ETV Bharat / entertainment

ಕಾಫಿ ವಿತ್​​ ಕರಣ್ ಪ್ರೋಮೋ ರಿಲೀಸ್​.. ಡಿಯೋಲ್ ಬ್ರದರ್ಸ್ ಮುಂದಿನ ಅತಿಥಿಗಳು - Bobby Deol

''ಕಾಫಿ ವಿತ್​​ ಕರಣ್'' ಸೀಸನ್ 8ರ ಹೊಸ ಸಂಚಿಕೆಯ ಪ್ರೋಮೋ ಅನಾವರಣಗೊಂಡಿದೆ.

Koffee with Karan
ಕಾಫಿ ವಿತ್​​ ಕರಣ್
author img

By ETV Bharat Karnataka Team

Published : Oct 30, 2023, 1:48 PM IST

ಬಾಲಿವುಡ್​ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಜನಪ್ರಿಯ ಕಾರ್ಯಕ್ರಮ ''ಕಾಫಿ ವಿತ್​​ ಕರಣ್'' ಸೀಸನ್ 8ರ ಹೊಸ ಪ್ರೋಮೋವನ್ನು ಅನಾವರಣಗೊಳಿಸಲಾಗಿದೆ. ಎರಡನೇ ಸಂಚಿಕೆಯ ಪ್ರೋಮೋ ಬಿಡುಗಡೆಗೊಂಡಿದ್ದು, ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ಜನಪ್ರಿಯ ಸಹೋದರ ಜೋಡಿ ಸನ್ನಿ ಡಿಯೋಲ್ ಹಾಗೂ ಬಾಬಿ ಡಿಯೋಲ್ ಅವರು ಕಾಫಿ ವಿತ್​​ ಕರಣ್ ಸೀಸನ್ 8 ರ ಎರಡನೇ ಸಂಚಿಕೆಯ ಅತಿಥಿಗಳು. ರಣ್​​​ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ದಂಪತಿ ಆಗಮನದ ಮೂಲಕ ಗ್ರ್ಯಾಂಡ್ ಓಪನಿಂಗ್ ಪಡೆದಿರುವ ಚಾಟ್​ ಶೋ ಡಿಯೋಲ್ ಬ್ರದರ್ಸ್ ಮೂಲಕ ಮತ್ತಷ್ಟು ಮನರಂಜನೆ ನೀಡಲು ಸಜ್ಜಾಗಿದೆ.

ಇದೀಗ ಬಿಡುಗಡೆಯಾಗಿರುವ ಪ್ರೋಮೋದಲ್ಲಿ, ಐಕಾನಿಕ್​ ಸಹೋದರ ಜೋಡಿ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಕಾಣಿಸಿಕೊಂಡಿದ್ದಾರೆ. ಪ್ರೇಕ್ಷಕರು ಸಹ ಆಕರ್ಷಕ ಚರ್ಚೆಯನ್ನು ನಿರೀಕ್ಷಿಸಬಹುದಾಗಿದೆ. ಮುಂದಿನ ಸಂಚಿಕೆಯ ಸಂಭಾಷಣೆಯ ವಿಷಯಗಳು ಸನ್ನಿ ಡಿಯೋಲ್ ಅವರ ಇತ್ತೀಚಿನ ಬ್ಲಾಕ್‌ ಬಸ್ಟರ್ ಹಿಟ್ ಗದರ್ 2 ಕುರಿತಾಗಿದೆ. ಜೊತೆಗೆ ಬಾಬಿ ಡಿಯೋಲ್​​ ಅವರ ವೃತ್ತಿಜೀವನದಲ್ಲಿ ಸಲ್ಮಾನ್ ಖಾನ್ ಅವರ ಪ್ರಮುಖ ಪಾತ್ರದ ಕುರಿತಾಗಿಯೂ ಇದೆ. ಅಲ್ಲದೇ, ಕರಣ್ ಜೋಹರ್ ನಿರ್ದೇಶಿಸಿ, ನಿರ್ಮಾಣ ಮಾಡಿರುವ ಇತ್ತೀಚಿನ ಸೂಪರ್ ಹಿಟ್​​ ಸಿನಿಮಾ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಡಿಯೋಲ್​​ ಸಹೋದರರ ತಂದೆ ಧರ್ಮೇಂದ್ರ ಅವರ ಆನ್-ಸ್ಕ್ರೀನ್ ಕಿಸ್ ಬಗ್ಗೆಯೂ ಮಾತನಾಡಿದ್ದಾರೆ.

ಇದನ್ನೂ ಓದಿ: ಕನ್ನಡ ಬಿಗ್​ ಬಾಸ್: ನಾಮಿನೇಷನ್ ಪಾಸ್‌ಗಾಗಿ ಕಾದಾಟ - ಪ್ರೋಮೋ ನೋಡಿ!

ಪಾಪ್ಯುಲರ್​ ಪ್ರೋಗ್ರಾಮ್​​​ನ ನಿರೂಪಕ ಕರಣ್ ಜೋಹರ್ ಅವರು ಈ ಲೆಜೆಂಡರಿ ಸ್ಟಾರ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದರ ಬಗ್ಗೆ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಸನ್ನಿ ಆ್ಯಂಡ್​​ ಬಾಬಿಗೆ ಆತ್ಮೀಯ ಸ್ವಾಗತ ಕೋರಿದ್ದಾರೆ. ಡಿಯೋಲ್​​​ ಬ್ರದರ್ಸ್​ ಕೂಡ ಸಖತ್​ ಸ್ಟೈಲಿಶ್​ ಆಗೇ ಎಂಟ್ರಿ ಕೊಟ್ಟಿದ್ದಾರೆ. ಮೂವರ ಮಾತುಕತೆ ನೋಡುಗರ ಗಮನ ಸೆಳೆದಿದೆ.

ಇದನ್ನೂ ಓದಿ: ಅನನ್ಯಾ ಪಾಂಡೆ ಜನ್ಮದಿನ: ಹಿರಿಯ ನಟ ​ಚಂಕಿ ಪಾಂಡೆ ಪುತ್ರಿಯ ಸಿನಿ ಪಯಣ ಹೀಗಿದೆ!

ಪ್ರೇಕ್ಷಕರಲ್ಲಿ ಪ್ರೋಮೋ ಕುತೂಹಲ ಮೂಡಿಸಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ. ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಪ್ರತಿ ಗುರುವಾರ ಈ ಶೋ ಹೊರಬೀಳಲಿದೆ. ಇದೊಂದು ಕಂಪ್ಲೀಟ್​​ ಎಂಟರ್​ಟೈನ್​ಮೆಂಟ್​ ಪ್ಯಾಕ್ಡ್​ ಶೋ ಆಗಿದ್ದು, ನವೆಂಬರ್ 2 ರಂದು ಸೀಸನ್ 8ರ ಮೊದಲ ಸಂಚಿಕೆ ಬಿಡುಗಡೆ ಆಗಿದೆ. ಗ್ರ್ಯಾಂಡ್​ ಓಪನಿಂಗ್​​ಗೆ ಬಾಲಿವುಡ್​ನ ಪವರ್​ಫುಲ್ ಕಪಲ್​ ದೀಪಿಕಾ ಪಡುಕೋಣೆ ಹಾಗೂ ರಣ್​ವೀರ್ ಸಿಂಗ್​ ಆಗಮಿಸಿದ್ದರು. ಮುಂದಿನ ಡಿಯೋಲ್ ಬ್ರದರ್ಸ್ ಶೋಗಾಗಿ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.