ETV Bharat / entertainment

Darling Krishna: 'ಕೌಸಲ್ಯಾ ಸುಪ್ರಜಾ ರಾಮ' ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್​ - Darling Krishna

ಡಾಲಿಂಗ್​ ಕೃಷ್ಣ ನಟನೆಯ 'ಕೌಸಲ್ಯಾ ಸುಪ್ರಜಾ ರಾಮ' ಸಿನಿಮಾ ಜುಲೈ 28ರಂದು ಬಿಡುಗಡೆಯಾಗಲಿದೆ.

kausalya supraja rama
ಕೌಸಲ್ಯಾ ಸುಪ್ರಜಾ ರಾಮ
author img

By

Published : Jul 2, 2023, 12:44 PM IST

'ಲವ್​ ಮಾಕ್ಟೇಲ್​' ಖ್ಯಾತಿಯ ನಟ ಡಾರ್ಲಿಂಗ್​ ಕೃಷ್ಣ ಮತ್ತು ಮೊಗ್ಗಿನ ಮನಸು, ಬಚ್ಚನ್​, ಮುಂಗಾರು ಮಳೆ 2 ಮುಂತಾದ ಹಿಟ್​ ಚಿತ್ರಗಳನ್ನು ನೀಡಿರುವ ಸ್ಯಾಂಡಲ್​ವುಡ್​ ಸ್ವ-ಮೇಕ್​ ನಿರ್ದೇಶಕ ಶಶಾಂಕ್​ಕಾಂಬೋದಲ್ಲಿ 'ಕೌಸಲ್ಯಾ ಸುಪ್ರಜಾ ರಾಮ' ಎಂಬ ಸಿನಿಮಾ ರೂಪುಗೊಳ್ಳುತ್ತಿದೆ. ಇದೀಗ ಬಿಡುಗಡೆಗೂ ಮುಹೂರ್ತ ನಿಗದಿಯಾಗಿದೆ. ನಿಮ್ಮ ಕ್ಯಾಲೆಂಡರ್​ನಲ್ಲಿ ಯಾವ ದಿನಾಂಕವನ್ನು ಗೊತ್ತು ಮಾಡಬೇಕು ಎಂಬುದನ್ನು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.

ಸಿನಿಮಾ ಬಿಡುಗಡೆ ದಿನಾಂಕ ಅನೌನ್ಸ್​ ಮಾಡಲೆಂದೇ ಚಿತ್ರತಂಡ ಮೋಷನ್​ ಪೋಸ್ಟರ್​ ಹಂಚಿಕೊಂಡಿದೆ. ಡಾರ್ಲಿಂಗ್​ ಕೃಷ್ಣ ಮೂರು ಲುಕ್​ನಲ್ಲಿ ಅಭಿನಯಿಸಿದ್ದಾರೆ. ಸಾಫ್ಟ್​, ರಗಡ್​ ಮತ್ತು ಕೋಪಿಷ್ಟನಂತೆ ತ್ರಿಮೂರ್ತಿ ಅವತಾರ ತಾಳಿದ್ದಾರೆ. ಕೃಷ್ಣ ಬೈಕ್​ನಲ್ಲಿ ಹೋಗುತ್ತಿರುವಂತೆ ಡಿಫರೆಂಟ್​ ಆಗಿ ಪೋಸ್ಟರ್​ ಡಿಸೈನ್​ ಮಾಡಲಾಗಿದೆ. ಇಡೀ ಚಿತ್ರಕಥೆಯನ್ನು ಒಂದೇ ಪೋಸ್ಟರ್​ನಲ್ಲಿ ಡೈರೆಕ್ಟರ್​ ತೋರಿಸಿದ್ದಾರೆ. ಬಹುನಿರೀಕ್ಷಿತ ಸಿನಿಮಾವು ಜುಲೈ 28ರಂದು ಬಿಡುಗಡೆಯಾಗಲಿದೆ.

ಚಿತ್ರತಂಡ ಹೀಗಿದೆ..: ಜೂಲಿಯಟ್​ 2 ಸಿನಿಮಾಗಳಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬೃಂದಾ ಆಚಾರ್ಯ ಈ ಸಿನಿಮಾಗೆ ನಾಯಕಿ. ಇದೊಂದು ತಾಯಿ, ಮಗನ ನಡುವಿನ ಭಾವನಾತ್ಮಕ ಚಿತ್ರವಾಗಿದ್ದು, ಮಗನಾಗಿ ಡಾರ್ಲಿಂಗ್​ ಕೃಷ್ಣ, ತಾಯಿಯ ಪಾತ್ರದಲ್ಲಿ ಸುಧಾ ಬೆಳವಾಡಿ, ತಂದೆಯ ಪಾತ್ರದಲ್ಲಿ ರಂಗಾಯಣ ರಘು ಅಭಿನಯವಿದೆ.

