ಬಾಲಿವುಡ್ನ ಖ್ಯಾತ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಸಾರಥ್ಯದ ಚಾಟ್ ಶೋ 'ಕಾಫಿ ವಿತ್ ಕರಣ್' ಸೀಸನ್ 8 ಇದೇ ತಿಂಗಳಲ್ಲಿ ಪ್ರಸಾರ ಪ್ರಾರಂಭಿಸಲಿದೆ. ಸುಮಾರು 20 ವರ್ಷಗಳಿಂದ ಮೂಡಿ ಬರುತ್ತಿರುವ ಕರಣ್ ಶೋ ಅಭಿಮಾನಿಗಳ ನೆಚ್ಚಿನ ಶೋ ಕೂಡ ಹೌದು. ಕಾರ್ಯಕ್ರಮ ಪ್ರಸಾರ ಪ್ರಾರಂಭಕ್ಕೂ ಮುನ್ನ, ಕರಣ್ ಜೋಹರ್ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಫೋಟೋ ಶೇರ್ ಮಾಡಿ, ಕಾರ್ಯಕ್ರಮದ ವಿವರಗಳನ್ನು ಹಂಚಿಕೊಂಡಿದ್ದಾರೆ.
''ನಿಮ್ಮ ಮೆಚ್ಚಿನ ತಾರೆಯರು, ಗ್ಲ್ಯಾಮ್, ಕೆಲ ಕಾಫಿ ಕಪ್ಗಳಿಂದ ತುಂಬಿದ ಹೊಸ ಸೀಸನ್ ಆರಂಭಿಸುವ ಸಮಯವಿದು. ಹಾಟ್ಸ್ಟಾರ್ ಸ್ಪೆಶಲ್ - ಕಾಫಿ ವಿತ್ ಕರಣ್ ಸೀಸನ್ ಸೀಸನ್ 8 ಅಕ್ಟೋಬರ್ 26 ರಿಂದ ಆರಂಭ'' ಎಂದು ಬರೆದಿದ್ದಾರೆ. ಈ ಬಾರಿಯ ಕಾಫಿ ಮಗ್ನ ಕಲರ್ ರೆಡ್ ಎಂಬುದು ನಟ ಹಂಚಿಕೊಂಡಿರುವ ಫೋಟೋದಿಂದ ತಿಳಿದುಬಂದಿದೆ.
ಕಾಫಿ ವಿತ್ ಕರಣ್ ಸೀಸನ್ 8 ರಲ್ಲಿ ಕಾಣಿಸಿಕೊಳ್ಳಲಿರುವ ಸೆಲೆಬ್ರಿಟಿಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಈ ಹಿಂದಿನ ಕಾರ್ಯಕ್ರಮವನ್ನು ಮಿಸ್ ಮಾಡಿಕೊಂಡಿದ್ದ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಮೊದಲ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದು ವರದಿಯಾಗಿದೆ. ಜನಪ್ರಿಯ ತಾರಾ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಕೂಡ ಕಾರ್ಯಕ್ರಮದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಗಳು ಹೇಳಿವೆ. ಅಲ್ಲದೇ, ಅಜಯ್ ದೇವಗನ್, ರೋಹಿತ್ ಶೆಟ್ಟಿ, ಕರೀನಾ ಕಪೂರ್ ಖಾನ್ ಮತ್ತು ಆಲಿಯಾ ಭಟ್ ಅವರಂತಹ ಖ್ಯಾತನಾಮರೂ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ವರದಿಗಳಂತೆ, ಸುಹಾನಾ ಖಾನ್, ಖುಷಿ ಕಪೂರ್ ಮತ್ತು ಅಗಸ್ತ್ಯ ನಂದಾ ತಮ್ಮ ಚೊಚ್ಚಲ ಚಿತ್ರ ದಿ ಆರ್ಚೀಸ್ ಮೂಲಕ ಇದೇ ಮೊದಲ ಬಾರಿಗೆ ಕಾಫಿ ವಿತ್ ಕರಣ್ ಶೋಗೆ ಬರಲಿದ್ದಾರೆ. ಮೋಸ್ಟ್ ಎಕ್ಸ್ಪೆಕ್ಟೆಡ್ ಶೋ ಅಕ್ಟೋಬರ್ 26 ರಂದು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಪ್ರಾರಂಭಿಸಲಿದೆ.
ಇದನ್ನೂ ಓದಿ: ದೇಶದ ಮೊದಲ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಶಾ ಜೀವನಾಧಾರಿತ 'ಸ್ಯಾಮ್ ಬಹದ್ದೂರ್' ಸಿನಿಮಾ ಪೋಸ್ಟರ್ ಬಿಡುಗಡೆ
ಈ ಕಾರ್ಯಕ್ರಮದಲ್ಲಿ ಜನಪ್ರಿಯ ಸೆಲೆಬ್ರಿಟಿಗಳು ಹಲವು ಆಸಕ್ತಿಕರ ವಿಷಯಗಳ ಕುರಿತು ಮಾತನಾಡುತ್ತಾರೆ. ನಿರೂಪಕ ಕರಣ್ ಜೋಹರ್ ಕೇಳುವ ಪ್ರಶ್ನೆಗಳಿಗೂ ಉತ್ತರಿಸುತ್ತಾರೆ. ತಮ್ಮ ಸಿನಿಮಾ ಪ್ರಚಾರದ ಲಾಭವನ್ನೂ ಸೆಲೆಬ್ರಿಟಿಗಳು ಪಡೆಯುತ್ತಾರೆ. ಮೆಚ್ಚಿನ ನಟ, ನಟಿ ಬಗ್ಗೆ ತಿಳಿದುಕೊಳ್ಳುವ ಅಭಿಮಾನಿಗಳ ಆಸೆ ಈ ಕಾರ್ಯಕ್ರಮದ ಮೂಲಕ ಈಡೇರುತ್ತದೆ.
ಇದನ್ನೂ ಓದಿ: ಬಿಗ್ ಬಾಸ್ಗೆ ಸಿಪಾಯಿಯಾಗಿ ಎಂಟ್ರಿ ಕೊಟ್ಟ 'ಒಳ್ಳೆ ಹುಡ್ಗ' ಪ್ರಥಮ್: ಕುತೂಹಲ ಹೆಚ್ಚಿಸಿದ ಪ್ರೋಮೋ