ETV Bharat / entertainment

20 ವರ್ಷಗಳ ಬಳಿಕ 'ಕೋಯಿ ಮಿಲ್ ಗಯಾ' ರೀ ರಿಲೀಸ್​ .. ಸಿನಿಪ್ರಿಯರೇ ಮತ್ತೊಮ್ಮೆ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿ, ಆನಂದಿಸಿ...! - hrithik roshan

Koi Mil Gaya: 'ಕೋಯಿ ಮಿಲ್ ಗಯಾ' ಸಿನಿಮಾ ಮರು ಬಿಡುಗಡೆ ಆಗಲಿದೆ.

Koi Mil Gaya will re release
ಕೋಯಿ ಮಿಲ್ ಗಯಾ ರೀ ರಿಲೀಸ್
author img

By

Published : Aug 2, 2023, 4:57 PM IST

ಹೃತಿಕ್ ರೋಷನ್ ಮತ್ತು ಪ್ರೀತಿ ಜಿಂಟಾ ಅಭಿನಯದ ಬ್ಲಾಕ್​​ ಬಸ್ಟರ್ ಚಿತ್ರ 'ಕೋಯಿ ಮಿಲ್ ಗಯಾ' ಯಾರಿಗೆ ತಾನೆ ನೆನಪಿಲ್ಲ ಹೇಳಿ. ಸೂಪರ್​ ಸ್ಟಾರ್ ಹೃತಿಕ್ ರೋಷನ್​ ಅವರ ಸಿನಿ ಕೆರಿಯರ್​ನಲ್ಲಿ ಡೊಡ್ಡ ಬ್ರೇಕ್​ ಕೊಟ್ಟ ಚಿತ್ರವಿದು. ಇದು ನಟನನ್ನು ರಾತ್ರೋರಾತ್ರಿ ಸೂಪರ್​ ಸ್ಟಾರ್​ ಆಗಿ ಮಾಡಿತು. ಚಿತ್ರರಂಗದಲ್ಲೇ ವಿಭಿನ್ನ ಸಿನಿಮಾ ಎಂದು ಈ 'ಕೋಯಿ ಮಿಲ್ ಗಯಾ'ವನ್ನು ಪರಿಗಣಿಸಲಾಗಿದೆ.

ಈ ಚಿತ್ರವನ್ನು ಹೃತಿಕ್ ರೋಷನ್ ಅವರ ತಂದೆ ಸ್ಟಾರ್ ಡೈರೆಕ್ಟರ್ ರಾಕೇಶ್ ರೋಷನ್ ಅವರೇ ಬರೆದು, ನಿರ್ದೇಶಿಸಿದ್ದಾರೆ. 2003ರ ಆಗಸ್ಟ್ 8ರಂದು ಈ ಚಿತ್ರ ತೆರೆಗಪ್ಪಳಿಸಿತ್ತು. ಅಂದಿನ ಸಮಯದಲ್ಲೇ ಸುಮಾರು 35 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಬಾಕ್ಸ್​ ಆಫೀಸ್​ ವಿಚಾರದಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ವಿಮರ್ಷಕರು, ಸಿನಿಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಈ ಚಿತ್ರದಲ್ಲಿ ಹೃತಿಕ್ ರೋಷನ್ ಅವರ ರೋಹಿತ್ ಪಾತ್ರ ಇಂದಿಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇದೆ. ಜೊತೆಗೆ ಜಾದು ಎಂದೇ ಖ್ಯಾತಿ ಪಡೆದಿರುವ ಚಿತ್ರದಲ್ಲಿನ 'ಏಲಿಯನ್' ಪಾತ್ರವೂ ಪ್ರೇಕ್ಷಕರನ್ನು ಸಾಕಷ್ಟು ರಂಜಿಸಿದೆ. ಇದೀಗ 20 ವರ್ಷಗಳ ನಂತರ ಮತ್ತೊಮ್ಮೆ 'ಕೋಯಿ ಮಿಲ್ ಗಯಾ' ಚಿತ್ರಮಂದಿರದಲ್ಲಿ ಮ್ಯಾಜಿಕ್ ಮಾಡಲಿದೆ. ಹೌದು, ಸಿನಿಮಾ ಮತ್ತೊಮ್ಮೆ ಬಿಡುಗಡೆ ಆಗಲಿದೆ.

