ಕಾಲಿವುಡ್ ಮೋಸ್ಟ್ ಹ್ಯಾಂಡ್ಸಮ್ ಬ್ಯಾಚುಲರ್ ನಟ ವಿಶಾಲ್ ಮದುವೆಯ ಬಗ್ಗೆ ಕೆಲವು ವದಂತಿಗಳು ಇತ್ತೀಚೆಗೆ ಕೇಳಿ ಬರುತ್ತಿದೆ. ತಮಿಳು ಸ್ಟಾರ್ ನಟಿ ಲಕ್ಷ್ಮಿ ಮೆನನ್ ಜೊತೆ ದಾಂಪತ್ಯಕ್ಕೆ ಕಾಲಿಡಲಿದ್ದಾರೆ ಎಂಬ ಊಹಾಪೋಹಗಳು ಎಲ್ಲೆಡೆ ಹರಿದಾಡುತ್ತಿದೆ. ಈ ವಿಚಾರವಾಗಿ ಇದೀಗ ವಿಶಾಲ್ ಪ್ರತಿಕ್ರಿಯಿಸಿದ್ದಾರೆ. ಇಲ್ಲ ಸಲ್ಲದ ವದಂತಿಗಳು ಲಕ್ಷ್ಮಿ ಮೆನನ್ ಮೇಲೆ ಹೆಚ್ಚು ಪರಿಣಾಮ ಬೀರುವ ಕಾರಣಕ್ಕಾಗಿ ಈ ವಿಚಾರವಾಗಿ ಮಾತನಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
-
Usually I don’t respond to any fake news or rumors about me coz I feel it’s useless. But now since the rumour about my marriage with Laksmi Menon is doing the rounds, I point blankly deny this and it’s absolutely not true and baseless.
— Vishal (@VishalKOfficial) August 11, 2023 " class="align-text-top noRightClick twitterSection" data="
The reason behind my response is only…
">Usually I don’t respond to any fake news or rumors about me coz I feel it’s useless. But now since the rumour about my marriage with Laksmi Menon is doing the rounds, I point blankly deny this and it’s absolutely not true and baseless.
— Vishal (@VishalKOfficial) August 11, 2023
The reason behind my response is only…Usually I don’t respond to any fake news or rumors about me coz I feel it’s useless. But now since the rumour about my marriage with Laksmi Menon is doing the rounds, I point blankly deny this and it’s absolutely not true and baseless.
— Vishal (@VishalKOfficial) August 11, 2023
The reason behind my response is only…
ವದಂತಿ ಬಗ್ಗೆ ವಿಶಾಲ್ ಕ್ಲಾರಿಟಿ: ಲಕ್ಷ್ಮಿ ಮೆನನ್ ಜೊತೆಗಿನ ಮದುವೆ ಕುರಿತಾದ ವದಂತಿಗೆ ಸೋಷಿಯಲ್ ಮೀಡಿಯಾದ ಮೂಲಕ ವಿಶಾಲ್ ಸ್ಪಷ್ಟನೆ ನೀಡಿದ್ದಾರೆ. "ಸಾಮಾನ್ಯವಾಗಿ ನಾನು ನನ್ನ ಬಗ್ಗೆ ಸುಳ್ಳು ಸುದ್ದಿ ಅಥವಾ ಇನ್ನಿತರ ವದಂತಿಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಏಕೆಂದರೆ ಇದು ಅನಗತ್ಯ ಎಂದು ನಾನು ಭಾವಿಸುತ್ತೇನೆ. ಆದರೆ ಇದೀಗ ಲಕ್ಷ್ಮಿ ಮೆನನ್ ಜೊತೆಗೆ ನನ್ನ ಮದುವೆಯ ಬಗ್ಗೆ ವದಂತಿಗಳಿವೆ. ಈ ವಿಚಾರವನ್ನು ಸಲೀಸಾಗಿ ಅಲ್ಲಗಳೆಯುತ್ತೇನೆ ಮತ್ತು ಇದು ಸತ್ಯಕ್ಕೂ ದೂರವಾದ ಸುದ್ದಿ" ಎಂದು ಹೇಳಿದ್ದಾರೆ.
ಅಲ್ಲದೇ, ಲಕ್ಷ್ಮಿ ಮೆನನ್ ಜೊತೆಗಿನ ಮದುವೆ ವದಂತಿ ಬಗ್ಗೆ ಮೌನ ಮುರಿದ ಕಾರಣವನ್ನು ನಟ ಬಹಿರಂಗಪಡಿಸಿದ್ದಾರೆ. ಆಕೆ ಒಬ್ಬಳು ಹುಡುಗಿಯಾಗಿ ಅವಳ ಮೇಲೆ ಕೆಟ್ಟ ಇಮೇಜ್ ಸೃಷ್ಟಿಯಾಗುವುದು ಇಷ್ಟವಿಲ್ಲ ಎಂಬ ಕಾರಣಕ್ಕೆ ಈ ವಿಚಾರವಾಗಿ ಮಾತನಾಡುತ್ತಿರುವುದಾಗಿ ಅವರು ಹೇಳಿದ್ದಾರೆ. "ಅವರೊಬ್ಬ ನಟಿ ಎನ್ನುವುದಕ್ಕಿಂತ ಹೆಚ್ಚಾಗಿ ಹುಡುಗಿ ಎಂಬ ಕಾರಣಕ್ಕೆ ಪ್ರತಿಕ್ರಿಯಿಸುತ್ತಿದ್ದೇನೆ. ಒಬ್ಬಳು ಹುಡುಗಿಯ ವೈಯಕ್ತಿಕ ಜೀವನದ ಬಗ್ಗೆ ಹೀಗೆಲ್ಲಾ ವದಂತಿ ಸೃಷ್ಟಿಸುತ್ತಾ ಅವರ ಖಾಸಗಿತನವನ್ನು ಆಕ್ರಮಿಸಿಕೊಳ್ಳುತ್ತಿದ್ದೀರಿ. ಇದು ನಟಿಯ ಇಮೇಜ್ ಅನ್ನು ಹಾಳು ಮಾಡುತ್ತಿದೆ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Vijay Deverakonda: ಕೊನೆಗೂ ಮದುವೆ ಬಗ್ಗೆ ಮಾತನಾಡಿದ ವಿಜಯ್ ದೇವರಕೊಂಡ - ವಧು ಯಾರು?
