ಸದಾ ಸದಭಿರುಚಿಯ ಸಿನಿಮಾಗಳ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಯಾಗಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ಬ್ರ್ಯಾಂಡ್ ಕ್ರಿಯೇಟ್ ಮಾಡಿಕೊಂಡಿರುವ ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆಗೆ ಶತಕದ ಸಂಭ್ರಮ. ಹೌದು, 100 ಸಿನಿಮಾ ಮೂಲಕ ಸೆಂಚುರಿ ಸಂಭ್ರಮಾಚರಿಸಿದೆ.
ಪ್ರೇಕ್ಷಕರ ಅಭಿರುಚಿ ಮತ್ತು ಕಂಟೆಂಟ್ ಆಧಾರಿತ ಚಿತ್ರವನ್ನು ನಿರ್ಮಿಸೋ ಜೊತೆಗೆ ಕನ್ನಡ ಸೇರಿದಂತೆ ನಾನಾ ಭಾಷೆಗಳ ಕಂಟೆಂಟ್ ಆಧಾರಿತ ಸಿನಿಮಾಗಳನ್ನು ವಿತರಣೆ ಮಾಡುವ ಜವಾಬ್ದಾರಿ ಹೊತ್ತು ಮುನ್ನುಗ್ಗುತ್ತಿರುವ ಕೆಆರ್ಜಿ ಸ್ಟುಡಿಯೋ ಪ್ರಸ್ತುತ ಡಾಲಿ ಧನಂಜಯ್ ಹಾಗೂ ರಮ್ಯಾ ಅಭಿನಯದ ಬಹುನಿರೀಕ್ಷಿತ "ಉತ್ತರಾಕಾಂಡ" ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈವರೆಗೂ 100ಕ್ಕೂ ಅಧಿಕ ಚಿತ್ರಗಳ ವಿತರಣೆ ಮಾಡುವ ಮೂಲಕ ಸೆಂಚುರಿ ಸಂಭ್ರಮದಲ್ಲಿದೆ.
ನಿನ್ನೆ ಕೆ.ಆರ್.ಜಿ ಸ್ಟುಡಿಯೋಸ್ ಸಂಸ್ಥೆಗೆ ಸಂಭ್ರಮದ ಶುಕ್ರವಾರ. ಖ್ಯಾತ ನಿರ್ದೇಶಕ ವಿಧು ವಿನೋದ್ ಚೋಪ್ರಾ ನಿರ್ಮಿಸಿ, ನಿರ್ದೇಶಿಸಿರುವ "12th ಫೇಲ್" ಹಾಗೂ ಡಾಲಿ ಪಿಕ್ಚರ್ಸ್ ಲಾಂಛನದಲ್ಲಿ ಧನಂಜಯ್ ಅವರು ನಿರ್ಮಾಣ ಮಾಡಿರುವ "ಟಗರು ಪಲ್ಯ" ಎಂಬ ಎರಡು ಚಿತ್ರಗಳು ಶುಕ್ರವಾರ ತೆರೆಕಂಡಿದೆ. ಈ ಎರಡೂ ಬಹುನಿರೀಕ್ಷಿತ ಚಿತ್ರಗಳನ್ನು ಕೆ.ಆರ್.ಜಿ ಸ್ಟುಡಿಯೋಸ್ ವಿತರಣೆ ಮಾಡಿದೆ. ಎರಡೂ ಚಿತ್ರಗಳಿಗೂ ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.
ಇದನ್ನೂ ಓದಿ: ಮಾಮಿ ಚಲನಚಿತ್ರೋತ್ಸವ 2023: ಫೋಟೋಗಳಲ್ಲಿ ನೋಡಿ ತಾರಾ ಮೆರುಗು!
ಈ ಬಗ್ಗೆ ಕೆ.ಆರ್.ಜಿ ಸ್ಟುಡಿಯೋಸ್ನ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವಿತರಣೆ ಸಂಸ್ಥೆಗಳಿವೆ. ಕೆ.ಆರ್.ಜಿ ಸ್ಟುಡಿಯೋ ಅಡಿ ನಾವು ಕಂಟೆಂಟ್ ಆಧಾರಿತ ಸಿನಿಮಾಗಳ ವಿತರಣೆ ಜೊತೆಗೆ ನಿರ್ಮಾಣ ಮಾಡುತ್ತಿದ್ದೇವೆ. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ನಮ್ಮ ಸಂಸ್ಥೆ ಗಮನ ಸೆಳೆದಿದೆ. ಅದು ನಮಗೆ ತುಂಬಾನೇ ಖುಷಿ ಕೊಟ್ಟಿದೆ. ಕೆ.ಆರ್.ಜಿ ಸ್ಟುಡಿಯೋ ಅಂದಾಕ್ಷಣ ಒಂದು ಟ್ರಸ್ಟ್ ಇದೆ ಅಂತಾರೆ. ಇದು ಖುಷಿಯ ವಿಚಾರ ಎಂದು ತಿಳಿಸಿದರು.
ಇದನ್ನೂ ಓದಿ: ಪರಭಾಷಾ ಚಿತ್ರಗಳಿಗೆ ದುಬಾರಿ ಟಿಕೆಟ್ ದರ: ನಟ ಶಿವ ರಾಜ್‌ಕುಮಾರ್ ಹೇಳಿದ್ದೇನು?- ವಿಡಿಯೋ
ಸದ್ಯ ಸುದೀಪ್ ಸರ್ ಜೊತೆ ಬಿಗ್ ಬಜೆಟ್ ಸಿನಿಮಾ ಮಾಡುತ್ತಿದ್ದೇವೆ. ಇದರ ಜೊತೆಗೆ ಕಂಟೆಂಟ್ ಇರುವ ನಿರ್ದೇಶಕರ ಜೊತೆಯೂ ಸಿನಿಮಾ ಮಾಡುತ್ತಿದ್ದೇವೆ. ಕನ್ನಡ ಚಿತ್ರರಂಗದಲ್ಲಿ ದೊಡ್ಡ ದೊಡ್ಡ ವಿತರಣೆ ಸಂಸ್ಥೆಗಳ ಮಧ್ಯೆ ನಮ್ಮ ಕೆ.ಆರ್.ಜಿ ಸ್ಟುಡಿಯೋ ವತಿಯಿಂದ ನೂರು ಸಿನಿಮಾಗಳ ವಿತರಣೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯ ಮೂಲಕ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುತ್ತೇವೆ ಹಾಗೂ ವಿತರಣೆ ಮಾಡುತ್ತೇವೆ. ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಇರಲಿ ಎಂದು ಯೋಗಿ ಜಿ ರಾಜ್ ಹೇಳಿದರು.