಸಿಕ್ ಆರ್ಗನೈಸೇಷನ್ ಅವರಿಗೆ ಶುಭ ಕೋರಿದೆ. ಪಂಜಾಬಿ ಲೂಧಿಯಾನದ ಚಿಕ್ಕ ಅಡುಗೆ ಮನೆಯಲ್ಲಿ ರುಚಿಯಾದ ಅಡುಗೆ ತಯಾರಿಸುತ್ತಿದ್ದ ಮಹಿಳೆ ಇದೀಗ ತಮ್ಮ ಪಾಕ ಪ್ರಾವೀಣ್ಯತೆ ಮೂಲಕ ನಮಗೆ ಹೆಮ್ಮೆ ತಂದಿದ್ದಾರೆ ಎಂದು ಸಂಘಟನೆ ಆಕೆಯನ್ನು ಕೊಂಡಾಡಿದೆ.
ಇನ್ನು ಯಾವುದೇ ವೃತ್ತಿಪರ ತರಬೇತಿ ಪಡೆಯದೇ ಘಟಾನುಘಟಿ ಸ್ಪರ್ಧಿಗಳ ನಡುವೆ ಟಾಪ್ ಸ್ಪರ್ಧಿಯಾಗಿ ಹೊರ ಹೊಮ್ಮಿದ ಕಾರಣ ಇದೀಗ ಅವರ ಬೇಡಿಕೆ ಹೆಚ್ಚಿದೆ. ಅವರಿಗೆ ಜಗತ್ತಿನ ಟಾಪ್ ಬಾಣಸಿಗರು, ಹೋಟೆಲ್ಗಳಿಂದ ಉದ್ಯೋಗವಕಾಶಗಳು ಅರಸಿ ಬರುತ್ತಿವೆ. ಆದರೆ, ಈ ಅವಕಾಶಗಳನ್ನು ಸದ್ಯಕ್ಕೆ ನಿರಾಕರಿಸಿರುವ ಕುಲ್ದೀಪ್ ಇದೀಗ ಮನೆಯವರೊಂದಿಗೆ ಕಾಲ ಕಳೆಯುವ ಸಮಯವಾಗಿದೆ. ಈ ಕಾರ್ಯಕ್ರಮದಿಂದಾಗಿ ಕುಟುಂಬಸ್ಥರು ಸಂತಸಗೊಂಡಿದ್ದು, ಇದರಿಂದ ನನಗೂ ಹೆಮ್ಮೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಮಾಸ್ಟರ್ ಶೆಫ್ ಇಂಡಿಯಾ ಕಾರ್ಯಕ್ರಮ ಕುರಿತು: ಭಾರತದ ಮೂಲೆ ಮೂಲೆಯಲ್ಲಿನ ಜನರ ಪಾಕ ಪ್ರಾವೀಣ್ಯತೆ ಪ್ರದರ್ಶನ ಈ ಕಾರ್ಯಕ್ರಮದ ಮೂಲಕ ನಡೆಯಲಿದೆ. ಆಸ್ಟ್ರೇಲಿಯಾದ ಮಾಸ್ಟರ್ ಶೆಫ್ ಇಂಡಿಯಾದಿಂದ ಪ್ರೇರೇಪಣೆಗೊಂಡು ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ತೀರ್ಪುಗಾರರು ನೀಡಿದ ಸವಾಲುಗಳನ್ನು ಸ್ವೀಕರಿಸಿ ಸ್ಪರ್ಧಿಗಳು ರುಚಿಕರ ಭಕ್ಷ್ಯಗಳನ್ನು ತಯಾರಿಸುತ್ತಾರೆ. ಈ ಭಕ್ಷ್ಯಗಳನ್ನು ಸೇವಿಸಲು ತೀರ್ಪುಗಾರರು ಸೇರಿದಂತೆ ಪ್ರಖ್ಯಾತ ಶೆಫ್ಗಳು ಹಾಜರಿರುತ್ತಾರೆ.
ಈಗಾಗಲೇ ಖ್ಯಾತಿ ಪಡೆದಿರುವ ಈ ಮಾಸ್ಟರ್ ಶೆಫ್ ಇಂಡಿಯಾದ 7ನೇ ಸೀಸನ್ ಇದೀಗ ನಡೆಯುತ್ತಿದೆ. ಸೋನಿ ಎಂಟರ್ಟೈನ್ಮೆಂಟ್ ಟೆಲಿವಿಷನ್ ಮತ್ತು ಸೋನಿಲೈವ್ನಲ್ಲಿ ಈ ಕಾರ್ಯಕ್ರಮ ಪ್ರಸಾರ ಆಗುತ್ತಿದೆ. ಈ ಕಾರ್ಯಕ್ರಮದ ತೀರ್ಪುಗಾರರಾಗಿ ಪ್ರಖ್ಯಾತ ಶೆಫ್ಗಳಾದ ವಿಕಾಸ್ ಖನ್ನಾ, ರಣಬೀರ್ ಬ್ರಾರ್ ಮತ್ತು ಗರಿಮಾ ಆರೋರಾ ಇದ್ದಾರೆ. ಸದ್ಯ 4 ಮಂದಿ ಸೆಮಿಫೈನಲ್ಗಳು ಈ ಕಾರ್ಯಕ್ರಮದಲ್ಲಿ ಇದ್ದು, ಯಾರು ವಿಜೇತರಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ನಂದಿನಿ ನಮ್ಮವಳಲ್ಲ 'ನನ್ನವಳು': ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್