ಜೊತೆಗೆ, 45 ವರ್ಷದ ನಟ ಸಮಯ ಬಂದಾಗ ಮದುವೆ ವಿಚಾರ ತಿಳಿಸುವುದಾಗಿ ಹೇಳಿದ್ದಾರೆ. ಈಗಾಗಲೇ ಎಲ್ಲವನ್ನು ನಿರ್ಧರಿಸಲು ಇದು ಬರ್ಮುಡಾ ಟ್ರಯಾಂಗಲ್ ಅಲ್ಲ ಎಂದಿದ್ದಾರೆ. "ವರ್ಷ, ದಿನಾಂಕ, ಸಮಯ ಮತ್ತು ಭವಿಷ್ಯದಲ್ಲಿ ನಾನು ಯಾರನ್ನು ಮದುವೆಯಾಗಲಿದ್ದೇನೆ ಎಂದು ನಿರ್ಧರಿಸಲು ಇದು ಬರ್ಮುಡಾ ಟ್ರಯಾಂಗಲ್ ಅಲ್ಲ. ಸಮಯ ಬಂದಾಗ ಅಧಿಕೃತವಾಗಿ ನನ್ನ ಮದುವೆ ವಿಚಾರವನ್ನು ಪ್ರಕಟಿಸುತ್ತೇನೆ. ದೇವರು ಆಶೀರ್ವದಿಸಲಿ" ಎಂದು ಹೇಳಿದ್ದಾರೆ. ಈ ಮೂಲಕ ಲಕ್ಷ್ಮಿ ಮೆನನ್ ಜೊತೆಗಿನ ಮದುವೆ ವದಂತಿಗೆ ವಿಶಾಲ್ ತೆರೆ ಎಳೆದಿದ್ದಾರೆ.
ವಿಶಾಲ್ ಮತ್ತು ಲಕ್ಷ್ಮಿ ಮೆನನ್ ಮದುವೆ ವದಂತಿ ಇತ್ತೀಚೆಗೆ ಪ್ರಾರಂಭವಾಯಿತು. ಇವರಿಬ್ಬರ ಆತ್ಮೀಯ ಸ್ನೇಹವು ಈ ಊಹಾಪೋಹಗಳನ್ನು ಸೃಷ್ಟಿಸಿತು. ಹಾಗಂತ ವಿಶಾಲ್ ಮದುವೆಯ ವದಂತಿಗಳು ಕೇಳಿ ಬರುತ್ತಿರುವುದೇನು ಇದೇ ಮೊದಲಲ್ಲ. ಇದಕ್ಕೂ ಮುಂಚೆ, ನಾಡೋಡಿಗಳು ಚಿತ್ರದ ನಟಿ ಅಭಿನಯಾ ಜೊತೆಗೆ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ವಿಚಾರವನ್ನು ವಿಶಾಲ್ ಮತ್ತು ಅಭಿನಯಾ ಮುಕ್ತವಾಗಿ ನಿರಾಕರಿಸಿದ್ದರು.
ಇನ್ನೂ ವಿಶಾಲ್ ಸಿನಿಮಾ ವಿಚಾರವಾಗಿ ನೋಡುವುದಾದರೆ, ನಿರ್ದೇಶಕ ಅಧಿಕ್ ರವಿಚಂದ್ರನ್ ಅವರ ಮುಂಬರುವ ಚಿತ್ರ ಮಾರ್ಕ್ ಆಂಟೋನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ರಿತು ವರ್ಮಾ, ಎಸ್ಜೆ ಸೂರ್ಯ ಮತ್ತು ಸೆಲ್ವರಾಘವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಈ ವರ್ಷ ಸೆಪ್ಟೆಂಬರ್ 15 ರಂದು ತೆರೆ ಕಾಣಲಿದೆ. ಇದಲ್ಲದೇ ಆಕ್ಷನ್ ಪ್ರಾಕ್ಡ್ ಥ್ರಿಲ್ಲರ್ ಸಿನಿಮಾ ತುಪ್ಪರಿವಾಲನ್ನಲ್ಲಿ ನಟಿಸಲಿದ್ದಾರೆ. ಇದನ್ನು ಮಿಸ್ಕಿನ್ ಬರೆದು ನಿರ್ದೇಶಿಸಿದ್ದಾರೆ.
ಇದನ್ನೂ ಓದಿ: 'ನಾನು ಈಗಾಗಲೇ ಮದುವೆಯಾಗಿದ್ದೇನೆ, ಅವನನ್ನು ತುಂಬಾ ಪ್ರೀತಿಸುತ್ತೇನೆ': ಫ್ಯಾನ್ಸ್ಗೆ ಶಾಕ್ ಕೊಟ್ಟ ರಶ್ಮಿಕಾ ಮಂದಣ್ಣ