ಕೋಯಿ ಮಿಲ್ ಗಯಾ ಚಲನಚಿತ್ರ 2023ರ ಆಗಸ್ಟ್ 8ರಂದು 20 ವರ್ಷ ಪೂರೈಸಲಿದೆ. ಸೂಪರ್​ ಹಿಟ್ ಸಿನಿಮಾ 20 ವರ್ಷ ಪೂರೈಸಲಿರುವ ಹಿನ್ನೆಲೆಯಲ್ಲಿ, ದೇಶದ ಪ್ರಮುಖ 30 ನಗರಗಳಲ್ಲಿ ಮತ್ತೊಮ್ಮೆ ಈ ಚಿತ್ರವನ್ನು ಮರು ಬಿಡುಗಡೆ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ಆಗಸ್ಟ್ 4ರಂದು ಅಂದರೆ ಇದೇ ಶುಕ್ರವಾರ ಸಿನಿಮಾ ಮರು ಬಿಡುಗಡೆ ಆಗಲಿದೆ ಎಂಬ ಮಾಹಿತಿ ಇದೆ.

ಇದನ್ನೂ ಓದಿ: 93ರ ಅಜ್ಜನೊಂದಿಗೆ ಡ್ಯಾನ್ಸ್ ಮಾಡಿದ ರಣ್​​​ವೀರ್ ಸಿಂಗ್.. ಆನ್​ಲೈನ್​ಲ್ಲಿ ಜುಮ್ಕಾ ಸಾಂಗ್​ ಸದ್ದು

ಚಿತ್ರದ ನಿರ್ದೇಶಕ ರಾಕೇಶ್ ರೋಷನ್ ಅವರು 20 ವರ್ಷಗಳ ನಂತರವೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಚಿತ್ರಕ್ಕೆ ಸಂಬಂಧಿಸಿದ ಮೀಮ್‌ಗಳನ್ನು ನೋಡುತ್ತಲೇ ಇರುತ್ತೇನೆ ಎಂದು ತಿಳಿಸಿದ್ದಾರೆ. ಮೀಮ್ಸ್ ಸೋಷಿಯಲ್​ ಮಿಡಿಯಾದಲ್ಲಿ ಬಹಳ ವೈರಲ್ ಆಗಿದೆ. ರೋಹಿತ್ ಎಂಬ ಹುಡುಗನ ಅತ್ಯಂತ ಸೂಕ್ಷ್ಮ ಕಥೆಯನ್ನು ಈ ಚಿತ್ರ ತಿಳಿಸುತ್ತದೆ. ರೋಹಿತ್​ ಜೊತೆ ಅವರ ತಾಯಿ ಮತ್ತು ಸ್ನೇಹಿತರು ಮಾತ್ರ ಆತ್ಮೀಯರಾಗಿರುತ್ತಾರೆ. ಇಲ್ಲಿಗೆ 'ಏಲಿಯನ್' ಎಂಟ್ರಿ ಆಗುವುದು, ಅದರ ಪರಿಣಾಮವೇ ಈ ಸಿನಿಮಾ ಕಥೆಯಾಗಿದೆ. ಈ ಚಿತ್ರದಲ್ಲಿ ವಿಎಫ್‌ಎಕ್ಸ್ ಬಳಸಲಾಗಿದೆ, ಆದರೆ ಚಿತ್ರದ ದೃಶ್ಯಗಳು ಇನ್ನೂ ವೀಕ್ಷಕರ ಮನದಲ್ಲಿ ಅಚ್ಚಾಗಿದೆ.

ಇದನ್ನೂ ಓದಿ: SIIMA 2023: ಪ್ರತಿಷ್ಠಿತ ಸೈಮಾ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ ಕೆಜಿಎಫ್​ 2, ಕಾಂತಾರ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.