ಇದನ್ನೂ ಓದಿ: ಕಾರವಾರದ ವಿಲಕ್ಷಣ ವ್ಯಕ್ತಿಯ ಕಥೆ 'ಟೋಬಿ'.. ಕುತೂಹಲಕಾರಿ ಸಂಗತಿ ಹಂಚಿಕೊಂಡ ಕತೆಗಾರ ದಯಾನಂದ್

ಅಚ್ಯುತ್​ ಕುಮಾರ್​, ಗಿರಿರಾಜ್​ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಒಟ್ಟು ಐದು ಹಾಡುಗಳಿವೆ. ಅರ್ಜುನ್​ ಜನ್ಯ ಸಂಗೀತ, ಸುಜ್ಞಾನ್​ ಛಾಯಾಗ್ರಹಣವಿದೆ. ಶಶಾಂಕ್​ ಸಿನಿಮಾಸ್​ ಮತ್ತು ಬಿ.ಸಿ. ಪಾಟೀಲ್​ ಅವರ ಕೌರವ ಪ್ರೊಡಕ್ಷನ್​ ಹೌಸ್​ ಜಂಟಿಯಾಗಿ ಚಿತ್ರ ನಿರ್ಮಾಣ ಮಾಡುತ್ತಿದೆ.

ಡಾರ್ಲಿಂಗ್​ ಕೃಷ್ಣ ಸಿನಿ ಜರ್ನಿ..: ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕೃಷ್ಣ ರುಕ್ಮಿಣಿ' ಧಾರಾವಾಹಿ ಮೂಲಕ ಡಾರ್ಲಿಂಗ್​ ಕೃಷ್ಣ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ನಂತರದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಾನೇ ಕಥೆಗಳನ್ನು ಬರೆದು, ನಿರ್ದೇಶಿಸಿ ಸಿನಿಮಾಗಳನ್ನು ಮಾಡಿದ್ದಾರೆ. ಕೆಲವೇ ವರ್ಷಗಳಲ್ಲಿ ಸೂಪರ್​ ಸ್ಟಾರ್​ ನಟರ ಸಾಲಿಗೆ ಇವರು ಕೂಡ ಸೇರಿದ್ದಾರೆ. ಕೋವಿಡ್ 19 ಸಮಯದಲ್ಲಿ ತೆರೆ ಕಂಡಿದ್ದ 'ಲವ್​ ಮಾಕ್ಟೇಲ್​' ಚಿತ್ರ ಅದೆಷ್ಟೋ ಸಿನಿ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅದಾದ ನಂತರ 'ಲವ್​ ಮಾಕ್ಟೇಲ್ 2' ಕೂಡ ಸೂಪರ್​​ ಹಿಟ್​ ಆಗಿದೆ.

ಇವರು ತಮ್ಮ ಸಿನಿಮಾಗಳಿಗೆ ಹೆಚ್ಚಾಗಿ ಎರಡು ಹೀರೋಯಿನ್​ ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಲ್ಲಿ ಒಬ್ಬರು ಚಿತ್ರಕಥೆ ಕೊನೆಯಲ್ಲಿ ಇವರ ಜೀವನ ಸಂಗಾತಿಯಾಗುತ್ತಾರೆ. ಅಲ್ಲದೇ ಇವರ ಹೆಚ್ಚಿನ ಸಿನಿಮಾಗಳಲ್ಲಿ ಇವರ ಪತ್ನಿ, ನಟಿ ಮಿಲನಾ ನಾಗರಾಜ್ ಅವರೇ​ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದಕ್ಕೆ ಉದಾಹರಣೆಯೆಂಬಂತೆ ಇತ್ತೀಚೆಗೆ ತೆರೆ ಕಂಡ 'ಲವ್ ಬರ್ಡ್ಸ್'​​ ಸಿನಿಮಾ ಒಳ್ಳೆಯ ರೀತಿಯಲ್ಲೇ ಪ್ರದರ್ಶನ ಕಂಡಿದೆ. ಇದೀಗ 'ಕೌಸಲ್ಯಾ ಸುಪ್ರಜಾ ರಾಮ' ಚಿತ್ರವು ತೆರೆ ಕಾಣಲು ಸಜ್ಜಾಗಿದೆ.

ಇದನ್ನೂ ಓದಿ: Upendra ಬರ್ತ್​ಡೇಗೆ 'ಬುದ್ಧಿವಂತ 2' ಟೀಸರ್​ ಜೊತೆ ರಿಲೀಸ್​ ಡೇಟ್​ ಅನೌನ್ಸ್​; ವಿಭಿನ್ನ ಅವತಾರದಲ್ಲಿ ರಿಯಲ್​ ಸ್ಟಾರ್​​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.